Tag: ದತ್ತಾತ್ರೇಯ ಪಾಟೀಲ್

  • ದೀಪ ಬೆಳಗಿಸಿ ಆದ್ರೆ ಮನೆಯ ಲಕ್ಷ್ಮಣ ರೇಖೆ ದಾಟಬೇಡಿ – ನಮೋ ಕರೆಗೆ ಶಾಸಕರ ಪುತ್ರಿ ಮನವಿ

    ದೀಪ ಬೆಳಗಿಸಿ ಆದ್ರೆ ಮನೆಯ ಲಕ್ಷ್ಮಣ ರೇಖೆ ದಾಟಬೇಡಿ – ನಮೋ ಕರೆಗೆ ಶಾಸಕರ ಪುತ್ರಿ ಮನವಿ

    ಕಲಬುರಗಿ: ಕೊರೊನಾ ಸೋಂಕು ವಿರುದ್ಧ ಹೋರಾಟಕ್ಕೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಇಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ ಬೆಳಗಿಸಿ ಭಾರತ ದೇಶ ಕೊರೊನಾ ವಿರುದ್ಧ ಹೋರಾಡಲು ಒಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಎಂದು ಕರೆ ನೀಡಿದ್ದಾರೆ. ಇದಕ್ಕೆ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅವರ ಪುತ್ರಿ ಅವಣಿ ಸಹ ಬೆಂಬಲ ವ್ಯಕ್ತಪಡಿಸಿ ಮನವಿಯೊಂದನ್ನು ಮಾಡಿಕೊಂಡಿದ್ದಾಳೆ.

    ಮನೆಯಲ್ಲಿಯೇ ಕುಳಿತು ಎಲ್ಲರು ದೀಪ ಬೆಳಗಿಸಿ, ಒಗಟ್ಟಿನ ಬಲವಿದೆ ಎಂಬುದು ತೋರಿಸಿ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಲಕ್ಷ್ಮಣ ರೇಖೆ ದಾಟಿ ದೀಪ ಬೆಳಗಿಸಲು ಹೋಗಬೇಡಿ. ಪ್ರಧಾನಿ ಮೋದಿ ಅವರ ಕರೆಗೆ ನಾನು ಕೈಜೊಡಿಸುತ್ತೇನೆ. ನೀವು ನಮ್ಮೊಡನೆ ಸಾಥ್ ನೀಡಿ ಎಂದು ಅವಣಿ ವಿಡಿಯೋ ಮೂಲಕ ಸಂದೇಶ ನೀಡಿದ್ದಾಳೆ. ಶಾಸಕರ ಪುತ್ರಿಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಬಾಲಕಿ ಮನವಿಗೆ ಹಲವು ನೆಟ್ಟಿಗರು ಪತ್ರಿಯಿಸಿದ್ದಾರೆ.

    ಕೊರೊನಾ ಲಾಕ್‍ಡೌನ್ ಪರಿಣಾಮ ನಿರ್ಗತಿಕ ಮತ್ತು ಪಾಲಿಕೆ ಪೌರ ಕಾರ್ಮಿಕರಿರು ಊಟ ಸಿಗದೇ ಪರದಾಡುತ್ತಿದ್ದಾಗ ದತ್ತಾತ್ರೇಯ ಪಾಟೀಲ್ ಅವರು ಸಹಾಯ ಹಸ್ತ ಚಾಚಿದ್ದರು. ಪಾಲಿಕೆ ಅಧಿಕಾರಿಗಳ ಮುಖಾಂತರ ಎಲ್ಲಾ ನಿರ್ಗತಿಕ ಹಾಗೂ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಅಷ್ಟೇ ಅಲ್ಲದೆ ಖುದ್ದು ಶಾಸಕರೇ ಪೌರ ಕಾರ್ಮಿಕರಿಗೆ ಊಟ ಬಡಿಸಿ ಯೋಜನೆಗೆ ಚಾಲನೆ ನೀಡಿದ್ದರು.

    ಅದಲ್ಲದೇ ಪಾಲಿಕೆಯ ಎಲ್ಲಾ 55 ವಾರ್ಡ್‍ಗಳಲ್ಲಿ ಸಹ ತರಕಾರಿಯನ್ನು ಮನೆ ಮನೆಗೆ ಕಳುಹಿಸುವ ಯೋಜನೆಗೂ ಸಹ ಚಾಲನೆ ನೀಡಿದ್ದರು. ಹೀಗಾಗಿ ಸಾರ್ವಜನಿಕರು ಯಾರು ಸಹ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಕುಳಿತುಕೊಳ್ಳಬೇಕು. ಈ ಮೂಲಕ ಕೊರೊನಾ ಸೋಂಕು ತಡೆಯಲು ಎಲ್ಲರು ಸಹ ಕೈ ಜೋಡಿಸಬೇಕು ಎಂದು ದತ್ತಾತ್ರೇಯ ಪಾಟೀಲ್ ಮನವಿ ಮಾಡಿಕೊಂಡಿದ್ದರು.

