Tag: ದತ್ತಾತ್ರೇಯ ದೇವಸ್ಥಾನ

  • ಅತ್ತೆ ಬೇಗ ಸಾಯಬೇಕು- 50 ರೂ. ನೋಟ್ ಮೇಲೆ ಹರಕೆ ಬರೆದ ಸೊಸೆ!

    ಅತ್ತೆ ಬೇಗ ಸಾಯಬೇಕು- 50 ರೂ. ನೋಟ್ ಮೇಲೆ ಹರಕೆ ಬರೆದ ಸೊಸೆ!

    ಕಲಬುರಗಿ: ಪ್ರಸಿದ್ಧ ದೇಗುಲಗಳ ಹುಂಡಿ ಎಣಿಕೆ ಕಾರ್ಯ ಮಾಡುವಾಗ ಅನೇಕ ರೀತಿಯ ಚೀಟಿಗಳು ಸಿಗುತ್ತವೆ. ಇವುಗಳಲ್ಲಿ ಪ್ರೀತಿ-ಪ್ರೇಮ, ಮದುವೆ, ಪತಿ-ಪತ್ನಿ, ಅತ್ತೆ-ಸೊಸೆ ನಡುವಿನ ಜಗಳಗಳು, ಪಕ್ಕದಮನೆಯವರ ವಿಚಾರ ಹೀಗೆ ದೇವರಿಗೆ ಹರಕೆ ಕಟ್ಟಿ ಚೀಟಿ ಬರೆದು ಹಾಕುವುದನ್ನು ನೋಡಿರುತ್ತೇವೆ. ಅಂಥದ್ದೇ ವಿಚಾರವೊಂದು ಇದೀಗ ಕಲಬುರಗಿಯಲ್ಲಿಯೂ ಬೆಳಕಿಗೆ ಬಂದಿದೆ.

    ಕೆಲ ದಿನಗಳ ಹಿಂದೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಬೇಡಿದ ವರ ಕೊಡುವ ಶ್ರೀಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ವಿಶೇಷ ನೋಟ್ ಸಿಕ್ಕಿದೆ. ಈ ನೋಟಿನಲ್ಲಿ ಬರೆದಿದ್ದನ್ನು ಓದಿದ ಹುಂಡಿ ಎಣಿಕಾರ್ಯ ಮಾಡುತ್ತಿರುವ ಸಿಬ್ಬಂದಿಯೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಿಸಿ ಬಿಸಿ; 4 ವರ್ಷದ ದಾಖಲೆ ಮುರಿದ ಸಿಲಿಕಾನ್‌ ಸಿಟಿ

    ಚೀಟಿಯಲ್ಲಿ ಏನಿತ್ತು..?: ಸೊಸೆಯೊಬ್ಬಳು ತನ್ನ ಅತ್ತೆಯ ಮೇಲಿನ ಸಿಟ್ಟನ್ನು ಈ ನೋಟಿನಲ್ಲಿ ಬರೆಯುವ ಮುಖಾಂತರ ತೋರಿಸಿಕೊಂಡಿದ್ದಾಳೆ. ಅತ್ತೆ ಬೇಗ ಸಾಯಬೇಕು ಎಂದು ಹರಕೆ ಹೊತ್ತಿದ್ದಾಳೆ. ಅಲ್ಲದೆ 50 ರೂಪಾಯಿ ನೋಟಿನ ಮೇಲೆ “ಅತ್ತೆ ಬೇಗ ಸಾಯಬೇಕು” ಎಂದು ಬರೆದು ದತ್ತಾತ್ರೇಯ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

  • ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ

    ಪುನೀತ್ ರಾಜ್‌ಕುಮಾರ್‌ರನ್ನು ಮರಳಿ ಕಳುಹಿಸು – ಅಭಿಮಾನಿಯಿಂದ ದೇವರಿಗೆ ಪತ್ರ

    ಕಲಬುರಗಿ: ಕನ್ನಡ ಚಿತ್ರರಂಗದ ಮೇರು ನಟ ಯುವರತ್ನ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ತಿಂಗಳುಗಳು ಉರುಳಿವೆ. ಆದರೆ, ಅಪ್ಪು ನೆನಪಲ್ಲಿ ಅದೆಷ್ಟೋ ಒಳ್ಳೆ ಕಾರ್ಯಗಳು ನಿತ್ಯವೂ ನಡೆಯುತ್ತಿವೆ. ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರವಾಗಿದ್ದು, ಅದಕ್ಕೆ ಸಾಕ್ಷಿ ಎಂಬಂತೆ ಪುನೀತ್ ರಾಜ್‍ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭುವೇ ಎಂದು ಅಪ್ಪು ಅಭಿಮಾನಿಯೊಬ್ಬರು ಬರೆದಿರುವ ಚೀಟಿ ದೇವರ ಹುಂಡಿಯಲ್ಲಿ ಸಿಕ್ಕಿದೆ.

