Tag: ದತ್ತಪೀಠ ವಿವಾದ ಸಿ.ಟಿ.ರವಿ

  • ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ

    ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ

    ನವದೆಹಲಿ: ಮುಜರಾಯಿ, ಕಂದಾಯ ದಾಖಲೆಗಳನ್ನು ಪರಿಶೀಲಿಸಬೇಕು, ಗೆಜೆಟ್ ನೋಟಿಫಿಕೇಷನ್ ಪರಿಶೀಲನೆ ಮಾಡಿ ದಾಖಲೆಗಳ ಆಧಾರದ ಮೇಲೆ ದತ್ತಪೀಠ ವಿವಾದವನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.

    ದತ್ತಪೀಠ ವಿವಾದದ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ದತ್ತಾತ್ರೇಯ ಪೀಠ, ಬಾಬಾ ಬುಡನಗಿರಿ ದರ್ಗಾ ಎರಡು ಬೇರೆ ಬೇರೆ ಸರ್ವೆ ನಂಬರ್‌ಗಳಲ್ಲಿದೆ. ಎರಡನ್ನು ಒಂದೇ ಮಾಡುವ ಪ್ರಯತ್ನ ಮಾಡಬಾರದು. ಭೂ ದಾಖಲೆಗಳ ಆಧಾರದ ಮೇಲೆ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಬೇಕು. ಇವರ ತುಷ್ಟೀಕರಣ ನೀತಿ ಅನುಮಾನ ಹುಟ್ಟಿಸುತ್ತೆ. ಹೀಗಾಗಿ, ಕಾನೂನು ಹೋರಾಟದ ದೃಷ್ಟಿಯಿಂದ ವಕೀಲರ ಭೇಟಿಗೆ ದೆಹಲಿಗೆ ಆಗಮಿಸಿರುವುದಾಗಿ ಹೇಳಿದರು.

    ಉದಯಗಿರಿ ಕೋಮುಗಲಭೆ ವಿಚಾರವಾಗಿ ಮಾತನಾಡಿದ ಅವರು, ಗಲಭೆಕೋರರು ಆರ್‌ಎಸ್‌ಎಸ್‌ನವರು ಎಂದು ಆರೋಪ ಮಾಡಿದ್ದಾರೆ. ಈಗ ಪ್ರಕರಣದಲ್ಲಿ ಯಾರು ಬಂಧಿತರು? ಅವರಿಗೆ ಬದ್ಧತೆ ಇದ್ರೆ, ನೈತಿಕತೆ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಕ್ಷಮೆಯಾಚನೆ ಮಾಡದೆ ಇದ್ದರೆ ಲಕ್ಷ್ಮಣ್ ಅವರನ್ನು ಕಾಂಗ್ರೆಸ್ ವಜಾ ಮಾಡಬೇಕು ಎಂದು ಆಗ್ರಹಿಸಿದರು.

    ಕೋಮುಗಲಭೆಯಲ್ಲಿ ಬಿಜೆಪಿ ನಾಯಕರು ಇದ್ದಾರೆಯೇ ಎಂದು ಪ್ರಿಯಾಂಕ್ ಖರ್ಗೆಯವ್ರ ಫ್ಯಾಕ್ಟ್ ಚೆಕ್ ಸಂಸ್ಥೆ ಪರೀಕ್ಷೆ ಮಾಡಲು ಆ ಸಂಸ್ಥೆ ಸತ್ತಿದಿಯೋ‌, ಬದುಕಿದೆಯೋ? ಸುಳ್ಳು ಆರೋಪ ಮಾಡಿದ ಲಕ್ಷ್ಮಣ್ ವಿರುದ್ದ ಕ್ರಮ ಆಗಬೇಕು. ಈಗ ಬಂಧಿತರಾಗಿರುವ ಆರೋಪಿಗಳು ಆರ್‌ಎಸ್‌ಎಸ್‌ನವರಲ್ಲ ಎಂದು ಅರಿತುಕೊಳ್ಳಬೇಕು ಎಂದರು.

    ಮಾಜಿ ಸಿಎಂ ದೇವರಾಜ್ ಅರಸು ದಾಖಲೆ ಮುರೀತಾರೆ ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. 10 ವರ್ಷನೋ 20 ವರ್ಷನೋ ಅವರೇ ಇರಲಿ. ಅವರ ಪಕ್ಷದಲ್ಲೇ ಸ್ಪರ್ಧೆ ಇದೆ. ನಾವ್ಯಾರು ಅವರು ಇರೋದು ಬೇಡ ಅನ್ನುತ್ತಿಲ್ಲ. ಸಿದ್ದರಾಮಯ್ಯ ಅರಸು ದಾಖಲೆ ಮುರೀತಾರೆ ಇಲ್ಲವೋ ಗೊತ್ತಿಲ್ಲ. ಭ್ರಷ್ಟಾಚಾರ, ಬೆಲೆ ಏರಿಕೆಯಲ್ಲಿ ದಾಖಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡಲು ಅಡಿಗೆ 100 ರೂ. ಕೊಡಬೇಕು. ಬಿಲ್ಡರ್ಸ್ ರೋಸಿ ಹೋಗಿದ್ದಾರೆ. ಅತೀ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದಾಖಲೆಯಾಗಿದೆ. ಇವರು 100% ಲೂಟಿ ಮಾಡಿ ದಾಖಲೆ ಮಾಡಿದ್ದಾರೆ ಎಂದು ಆರೋಪಿಸಿದರು.

    ರಾಜ್ಯಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಯತ್ನಾಳ್ ಬಣದ ಹೋರಾಟದ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ನಾನು ನನಗೆ ಲಕ್ಷ್ಮಣ ರೇಖೆ ಹಾಕಿಕೊಂಡಿದ್ದೇನೆ. ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗ ಚರ್ಚೆ ಮಾಡಲ್ಲ ಎಂದರು‌.