Tag: ದಬಾಂಗ್

  • ಮದುವೆ ಬಳಿಕ 25 ಕೋಟಿ ಬೆಲೆ ಬಾಳುವ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್

    ಮದುವೆ ಬಳಿಕ 25 ಕೋಟಿ ಬೆಲೆ ಬಾಳುವ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್

    ‘ದಬಾಂಗ್’ ಬೆಡಗಿ ಸೋನಾಕ್ಷಿ ಸಿನ್ಹಾ (Sonakshi Sinha) ಮತ್ತು ಝಹೀರ್ ಇಕ್ಬಾಲ್ (Zaheer Iqbal) ಜೂನ್ 23ರಂದು ಸರಳವಾಗಿ ಮದುವೆ ಆಗಿದ್ದಾರೆ. ಇದೀಗ ಮದುವೆಯ ಬಳಿಕ 25 ಕೋಟಿ ಮೌಲ್ಯದ ಐಷಾರಾಮಿ ಮನೆಗೆ (Home) ಸೋನಾಕ್ಷಿ ದಂಪತಿ ಶಿಫ್ಟ್ ಆಗಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅರೆಸ್ಟ್ ಆಗಿರೋದು ನೋವುಂಟು ಮಾಡಿದೆ- ಶ್ರುತಿ

    ಸೋನಾಕ್ಷಿ ಹೊಸ ಮನೆ 4000 ಚದರ ಅಡಿ ವಿಸ್ತೀಣದಲ್ಲಿ ನಿರ್ಮಿಸಲಾಗಿದೆ. ತಮ್ಮ ಆಸೆಯಂತೆಯೇ ಇಂಟೀರಿಯರ್ ಡಿಸೈನ್ ಮಾಡಿಸಿದ್ದಾರೆ. ಮನೆಯಲ್ಲಿ ಬೆಡ್ ರೂಮ್ ಕೂಡ ದೊಡ್ಡದಾಗಿದೆ. ಮನೆಗೆ ಲೈಟ್ ಕಲರ್‌ಗಳನ್ನೇ ಆಯ್ಕೆ ಮಾಡಿದ್ದಾರೆ. ಈ ಮನೆಯ ವಾಲ್‌ಗಳಿಗೂ ಲೈಟ್ ಕಲರ್ ಹಾಕಲಾಗಿದೆ. ನಟಿಯ ಮನೆಗೆ ಕಾಲಿಟ್ಟರೆ ಅದ್ಧೂರಿತನ ಎದ್ದು ಕಾಣುತ್ತದೆ. ಇದೀಗ ಹೊಸ ಮನೆಯ ಹೋಮ್ ಟೂರ್ ಮಾಡಿರುವ ನಟಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಂದಹಾಗೆ, 7 ವರ್ಷಗಳ ಹಿಂದೆ 23-06-2017ರಂದು ಪರಸ್ಪರ ನಾವು ಪರಿಶುದ್ಧ ಪ್ರೀತಿಯನ್ನು ಕಂಡೆವು ಮತ್ತು ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಧರಿಸಿದ್ದೇವು. ಈಗ ಅದೇ ಪ್ರೀತಿ ನಮಗೆ ಸವಾಲುಗಳನ್ನು ಎದುರಿಸಲು ದಾರಿ ತೋರಿಸಿದೆ. ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಸೋನಾಕ್ಷಿ ಮತ್ತು ಝಹೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಎರಡು ಕುಟುಂಬದ ಮತ್ತು ದೇವರ ಹಾರೈಕೆಯಿಂದ ನಾವು ಇಂದು ಸತಿ- ಪತಿ ಆಗಿದ್ದೇವೆ ಎಂದು ಕೂಡ ಬರೆದುಕೊಂಡಿದ್ದಾರೆ. ಮಗಳ ಮದುವೆಯ ವೇಳೆ, ಸೋನಾಕ್ಷಿ ಜೊತೆಯೇ ನಿಂತು ತಂದೆ ಶತ್ರುಘ್ನ ಸಿನ್ಹಾ ಸಂಭ್ರಮಿಸಿದ್ದರು.