  • ಪೌರ ಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ದತ್ತಾತ್ರೇಯ ಪಾಟೀಲ್

    ಪೌರ ಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ದತ್ತಾತ್ರೇಯ ಪಾಟೀಲ್

    ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಕಲಬುರಗಿಯ ಜನ ಅಕ್ಷರಶಃ ತತ್ತರಿಸಿ ಎಲ್ಲಾ ಹೋಟೆಲ್‍ಗಳನ್ನು ಬಂದ್ ಮಾಡಿದ್ದಾರೆ. ಇದರ ಪರಿಣಾಮ ಕಳೆದ ನಾಲ್ಕು ದಿನಗಳಿಂದ ನಿರ್ಗತಿಕ ಮತ್ತು ಪಾಲಿಕೆ ಪೌರ ಕಾರ್ಮಿಕರಿಗೇ ಊಟ ಸಿಗದೇ ಪರದಾಡುವಂತಾಗಿದೆ.

    ಇದನ್ನು ಅರಿತ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್, ಪಾಲಿಕೆ ಅಧಿಕಾರಿಗಳ ಮುಖಾಂತರ ಎಲ್ಲಾ ನಿರ್ಗತಿಕ ಹಾಗೂ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಖುದ್ದು ಶಾಸಕರೇ ಪೌರ ಕಾರ್ಮಿಕರಿಗೆ ಊಟ ನೀಡಿ ಯೋಜನೆಗೆ ಚಾಲನೆ ನೀಡಿದ್ದಾರೆ.

    ಅದಲ್ಲದೇ ಪಾಲಿಕೆಯ ಎಲ್ಲಾ 55 ವಾರ್ಡ್‍ಗಳಲ್ಲಿ ಸಹ ತರಕಾರಿಯನ್ನು ಮನೆ ಮನೆಗೆ ಕಳುಹಿಸುವ ಯೋಜನೆಗೂ ಸಹ ಚಾಲನೆ ನೀಡಲಾಗಿದೆ. ಹೀಗಾಗಿ ಸಾರ್ವಜನಿಕರು ಯಾರು ಸಹ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಕುಳಿತುಕೊಳ್ಳಬೇಕು. ಈ ಮೂಲಕ ಕೊರೊನಾ ಸೋಂಕು ತಡೆಯಲು ಎಲ್ಲರು ಸಹ ಕೈ ಜೋಡಿಸಬೇಕು ಎಂದು ಕಲಬುರಗಿ ಜಿಲ್ಲೆಯ ಜನರಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ಮನವಿ ಮಾಡಿದ್ದಾರೆ.

  • ವಸತಿ ನಿಲಯಕ್ಕಾಗಿ 1 ನಿಮಿಷದಲ್ಲಿ 1 ಕೋಟಿ ಹಣ ಸಂಗ್ರಹಿಸಿದ ಶಾಸಕ ದತ್ತಾತ್ರೇಯ ಪಾಟೀಲ್

    ವಸತಿ ನಿಲಯಕ್ಕಾಗಿ 1 ನಿಮಿಷದಲ್ಲಿ 1 ಕೋಟಿ ಹಣ ಸಂಗ್ರಹಿಸಿದ ಶಾಸಕ ದತ್ತಾತ್ರೇಯ ಪಾಟೀಲ್

    ಕಲಬುರಗಿ: ವೀರಶೈವ ಸಮಾಜದ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ ಕಾಮಗಾರಿಗಾಗಿ ಒಂದೇ ಒಂದು ನಿಮಿಷದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅವರು 1 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.

    ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ವೀರಶೈವ ಸಮಾಜದ ವಿದ್ಯಾರ್ಥಿನಿಯರಿಗೆ ಪಟ್ಟಣಕ್ಕೆ ಬಂದು ವಸತಿ ಮಾಡಲು ಸೂಕ್ತ ಸೂರು ಇರಲಿಲ್ಲ. ಹೀಗಾಗಿ ಕಲಬುರಗಿಯಲ್ಲಿ ನಡೆದ ವೀರಶೈವ-ಲಿಂಗಾಯತ ಶಕ್ತಿ ಕೇಂದ್ರದ ವತಿಯಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಶರಣ ಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾದ ಚಿರಂಜೀವಿ ದೊಡಪ್ಪ ಅಪ್ಪ ಸೇರಿದಂತೆ ಹಲವು ಮಠಾಧೀಶರು ಮತ್ತು ನಾಯಕರು ಭಾಗವಹಿಸಿದ್ದರು.

