Tag: ದಕ್ಷಿಣ ದೆಹಲಿ

  • ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ನವದೆಹಲಿ: ವಿವಾಹ ವಾರ್ಷಿಕೋತ್ಸವದಂದೇ (Wedding Anniversary) ಅಪ್ಪ-ಅಮ್ಮ ಹಾಗೂ ಸಹೋದರಿ ಸಾವನ್ನಪ್ಪಿರುವ ಘಟನೆ ದಕ್ಷಿಣ ದೆಹಲಿಯಲ್ಲಿ (South Delhi) ಬುಧವಾರ ನಡೆದಿದೆ.

    ರಾಜೇಶ್ ಕುಮಾರ್ (51), ಪತ್ನಿ ಕೋಮಲ್ (46) ಮತ್ತು ಪುತ್ರಿ ಕವಿತಾ (23) ಮೃತರು.‌ ಅಪ್ಪ-ಅಮ್ಮನಿಗೆ ವಾರ್ಷಿಕೋತ್ಸವದ ಶುಭಾಶಯ ಹೇಳಿ ವಾಕಿಂಗ್‌ಗೆ ಹೊರಟಿದ್ದೆ. ಮನೆಗೆ ವಾಪಸ್‌ ಬರುವಷ್ಟರಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಮಗ ಅರ್ಜುನ್‌ ತಿಳಿಸಿದ್ದಾನೆ. ದೇಹದ ಮೇಲೆ ಇರಿತದ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್

    ಪೊಲೀಸರ ಮಾಹಿತಿ ಪ್ರಕಾರ, ಮನೆಯಲ್ಲಿ ದರೋಡೆ ನಡೆದಿಲ್ಲ, ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ದೊಡ್ಡ ಸದ್ದು ಕೇಳಿಸಿದ ತಕ್ಷಣ ನೆರೆಯವರು ಮನೆಗೆ ಧಾವಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ಕೊಲೆಯಾಗಿರುವ ಬಗ್ಗೆ ಸಂಶಯ:
    ಇಂದು ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು. ಅವರಿಗೆ ಶುಭಹಾರೈಸಿ ನಾನು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದೆ, ಬಂದು ನೋಡಿದಾಗ ಶವವಾಗಿ ಬಿದ್ದಿದ್ದರು. ಮೂವರ ಮೈಮೇಲೆ ಇರಿತದ ಗುರುತುಗಳಿದ್ದವು, ಎಲ್ಲೆಡೆ ರಕ್ತ ಚಿಮ್ಮಿತ್ತು ಎಂದು ಮಗ ಅರ್ಜುನ್‌ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ? 

  • ದೆಹಲಿಯಲ್ಲಿ ಶ್ವಾನಗಳಿಗಾಗಿ ಪಾರ್ಕ್ ನಿರ್ಮಾಣ!

    ದೆಹಲಿಯಲ್ಲಿ ಶ್ವಾನಗಳಿಗಾಗಿ ಪಾರ್ಕ್ ನಿರ್ಮಾಣ!

    ನವದೆಹಲಿ: ದೆಹಲಿಯಲ್ಲಿ ಮೊದಲ ಬಾರಿಗೆ ಶ್ವಾನಗಳಿಗಾಗಿ ಉದ್ಯಾನವನ್ನು ರೂಪಿಸಲಾಗಿದೆ. ರಾಜೇಂದ್ರನಗರದಲ್ಲಿ ಶ್ವಾನಗಳಿಗಾಗಿ ಸಿದ್ಧಗೊಳಿಸಿರುವ ಪಾರ್ಕ್ ಅನ್ನು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಉದ್ಘಾಟಿಸಿದೆ.

    DOG PARK

    ಶ್ವಾನಗಳ ಚಟುವಟಿಕೆ ಹಾಗೂ ಆರೋಗ್ಯ ದೃಷ್ಟಿಯಿಂದ “ಡಾಗ್ ಪಾರ್ಕ್” ರೂಪಿಸಲಾಗಿದೆ. ಪಾರ್ಕ್ ಅನ್ನು ಸುಂದರ ಹಾಗೂ ಆಕರ್ಷಣೀಯವಾಗಿಡಲು ಚಿತ್ರಕಲೆಗಳನ್ನು ಬಿಡಿಸಲಾಗಿದೆ. ಇದನ್ನೂ ಓದಿ: ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ

    ಪಾರ್ಕ್ ಅನ್ನು ಮಹಾನಗರ ಪಾಲಿಕೆಯ ಮೇಯರ್ ರಾಜಾ ಇಕ್ಬಲ್ ಸಿಂಗ್ ಅವರು ಶನಿವಾರ ಉದ್ಘಾಟಿಸಿದ್ದಾರೆ.

    DOG PARK

    ಈ ವೇಳೆ ಮಾತನಾಡಿದ ಮೇಯರ್, ಜನರು ತಮ್ಮ ಶ್ವಾನಗಳನ್ನು ಪಾರ್ಕ್‍ಗೆ ಕರೆತಂದು ವಾಕ್ ಮಾಡಿಸಬಹುದು. ಉದ್ಯಾನವು ಸ್ವಿಂಗ್‍ಗಳು, ಹಸಿರು ಹುಲ್ಲು ಹಾಸನ್ನು ಒಳಗೊಂಡಿದೆ. ಸಾರ್ವಜನಿಕರು ತಮ್ಮ ಶ್ವಾನಗಳೊಂದಿಗೆ ಪಾರ್ಕ್‍ನಲ್ಲಿ ಅಡ್ಡಾಡಿ ಖುಷಿಪಡಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಅವರಂತೆ ಅಜಾತಶತ್ರು ಮನೋಭಾವ, ಸರಳತೆ ಬೆಳೆಸಿಕೊಳ್ಳಲಿ- ಕಲಾವಿದರಿಗೆ ಡಿಕೆಶಿ ಕರೆ

    ಕೋವಿಡ್-19 ಸಾಂಕ್ರಾಮಿಕದಿಂದ ಸಾಕು ನಾಯಿಗಳು ಹೊರಗಡೆ ಓಡಾಡಲಾಗದೇ ಮನೆಗಷ್ಟೇ ಸೀಮಿತವಾದವು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನೂ ಎದುರಿಸುವಂತಾಯಿತು. ಸಾಕು ನಾಯಿಗಳು ದೈಹಿಕವಾಗಿ ಆರೋಗ್ಯವಾಗಿರಲು ಈ ಪಾರ್ಕ್ ಸಹಾಯ ಮಾಡುತ್ತದೆ. ಉದ್ಯಾನ ಅವುಗಳಿಗೆ ಸುರಕ್ಷಿತ ತಾಣವಾಗಿದೆ ಎಂದು ಹೇಳಿದ್ದಾರೆ.

    DOG PARK

    ಸಾಕು ಪ್ರಾಣಿಗಳ ಪೋಷಕರ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಲು ಪಾರ್ಕ್‍ನಲ್ಲಿ ನೋಂದಣಿ ಕೌಂಟರ್ ಅನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲದೆ ಉದ್ಘಾಟನೆ ಸಂದರ್ಭದಲ್ಲಿ ಉಚಿತ ತಪಾಸಣೆ ಹಾಗೂ ರೇಬಿಸ್ ವಿರೋಧಿ ಲಸಿಕೆ ಶಿಬಿರವನ್ನು ಶ್ವಾನಗಳಿಗಾಗಿ ಆಯೋಜಿಸಲಾಗಿತ್ತು ಎಂದು ಕರೊಲ್ ಬಾಘ್ ವಲಯದ ಸಹಾಯಕ ಉಪ ಆಯುಕ್ತ ವಿಶಾಖ್ ಯಾದವ್ ತಿಳಿಸಿದ್ದಾರೆ.

    ಬೆಂಗಳೂರು, ಹೈದರಾಬಾದ್‍ನಲ್ಲಿ ಈಗಾಗಲೇ ಶ್ವಾನ ಉದ್ಯಾನಗಳಿವೆ. ಅದೇ ದೃಷ್ಟಿಕೋನದೊಂದಿಗೆ ದಕ್ಷಿಣ ದೆಹಲಿ ನಗರಪಾಲಿಕೆ ಸಹ ಶ್ವಾನ ಉದ್ಯಾನ ರೂಪಿಸುವ ಯೋಜನೆ ಹೊಂದಿತ್ತು.

  • ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿ, ವಿಡಿಯೋ ಮಾಡಿದ ಪತಿ ವಿರುದ್ಧ ಎಫ್‍ಐಆರ್

    ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿ, ವಿಡಿಯೋ ಮಾಡಿದ ಪತಿ ವಿರುದ್ಧ ಎಫ್‍ಐಆರ್

    ನವದೆಹಲಿ: ಬೇರೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕದಲ್ಲಿ ತೊಡಗುವಂತೆ ಮಾಡಿ ಅದರ ವಿಡಿಯೋ ಚಿತ್ರೀಕರಣ ಮಾಡಿದ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

    ದಕ್ಷಿಣ ದೆಹಲಿ ಮೂಲದ ಒಳಾಂಗಣ ವಿನ್ಯಾಸಕಿಯಾಗಿರೋ 28 ವರ್ಷದ ಮಹಿಳೆ, ತನ್ನ ಪತಿ ಹಣ ಕೀಳುವ ಉದ್ದೇಶದಿಂದ ಈವೆಂಟ್ ಆರ್ಗನೈಸರ್‍ನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿದ್ರು ಎಂದು ಆರೋಪಿಸಿ ಕಳೆದ ತಿಂಗಳು ದೂರು ದಾಖಲಿಸಿದ್ದಾರೆ.

    ಪರಪುರುಷನೊಂದಿಗೆ ಬಲವಂತವಾಗಿ ಸೆಕ್ಸ್ ಮಾಡಿಸಿದ್ದಲ್ಲದೆ ಅದರ ವಿಡಿಯೋ ಮಾಡಿದ್ದಾರೆ. ವಿಡಿಯೋ ಇಟ್ಟುಕೊಂಡು ಅಲಿಯನ್ನು(ಹೆಸರು ಬದಲಾಯಿಸಲಾಗಿದೆ) ಹಣಕ್ಕಾಗಿ ಬ್ಲಾಕ್‍ಮೇಲ್ ಮಾಡುವಂತೆ ಒತ್ತಾಯಿಸಿದ್ದಾರೆಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

    ಆರೋಪಿ ಪತಿ ಇಷ್ಟಕ್ಕೇ ಸುಮ್ಮನಾಗದೆ, ಹಣ ಕೀಳಲು ನಾನು ನಿನ್ನನ್ನು ಇನ್ಮುಂದೆ ಯಾವ ವ್ಯಕ್ತಿಯ ಬಳಿಯಾದರೂ ಕಳಿಸಬಹುದು ಎಂದು ಹೇಳಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ಪತಿ ಹಾಗೂ ಅಲಿ ವಿರದ್ಧ ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಹಾಗೂ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಗೆ ಜಾಮೀನು ಸಿಕ್ಕಿದೆ.

    2016ರಲ್ಲಿ ನಮ್ಮಿಬ್ಬರ ವಿವಾಹವಾಯ್ತು. ಮದುವೆಯ ನಂತರ ನನ್ನ ಪತಿಗೆ ದಹಲಿಯಲ್ಲಿ ಮನೆಯಲ್ಲಿವಾದ್ದರಿಂದ ನನ್ನ ತವರು ಮನೆಯಲ್ಲೇ ಅವರೂ ಇದ್ದರು. ಮದುವೆಯಾಗಲು ತುಂಬಾ ಆತುರ ತೋರಿದ್ರು. ಮದುವೆಯ ನಂತರ ಅವರ ನಡವಳಿಕೆ ಇದ್ದಕ್ಕಿದ್ದಂತೆ ಬದಲಾಯಿತು. ಸ್ವಂತ ಉದ್ಯಮ ಶುರು ಮಾಡಲು ಹಣ ಕೊಡುವಂತೆ ಕೇಳಿದ್ರು. ಅವರ ಒತ್ತಾಯ ಮತ್ತು ಬೆದರಿಕೆಗೆ ಮಣಿದು ನಾನು ಮತ್ತು ನನ್ನ ಪೋಷಕರು ವಿವಿಧ ದಿನಾಂಕಗಳಲ್ಲಿ ಸುಮಾರು 2 ಕೋಟಿ ರೂ. ನೀಡಿದ್ದೇವೆ. ನಾವು ಹಣ ಕೊಡಲು ನಿರಾಕರಿಸಿದಾಗ ನನ್ನ ಕುಟುಂಬಸ್ಥರನ್ನ ಬೈಯ್ಯುತ್ತಿದ್ರು. ನನ್ನ ಮೇಲೆ ಹಲ್ಲೆ ಮಾಡ್ತಿದ್ರು ಎಂದು ಮಹಿಳೆ ಹೇಳಿಕೊಂಡಿದ್ದಾರೆ.

    ನಂತರ ನನ್ನ ಪತಿ ನನಗೆ ಅರಿವಿಲ್ಲದಂತೆ ನನ್ನ ಫೋನ್‍ನಿಂದ ಅಲಿಗೆ ಅಸಭ್ಯವಾದ ಸಂದೇಶಗಳನ್ನ ಕಳಿಸುತ್ತಿದ್ರು. ಮುಂದೆ ಆತನನ್ನು ಬ್ಲಾಕ್‍ಮೇಲ್ ಮಾಡಬಹುದು ಎಂಬ ದುರುದ್ದೇಶದಿಂದ ನನಗೆ ಆತನೊಂದಿಗೆ ಸ್ನೇಹ ಬೆಳೆಸಿಕೊಳ್ಳುವಂತೆ ಒತ್ತಾಯಿಸಿದ್ರು ಎಂದು ಹೇಳಿದ್ದಾರೆ.

    ಕಳೆದ ನವೆಂಬರ್‍ನಲ್ಲಿ ನನ್ನ ಪತಿ ನನಗೆ ಇಷ್ಟವಿಲ್ಲದಿದ್ರೂ ಅಲಿ ಜೊತೆಗೆ ಲುಧಿಯಾನಾಗೆ ಹೋಗುವಂತೆ ಬಲವಂತ ಮಾಡಿದ್ರು. ಆತನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ರು. ಆದ್ರೆ ನಾನು ಅದಕ್ಕೆ ನಿರಾಕರಿಸಿದೆ. ಜನವರಿಯಲ್ಲಿ ನನ್ನನ್ನು ನೋಯ್ಡಾದ ಫಾರ್ಮ್‍ಹೌಸ್‍ಗೆ ಕರೆದುಕೊಂಡು ಹೋದ್ರು. ಅಲ್ಲಿ ಆಗಲೇ ಅಲಿ ಬಂದು ಕಾಯುತ್ತಿದ್ದ. ಅವನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಒತ್ತಾಯಿಸಿದ್ರು. ನಂತರ ಅಲಿ ನನ್ನ ಮೇಲೆ ಅತ್ಯಾಚಾರವೆಸಗಿದ. ಫೆಬ್ರವರಿಯಲ್ಲಿ ನನ್ನ ಪತಿ ನನ್ನ ಡೆಬಿಟ್ ಕಾರ್ಡ್ ಬಳಸಿ ದಕ್ಷಿಣ ದೆಹಲಿಯಲ್ಲಿ ಹೋಟೆಲ್ ರೂಮ್ ಬುಕ್ ಮಾಡಿದ್ರು. ನಾನು ಅಲಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದರೆ ಯಾವುದೇ ಕಾರಣಕ್ಕೂ ಹಣವನ್ನು ಹಿಂದಿರುಗಿಸುವುದಿಲ್ಲ ಅಂದ್ರು. ನನ್ನ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ರು ಎಂದು ಎಫ್‍ಐಆರ್‍ನಲ್ಲಿ ಮಹಿಳೆ ಆರೋಪಿಸಿದ್ದಾರೆ.

    ಅಂದು ರಾತ್ರಿ ಅಲಿ ನನ್ನ ಮೇಲೆ ಅತ್ಯಾಚಾರ ಮಾಡಿದ. ಆತ ಹೋದ ನಂತರ ನನ್ನ ಪತಿ ರೂಮಿನೊಳಗೆ ಬಂದು ಟಿವಿ ಬಳಿ ಅಡಗಿಸಿಟ್ಟಿದ್ದ ಹಿಡನ್ ಕ್ಯಾಮೆರಾ ಹೊರತೆಗೆದರು. ಅವರು ಇದನ್ನ ರೆಕಾರ್ಡ್ ಮಾಡಿದ್ದಾರೆಂದು ತಿಳಿದು ನನಗೆ ಶಾಕ್ ಆಯ್ತು. ಇನ್ಮುಂದೆ ಅಲಿಯನ್ನು ಬ್ಲಾಕ್‍ಮೇಲ್ ಮಾಡಿ ಹಣ ಕೀಳಬೇಕೆಂದು ನನಗೆ ಹೇಳಿದ್ರು. ಅಲ್ಲದೆ ಇನ್ಮುಂದೆ ಲೈಂಗಿಕ ಕ್ರಿಯೆಗಾಗಿ ನನ್ನನ್ನು ಯಾರ ಬಳಿ ಬೇಕಾದ್ರೂ ಕಳಿಸಬಹುದು ಎಂದು ಹೇಳಿದ್ರು. ಅದಕ್ಕೆ ಒಪ್ಪದಿದ್ರೆ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿದ್ರು ಎಂದಿದ್ದಾರೆ.

    ಘಟನೆಯ ನಂತರ 10 ಲಕ್ಷ ಹಾಗೂ 30 ಲಕ್ಷ ರೂ. ಗೆ ಬೇಡಿಕೆ ಇಟ್ರು. ಈ ಬಗ್ಗೆ ನನ್ನ ಪೋಷಕರಿಗೆ ಗೊತ್ತಾದ ನಂತರ ಅವರ ಮರ್ಯಾದೆ ಹಾಳು ಮಾಡುವುದಾಗಿ ಹೆದರಿಸಿದ್ರು. ನನ್ನ ಜೀವನ ಹಾಳಾಗಿದೆ. ಆತ್ಮಹತ್ಯೆ ಮಾಡಿಕೊಳ್ಳದೆ ನನಗೆ ಬೇರೆ ದಾರಿ ಇಲ್ಲ. ಈ ಘಟನೆಯಿಂದಾಗಿ ನಾನು ಯಾರಿಗೂ ಮುಖ ತೋರಿಸದಂತಾಗಿದೆ. ನನ್ನ ಪತಿ ಹಾಗೂ ಆತನ ಸ್ನೇಹಿತ ನನ್ನ ಹಾಗೂ ನನ್ನ ಕುಟುಂಬದ ಮರ್ಯಾದೆಗೆ ಕಳಂಕ ತಂದಿದ್ದಾರೆ ಎಂದು ಮಹಿಳೆ ಪೋಲೀಸರ ಬಳಿ ಹೇಳಿಕೊಂಡಿದ್ದಾರೆ.