Tag: ದನದ ಮಾಂಸ

  • ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ!

    ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ!

    ಗುವಾಹಟಿ: ಅಸ್ಸಾಂನಲ್ಲಿ ಹೋಟೆಲ್‌ (Hotels), ರೆಸ್ಟೋರೆಂಟ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಘೋಷಿಸಿದ್ದಾರೆ.

    ಗೋಮಾಂಸ (Beef )ಸೇವನೆಯ ಬಗ್ಗೆ ಅಸ್ತಿತ್ವದಲ್ಲಿರುವ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಸೂದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ 3 ರಿಂದ 8 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು. ಸರ್ಕಾರದ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳು ವಿಸ್ತೃತ ಚರ್ಚೆಗಾಗಿ ಕಾನೂನನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಆಗ್ರಹಿಸಿ ಕಲಾಪ ಬಹಿಷ್ಕರಿಸಿದವು. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ಸಂಪುಟದ ನಿರ್ಣಯ ಸಮರ್ಥಿಸಿಕೊಂಡ ಸಿಎಂ ಶರ್ಮಾ, ಅಸ್ಸಾಂನಲ್ಲಿ ಗೋಮಾಂಸ ಸೇವನೆಯು ಕಾನೂನುಬಾಹಿರವಲ್ಲ. ಆದ್ರೆ 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯು ರಾಜ್ಯದಲ್ಲಿ ಎಲ್ಲಾ ಜಾನುವಾರುಗಳ ಸಾಗಣೆ, ಹತ್ಯೆ, ಗೋಮಾಂಸ ಮತ್ತು ಗೋಮಾಂಸ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುತ್ತದೆ. ನಾವು ಈ ಹಿಂದೆ ಅಸ್ಸಾಂನಲ್ಲಿ ಗೋವುಗಳನ್ನು ರಕ್ಷಿಸುವ ಮಸೂದೆ ಪರಿಚಯಿಸಿದ್ದೇವೆ, ಅದರಲ್ಲಿ ಯಶಸ್ವಿಯೂ ಆಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Ballari | ಐವಿ ದ್ರಾವಣ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕೇಸ್ ದಾಖಲಿಸಲು ತಾಕೀತು

    ಮುಂದೆ ರಾಜ್ಯದ ಯಾವುದೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸ ನೀಡದಂತೆ ನೋಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಅಲ್ಲದೇ ಸಾರ್ವಜನಿಕ ಸಮಾರಂಭಗಳಲ್ಲೂ ದನದ ಮಾಂಸ ಕೊಡಬಾರದು. ಜೊತೆಗೆ 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯ ಅನ್ವಯ ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಮತ್ತು ದೇವಸ್ಥಾನ ಅಥವಾ ಸತ್ರ (ವೈಷ್ಣವ ಮಠ)ದ 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ಸರ್ಕಾರದ ಈ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರತಿಪಕ್ಷ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಇದು ಪ್ರಮುಖ ವಿಷಯಗಳಿಂದ ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಕಿಡಿ ಕಾರಿತು. ಇದನ್ನೂ ಓದಿ: ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್‌. ಅಶೋಕ್‌ ಬಾಂಬ್‌

    ರಾಜ್ಯ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ, ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಆದ್ರೆ ಈ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಹೇಳಿದ್ದಾರೆ.

  • ಪ್ರವಾಸಿಗರೇ ಎಚ್ಚರ, ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ!

    ಪ್ರವಾಸಿಗರೇ ಎಚ್ಚರ, ಕಾಫಿನಾಡ ನಾನ್ ವೆಜ್ ಹೋಟೆಲ್‍ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ!