    ಈ ವೇಳೆ ಕಲಬುರಗಿ ನಗರದಲ್ಲಿ ವೀರಶೈವ ಸಮಾಜದ ವಿದ್ಯಾರ್ಥಿನಿಯರಿಗಾಗಿ ಒಂದು ವಸತಿ ನಿಲಯ ನಿರ್ಮಿಸಬೇಕು ಎಂದು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ವಿಷಯವನ್ನು ಪ್ರಸ್ತಾಪಿಸಿ ವೈಯಕ್ತಿಕ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದರು. ಕೂಡಲೇ ವೇದಿಕೆ ಮೇಲಿದ್ದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ವೇದಿಕೆ ಮೇಲಿರುವ ಎಲ್ಲರೂ ಕೂಡ ಬಹುತೇಕ ಆರ್ಥಿಕ ಸಬಲರಾಗಿದ್ದೇವೆ. ಹೀಗಾಗಿ ಪ್ರತಿಯೊಬ್ಬರು 5 ಲಕ್ಷ ರೂಪಾಯಿ ದೇಣಿಗೆ ನೀಡಬೇಕೆಂದು ಕರೆ ಕೊಟ್ಟು, ಯಾರು ಹಣ ನೀಡುತ್ತೀರಿ ಕೈ ಎತ್ತಿ ವೀರಶೈವ ಸಮಾಜದ ಅಭಿವೃದ್ಧಿಗೆ ಕಿರು ಕಾಣಿಕೆ ನೀಡಿ ಎಂದು ಮನವಿ ಮಾಡಿದರು.

    ಶಾಸಕರು ಹೀಗೆ ಹೇಳುತ್ತಿದ್ದಂತೆ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ವೆಂಕಟರೆಡ್ಡಿ ಮುದ್ನಾಳ, ಎಂಎಲ್‍ಸಿ ಚಂದ್ರಶೇಖರ ಪಾಟೀಲ್, ಬಿ.ಜಿ ಪಾಟೀಲ್, ಶಾಸಕ ಎಂ.ವೈ ಪಾಟೀಲ್ ಸೇರಿದಂತೆ ವೇದಿಕೆ ಮೇಲಿದ್ದ 15ಕ್ಕೂ ಹೆಚ್ಚು ಜನ ಕೈ ಎತ್ತಿ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದರು. ಈ ಮೂಲಕ ಕೇವಲ ಒಂದು ನಿಮಿಷದಲ್ಲಿಯೇ ಕಟ್ಟಡ ಕಾಮಗಾರಿಗೆ ಬೇಕಾದ 1 ಕೋಟಿ ಹಣ ಒಟ್ಟಾಗಿದ್ದು, ಕಾಮಗಾರಿ ಆರಂಭಿಸುತ್ತಿದ್ದಂತೆ ಎಲ್ಲರೂ ಹಣ ನೀಡುವುದಾಗಿ ಘೋಷಿಸಿಕೊಂಡರು.

    ಒಂದು ನಿಮಿಷದಲ್ಲಿಯೇ 1 ಕೋಟಿ ಹಣ ಸಂಗ್ರಹಿಸಲು ದತ್ತಾತ್ರೇಯ ಪಾಟೀಲ್ ಹಾಗೂ ಶರಣಬಸಪ್ಪ ದರ್ಶನಾಪುರ ಅವರ ಈ ಮಾಸ್ಟರ್ ಐಡಿಯಾ ವರ್ಕೌಟ್ ಆಗಿದ್ದು, ಆದಷ್ಟು ಬೇಗ ಭೂಮಿ ಪೂಜೆಯ ದಿನಾಂಕ ನಿಗದಿ ಮಾಡಿ ಅದೇ ದಿನ ಎಲ್ಲರೂ ಹಣ ನೀಡುವುದಾಗಿ ಹೇಳಿದರು.

  • ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಕಲಬುರಗಿ: ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಸಿಬ್ಬಂದಿ ಮತ್ತು ಪಾಲಿಕೆ ಅಧಿಕಾರಿಗಳನ್ನು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಗೆ ಬರೀ ಭೇಟಿ ಕೊಟ್ಟರೆ ಪ್ರಯೋಜನವಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

    ಸ್ವಚ್ಛತಾ ಅಭಿಯಾನ ಕಾಮಗಾರಿಗೆ ತೆರಳಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಸಂಸದ ಡಾ.ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಕೆಂಡಾಮಂಡಲರಾದರು. ಈ ವೇಳೆ ಶಾಸಕರು, ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಸಂಸದರ ಎದುರೇ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