  • ಬಟ್ಟೆಗೆ ಮ್ಯಾಚ್ ಆಗುವಂತೆ ಹೇರ್ ಕಲರಿಂಗ್ ಮಾಡಿಸಿದ `ದಬಾಂಗ್’ ನಟಿ

    ಬಟ್ಟೆಗೆ ಮ್ಯಾಚ್ ಆಗುವಂತೆ ಹೇರ್ ಕಲರಿಂಗ್ ಮಾಡಿಸಿದ `ದಬಾಂಗ್’ ನಟಿ

    ಬಾಲಿವುಡ್ ಬ್ಯೂಟಿ ಸೋನಾಕ್ಷಿ ಸಿನ್ಹಾ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಬಗೆಯ ಫೋಟೋಶೂಟ್ ಮಾಡಿಸಿ,ನೆಟ್ಟಿಗರ ಗಮನ ಸೆಳೆದಿದ್ದಾರೆ. ಡ್ರೆಸ್ ಕಲರ್‌ಗೆ ಹೇರ್ ಕಲರ್ ಮಾಡಿಸಿ ಭಿನ್ನವಾಗಿ ಫೋಟೋಶೂಟ್ ಮಾಡಿಸಿರುವ ಸೋನಾಕ್ಷಿ ಲುಕ್ ಸಖತ್ ವೈರಲ್ ಆಗುತ್ತಿದೆ.

    ಬಿಟೌನ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ಸೋನಾಕ್ಷಿ ಸದ್ಯ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಡ್ರೆಸ್ ಕಲರ್‌ಗೆ ಹೋಲುವಂತೆ  ಕಪ್ಪಗಿರುವ ಕೂದಲನ್ನು ಸಿಲ್ವರ್ ಬಣ್ಣ ಮಾಡಿಸಿದ್ದಾರೆ. ಒಂದ್‌ಕಡೆ ಸೋನಾಕ್ಷಿ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದ್ ಕಡೆ ಫ್ಯಾನ್ಸ್ ಭಯವಾಗುತ್ತಿದೆ. ಯಾಕೆ ಈ ಹೊಸ ಅವತಾರ ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ:`ಮಣಿರತ್ನಂ’ ನಿರ್ದೇಶನದ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಐಶ್ವರ್ಯ ರೈ

     

    View this post on Instagram

     

    A post shared by Sonakshi Sinha (@aslisona)

    ಡ್ರೆಸ್ ಮತ್ತು ಕೂದಲು ಒಂದೇ ತರಹದ ಸಿಲ್ವರ್ ಬಣ್ಣ ಇರುವುದು ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸೋನಾಕ್ಷಿ ಲುಕ್ ವೈರಲ್ ಆಗುತ್ತಿದೆ. ಫೋಟೋಶೂಟ್ ಮೂಲಕ ಸೋನಾಕ್ಷಿ ಸಿನ್ಹಾ ಹೊಸ ಪ್ರಯೋಗ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ರಿವೀಲ್ ಆಯ್ತು ಸೋನಾಕ್ಷಿ ಸಿನ್ಹಾ ಲವ್ ಸ್ಟೋರಿ: ಹುಡುಗ ಯಾರು?

    ಕೊನೆಗೂ ರಿವೀಲ್ ಆಯ್ತು ಸೋನಾಕ್ಷಿ ಸಿನ್ಹಾ ಲವ್ ಸ್ಟೋರಿ: ಹುಡುಗ ಯಾರು?

    ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಿನಿಮಾಗಳಿಗಿಂತ ತಮ್ಮ ಖಾಸಗಿ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಜಹೀರ್ ಇಕ್ಬಾಲ್ ಜತೆ ಸೋನಾಕ್ಷಿ ಹೆಸರು ಕೇಳಿ ಬರುತ್ತಿತ್ತು. ಇಬ್ಬರ ಡೇಟಿಂಗ್ ವಿಚಾರ ಬಿಟೌನ್‌ನಲ್ಲಿ ಸಖತ್ ಸುದ್ದಿ ಮಾಡಿತ್ತು. ಈಗ ತಮ್ಮ ಸಂಬಂಧದ ಬಗ್ಗೆ ಸೋನಾಕ್ಷಿ ಬರ್ತಡೇಗೆ ವಿಶೇಷವಾಗಿ ವಿಶ್ ಮಾಡುವ ಮೂಲಕ ಅಧಿಕೃತವಾಗಿ ನಟ ಜಹೀರ್ ತಿಳಿಸಿದ್ದಾರೆ.