    ಚಿಕ್ಕಮಗಳೂರು: ಮಾಂಸಾಹಾರಿ ಹೋಟೆಲಿನಲ್ಲಿ (Non Veg Hotel) ಕುರಿ ಬದಲು ದನದ ಮಾಂಸ (Beef Meat) ಬಳಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ದು, ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

    ನಗರದ ಐ.ಜಿ. ರಸ್ತೆಯಲ್ಲಿರುವ ಬೆಂಗಳೂರು ಹೋಟೆಲ್ ಹಾಗೂ ಎವರೆಸ್ಟ್ ಹೋಟೆಲ್‍ನಲ್ಲಿ ದನದ ಮಾಂಸ ಇದ್ದಾಗಲೇ ಪೊಲೀಸರು (Police) ರೆಡ್ ಹ್ಯಾಂಡಾಗಿ ಸೀಜ್ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಎರಡು ಹೋಟೆಲ್‍ನಲ್ಲಿ ಊಟ ಮಾಡಿದ ಸ್ಥಳಿಯರು ಪೊಲೀಸರಿಗೆ ದೂರು ನೀಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ಪೊಲೀಸರು ಐದು ಕೆಜಿ ದನದ ಮಾಂಸ ಹಾಗೂ ಅದರಿಂದ ತಯಾರಿಸಿದ್ದ ಬಿರಿಯಾನಿಯನ್ನೂ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉಡುಪಿ ಕಾಲೇಜು ಲೇಡಿಸ್‌ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್‌ – ಗುಜರಾತ್ FSLಗೆ ಮೊಬೈಲ್ ರವಾನೆ

    ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ಜಿಲ್ಲೆ. ಆ ಪ್ರವಾಸೋದ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್‍ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಜ್‌ ಅಡುಗೆ ಮಾಡುತ್ತಿದ್ದಾರೆ.

    ಕುರಿ ಮಟನ್ ಕೆ.ಜಿ.ಗೆ 700-800 ರೂ. ಇದೆ. ಆದರೆ ದನದ ಮಾಂಸ ಕೆಜಿಗೆ 200-300 ರೂ. ಸಿಗುತ್ತದೆ. ಹೀಗಾಗಿ ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಶ್ರಣದ ಅಡುಗೆಯನ್ನು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿ 5 ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ಯ, ದನದ ಮಾಂಸವನ್ನು ಸೇವಿಸಲು ನಿರಾಕರಿಸಿದ ವ್ಯಕ್ತಿಗೆ ಐವರಿಂದ ಹಲ್ಲೆ

    ಮದ್ಯ, ದನದ ಮಾಂಸವನ್ನು ಸೇವಿಸಲು ನಿರಾಕರಿಸಿದ ವ್ಯಕ್ತಿಗೆ ಐವರಿಂದ ಹಲ್ಲೆ

    ರಾಂಚಿ: ಮದ್ಯ (Alcohol) ಹಾಗೂ ದನದ ಮಾಂಸವನ್ನು (Beef) ಸೇವಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬನಿಗೆ 5 ಜನರು ಸೇರಿ ದೊಣ್ಣೆ ಹಾಗೂ ಕಲ್ಲುಗಳಿಂದ ಥಳಿಸಿದ ಘಟನೆ ಜಾರ್ಖಂಡ್‍ನ (Jharkhand) ಸಾಹಿಬ್‍ಗಂಜ್‍ನ ರಾಧಾನಗರ ಗ್ರಾಮದಲ್ಲಿ ನಡೆದಿದೆ.

    ಚಂದನ್ ರವಿದಾಸ್ ಹಲ್ಲೆಗೊಳಗಾದ ವ್ಯಕ್ತಿ. ದನದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಕ್ಕಾಗಿ ಮಿಥುನ್ ಶೇಖ್ ಹಾಗೂ ಇತರ ನಾಲ್ವರು ಸೇರಿ ಥಳಿಸಿದ್ದಾರೆ ಎಂದು ಚಂದನ್ ರವಿದಾಸ್ ಆರೋಪಿಸಿದ್ದಾನೆ.

