Tag: ದತ್ತುಪುತ್ರಿ

  • ದತ್ತು ಪುತ್ರಿ ನಿರ್ಲಕ್ಷ್ಯ  – ಟ್ರೋಲಿಗರ ಕಣ್ಣಿಗೆ ಗುರಿಯಾದ ಸನ್ನಿ ಉತ್ತರವೇನು?

    ದತ್ತು ಪುತ್ರಿ ನಿರ್ಲಕ್ಷ್ಯ – ಟ್ರೋಲಿಗರ ಕಣ್ಣಿಗೆ ಗುರಿಯಾದ ಸನ್ನಿ ಉತ್ತರವೇನು?

    ಬಾಲಿವುಡ್ ಮಾದಕ ನಟಿ ಸನ್ನಿಲಿಯೋನ್ ಮೂರುಮಕ್ಕಳ ತಾಯಿಯಾಗಿದ್ದಾರೆ. ಇಬ್ಬರಲ್ಲಿ ಅಶೆರ್ ಹಾಗೂ ನೋಹಾ ಮಕ್ಕಳನ್ನು ಬಾಡಿಗೆ ತಾಯ್ತನದಿಂದ ದಂಪತಿ ಪಡೆದುಕೊಂಡಿದ್ದಾರೆ. ಇಬ್ಬರ ಜೊತೆಗೆ ನಿಶಾ ದತ್ತುಪುತ್ರಿಯಿದ್ದಾಳೆ. ಸನ್ನಿ ಪತಿ ಡೇನಿಯಲ್ ವೆಬಲ್ ಸಹ ಮಕ್ಕಳ ಲಾಲನೆ-ಪಾಲನೆಗೆ ಹೆಚ್ಚು ಸಮಯ ಕೊಡುತ್ತಾರೆ. ಇತ್ತೀಚೆಗೆ ದಂಪತಿ ಮಕ್ಕಳ ಜೊತೆ ಫೋಟೋ ಶೇರ್ ಮಾಡಿಕೊಂಡಿದ್ದು, ದತ್ತುಪುತ್ರಿ ಕೈ ಹಿಡಿದುಕೊಂಡಿರಲಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು, ಸನ್ನಿ ದತ್ತು ಪುತ್ರಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಈ ಫೋಟೋವನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

    ಡೇನಿಯಲ್ ಮತ್ತು ಸನ್ನಿಗೆ ನಿಶಾ ದತ್ತುಪುತ್ರಿಯಾಗಿರುವ ಕಾರಣ ಅವಳ ಕೈಯನ್ನು ದಂಪತಿ ಹಿಡಿದುಕೊಂಡಿಲ್ಲ ಎಂದು ನೆಟ್ಟಿಗರು ಫುಲ್ ಗರಂ ಆಗಿ ಟ್ರೋಲ್ ಮಾಡಿದ್ದಾರೆ. ಟ್ರೋಲ್‍ನಿಂದ ಬೇಸರಗೊಂಡ ಸನ್ನಿ, ಪೋಷಕರಾದವರಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಇರುತ್ತೆ. ಕೇವಲ ಒಂದು ಫೋಟೋ ನೋಡಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂದು ಅಳಿಯುವುದು ಸರಿಯಲ್ಲ. ನಾವು ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಅದರಲ್ಲಿಯೂ ಡೇನಿಯಲ್‍ಗೆ ನಿಶಾ ಎಂದರೆ ಪ್ರಾಣ ಎಂದು ಟ್ರೋಲಿಗರಿಗೆ ಉತ್ತರಕೊಟ್ಟಿದ್ದಾರೆ. ಇದನ್ನೂ ಓದಿ: ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

     

    View this post on Instagram

     

    A post shared by Sunny Leone (@sunnyleone)

    ಕೆಟ್ಟ ರೀತಿಯ ಕಾಮೆಂಟ್‍ಗಳನ್ನು ನಾನು ಓದುವುದಿಲ್ಲ. ಆದರೆ ಡೇನಿಯಲ್ ಎಲ್ಲ ಕಾಮೆಂಟ್‍ಗಳನ್ನು ಓದುತ್ತಾರೆ. ಇದರಿಂದ ಅವರು ತುಂಬಾ ಬೇಸರಗೊಂಡಿದ್ದಾರೆ. ಆದರೆ ನಾನು ಬೇಸರ ಮಾಡಿಕೊಳ್ಳಬೇಡಿ ಎಂದು ತಿಳಿಸಿದ್ದೇನೆ. ಮಕ್ಕಳ ಬೆಳವಣೆಗೆಗೆ ಉತ್ತಮ ವಾತವರಣ ಇರುವುದು ತುಂಬಾ ಮುಖ್ಯವೆಂದು ನಾನು ಹೇಳಿದ್ದೇನೆ ಎಂದ ಸನ್ನಿ.

  • ನಗರ ಜೀವನ ಶೈಲಿಗೆ ಹೊಂದಿಕೊಳ್ಳದ್ದಕ್ಕೆ 9ರ ದತ್ತುಪುತ್ರಿಯನ್ನು ಕೊಂದು ಚರಂಡಿಗೆ ಎಸೆದ

    ನಗರ ಜೀವನ ಶೈಲಿಗೆ ಹೊಂದಿಕೊಳ್ಳದ್ದಕ್ಕೆ 9ರ ದತ್ತುಪುತ್ರಿಯನ್ನು ಕೊಂದು ಚರಂಡಿಗೆ ಎಸೆದ

    ಮುಂಬೈ: ನಗರದ ಜೀವನ ಶೈಲಿಗೆ ಹೊಂದಿಕೊಂಡಿಲ್ಲ ಎಂದು ತಂದೆಯೋರ್ವ ತಾನು ದತ್ತು ಪಡೆದಿದ್ದ 9 ವರ್ಷದ ಬಾಲಕಿಯನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.

    38 ವರ್ಷದ ಪ್ರಕಾಶ್ ರಾಥೋಡ್ ದತ್ತುಪಡೆದ 9 ವರ್ಷದ ಮಗು ನಗರದ ಜೀವನ ಶೈಲಿಗೆ ಹೊಂದಿಕೊಳ್ಳುತ್ತಿಲ್ಲ. ಬಟ್ಟೆಗಳನ್ನು ಕೊಳೆ ಮಾಡಿಕೊಳ್ಳುತ್ತಾಳೆ ಎಂದು ಹೊಡೆದು ಸಾಯಿಸಿ ಡ್ರಮ್‍ನಲ್ಲಿ ತುಂಬಿ ದೊಡ್ಡ ಚರಂಡಿಗೆ ಎಸೆದಿದ್ದಾನೆ. ಮಗುವಿನ ನಿಜವಾದ ತಾಯಿ ಹಲವು ವಾರಗಳ ನಂತರವು ಮಗುವನ್ನು ಭೇಟಿ ಮಾಡಲು ಸಾಧ್ಯವಾಗದೆ ಇದ್ದಾಗ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ತಾಯಿ ನೀಡಿದ ದೂರಿನ ಮೇರೆಗೆ ವಿಚಾರಣೆ ಮಾಡಿದ ಪೊಲೀಸರಿಗೆ ದತ್ತು ಪಡೆದ ಪ್ರಕಾಶ್ ಮಗು ನಗರದ ಪದ್ಧತಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ಮಗುವನ್ನು ಹೊಡೆದು ಕೊಂದು ನಂತರ ತನ್ನ ಪತ್ನಿ ಮತ್ತು ಸಂಬಂಧಿಕರೊಬ್ಬರ ಸಹಾಯದಿಂದ ಮೃತದೇಹವನ್ನು ಒಂದು ಡ್ರಮ್ ಗೆ ತುಂಬಿ ಅದಕ್ಕೆ ಸಿಮೆಂಟ್ ಪ್ಲಾಸ್ಟರ್ ಮಾಡಿ ದೊಡ್ಡ ಚರಂಡಿಗೆ ಎಸೆದಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ಮಗುವಿನ ನಿಜವಾದ ತಾಯಿ ಬಡ ವಿಧವೆಯಾಗಿದ್ದು, ಆಕೆಯ ಸೋದರ ಸಂಬಂಧಿಯಾಗಿದ್ದ ಪ್ರಕಾಶ್ ರಾಥೋಡ್ ನಿನ್ನ ಮಗುವನ್ನು ದತ್ತು ಕೊಡು ನಾವು ಶ್ರೀಮಂತರಾಗಿದ್ದು, ನಗರದಲ್ಲಿ ನಿಮ್ಮ ಮಗಳನ್ನು ಬೆಳೆಸುತ್ತೇವೆ, ಓದಿಸುತ್ತೇವೆ ಎಂದು ಹೇಳಿದ್ದಾನೆ. ಊಟಕ್ಕೂ ಸಮಸ್ಯೆ ಇರುವ ನನ್ನ ಬಳಿ ನನ್ನ ಮಗಳು ಬೆಳೆಯುವುದು ಬೇಡ ನಗರದಲ್ಲಿ ಬೆಳೆದು ವಿದ್ಯಾವಂತೆಯಗಲಿ ಎಂಬ ಕನಸನ್ನು ಇಟ್ಟುಕೊಂಡು ಆಕೆ ಅವರಿಗೆ ತನ್ನ ಮಗಳನ್ನು ನೀಡಿದ್ದಾಳೆ.

    ಮಗುವನ್ನು ದತ್ತು ಪಡೆದ ಪ್ರಕಾಶ್ ದಂಪತಿ ಮಗುವನ್ನು ಓದಿಸದೆ ದಿನಲೂ ಹೊಡೆಯುತ್ತಿದ್ದರು. ಮನೆ ಕೆಲಸ ಮಾಡಲು ಇಟ್ಟುಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದಲ್ಲದೇ ಆರೋಪಿ ಪ್ರಕಾಶ್ ಪತ್ನಿ ಟೈಲರಿಂಗ್ ಕೆಲಸ ಮಾಡುತ್ತಿದ್ದು, ಆ ಕೆಲಸ ಮಾಡಲು ಆ ಮಗು ಅವಳಿಗೆ ದಿನ ಸಹಾಯ ಮಾಡುತಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ಡಿಸೆಂಬರ್ 7 ರಂದು ಮಗು ಬಟ್ಟೆಯನ್ನು ಮಣ್ಣು ಮಾಡಿಕೊಂಡು ಬಂದಿದೆ ಎಂದು ಪ್ರಕಾಶ್ ಮಗುವಿಗೆ ತುಂಬ ಹೊಡೆದಿದ್ದಾನೆ. ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಆಗ ಮಗುವಿನ ಮೃತದೇಹವನ್ನು ಡ್ರಮ್ ಒಳಗೆ ಹಾಕಿ ಅದಕ್ಕೆ ಸಿಮೆಂಟ್ ತುಂಬಿ ಚರಂಡಿಗೆ ಎಸೆದಿದ್ದಾರೆ. ಈ ವಿಚಾರವಾಗಿ ಪ್ರಕಾಶ್ ಪತ್ನಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದ್ದು ಆರೋಪಿ ಪ್ರಕಾಶ್ ಪರಾರಿಯಾಗಿದ್ದಾನೆ.