Tag: ದಂಡ ವಸೂಲಿ

  • ಸಂಚಾರಿ ಪೊಲೀಸರ ಖಜಾನೆಗೆ ಕೋಟಿ ಕೋಟಿ ದಂಡ – 6 ದಿನದಲ್ಲಿ 51 ಕೋಟಿ ವಸೂಲಿ

    ಸಂಚಾರಿ ಪೊಲೀಸರ ಖಜಾನೆಗೆ ಕೋಟಿ ಕೋಟಿ ದಂಡ – 6 ದಿನದಲ್ಲಿ 51 ಕೋಟಿ ವಸೂಲಿ

    ಬೆಂಗಳೂರು: ರಾಜ್ಯದಲ್ಲಿ 50% ಟ್ರಾಫಿಕ್ ಡಿಸ್ಕೌಂಟ್‍ (Traffic Discount) ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಈ ಆಫರ್ ಮಸ್ತ್ ಆಗಿ ಯೂಸ್ ಮಾಡಿಕೊಂಡ ಸಾರ್ವಜನಿಕರು ಕೋಟಿ ಕೋಟಿ ದಂಡವನ್ನು ಕಟ್ಟಿ ತಮ್ಮ ಕೇಸ್‍ಗಳನ್ನು ಕ್ಲಿಯರ್ ಮಾಡಿಕೊಳ್ತಾ ಇದ್ದಾರೆ.

    ಸಂಚಾರಿ ಪೊಲೀಸರ ಖಜಾನೆಗೆ ಬಂದು ಬಿಳುತ್ತಿದೆ ಕೋಟಿ ಕೋಟಿ ದಂಡದ ಹಣ. 6 ದಿನದಲ್ಲಿ 51 ಕೋಟಿ ದಂಡ ವಸೂಲಿ (Fine Collection) ಮಾಡಿದ್ದಾರೆ. ಬೆಂಗಳೂರಿನಲ್ಲಿ ವಾಹನ ಸವಾರರು ಟ್ರಾಫಿಕ್ ವೈಲೇಷನ್ (Traffic Violation) ಮಾಡಿದ ಕಾರಣ, ಸಾವಿರಾರು ರೂಪಾಯಿ ದಂಡದ ಮೊತ್ತ ಬ್ಯಾಲೆನ್ಸ್ ಇಟ್ಟುಕೊಂಡಿದ್ದರು.  ಇದನ್ನೂ ಓದಿ: ಶೇ.50 ಫೈನ್ ಡಿಸ್ಕೌಂಟ್‍ಗೆ ಫುಲ್ ರೆಸ್ಪಾನ್ಸ್ – 5 ದಿನದಲ್ಲಿ 50 ಕೋಟಿ ರೂ. ದಂಡ ವಸೂಲಿ

    ದಂಡ ವಸೂಲಿಗೆ ರಿಯಾಯಿತಿ ಬೆನ್ನಲ್ಲೇ ವಾಹನ ಸವಾರರು ಕಳೆದ 6 ದಿನದಿಂದ ನಿರಂತರವಾಗಿ ಸರತಿ ಸಾಲಿನಲ್ಲಿ ನಿಂತು ದಂಡ ಕಟ್ಟುತ್ತಿದ್ದಾರೆ. ಆರು ದಿನದಲ್ಲಿ ಬರೋಬ್ಬರಿ 51 ಕೋಟಿ 85 ಲಕ್ಷ ದಂಡದ ಮೊತ್ತ ಸಂಗ್ರಹವಾಗಿದೆ. ಮುಂದಿನ ಫೆಬ್ರವರಿ 11ರವರೆಗೂ ರಿಯಾಯಿತಿ ಅವಧಿ ಇದ್ದು, ಮುಂದಿನ ಮೂರು ದಿನದಲ್ಲಿ 70 ಕೋಟಿಗೂ ಅಧಿಕ ಮೊತ್ತ ರೀಚ್ ಆಗುವ ನಿರೀಕ್ಷೆ ಇದೆ.

    ದಂಡ ಪಾವತಿಗೆ ದಿನಾಂಕ ವಿಸ್ತರಣೆ ಮಾಡುವಂತೆ ಒತ್ತಾಯವೂ ಕೇಳಿ ಬರುತ್ತಿದೆ. ಸಧ್ಯ ಅವಧಿ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ಇಲ್ಲ ಅಂತ ಸಂಚಾರಿ ಪೊಲೀಸ್ ಆಯುಕ್ತ ಸಲೀಂ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಪಾರ್ಕ್‍ನಲ್ಲಿ ಕುಳಿತಿದ್ದಕ್ಕೆ ದಂಡ ವಸೂಲಿ ಪ್ರಕರಣ- ಹೋಂ ಗಾರ್ಡ್ ಬಂಧನ

    ಬೆಂಗಳೂರು: ಗೆಳೆಯನ ಜೊತೆ ಪಾರ್ಕ್ ನಲ್ಲಿ ಕುಳಿತಿದ್ದಕ್ಕೆ 1 ಸಾವಿರ ರೂ. ದಂಡ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೋಂ ಗಾರ್ಡ್‍ನನ್ನು ಬಂಧಿಸಲಾಗಿದೆ.