    ಕಲಬುರಗಿಯ ಅಫಜಲಪುರ ತಾಲೂಕಿನ ಸುಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭು ಎಂದು ಅಭಿಮಾನಿ ಬರೆದಿರುವ ಚೀಟಿ ದೇವಸ್ಥಾನದ ಹುಂಡಿ ಎಣಿಕೆ ಸಂದರ್ಭದಲ್ಲಿ ದೊರೆತಿದೆ. ಅಪ್ಪು ಅವರನ್ನು ಮತ್ತೆ ಕಳುಹಿಸಿ ಎಂದು ದೇವರ ಮೊರೆ ಹೋಗಿರುವ ಈ ವಿಚಾರ ಭಾವನಾತ್ಮಕವಾಗಿದೆ. ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಸದ್ಯ ಇತ್ತೀಚೆಗಷ್ಟೇ ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಸಿನಿಮಾ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಅಪ್ಪು ಡ್ಯಾನ್ಸ್, ಫೈಟ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೇಮ್ಸ್ ಸಿನಿಮಾಕ್ಕೆ ನಿರ್ದೇಶಕ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದು, ಅಪ್ಪುಗೆ ಜೋಡಿಯಾಗಿ ಪ್ರಿಯಾ ಆನಂದ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶರತ್ ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲಾ, ಶ್ರೀಕಾಂತ್, ಆದಿತ್ಯ ಮೆನನ್ ಸೇರಿದಂತೆ ಹಲವಾರು ಕಲಾವಿದರೂ ಅಭಿನಯಿಸಿದ್ದಾರೆ. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

  • ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    – ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ವಿಚಿತ್ರ ಆಚರಣೆ
    – ಕಂಬಿಗೆ ತಲೆಕೆಳಗಾಗಿ ನೇತುಬಿದ್ದ ಮಹಿಳೆ

    ಕಲಬುರಗಿ: ಜಿಲ್ಲೆಯ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಇದೀಗ ಈ ದೇವಸ್ಥಾನದಲ್ಲಿ ದೆವ್ವ-ಪ್ರೇತಾತ್ಮಗಳ ಸಂಖ್ಯೆ ಹೆಚ್ಚಾಗಿದೆಯಂತೆ, ಅಚ್ಚರಿಯಾದರೂ ಇದು ನಿಜವಾಗಿದೆ.

    ಅಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳನ್ನು ನಿತ್ಯ ಇಲ್ಲಿ ಕಾಣಬಹುದು. ಮೈಮೇಲೆ ಪರಿವೇ ಇಲ್ಲದಂತೆ ಚಿತ್ರ ವಿಚಿತ್ರವಾಗಿ ವರ್ತಿಸುವ ಇವರ ಮೇಲೆ ದೆವ್ವ, ಪಿಶಾಚಿ, ಪ್ರಾತಾತ್ಮಗಳು ಆವಾಹಿಸಿಕೊಂಡಿವೆಯಂತೆ. ಇದರಿಂದ ಮುಕ್ತರಾಗಲು ಇವರೆಲ್ಲ ದತ್ತನ ಸನ್ನಿಧಿಗೆ ಬರುತ್ತಾರೆ.

    ಪ್ರತಿನಿತ್ಯ ಮಧ್ಯಾಹ್ನ 1.30ಕ್ಕೆ ದತ್ತನಿಗೆ ಮಹಾ ಮಂಗಳಾರತಿ ನೆರವೇರಿಸುವ ವೇಳೆ ಮಾನಸಿಕ ಅಸ್ವಸ್ಥರು, ಮೈಮೇಲೆ ದೆವ್ವ ಬಂದವರ ರೀತಿ ಆಡುತ್ತಾರೆ. ಕೂದಲು ಕೆದರಿಕೊಂಡು ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ, ಕೇಕೆ ಹಾಕುತ್ತಾರೆ, ಅಳುತ್ತಾರೆ, ದೇವರನ್ನೇ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಕೆಲವರು ಕಂಬಿ ಮೇಲೆ ನಿದ್ದೆ ಹೋಗುತ್ತಾರೆ. ಹೀಗೆ ಬರೋರಲ್ಲಿ ಕರ್ನಾಟಕದವರು ಇದ್ದಾರೆ. ಆಂಧ್ರ, ತೆಲಂಗಾಣದವರು ಇದ್ದಾರೆ. ಆದರೆ ಪ್ರೇತಾತ್ಮಗಳ ಕಾಟಕ್ಕೆ ತುತ್ತಾಗುವವರಲ್ಲಿ ಮಹಾರಾಷ್ಟ್ರ ಮಂದಿಯೇ ಅಧಿಕ. ಇಲ್ಲಿ ಬಂದು ಕೆಲ ದಿನಗಳ ದತ್ತನ ಆರಾಧನೆ ಮಾಡಿದರೆ ದುಷ್ಟ ಶಕ್ತಿಗಳಿಂದ ಜನ ಪಾರಾಗುತ್ತಾರೆ ಎಂದು ಅರ್ಚಕ ಪ್ರಸನ್ನ ಪೂಜಾರಿ ಹೇಳಿದ್ದಾರೆ.