    ಪಂಕಿಜ ಮೋರ್‌ನಲ್ಲಿರುವ ಅಂಗಡಿಯೊಂದಕ್ಕೆ ಚಂದನ್ ಹೋಗಿದ್ದ. ಆ ಅಂಗಡಿಯ ಹಿಂದೆ ಐವರು ಸೇರಿ ದನದ ಮಾಂಸವನ್ನು ಕುಡಿದು ಸೇವಿಸುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಚಂದನ್‍ಗೆ ಹಾಗೂ ಆ ಐವರಿಗೆ ತೀವ್ರ ವಾಗ್ವಾದ ನಡೆದಿದೆ. ಅದಾದ ಬಳಿಕ ಆ ಐವರು ಚಂದನ್‍ಗೆ ಬಲವಂತವಾಗಿ ಗೋಮಾಂಸ ತಿನ್ನಲು ಯತ್ನಿಸಿದ್ದಾರೆ. ಇದನ್ನೂ ಓದಿ: ಅನ್ಯ ಸಮುದಾಯದವರೊಂದಿಗೆ ಮಗ ಮಾತನಾಡಿದ್ದಕ್ಕೆ ನೆರೆಹೊರೆಯವರಿಂದ ತಂದೆಯ ಹತ್ಯೆ

    ಇದಕ್ಕೆ ಚಂದನ್ ನಿರಾಕರಿಸಿದ್ದಕ್ಕೆ ಆತನ ಮೇಲೆ ಆರೋಪಿಗಳು ಕಲ್ಲು (Stone) ತೂರಿ ಮೊಬೈಲ್‍ನ್ನು ಕಿತ್ತುಕೊಂಡಿದ್ದಾರೆ. ನಂತರ ಚಂದನ್‍ನಿಂದ 8 ಸಾವಿರ ರೂ. ದೋಚಿದ್ದಾರೆ ಆರೋಪಿಸಿದರು. ಘಟನೆಗೆ ಸಂಬಂಧಿಸಿ ಚಂದನ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಭರದ ಸಿದ್ಧತೆ- ಸಂಜೆ 5 ಗಂಟೆ ವೇಳೆಗೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ

    Live Tv
    [brid partner=56869869 player=32851 video=960834 autoplay=true]

  • ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

    ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬಡಾ ಉಚ್ಚಿಲ ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಯಾನೇ, ಡಿಯೋ ರಫೀಕ್ ಉಸ್ತುವಾರಿವಾರಿಯಲ್ಲಿ ಉಚ್ಚಿಲ ಭಾಸ್ಕರ ನಗರದಲ್ಲಿ ನಡೆಯುತ್ತಿದ್ದ ಬೃಹತ್ ಅಕ್ರಮ ಕಸಾಯಿಖಾನಿಗೆ ಪೊಲೀಸರು ದಾಳಿ ಮಾಡಿದ್ದಾರೆ.

    ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಪಡುಬಿದ್ರಿ ಎಸ್‍ಐ ನೇತೃತ್ವದಲ್ಲಿ ದಾಳಿ ನಡೆಸಿದ ವೇಳೆ ಭಾರೀ ದನದ ಮಾಂಸ ಸಹಿತ ಜೀವಂತ ದನ ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪಡುಬಿದ್ರೆ ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಅಕ್ರಮವಾಗಿ ದನವನ್ನು ಕಡಿಯಲಾಗುತ್ತದೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದಿತ್ತು. ಮಾಂಸ ಮಾರುವವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡಿಕೊಂಡಿದ್ದರು. ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಾರುವೇಷದಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದಾಗ ಜೀವಂತ ಜನ ದನದ ಮಾಂಸ ಮತ್ತು ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.  ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    ದಿನಕ್ಕೊಂದು ಮನೆಗಳೇ ಹಸುವಿನ ವಧಾ ಸ್ಥಳ. ಪ್ರಮುಖ ಆರೋಪಿ ರಫೀಕ್ ಯಾನೇ, ಡಿಯೋ ರಫೀಕ್ ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದು, ಇನ್ನೊರ್ವ ಆರೋಪಿ ಮನೆ ಮಾಲೀಕ ಸಾಬನ್ ತಲೆ ಮರೆಸಿಕೊಂಡಿದ್ದಾನೆ. ಉಳಿದಂತೆ ಕಳತ್ತೂರು ಸೂರ್ಯಗುಡ್ಡೆ ನಿವಾಸಿಗಳಾದ ಮಹಮ್ಮದ್ ರಫೀಕ್ (44), ಇಲಿಯಾಸ್ (38), ಉಚ್ಚಿಲ ಭಾಸ್ಕರ ನಗರ ಬಿಸ್ಮಿಲ್ಲಾ ಸ್ಕೋರ್ ಬಳಿ ನಿವಾಸಿ ಮೋಹಿನ್ ಉದ್ಧೀನ್ (17), ಮೂಳೂರು ಸುನ್ನಿ ಸೆಂಟರ್ ಬಳಿ ನಿವಾಸಿ ಮೊಯಿದಿನಬ್ಬ (40) ಬಂಧಿತ ಆರೋಪಿಗಳು ಯಾರಿಗೂ ಸಂಶಯ ಬರಬಾರದು ಎಂದು ದಿನಕ್ಕೊಂದು ಮನೆಯಲ್ಲಿ ಮಾಂಸ ಮಾಡುತ್ತಿದ್ದರು.

    ನಿಖರ ಮಾಹಿತಿ ದೊರೆತ ಹಿನ್ನಲೆಯಲ್ಲಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್‍ಐ ಪುರುಷೋತ್ತಮ್ ತಂಡ ಮಸೀದಿ ಸಮೀಪ ಸುತ್ತಲೂ ಮುಸ್ಲಿಂ ಮನೆಗಳಿರುವ ಪ್ರದೇಶದ ಮಧ್ಯೆ ಭಾಗದ ಸಾಬನ್ ಮನೆಯನ್ನೇ ಅಕ್ರಮ ಕಸಾಯಿಖಾನೆಯನ್ನಾಗಿ ಮಾಡಿಕೊಂಡು, ರಾಜಾರೋಷವಾಗಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದರು. ಈ ವೇಳೆ ದಿಢೀರ್ ದಾಳಿ ನಡೆಸಿದಾಗ ಡಿಯೋ ರಫೀಕ್ ತಪ್ಪಿಸಿಕೊಂಡಿದ್ದಾನೆ. ಸ್ಥಳದಲ್ಲಿದ್ದ ಉಳಿದವರನ್ನು ಪೊಲೀಸ್ ತಂಡ ಬಂಧಿಸಿದೆ. ಮೂರು ದನಗಳನ್ನು ಕಡಿದು ಮಾಂಸ ಮಾಡಲಾದ 400 ಕೆ.ಜಿ ಮಾಂಸ ಸ್ಥಳದಲ್ಲೇ ಪತ್ತೆಯಾಗಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಪೊಲೀಸ್ ದಾಳಿಯಾಗುತ್ತಿದಂತೆ ಒಂದು ದನದ ಕತ್ತಿಗೆ ಚೂರಿ ಇರಿದ ಪರಿಣಾಮ ಪೊಲೀಸ್ ಮುಂಭಾಗದಲ್ಲೇ ಒದ್ದಾಟ ನಡೆಸಿ ಪ್ರಾಣ ಬಿಟ್ಟಿರುವ ದೃಶ್ಯ ಪೊಲೀಸರ ಕೋಪ ನೆತ್ತಿಗೇರುವಂತೆ ಮಾಡಿದೆ. ಜೀವಂತ ದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಒಂದು ಸ್ಕೂಟರ್ ಸಹಿತ ಕೃತ್ಯಕ್ಕೆ ಬಳಸಲಾಗಿದ್ದ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

    ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

    ಹಾಸನ: ಚಾಕುವಿನಿಂದ ಇರಿದು ಯುವಕರೊಬ್ಬರನ್ನು ಬರ್ಬರ ಹತ್ಯೆ ಗೈದ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದ ಅಜಾದ್ ರಸ್ತೆಯಲ್ಲಿ ಗುರುವಾರ ನಡೆದಿದೆ.