    ನೀವು ಬರೀ ವಿಸಿಟ್ ಮಾಡಿದ್ರೆ ಪ್ರಯೋಜನವಿಲ್ಲ. ನಿರ್ಲಕ್ಷ್ಯ ತೋರಿದ ಒಂದಿಬ್ಬರು ಅಧಿಕಾರಿ, ಸಿಬ್ಬಂದಿ ಸಂಸ್ಪೆಂಡ್ ಮಾಡಿದರೆ ಮಾತ್ರ ಎಲ್ಲವೂ ಸರಿ ಹೋಗುತ್ತೆ. ಇಲ್ಲ ಅಂದರೆ ನೀವು ಬರೀ ಭೇಟಿ ನೀಡುತ್ತೀರಿ ಎಂದು ಅಧಿಕಾರಿಗಳು ಸಮ್ಮನಾಗುತ್ತಾರೆ ಎಂದು ಸಂಸದರ ಎದುರೇ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಕಾರಿಡಾರ್‌ನಲ್ಲೇ ರೋಗಿಗಳಿಗೆ ಚಿಕಿತ್ಸೆ- ಗದಗ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ

    ಇದೇ ವೇಳೆ ದತ್ತಾತ್ರೇಯ ಪಾಟೀಲ್‍ಗೆ ದನಿಗೂಡಿಸಿದ ಜಾಧವ್ ಸಹ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸ್ಥಳಕ್ಕಾಗಮಿಸಿದ ಪಾಲಿಕೆ ಎಂಜಿನಿಯರನ್ನೂ ಸಖತ್ ತರಾಟೆಗೆ ತೆಗೆದುಕೊಂಡರು. ನಾವಿಲ್ಲಿ ಕೆಲಸ ಮಾಡಲು ಬಂದ್ರೆ ಮುಖಕ್ಕೆ ಪೌಡರ್ ಹಚ್ಚಿಕೊಳ್ಳಲು ಹೋಗಿದ್ರಾ ಎಂದು ಸ್ಥಳಕ್ಕೆ ತಡವಾಗಿ ಬಂದ ಅಧಿಕಾರಿಗೆ ಮಂಗಳಾರತಿ ಮಾಡಿದ್ದಾರೆ.

  • ಮತ ಕೇಳಲು ಹೋದ ವಿ.ಸೋಮಣ್ಣಗೆ ಗ್ರಾಮಸ್ಥರಿಂದ ಘೇರಾವ್

    ಮತ ಕೇಳಲು ಹೋದ ವಿ.ಸೋಮಣ್ಣಗೆ ಗ್ರಾಮಸ್ಥರಿಂದ ಘೇರಾವ್

    – ರಾಜೀನಾಮೆ ಉಮೇಶ್ ಜಾಧವ್ ಕಾರಣ ನೀಡಲಿ

    ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಹೋಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ಇಂದು ನಡೆಯಿತು.

    ಚಿಂಚೋಳಿ ತಾಲೂಕಿನ ಮೋಘಾ ಗ್ರಾಮದಲ್ಲಿ ಅವಿನಾಶ್ ಜಾಧವ್ ಪರ ಪ್ರಚಾರ ಮಾಡಲು ಮಾಜಿ ಸಚಿವ ಸೋಮಣ್ಣ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ಹೋಗಿದ್ದರು. ಈ ವೇಳೆ ಸೇರಿದ ಗ್ರಾಮಸ್ಥರು, ಯುವಕರು ಉಮೇಶ್ ಜಾಧವ್ ವಿರುದ್ಧ ಅಸಮಾಧಾನ ಹೊರಹಾಕಿದರು.

    ಉಮೇಶ್ ಜಾಧವ್ ಅವರನ್ನು ಎರಡು ಬಾರಿ ಆಯ್ಕೆ ಮಾಡಿದ್ದೇವೆ. ಆದರೆ ಅವರು ಕಾರಣವಿಲ್ಲದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ಕಾಂಗ್ರೆಸ್ ಬಿಟ್ಟು ಹೋಗಿದ್ದು ಯಾಕೆ ಎಂದು ಪ್ರಶ್ನಿದ್ದಾರೆ. ಅಷ್ಟೇ ಅಲ್ಲದೇ ರಾಜೀನಾಮೆಗೆ ಸೂಕ್ತ ಕಾರಣ ಹೇಳಬೇಕು ಆಗ್ರಹಿಸಿದರು.

    ಗ್ರಾಮಸ್ಥರು ಮನವೊಲಿಸುವಲ್ಲಿ ದತ್ತಾತ್ರೇಯ ಪಾಟೀಲ್ ಹಾಗೂ ವಿ.ಸೋಮಣ್ಣ ವಿಫಲರಾದರು. ಹೀಗಾಗಿ ಮಾಜಿ ಸಚಿವರ ಸೂಚನೆ ಮೇರೆಗೆ ಶಾಸಕ ದತ್ತಾತ್ರೇಯ ಪಾಟೀಲ್ ಅವರು ಗ್ರಾಮದಲ್ಲಿರು ಬಿ.ಎಸ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮರಳಿದರು.