Tag: ದಕ್ಷಿಣ ಸಿನಿಮಾ

  • ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

    ಬಾಲಿವುಡ್ ಮತ್ತು ದಕ್ಷಿಣ ತಾರೆಯರ ಮುಸುಕಿನ ಗುದ್ದಾಟ ಕಲಾವಿದರು ಮತ್ತು ತಾಂತ್ರಿಕ ವರ್ಗದವರನ್ನು ದಾಟಿ ಥಿಯೇಟರ್ ಮಾಲೀಕರ ಅಂಗಳ ತಲುಪಿದೆ. ಭಾರತೀಯ ಸಿನಿಮಾ ರಂಗ ಎಂದರೆ, ಅದು ಕೇವಲ ಬಾಲಿವುಡ್ ಎಂದು ಬಿಂಬಿಸುತ್ತಿದ್ದ ಮನಸುಗಳು ಮತ್ತೆ ಇದೀಗ ಸೌತ್ ನಟನೊಬ್ಬನನ್ನು ಬಾಲಿವುಡ್ ಒಳಗೆ ಬಿಟ್ಟುಕೊಳ್ಳದಂತೆ ಕಿಡಿಕಾರುತ್ತಿವೆ.

    ನಿನ್ನೆಯಷ್ಟೇ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ರಿಲೀಸ್ ಆಗಿದೆ. ಅದು ನೇರವಾಗಿ ಹಿಂದಿ ಭಾಷೆಯಲ್ಲಿ ನಿರ್ಮಾಣವಾದರೂ, ಈ ಸಿನಿಮಾದ ನಿರ್ದೇಶಕರು ಮತ್ತು ಹೀರೋ ದಕ್ಷಿಣದವರು. ಹಾಗಾಗಿ ಈ ಸಿನಿಮಾವನ್ನು ಸೋಲಿಸುವಂತಹ ಪ್ರಯತ್ನ ನಡೆದಿದೆಯಾ ಎನ್ನುವಂತಹ ಘಟನೆಗಳು ಮುಂಬೈ ಬಜಾರ್ ನಲ್ಲಿ ನಡೆಯುತ್ತಿವೆ. ಈ ಸಿನಿಮಾವನ್ನು ಪ್ರದರ್ಶನ ಮಾಡುತ್ತಿರುವ ಮುಂಬೈ ಥಿಯೇಟರ್ ಮಾಲಿಕ ಮನೋಜ್ ದೇಸಾಯಿ ಲೈಗರ್ ಸಿನಿಮಾದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಮನೋಜ್ ದೇಸಾಯಿ ಮುಂಬೈನಲ್ಲಿ ಗೈಟಿ ಗ್ಯಾಲಾಕ್ಷಿ ಮತ್ತು ಮರಾಠ ಮಂದಿರ ಎಂಬ ಎರಡು ಥಿಯೇಟರ್ ನಡೆಸುತ್ತಿದ್ದಾರೆ. ಇವರು ವಿಜಯ್ ದೇವರಕೊಂಡ ಬಗ್ಗೆ ಮಾತನಾಡುತ್ತಾ, ‘ಆತ ದೇವರಕೊಂಡ ಅಲ್ಲ, ಅನಕೊಂಡ ಎಂದು ಜರೆದಿದ್ದಾರೆ. ಈ ಹುಡುಗನ ಅಹಂಕಾರವೇ ಸಿನಿಮಾ ಸೋಲಿಗೆ ಕಾರಣವೆಂದು ನೇರವಾಗಿಯೇ ಆರೋಪಿಸಿದ್ದಾರೆ. ಬಾಯ್ಕಾಟಿ ವಿಚಾರವಾಗಿ ದೇವರಕೊಂಡ ಅಹಂಕಾರದ ಮಾತುಗಳನ್ನು ಆಡಿದ್ದರು ಎಂದು ಹೇಳಿದ್ದಾರೆ.

