Tag: ದಕ್ಷಣ ಭಾರತ

  • ವಿಘ್ನೇಶ್ ಶಿವನ್, ನಯನತಾರಾರಿಂದ 6ನೇ ವರ್ಷದ ಲವ್ ಆ್ಯನಿವರ್ಸರಿ ಸೆಲೆಬ್ರೇಶನ್

    ವಿಘ್ನೇಶ್ ಶಿವನ್, ನಯನತಾರಾರಿಂದ 6ನೇ ವರ್ಷದ ಲವ್ ಆ್ಯನಿವರ್ಸರಿ ಸೆಲೆಬ್ರೇಶನ್

    ಚೆನ್ನೈ: ದಕ್ಷಣ ಭಾರತದ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ 6ನೇ ವರ್ಷದ ಲವ್ ಆ್ಯನಿವರ್ಸರಿಯನ್ನು ಆಚರಿಸಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

    2015 ರ ಚಿತ್ರ ‘ನಾನುಮ್ ರೌಡಿಧಾನ್’ ಚಿತ್ರದ ಸೆಟ್ ನಲ್ಲಿ ಈ ಜೋಡಿ ಪರಿಚಯವಾಗಿತ್ತು. ನಯನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ, ವಿಘ್ನೇಶ್ ಶಿವನ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾದಲ್ಲಿ ನಯನ ವಿಜಯ್ ಸೇತುಪತಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಮೂಲಕ ಪ್ರಾರಂಭವಾದ ಇವರಿಬ್ಬರ ಪ್ರೇಮ ಈಗ ಮದುವೆಯಲ್ಲಿ ನಿಂತಿದೆ. ವಿಘ್ನೇಶ್ 6 ವರ್ಷದ ಹಿಂದೆ ಎಂದು ‘ನಾನುಮ್ ರೌಡಿಧಾನ್’ ಚಿತ್ರದ ವೀಡಿಯೋ ಮತ್ತು ನಯನ ಜೊತೆಗಿನ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, 6 ವರ್ಷದ ಹಿಂದೆ ಎಂದು ಅನಿಸುತ್ತಿಲ್ಲ ಎಂದು ಬರೆದು ಹಾರ್ಟ್ ಎಮೋಜಿಯನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

    ಈ ಜೊತೆಗೆ ಕೆಲವು ತಮಾಷೆಯ ಸನ್ನಿವೇಶಗಳನ್ನು, ‘ನಾನುಮ್ ರೌಡಿಧಾನ್’ ವೀಡೀಯೋವನ್ನು ನಿಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೇಳೆ ವಿಘ್ನೇಶ್ ‘ನಾನುಮ್ ರೌಡಿಧಾನ್’ ಸಿನಿಮಾದಲ್ಲಿ ನಯನ ಮತ್ತು ವಿಜಯ್ ಸೇತುಪತಿ ಅವರ ವೀಡಿಯೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಿನ್ಸ್ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ರಾಜಮೌಳಿ

     

    View this post on Instagram

     

    A post shared by Vignesh Shivan (@wikkiofficial)

    ನಯನ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇಲ್ಲ. ಆದರೆ ವಿಘ್ನೇಶ್ ಇವರಿಬ್ಬರ ಅಪ್ಡೇಟ್ ಗಳನ್ನು ಕೊಡುತ್ತಿರುತ್ತಾರೆ. ಇತ್ತೀಚೆಗೆ ವಿಘ್ನೇಶ್ ಮತ್ತು ನಯನ ಸಿದ್ದಿವಿನಾಯಕ ದೇವಾಲಯಕ್ಕೆ ಹೋಗಿದ್ದರು. ಇದನ್ನು ವಿಘ್ನೇಶ್ ಇನ್‍ಸ್ಟಾದಲ್ಲಿ ಹಾಕಿಕೊಂಡಿದ್ದಾರೆ. ಕಳೆದ ತಿಂಗಳು ವಿಘ್ನೇಶ್ ತಮ್ಮ 36ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವೇಳೆ ನಯನ ಅವರಿಗೆ ಸಪ್ರ್ರೈಸ್ ಆಗಿ ಹುಟ್ಟುಹಬ್ಬವನ್ನು ಆಯೋಜಿಸಿದ್ದರು. ಈ ಸಪ್ರ್ರೈಸ್ ನೋಡಿದ ವಿಘ್ನೇಶ್ ಫುಲ್ ಖುಷ್ ಆಗಿ ಈ ಕುರಿತು ತಮ್ಮ ಇನ್‍ಸ್ಟಾದಲ್ಲಿ ಬರೆದು ಪೋಸ್ಟ್ ಮಾಡಿದ್ದರು.

     

    View this post on Instagram

     

    A post shared by Vignesh Shivan (@wikkiofficial)

    ಕೊರಿಯಾದ ‘ಬ್ಲೈಂಡ್’ ಚಿತ್ರದ ರಿಮೇಕ್ ಆಗಿರುವ ‘ನೇತ್ರಿಕಾಂನಿ’ ಸಿನಿಮಾದಲ್ಲಿ ನಯನತಾರಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದನ್ನು ಮಿಲಿಂದ್ ರಾವ್ ನಿರ್ದೇಶಿಸಿದ್ದು, ವಿಘ್ನೇಶ್ ನಿರ್ಮಿಸಿದ್ದರು. ಇನ್ನೂ ನಯನ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ರಿಲೀಸ್‍ಗೆ ಸಾಲು ಸಾಲು ಚಿತ್ರಗಳು ಸಿದ್ಧವಾಗುತ್ತಿದೆ. ‘ಅಣ್ಣತ್ತೆ’ ಚಿತ್ರದಲ್ಲಿ ರಜನಿಕಾಂತ್‍ಗೆ ನಯನ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದು ಅಲ್ಲದೇ ನಯನ ಕೈಯಲ್ಲಿ ಕಾತು ವಾಕುಲಾ ರೆಂಡು ಕಾದಲ್, ಅಟ್ಲೀ, ಗಾಡ್ ಫಾದರ್ ಮತ್ತು ಗೋಲ್ಡ್ ಸಿನಿಮಾಗಳಿವೆ. ಇದನ್ನೂ ಓದಿ: ರೆಟ್ರೋ ಮಾಡರ್ನ್ ಲುಕ್‍ನಲ್ಲಿ ಮಿಂಚುತ್ತಿರುವ ದಿವ್ಯಾ ಸುರೇಶ್