    `ದಬಾಂಗ್’ ಚಿತ್ರದ ಮೂಲಕ ಬಾಲಿವುಡ್ ಪರಿಚಿತರಾದ ನಟಿ ಸೋನಾಕ್ಷಿ ಸಿನ್ಹಾ ಬಳಿಕ ಸಾಲು ಸಾಲು ಸಿನಿಮಾಗಳ ಮೂಲಕ ಗುರುತಿಸಿಕೊಂಡರು. ಈಗಲೂ ಸಾಕಷ್ಟು ಚಿತ್ರಗಳಲ್ಲಿ ಆಕ್ಟೀವ್ ಇರುವ ಸೋನಾಕ್ಷಿ ಸದ್ಯ ತಮ್ಮ ಲವ್ ಲೈಫ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ವರ್ಷಗಳಿಂದ ಜಹೀರ್ ಇಕ್ಬಾಲ್ ಜತೆ ಡೇಟಿಂಗ್‌ನಲ್ಲಿದ್ದರು. ಈ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಆ ಸುದ್ದಿಗೆ ಬ್ರೇಕ್ ಹಾಕಿ, ತಮ್ಮ ಪ್ರೀತಿಯ ಕುರಿತು ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ನಟ ಜಹೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್

    ಸೋನಾಕ್ಷಿ ಸಿನ್ಹಾ ಜೂನ್ 2ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 35ನೇ ವರ್ಷಕ್ಕೆ ಕಾಲಿಟ್ಟಿರೋ ಸಂದರ್ಭದಲ್ಲಿ ಜಹೀರ್ ವಿಶೇಷವಾಗಿ ಸೋನಾಕ್ಷಿಗೆ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತಡೇ ಸೋನ್ಸ್, ನನ್ನ ಕೊಲ್ಲದಿದ್ದಕ್ಕಾಗಿ ಧನ್ಯವಾದಗಳು. ಐ ಲವ್ ಯೂ ಎಂದು ತಿಳಿಸುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Zaheer Iqbal (@iamzahero)

    ಜಹೀರ್ ಇಕ್ಬಾಲ್ ನೋಟ್‌ಬುಕ್, ಕಮಲ್ ಖಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. `ಡಬಲ್ ಎಕ್ಸಲ್’ ಚಿತ್ರದಲ್ಲಿ ಸೋನಾಕ್ಷಿ ಮತ್ತು ಜಹೀರ್ ಒಟ್ಟಿಗೆ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ.

  • ತೂಕ ಇಳಿಸಿಕೊಂಡ `ದಬಾಂಗ್’ ನಟಿ ಸೋನಾಕ್ಷಿ ಸಿನ್ಹಾ

    ತೂಕ ಇಳಿಸಿಕೊಂಡ `ದಬಾಂಗ್’ ನಟಿ ಸೋನಾಕ್ಷಿ ಸಿನ್ಹಾ

    ಬಾಲಿವುಡ್‌ಗೆ ಸಲ್ಮಾನ್ ಖಾನ್ ನಟನೆಯ `ದಬಾಂಗ್’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನಾಕ್ಷಿ ಸಿನ್ಹಾ ಈಗ ತಮ್ಮ ತೂಕದ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ದಬಾಂಗ್ ನಟಿ ಸೋನಾಕ್ಷಿ ತೂಕ ಇಳಿಸಿಕೊಂಡು ಸಖತ್ ಸ್ಲೀಮ್ ಆಗಿ ಕಾಣಿಸಿಕೊಂಡಿದ್ದಾರೆ.

    ಬಿಟೌನ್ ಸ್ಟಾರ್ ಶತ್ರುಘ್ನ ಸಿನ್ಹಾ ಅವರ ಮಗಳು ಸೋನಾಕ್ಷಿ ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿದ್ದಾರೆ. ಕೈತುಂಬಾ ಸಿನಿಮಾಗಳು ಸೋನಾಕ್ಷಿ ಕೈಯಲ್ಲಿರಬೇಕಾದರೆ, ಸಿನಿಮಾ ವಿಚಾರ ಬಿಟ್ಟು ಈಗ ತಮ್ಮ ತೂಕದ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಸೌತ್ ಸಿನಿಮಾ ರಂಗಕ್ಕೆ ಅಣ್ಣಾವ್ರ ಮೊಮ್ಮಗಳ ಎಂಟ್ರಿ