    ಬಾಯ್ಕಾಟ್ ವಿಚಾರವಾಗಿ ವಿಜಯ್ ದೇವರಕೊಂಡ ಧ್ವನಿ ಎತ್ತಿದ್ದರು. ಸಿನಿಮಾ ನೋಡುವವರು ಬಾಯ್ಕಾಟ್ ಅನ್ನುವುದಿಲ್ಲ. ಹಾಗೆ ಎನ್ನುವವರು ನನ್ನ ಸಿನಿಮಾ ನೋಡಬೇಕು ಎಂದು ಹೇಳಿಕೆಕೊಟ್ಟಿದ್ದರು. ಈ ಅಹಂಕಾರವೇ ಲೈಗರ್ ಹಿನ್ನೆಡೆಗೆ ಕಾರಣವಾಗಿದೆ ಎಂದು ಮನೋಜ್ ದೇಸಾಯಿ ವಿಡಿಯೋ ಮೂಲಕ ಹೇಳಿಕೆ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

    ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

    ಹುಭಾಷಾ ನಟಿ ರಾಶಿ ಖನ್ನಾ ತಮ್ಮ ಬೋಲ್ಡ್ ವ್ಯಕ್ತಿತ್ವದ ಮೂಲಕ ಬಣ್ಣದ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ರಾಶಿ ಸೌತ್ ಸಿನಿಮಾದಿಂದಲೇ ಬಾಲಿವುಡ್‌ಗೆ ಹೋಗಿದ್ದರೂ, ತಮ್ಮ ನೆಲದ ಮೇಲೆಯೇ ಗೌರವವಿಲ್ಲ ಎಂಬ ಗಾಸಿಪ್ ಎಲ್ಲಾ ಕಡೆ ಹಬ್ಬಿತ್ತು. ಈ ಗಾಸಿಪ್‌ಗೆ ರಾಶಿ ತೆರೆ ಎಳೆದಿದ್ದಾರೆ.

    ರಾಶಿ ಖನ್ನಾ ತಮ್ಮ ಬಾಲಿವುಡ್ ಸಿನಿಮಾ ‘ರುದ್ರ’ ಪ್ರಚಾರದ ವೇಳೆ ದಕ್ಷಿಣ ಚಲನಚಿತ್ರೋದ್ಯಮದ ಬಗ್ಗೆ ಅಷ್ಟಾಗಿ ಹೋಗಲಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದರು. ಈ ನಟಿಗೆ ತಮ್ಮ ನೆಲದ ಮೇಲೆ ಗೌರವ ಕಮ್ಮಿಯಾಗಿದೆ ಎಂದು ಟ್ರೋಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಶಿ ಮಾತನಾಡಿದ್ದು, ನಾನು ಎಲ್ಲ ಭಾಷೆಗಳನ್ನು, ಚಿತ್ರೋದ್ಯಮವನ್ನು ತುಂಬಾ ಇಷ್ಟಪಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    ರಾಶಿ ಖನ್ನಾ ತಮ್ಮ ಟ್ವಿಟ್ಟರ್‌ನಲ್ಲಿ, ದಕ್ಷಿಣ ಸಿನಿಮಾಗಳ ಬಗ್ಗೆ ನನಗೆ ಗೌರವವಿಲ್ಲವೆಂದು ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲಾಗುತ್ತಿದೆ. ನನ್ನ ಬಗ್ಗೆ ತಪ್ಪುಗ್ರಹಿಕೆಯುಳ್ಳ ವಿಷಯಗಳ ಬಗ್ಗೆ ನಾನು ರೌಂಡ್ ಮಾಡುತ್ತಿದ್ದೇನೆ. ಯಾರೇ ಇದನ್ನು ಮಾಡುತ್ತಿದ್ದರೂ ದಯವಿಟ್ಟು ನಿಲ್ಲಿಸಿ ಎಂದು ನಾನು ವಿನಂತಿಸುತ್ತೇನೆ. ನಾನು ಮಾಡುವ ಪ್ರತಿಯೊಂದು ಭಾಷೆ ಮತ್ತು ಚಿತ್ರದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ ಎಂದು ವಿನಂತಿ ಮಾಡಿಕೊಂಡಿದ್ದಾರೆ.