    ಇವರೆಲ್ಲರೂ ಚಿತ್ರ ವಿಚಿತ್ರವಾಗಿ ವರ್ತಿಸಲು ಒಂದು ಕಾರಣ ಇದೆ. ಜೊತೆಗೆ ಪುರಾಣದ ಹಿನ್ನೆಲೆ ಇದೆ. ಇಲ್ಲಿನ ಅಶ್ವಥ್ಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ನೆಲೆಸಿದ್ದನಂತೆ. ಇಲ್ಲಿನ ಜನ ಜಾನುವಾರುಗಳ ನೆಮ್ಮದಿ ಕೆಡಿಸಿದ್ದರು. ಆಗ ದತ್ತಾತ್ರೇಯ ಸ್ವಾಮಿ, ಎರಡನೇ ಅವತಾರ ಎತ್ತಿ ಶ್ರೀಮಾನ್ ನರಸಿಂಹ ಸರಸ್ವತಿ ಮಹಾರಾಜರು ರೂಪದಲ್ಲಿ ರಾಕ್ಷಸನಿಗೆ ಮುಕ್ತಿ ನೀಡಿದ್ದರು ಎನ್ನಲಾಗುತ್ತದೆ. ಅಂದಿನಿಂದ ಇದು ಪ್ರೇತಾತ್ಮಗಳನ್ನು ದೂರ ಮಾಡುವ ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಭಕ್ತೆ ಮಾಲತಿ ರೇಷ್ಮಿ ಹೇಳಿದರು.

    ಅಂದಹಾಗೆ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಅವತಾರವನ್ನೆತ್ತಿರುವ ಗುರುದತ್ತನ ಸನ್ನಿಧಿಯಲ್ಲಿ ಈ ಪವಾಡಗಳು ನಿತ್ಯ ನಡೆಯುತ್ತವೆ. ಯಾಕೆಂದರೆ ಈ ದೇವಾಲಯದ ಆವರಣದಲ್ಲಿರುವ ಅಶ್ವಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ವಾಸಿಸುತ್ತಿದ್ದು, ಇಲ್ಲಿರುವ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದರು. ಆದರೆ ದತ್ತಾತ್ರೇಯ ಸ್ವಾಮಿಗಳ ಎರಡನೇ ಅವತಾರದಲ್ಲಿ ಸಾಕ್ಷತ್ ಶ್ರೀಮನ ನರಸಿಂಹ ಸರಸ್ವತಿ ಮಹಾರಾಜರು ಆ ರಾಕ್ಷಸನಿಗೇ ಮುಕ್ತಿ ನೀಡಿದ್ದಾರೆ. ಹೀಗಾಗಿ ಪ್ರತಿ ದಿನ ನಡೆಯುವ ಮಹಾಮಂಗಳಾರತಿ ವೇಳೆ ಭೂತ-ಪ್ರೇತಗಳು ಇದೆ ಎಂದು ನಂಬಿದ ಜನ, ಇಲ್ಲಿ ಬಂದು ಶ್ರೀ ಗುರು ದತ್ತನ ಪೂಜೆ ಸಲ್ಲಿಸಿದರೆ, ಅವರಲ್ಲಿರುವ ಎಲ್ಲಾ ದುಷ್ಟ ಶಕ್ತಿಗಳು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಭೀಮಾ ಅಮರ್ಜಾ ನದಿ ಸಂಗಮವಿರುವ ಈ ಪುಣ್ಯಕ್ಷೇತ್ರಕ್ಕೆ ನಿತ್ಯವು ಸಾವಿರಾರು ಜನ ಬಂದು ಹೋಗುತ್ತಾರೆ. ಕೆಲವರು ಬರಿ ದರ್ಶನ ಭಾಗ್ಯಕ್ಕೆಂದು ಬಂದು ಶ್ರೀಗುರುದತ್ತನ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದರೆ, ಇನ್ನೂ ಕೆಲವರು ಇನ್ನೂ ಕೆಲವರು ಅವರಿಗೆ ಕಾಡುತ್ತಿರುವ ದುಷ್ಟ ಶಕ್ತಿಗಳು ಸಂಕಟ ದೂರು ಮಾಡಿಕೊಳ್ಳಲು ಬರುತ್ತಾರೆ.