    ಅಪ್ಸರ್ (27) ಕೊಲೆಯಾದ ಯುವಕ. 4 ಜನರ ತಂಡವೊಂದು ಅಕ್ರಮವಾಗಿ ದನದ ಮಾಂಸ ಮಾರಾಟ ಹಾಗೂ ಚರಂಡಿಯಲ್ಲಿ ತ್ಯಾಜ್ಯ ಬಿಸಾಡುತ್ತಿದ್ದ ವಿಚಾರಕ್ಕೆ ಅಪ್ಸರ್ ಅವರು ತಂಡದ ಜೊತೆ ಜಗಳ ಮಾಡಿಕೊಂಡಿದ್ದರು. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಅಪ್ಸರ್ ನನ್ನು ಕೊಲೆ ಮಾಡುವಲ್ಲಿ ಜಗಳ ಅಂತ್ಯವಾಗಿದೆ. ಯುವಕರು ಹೊಡೆದಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಹೆಸಾನ್ ಖುರೇಷಿ, ಶಾಹಿದ್, ನಯಾಝ್ ಖುರೇಷಿ, ಸಲ್ಮಾನ್ ಖುರೇಷಿ ಸೇರಿ ಐವರ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಕಸ್ಮಿಕ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಕಬ್ಬು ಬೆಂಕಿಗಾಹುತಿ

  • ಕೊಬ್ಬಿದ ದನದ ಮಾಂಸ ತಿಂದ್ರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಶ್ಲೋಕದಲ್ಲಿದೆ: ಸಿದ್ದು

    ಕೊಬ್ಬಿದ ದನದ ಮಾಂಸ ತಿಂದ್ರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಶ್ಲೋಕದಲ್ಲಿದೆ: ಸಿದ್ದು

    ಮೈಸೂರು: ಕೊಬ್ಬಿರುವ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಶ್ಲೋಕದಲ್ಲಿಯೇ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದನದ ಮಾಂಸ ತಿನ್ನುವ ಬಗ್ಗೆ ಶ್ಲೋಕವೇ ಇದೆ. ಅದು ನನಗೆ ನೆನಪಾಗುತ್ತಿಲ್ಲ ಆಮೇಲೆ ನೆನಪು ಆದರೆ ಹೇಳ್ತೀನಿ. ದನದ ಮಾಂಸದ ಬಗ್ಗೆ ಶ್ಲೋಕ ಬರೆಯಲಾಗಿದೆ. ಶ್ಲೋಕ ಬರೆದಿರೋದು ಯಾರಪ್ಪ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಸಂಸ್ಕೃತ ಗೊತ್ತಿರುವವರು ತಾನೇ ಶ್ಲೋಕ ಬರೆಯೋದು. ಹಾಗಾದ್ರೆ ಶ್ಲೋಕದಲ್ಲಿ ತಪ್ಪು ಇದ್ಯಾ? ಒಳ್ಳೆಯ ದನದ ಮಾಂಸ ತಿಂದರೆ ಆರೋಗ್ಯ ಚೆನ್ನಾಗಿರುತ್ತೆ ಅಂತ ಆ ಶ್ಲೋಕದಲ್ಲಿ ಹೇಳಿದ್ದಾರೆ. ಸದ್ಯಕ್ಕೆ ಆ ಶ್ಲೋಕ ನೆನಪಾಗುತ್ತಿಲ್ಲ. ಮತ್ತೆ ಮೈಸೂರಿಗೆ ಬಂದಾಗ ಆ ಶ್ಲೋಕ ಹೇಳ್ತೀನಿ. ಈಗ ಹೇಳಿದ್ರೆ ಅದನ್ನ ಕಾಂಟ್ರವರ್ಸಿ ಮಾಡಿ ಬಿಡುತ್ತಾರೆ. ನಾನು ಹೇಳಿದ ಕಾಂಟೆಸ್ಟ್ ಬಿಟ್ಟು ಬೇರೆ ಅರ್ಥದಲ್ಲಿ ಅದನ್ನ ಹೇಳಿಬಿಡುತ್ತಾರೆ. ಅದಕ್ಕೆ ಶ್ಲೋಕವನ್ನ ಸರಿಯಾಗಿಯೇ ಹೇಳ್ತೀನಿ ಎಂದು ತಿಳಿಸಿದರು.