    ದಕ್ಷಿಣ ಇಂಡಸ್ಟ್ರಿ ಬಗ್ಗೆ ರಾಶಿ ಅವರಿಗೆ ಗೌರವ ಇಲ್ಲ ಎಂದು ತೆಲುಗು ಪ್ರೇಕ್ಷಕರಲ್ಲಿ ನೆಗೆಟಿವ್ ಇಮೇಜ್ ಕ್ರಿಯೇಟ್ ಆಗಿತ್ತು. ಆದರೆ ಈ ಗಾಸಿಪ್ಗಳಿಗೆ ರಾಶಿ ತೆರೆಎಳೆದಿದ್ದಾರೆ. ಇದನ್ನೂ ಓದಿ: ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

  • ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ

    ಹ್ಯಾಪಿ ಬರ್ತ್ ಡೇ ಅಪ್ಪು : ದಕ್ಷಿಣದ ಸಿನಿತಾರೆಯರ ಭಾವುಕ ಸಂದೇಶ

    ವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಲ್ಲೆಗಳನ್ನು ಮೀರಿದ ನಟ. ಎಲ್ಲ ಭಾಷೆಯ ನಟರು ಅಪ್ಪುಗೆ ಸ್ನೇಹಿತರು. ಅಪ್ಪುನನ್ನು ನೋಡಿದರೆ ಆತ್ಮೀಯತೆ ಹೆಚ್ಚು. ಅಷ್ಟು ಸರಳ ಮತ್ತು ಸ್ನೇಹಜೀವಿ. ಇಂದು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಕ್ಷಿಣದ ಅನೇಕ ತಾರೆಯರು ಹಾರೈಸಿದ್ದಾರೆ. ತಮ್ಮೊಂದಿಗಿನ ಅಪ್ಪುವಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

    ನಿಮ್ಮನ್ನು ಸದಾ ಹೃದಯದಲ್ಲಿ ಇರಿಸುತ್ತೇವೆ
    ‘ಮೈತ್ರಿ’ ಸಿನಿಮಾದಲ್ಲಿ ಅಪ್ಪು ಜೊತೆ ತೆರೆಹಂಚಿಕೊಂಡಿದ್ದ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಇಂದು ಅಪ್ಪು ನೆನೆದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ. ಅಪ್ಪು ಸಾವಿನ ಸುದ್ದಿ ತಿಳಿದಾಗಲೂ ಬಹಳ ಭಾವುಕರಾಗಿದ್ದ ಅವರು ಅಂದು ಸಹ ವಿಶೇಷ ಪೋಸ್ಟ್ ಜತೆ ನೆನಪುಗಳನ್ನು ಹಂಚಿಕೊಂಡಿದ್ದರು. ಇಂದು ಸಹ ‘ಜೇಮ್ಸ್’ ಸಿನಿಮಾ ಪೋಸ್ಟರ್ ಹಂಚಿಕೊಂಡ ಅವರು, ಆತ್ಮೀಯ ಪುನೀತ್, ನಿಮ್ಮ ಜೇಮ್ಸ್ ಚಿತ್ರವು ಉತ್ತಮ ಚಿತ್ರವಾಗಲಿದೆ ಎಂಬ ನಂಬಿಕೆ ನನಗಿದೆ. ಇದು ನಮ್ಮೆಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ನಾವು ನಮ್ಮ ಹೃದಯದಲ್ಲಿ ಸದಾ ನಿಮ್ಮನ್ನು ಇರಿಸಿಕೊಂಡಿರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಕೋಟಿ ಹೃದಯದಲ್ಲಿ ಸದಾ ಜೀವಂತ
    ‘ಜೇಮ್ಸ್’ ಚಿತ್ರದಲ್ಲಿ ನಟಿಸಿರುವ ತೆಲುಗು ನಟ ಶ್ರೀಕಾಂತ್ ಮೆಕ ‘ಜೇಮ್ಸ್’ ಫೋಟೋ ಶೇರ್ ಮಾಡಿದ್ದು, ಸಿನಿಮಾ ಮತ್ತು ಅಪ್ಪು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಈ ವೇಳೆ ಅವರು, ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಇಂದು ‘ಜೇಮ್ಸ್’ ಚಿತ್ರ ರಿಲೀಸ್ ಆಗಿದೆ. ಕೋಟಿ ಹೃದಯಗಳಲ್ಲಿ ಸದಾ ಜೀವಂತ ಅಪ್ಪು. ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