    ಚಿತ್ರರಂಗಕ್ಕೆ ಎಂಟ್ರಿ ಕೊಡುವ ವೇಳೆ ನಟಿ ಸೋನಾಕ್ಷಿ 50 ಕೆ.ಜಿ ಇದ್ದರು. ಕೆಲ ಸಮಯದ ಬಳಿಕ 95 ಕೆಜಿ ಆಗಿಬಿಟ್ಟರು. ಇದೀಗ ಸತತ ವರ್ಕೌಟ್ ನಂತರ 65 ಕೆಜಿಗೆ ಇಳಿದಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ಕಾಣಿಸಿಕೊಳ್ಳಲು ದಬಾಂಗ್ ಬ್ಯೂಟಿ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಸೋನಾಕ್ಷಿಯ ನಯಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

  • ದಬಾಂಗ್-3 ಝಲಕ್ ರಿಲೀಸ್

    ದಬಾಂಗ್-3 ಝಲಕ್ ರಿಲೀಸ್

    ಮುಂಬೈ: ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್, ಚಂದನವನದ ಮಾಣಿಕ್ಯ ಸುದೀಪ್ ಜೊತೆಯಾಗಿ ನಟಿಸಿರುವ ಚಿತ್ರ ದಬಾಂಗ್-3. ದಬಾಂಗ್ ಸಿನಿಮಾ ನೂರು ದಿನಗಳ ನಂತರ ರಿಲೀಸ್ ಆಗಲಿದ್ದು, ಚಿತ್ರತಂಡ ಸಣ್ಣದೊಂದು ಝಲಕ್ ನ್ನು ಬಿಡುಗಡೆಗೊಳಿಸಿದೆ.

    ಚಿತ್ರದ ಝಲಕ್ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಆಗಿದೆ. 17 ಸೆಕೆಂಡ್ ಅವಧಿಯ ವಿಡಿಯೋದಲ್ಲಿ ಸಲ್ಮಾನ್ ಖಾನ್ ಎಂಟ್ರಿ ಎಂದಿನಂತೆ ಮಾಸ್ ಅಭಿಮಾನಿಗಳ ಮನ ಗೆದ್ದಿದೆ. ನಮ್ಮನ್ನ ಸ್ವಾಗತ ಮಾಡಲ್ಲ ನೀವು ಖಡಕ್ ಡೈಲಾಗ್ ನೊಂದಿಗೆ ಸಲ್ಲು ಎಂಟ್ರಿಯಾಗಿದೆ.

    ದಬಾಂಗ್ ಶೀರ್ಷಿಕೆಯಲ್ಲಿ ಈಗಾಗಲೇ ಎರಡು ಸಿನಿಮಾಗಳು ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದವು. ಖಡಕ್ ಪೊಲೀಸ್ ಅಧಿಕಾರಿಯಾಗಿ ಸಲ್ಮಾನ್ ಖಾನ್ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಮೂರನೇ ಸಿನಿಮಾದಲ್ಲಿಯೂ ಚುಲ್‍ಬುಲ್ ಪಾಂಡೆಯಾಗಿಯೇ ಸಲ್ಲು ಆಗಮಿಸಲಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಸ್ವಾತಿ ಮುತ್ತು ಸುದೀಪ್ ಖಳನಾಯಕನಾಗಿ ಸಲ್ಮಾನ್‍ಗೆ ಠಕ್ಕರ್ ನೀಡಲಿದ್ದಾರೆ. ಪರಭಾಷೆಗಳಲ್ಲಿ ಖಳನಟನಾಗಿ ಖ್ಯಾತಿಯಾಗಿರುವ ಸುದೀಪ್ ತಮ್ಮ ಕಂಚಿನ ಕಂಠದ ಮೂಲಕವೇ ನೋಡುಗರ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಾರೆ.

    ಗುರುವಾರ ಸುದೀಪ್ ಮತ್ತು ಸುನಿಲ್ ಶೆಟ್ಟಿ ಜೊತೆಯಾಗಿ ನಟಿಸಿರುವ ಪೈಲ್ವಾನ್ ಬಿಡುಗಡೆ ಆಗಲಿದೆ. ಪೈಲ್ವಾನ್ ಸಹ ಸಿನಿ ಅಂಗಳದಲ್ಲಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರವಾಗಿದ್ದು, ಸುದೀಪ್ ಕುಸ್ತಿಪಟುವಾಗಿ ನಟಿಸಿದ್ದಾರೆ. ಚಿತ್ರ ಹಿಂದಿ, ಕನ್ನಡ, ತಮಿಳು ಮತ್ತು ತೆಲಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ.