Tag: ದಂತವೈದ್ಯೆ

  • ತವರು ಮನೆಯಿಂದ 12 ವರ್ಷ ದೂರವಾಗಿದ್ದಕ್ಕೆ ದಂತವೈದ್ಯೆ ಆತ್ಮಹತ್ಯೆ?

    ತವರು ಮನೆಯಿಂದ 12 ವರ್ಷ ದೂರವಾಗಿದ್ದಕ್ಕೆ ದಂತವೈದ್ಯೆ ಆತ್ಮಹತ್ಯೆ?

    ಬೆಂಗಳೂರು: ನಗರದ ಬನಶಂಕರಿಯಲ್ಲಿ ತಾಯಿ ಮಗಳನ್ನೇ ಕೊಂದು ಬಳಿಕ ತಾನೂ ನೇಣಿಗೆ ಶರಣಾದ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ 12 ವರ್ಷಗಳಿಂದ ತವರು ಮನೆಗೆ ಪ್ರವೇಶ ನೀಡಿರಲಿಲ್ಲ ಎಂಬ ಕಾರಣಕ್ಕೆ ಕುಗ್ಗಿಹೋಗಿದ್ದ ದಂತವೈದ್ಯೆ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ವಿರಾಜಪೇಟೆ ಮೂಲದ ಸೈಮಾ ಗಂಡ ಕೆಲಸಕ್ಕೆ ಹೋಗಿದ್ದ ಸಂದರ್ಭ ತನ್ನ 10 ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತಿ ನಾರಾಯಣ್ ಕೂಡಾ ದಂತ ವೈದ್ಯನಾಗಿದ್ದು, ಕೆಲಸದ ಸ್ಥಳದಿಂದ ಪತ್ನಿಗೆ ಎಷ್ಟು ಬಾರಿ ಕರೆ ಮಾಡಿದರೂ ಉತ್ತರಿಸುತ್ತಿಲ್ಲವೆಂದು ತನ್ನ ಸಹಾಯಕನನ್ನು ಮನೆಗೆ ಕಳುಹಿಸಿದಾಗ ವಿಚಾರ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಧಾರಾಕಾರ ಮಳೆಯಿಂದ ಕೊಡಗು ಮಂದಿ ತತ್ತರ- ಸೂಕ್ಷ ಪ್ರದೇಶದ ಜನ ಪರಿಹಾರ ಕೇಂದ್ರಕ್ಕೆ ಶಿಫ್ಟ್

    12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸೈಮಾ ಹಾಗೂ ನಾರಾಯಣ್‌ಗೆ ಅಂದಿನಿಂದಲೂ ತವರಿನಲ್ಲಿ ಪ್ರವೇಶ ನೀಡಿರಲಿಲ್ಲ. ಇದರ ನಡುವೆಯೇ ಸೈಮಾಳ ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲೂ ಸೈಮಾಗೆ ತವರಿಗೆ ಪ್ರವೇಶ ನೀಡಿರಲಿಲ್ಲ. ಇದರಿಂದ ಕುಗ್ಗಿ ಹೋಗಿದ್ದ ಸೈಮಾ ಪದೇ ಪದೇ ಆತ್ಮಹತ್ಯೆ ಬಗ್ಗೆ ಚರ್ಚಿಸುತ್ತಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಳಗಾವಿಯಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಚಿರತೆ ಸೆರೆಗೆ 7 ಬೋನ್, 16 ಕ್ಯಾಮೆರಾ

     

    1 ತಿಂಗಳ ಹಿಂದೆಯಷ್ಟೇ ಸೈಮಾಗೆ ತವರಿಗೆ ಹೋಗಲು ಸಾಧ್ಯವಾಗಿದ್ದು, 10 ದಿನಗಳ ಕಾಲ ಅಲ್ಲಿಯೇ ಇದ್ದು ಮರಳಿದ್ದಳು. ತವರು ಮನೆಯಿಂದ ಬಂದ ಬಳಿಕ ಆಕೆ ಸಂಪೂರ್ಣವಾಗಿ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುತ್ತಿದ್ದಳು. ತಾನೊಬ್ಬಳೇ ಆತ್ಮಹತ್ಯೆ ಮಾಡಿಕೊಂಡರೆ ಮಗು ಅನಾಥವಾಗುತ್ತೆ, ತಾಯಿ ಇಲ್ಲದೇ ತಾನು ಅನುಭವಿಸಿದ ಕಷ್ಟವನ್ನು ಮಗು ಅನುಭವಿಸಬಾರದು ಎಂದು, ಗಂಡನಿಲ್ಲದ ಸಮಯ ನೋಡಿಕೊಂಡು ಸೈಮಾ ಮೊದಲಿಗೆ ಮಗಳನ್ನು ಕುಣಿಕೆಗೆ ಹಾಕಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ಈಗ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    ಆಸ್ಪತ್ರೆ ಸಿಗದೇ 7 ಕಿ.ಮೀ ನಡಿಗೆ – ಕೊನೆಗೆ ಡೆಂಟಲ್ ಆಸ್ಪತ್ರೆಯಲ್ಲಿ ಹೆರಿಗೆ

    – ಡೆಂಟಲ್ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿದ ದಂತವೈದ್ಯೆ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ವೇಳೆ ಏಳು ಕಿ.ಮೀ ನಡೆದುಕೊಂಡು ಬಂದು ಕೊನೆಗೆ ಎಲ್ಲೂ ಆಸ್ಪತ್ರೆ ಸಿಗದೆ ಡೆಂಟಲ್ ಆಸ್ಪತ್ರೆಯಲ್ಲೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದ ದೇಶವೇ ಸ್ತಬ್ಧವಾಗಿದೆ. ಈ ವೇಳೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಗೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಆಕೆ ಆಸ್ಪತ್ರೆ ಸಿಗುತ್ತದೆ ಎಂಬ ನಂಬಿಕೆ ಮೇಲೆ ಲೊಟ್ಟೆಗೊಲ್ಲಹಳ್ಳಿಯಿಂದ ದೊಡ್ಡ ಬೊಮ್ಮಸಂದ್ರದವರೆಗೂ ಸುಮಾರು ಏಳು ಕಿ.ಲೋ ಮೀಟರ್ ಹೆರಿಗೆ ನೋವಿನ ನಡುವೆಯೂ ನಡೆದುಕೊಂಡು ಬಂದಿದ್ದಾರೆ.

    ಹೀಗೆ ತನ್ನ ಗಂಡನ ಜೊತೆ ನಡೆದುಕೊಂಡು ಬಂದ ಮಹಿಳೆಗೆ ಲಾಕ್‍ಡೌನ್ ಇರುವುದರಿಂದ ಯಾವುದೇ ಆಸ್ಪತ್ರೆ ಸಿಕ್ಕಿಲ್ಲ. ಜೊತೆಗೆ ಮುಂದೆ ಹೋಗಲು ಯಾವುದೇ ವಾಹನ ಕೂಡ ಸಿಕ್ಕಿಲ್ಲ. ಈ ನಡುವೆ ಆಕೆಗೆ ಹೆರಿಗೆ ನೋವು ಜಾಸ್ತಿಯಾಗಿದೆ. ಹೀಗಾಗಿ ಆಕೆಯ ಗಂಡ ಅಲ್ಲಿಯೇ ಇದ್ದ ದೊಡ್ಡ ಬೊಮ್ಮಸಂದ್ರದ ಡೆಂಟಲ್ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ದಂತವೈದ್ಯರು ಡೆಂಟಲ್ ಆಸ್ಪತ್ರೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ಹೆರಿಗೆ ಮಾಡಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹೆರಿಗೆ ಮಾಡಿಸಿದ ದಂತವೈದ್ಯೆ ಡಾ. ರಮ್ಯಾ, ಆಕೆ ಹೆರಿಗೆ ನೋವಿನ ನಡುವೆಯೂ ಆಸ್ಪತ್ರೆ ಸಿಗುತ್ತೆ ಎಂಬ ನಂಬಿಕೆ ಮೇಲೆ ಸುಮಾರು 7 ಕಿ.ಮೀ ನಡೆದುಕೊಂಡು ಬಂದಿದ್ದಾರೆ. ಆದರೆ ಅವರಿಗೆ ಯಾವುದೇ ಆಸ್ಪತ್ರೆ ಸಿಕ್ಕಿರಲಿಲ್ಲ. ನಂತರ ನಮ್ಮ ಆಸ್ಪತ್ರೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆಯ ನಂತರ ಬ್ಲೀಡಿಂಗ್ ಜಾಸ್ತಿ ಇತ್ತು ಜೊತೆಗೆ ಮಗು ಯಾವುದೇ ಪ್ರತಿಕ್ರಿಯೆ ನೀಡಿಲಿಲ್ಲ. ಆದರೆ ನಂತರ ಮಗು ಪ್ರತಿಕ್ರಿಯೆ ನೀಡಿತು. ಬಳಿಕ ಅವರನ್ನು ಅಂಬುಲೆನ್ಸ್ ನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು ಎಂದು ಹೇಳಿದ್ದಾರೆ.

    ಲಾಕ್‍ಡೌನ್ ರೀತಿಯ ತುರ್ತುಪರಿಸ್ಥಿತಿಯ ಸಮಯದಲ್ಲಿ ದಂತವೈದ್ಯೆ ಯಾದರೂ ಹೆರಿಗೆ ಮಾಡಿಸಿದ ವೈದ್ಯೆ ರಮ್ಯಾಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಮಗು ಮತ್ತು ವೈದ್ಯೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಧನ್ಯವಾದ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.