    ಶಾಶ್ವತವಾಗಿ ಬದುಕಿರುತ್ತಾರೆ
    ತೆಲುಗು ನಟ ವರುಣ್ ತೇಜ್, ಪುನೀತ್ ರಾಜ್ ಕುಮಾರ್ ಅವರು ತಮ್ಮ ಕೆಲಸದ ಮೂಲಕ ಶಾಶ್ವತವಾಗಿ ಬದುಕುತ್ತಾರೆ. ಜೇಮ್ಸ್ ಇಡೀ ತಂಡಕ್ಕೆ ನನ್ನ ಶುಭಾಶಯಗಳು. ಅಪ್ಪು ಅಣ್ಣಾ ನಿಮ್ಮ ಅಸಂಖ್ಯಾತ ಅಭಿಮಾನಿಗಳು ಮತ್ತು ನಾವೆಲ್ಲರೂ ನಿಮ್ಮನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಲಕ್ಷಾಂತರ ಜನರ ಹೃದಯದಲ್ಲಿ ಉಳಿಯುತ್ತೀರಿ
    ಮಲಯಾಳಂ ನಟ ಸುರೇಶ್ ಗೋಪಿ ಕೂಡ ಟ್ವಿಟ್ಟರ್ನಲ್ಲಿ ‘ಜೇಮ್ಸ್’ ಚಿತ್ರಕ್ಕೆ ಶುಭ ಕೋರಿದ್ದಾರೆ. ಇಂದು ಬಿಡುಗಡೆಯಾಗಿರುವ ‘ಜೇಮ್ಸ್’ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು. ಆತ್ಮೀಯ ಪುನೀತ್, ನೀವು ಯಾವಾಗಲೂ ಲಕ್ಷಾಂತರ ಜನರ ಹೃದಯದಲ್ಲಿ ಉಳಿಯುತ್ತೀರಿ ಎಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯ್ಯಾಕ್ಷನ್ 

    ಅದ್ಭುತ ವ್ಯಕ್ತಿ
    ತಮಿಳು ನಟ ವಿಕ್ರಮ್ ಪ್ರಭು ಅಪ್ಪುನನ್ನು ನೆನೆದು ಮೂವಿ ಪೋಸ್ಟರ್ ಟ್ವೀಟ್ ಮಾಡಿದ್ದು, ಪುನೀತ್ ರಾಜ್ಕುಮಾರ್ ಅಣ್ಣ ನೀವು ಎಂದೆಂದಿಗೂ ಬದುಕಿರುವ ಅದ್ಭುತ ವ್ಯಕ್ತಿ. ನೀವು ಎಂದೆಂದಿಗೂ ಎಲ್ಲರ ನೆನಪಿನಲ್ಲಿ ಉಳಿಯುತ್ತೀರಿ. ನೀವು ಪರದೆಯ ಮೇಲೆ ನಮ್ಮನ್ನು ರಂಜಿಸಬಹುದು. ಆ ಶಕ್ತಿಯನ್ನು ನೀವು ಇಲ್ಲೇ ಬಿಟ್ಟು ಹೋಗಿದ್ದೀರ. ಇಂದು ಬಿಡುಗಡೆಯಾಗಲಿರುವ ‘ಜೇಮ್ಸ್’ ತಂಡಕ್ಕೆ ಶುಭ ಹಾರೈಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.