    ನಾನು ಇಲ್ಲಿಯವರೆಗೆ ಗೋಮಾಂಸ ತಿಂದಿಲ್ಲ. ತಿನ್ನಬೇಕು ಅನ್ಸಿದ್ರೆ ತಿನ್ನುತ್ತೇನೆ. ಅದನ್ನ ಕೇಳೋಕೆ ಇವರು ಯಾರು ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಮತ್ತೆ ಗೋಮಾಂಸ ಕುರಿತು ಬಿಜೆಪಿಗರನ್ನು ಕುಟುಕಿದ್ದಾರೆ. ಆಹಾರ ನನ್ನ ಹಕ್ಕು ಅದನ್ನ ಪ್ರಶ್ನಿಸೋಕೆ ಇವರ್ಯಾರು. ಯಡಿಯೂರಪ್ಪಗೆ ಗೊತ್ತಿಲ್ಲ ಹೇಳ್ತಿನಿ ಕೇಳಿ. ನಾನು ಕ್ಲೀಯರ್ ಆಗಿ ಹೇಳುತ್ತೇನೆ. ನಾನು ಈವರೆಗೆ ಗೋಮಾಂಸ ತಿಂದಿಲ್ಲ. ನಾನು ಹಂದಿ ಮಾಂಸ ತಿಂದಿಲ್ಲ. ಆದ್ರೆ ತಿನ್ನಬೇಕು ಅನ್ನಿಸಿದ್ರೆ ತಿಂತೀನಿ. ನಾನು ತಿಂದಿರೋದು ಕೋಳಿ ಮಾಂಸ, ಕುರಿ ಮಾಂಸ, ಆಡಿನ ಮಾಂಸ ಮಾತ್ರ. ಆದರೆ ನಮ್ಮ ಆಹಾರ ಪದ್ಧತಿಯನ್ನು ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಯಡಿಯೂರಪ್ಪ ಗೋಮಾಂಸ ತಿನ್ನೋದೆ ಸಾಧನೆ ಅಂತ ಹೇಳಿದ್ದಾನೆ. ಆದರೆ ನಾನೇನು ಅವನ ಥರ ಸೊಪ್ಪು ತಿನ್ನಲೇ. ನಾನು ಸೋಪ್ಪು ಬೇಕು ಅಂದ್ರೆ ಸೋಪ್ಪು ತಿಂತೀನಿ. ಮಾಂಸ ಬೇಕು ಅಂದ್ರೆ ಮಾಂಸ ತಿಂತೀನಿ. ನಾನೇನಾದ್ರು ನಿಂಗೆ ಹೇಳಿದ್ದೀನಾ ಮಾಂಸ ತಿನ್ನು ಅಂತ?. ಮತ್ತೆ ಸುಮ್ಮನೆ ತಿನ್ನೋರಿಗೆ ಯಾಕೆ ಪ್ರಶ್ನೆ ಮಾಡ್ತೀಯಾ. ಜಗತ್ತಿನಲ್ಲಿ ಮಾಂಸಹಾರಿಗಳೆ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಚೀನಾದಲ್ಲಿ ನಾಲ್ಕು ಕಾಲಿನ ಮಂಚವೊಂದನ್ನ ಬಿಟ್ಟು ಇನ್ನೆಲ್ಲವನ್ನು ತಿಂತಾರೆ ಗೊತ್ತಾ ನಿಮಗೆ. ಹಾಗಾದ್ರೆ ಅಮೇರಿಕಾದಲ್ಲಿ ಇರೋರು ಪ್ರಾಣಿಗಳಾ..?, ಇಂಗ್ಲೆಂಡ್, ಬ್ರಿಟನ್, ಸೇರಿದಂತೆ ಬೇರೆ ದೇಶದಲ್ಲಿರೋರು ದನ ತಿಂತಾರೆ. ಹಾಗಾದ್ರೆ ಅವರೆಲ್ಲ ಪ್ರಾಣಿಗಳಾ?, ನಿಮಗೆ ಸೋಪ್ಪು ಇಷ್ಟ ಇದ್ರೆ ತಿನ್ನಿ. ಬೇರೆಯವರಿಗೆ ಏನು ಇಷ್ಟ ಇದೆ ಅದನ್ನ ತಿನ್ನೋಕೆ ಬಿಡಿ ಎಂದು ಬಿಎಸ್‍ವೈ ವಿರುದ್ಧ ಮಾಜಿ ಸಿಎಂ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

  • ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ – ನಾಲ್ವರ ಬಂಧನ

    ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ – ನಾಲ್ವರ ಬಂಧನ

    ಚಿಕ್ಕಮಗಳೂರು: ಲಾಕ್‍ಡೌನ್ ವೇಳೆ ಮಾಂಸಕ್ಕೆ ಭಾರೀ ಬೇಡಿಕೆ ಇರುವ ಹಿನ್ನೆಲೆ ಕುರಿ ಮಾಂಸಕ್ಕೆ ದನದ ಮಾಂಸವನ್ನು ಮಿಕ್ಸ್ ಮಾಡಿ ನಾಲ್ವರು ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.

    ಈ ಸಂಬಂಧ ಸಿರಾಜ್, ಅನಿಲ್ ಡಿಮೆಲ್ಲೊ, ಡೆಂನ್ಜಿಲ್, ಡೆಮಿಸ್ ಡಿಸೋಜ ಎಂಬವರನ್ನು ಬಂಧಿಸಲಾಗಿದೆ. ಕೊರೊನಾ ಆತಂಕದಿಂದ ಪ್ರತಿದಿನ ಜನಸಾಮಾನ್ಯರು ಆತಂಕದಿಂದ ಬದುಕುತ್ತಿದ್ದಾರೆ. ಜನರಿಗೆ ಊಟ-ತಿಂಡಿಗೆ ಸಮಸ್ಯೆ ಆಗಬಾರದೆಂದು ಸರ್ಕಾರ ಮಾಂಸವನ್ನು ಅತ್ಯಾವಶ್ಯಕ ಎಂದು ಪರಿಗಣಿಸಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಈ ನಡುವೆ ಮಾಂಸದ ದರ ಕೆ.ಜಿ ಗೆ 600-800ರವರೆಗೂ ಇದೆ.

    ಮಾಂಸಕ್ಕೆ ಭಾರೀ ಬೇಡಿಕೆ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಕೊಪ್ಪ ತಾಲೂಕಿನ ಜಯಪುರದ ಬಸ್ ನಿಲ್ದಾಣದ ಕೋಳಿ ಅಂಗಡಿಯಲ್ಲಿ ಕುರಿ ಮಾಂಸಕ್ಕೆ ದನದ ಮಾಂಸ ಮಿಕ್ಸ್ ಮಾಡಿ ಮಾರಲು ಮುಂದಾಗಿದ್ದಾರೆ. ಸುಮಾರು ಒಂದೂವರೆ ಎರಡು ವರ್ಷ ಪ್ರಾಯದ ಹಸುವನ್ನು ಕದ್ದು, ಕೊಂದು, ಡೆಮಿಸ್ ಡಿಸೋಜನ ತೋಟದಲ್ಲಿ ಅದನ್ನು ಕಡಿದು ಅದರ ಚರ್ಮವನ್ನು ತೋಟದೊಳಗೆ ಹೂತು ಮಾಂಸವನ್ನ ತಂದಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಯಪುರ ಬಸ್ ನಿಲ್ದಾಣದ ಎಸ್.ಆರ್ ಚಿಕನ್ ಸೆಂಟರ್ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಅಂಗಡಿಯಲ್ಲಿ ಸುಮಾರು 40 ಕೆ.ಜಿಯಷ್ಟು ದನದ ಮಾಂಸವೂ ಸಿಕ್ಕಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.

  • ದನದ ಮಾಂಸ ಮಾರಾಟಗಾರರ ಮೇಲೆ ಹಲ್ಲೆ – ಓರ್ವ ಸಾವು, ಇಬ್ಬರು ಗಂಭೀರ

    ದನದ ಮಾಂಸ ಮಾರಾಟಗಾರರ ಮೇಲೆ ಹಲ್ಲೆ – ಓರ್ವ ಸಾವು, ಇಬ್ಬರು ಗಂಭೀರ

    ರಾಂಚಿ: ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸ್ಥಳೀಯ ಯವಕರು ಹಲ್ಲೆ ಮಾಡಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ಘಟನೆ ಜಾರ್ಖಂಡ್‍ನ ಖುಂಟಿ ಜಿಲ್ಲೆಯಲ್ಲಿ ಸೋಮವಾರ ನಡೆದಿದ್ದು, ಘಟನೆಯಲ್ಲಿ ಕಲಾಂತಸ್ ಬಾರ್ಲಾ ಸಾವನ್ನಪ್ಪಿದ್ದಾನೆ. ಫಾಗು ಕಚಪಾಂಡ್ ಮತ್ತು ಫಿಲಿಪ್ ಹಹೋರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರನ್ನು ಬುಡಕಟ್ಟು ಕ್ರಿಶ್ಚಿಯನ್ನರು ಎಂದು ಗುರುತಿಸಲಾಗಿದೆ.

    ಖುಂಟಿ ಜಿಲ್ಲೆಯಾ ಜಲ್ತಾಂಡಾದ ಸುವಾರಿ ಎಂಬ ಗ್ರಾಮದಲ್ಲಿ ನಿಷೇಧಿತ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎಂದು ವಾಟ್ಸಾಪ್‍ನಲ್ಲಿ ಸುದ್ದಿ ಆಗಿದೆ. ಈ ಸುದ್ದಿಯನ್ನೇ ಬೆನ್ನಟ್ಟಿದ ಸುತ್ತಮುತ್ತಲ ಊರಿನ ಯುವಕರ ಗುಂಪು ಈ ಮೂವರ ಮೇಲೆ ಹಲ್ಲೆ ಮಾಡಿದೆ. ಇವರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ಮೂವರನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಈ ವಿಚಾರದ ಬಗ್ಗೆ ನಮಗೆ ಹೆಚ್ಚು ಮಾಹಿತಿಯಿಲ್ಲ. ಈಗಾಲೇ ತನಿಖೆ ಪ್ರಾರಂಭ ಮಾಡಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಯಾರನ್ನೂ ಬಂಧಿಸಿಲ್ಲ. ಆದರೆ ಕೆಲ ವ್ಯಕ್ತಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

    ಕಳೆದ ಏಪ್ರಿಲ್ ಇದೇ ರೀತಿಯ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಗುಮ್ಲಾ ಜಿರ್ಮೋ ಗ್ರಾಮದ ಬುಡಕಟ್ಟು ಕ್ರಿಶ್ಚಿಯನ್ ಯುವಕ ಪ್ರಕಾಶ್ ಲಕ್ರಾ ಎಂಬವರನ್ನು ಸತ್ತ ಎತ್ತುಗಳ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಎಂದು ಹಲ್ಲೆ ನಡೆದು ಮೃತಪಟ್ಟಿದ್ದ.