    ಬಂಧತ ಹೋಂ ಗಾರ್ಡ್ ನನ್ನು ಮಂಜುನಾಥ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಈತ ಬಿಬಿಎಂಪಿ ಕಡೆಯಿಂದ ಪಾರ್ಕ್ ಭದ್ರತೆಗೆ ನೇಮಕವಾಗಿದ್ದ. ಪಾರ್ಕ್ ನಲ್ಲಿ ಕುಳಿತಿದ್ದ ಯುವಕ- ಯುವತಿಯನ್ನು ಬೆದರಿಸಿದ ಹೊಮ್ ಗಾರ್ಡ್, ನಾನು ಪೊಲೀಸ್ ಅಂತಾ ಬೆದರಿಸಿ ಒಂದು ಸಾವಿರ ಲಂಚದ ಹಣ ಪೇಟಿಎಂ ಮಾಡಿಸಿಕೊಂಡಿದ್ದಾನೆ. ಇದೀಗ ಈತ ಪೊಲೀಸರ ಅತಿಥಿಯಾಗಿದ್ದಾನೆ. ಇದನ್ನೂ ಓದಿ: ಯುವಕನ ಜೊತೆಗೆ ಪಾರ್ಕ್‍ನಲ್ಲಿ ಕೂತಿದ್ದಕ್ಕೆ 1 ಸಾವಿರ ವಸೂಲಿ- ಪೇದೆ ವಿರುದ್ಧ ಯುವತಿ ದೂರು

    ಏನಿದು ಘಟನೆ..?: ಬೆಂಗಳೂರಿನ ಎಚ್ ಎಎಲ್ (HAL Police Station) ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ (Kundalahalli Park) ಕೆರೆಗೆ ವಾಯುವಿಹಾರಕ್ಕೆ ಯುವಕ- ಯುವತಿ ಕಳೆದ ಶನಿವಾರ ಮಧ್ಯಾಹ್ನದ ವೇಳೆ ಹೋಗಿದ್ರು. ಮಧ್ಯಾಹ್ನದ ವೇಳೆ ಆಗಿದ್ದರಿಂದ, ಮರದ ಕೆಳಗೆ ಕುಳಿತಿದ್ರು. ಈ ವೇಳೆ ಅಲ್ಲಿಗೆ ಬಂದ ಹೋಮ್ ಗಾರ್ಡ್ (Home Guard Arrest), ಏಕಾಏಕಿ ಯುವಕ- ಯುವತಿಯ ಫೋಟೋ ತೆಗೆಯೋಕೆ ಶುರುಮಾಡಿದ್ದಾನೆ.

    ಗಾಬರಿಗೊಂಡ ಯುವತಿ, ಯಾಕೆ ಫೋಟೋ ತೆಗೀತಿದ್ದೀರಿ. ನಾವು ಏನ್ ತಪ್ಪು ಮಾಡಿದೆವು ಅಂತಾ ಪ್ರಶ್ನೆ ಮಾಡಿದ್ರು. ಈ ವೇಳೆ ಮಾತಿಗಿಳಿದ ಹೋಮ್ ಗಾರ್ಡ್, ನಾನು ಪೊಲೀಸ್, ಪಾರ್ಕ್ ಒಳಗೆ ಒಟ್ಟಿಗೆ ಕುಳಿತುಕೊಂಡು ಏನ್ ಮಾಡ್ತಾ ಇದ್ದೀರಾ..? ಯಾರು ಒಳಗೆ ಬರೋಕೆ ಅನುಮತಿ ಕೊಟ್ಟಿದ್ದು ಅಂತಾ ಬೆದರಿಸಿದ್ರು. ನಿಮ್ ಮೇಲೆ ಕೇಸ್ ಹಾಕ್ತಿವಿ ನಡೀರಿ ಅಂತಾ ಬೆದರಿಸಿ, ಒಂದು ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಹೋಮ್ ಗಾರ್ಡ್. ಮಾಡದ ತಪ್ಪಿಗೆ ಯುವತಿ ಅನಿವಾರ್ಯವಾಗಿ ಒಂದು ಸಾವಿರ ಕೊಟ್ಟು, ಅಲ್ಲಿಂದ ಹೊರ ಬಂದಿದ್ದರು. ಈ ಘಟನೆ ಬಗ್ಗೆ ಯುವತಿ ಬೈಕ್ ನಲ್ಲಿ ಬಂದಿದ್ದ ಹೊಮ್ ಗಾರ್ಡ್ ನ ಫೋಟೋ ಸಮೇತ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು.

    ಈ ಸಂಬಂಧ ಎಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಚಾರಿ ನಿಯಮ ಉಲ್ಲಂಘನೆ – ಆರು ತಿಂಗಳಲ್ಲಿ 1 ಕೋಟಿ 3 ಲಕ್ಷ ದಂಡ ವಸೂಲಿ

    ಸಂಚಾರಿ ನಿಯಮ ಉಲ್ಲಂಘನೆ – ಆರು ತಿಂಗಳಲ್ಲಿ 1 ಕೋಟಿ 3 ಲಕ್ಷ ದಂಡ ವಸೂಲಿ

    ದಾವಣಗೆರೆ: ಸಂಚಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ 1 ಕೋಟಿ ದಂಡ ವಸೂಲಿಯಾಗಿದೆ. ದಾವಣಗೆರೆ ಉತ್ತರ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಲ್ಲಿ 1 ಕೋಟಿ 3 ಲಕ್ಷ ರೂ. ದಂಡ ವಸೂಲಿ ಮಾಡಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    ದಾವಣಗೆರೆ ನಗರದಲ್ಲಿ ಸಂಚಾರ ಸುರಕ್ಷತೆ ದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ಮಾಡಲಾಗಿದ್ದು, ತ್ರಿಬಲ್ ರೈಡ್‍ಗೂ ಭಾರೀ ಪ್ರಮಾಣದ ದಂಡ ವಸೂಲಿ ಆಗಿದೆ. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರ ಮೇಲೆ ದಂಡ ಪ್ರಯೋಗ ಮಾಡಲು ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ. ಇದನ್ನೂ ಓದಿ: ಗುರೂಜಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ – ಪೊಲೀಸ್ ಆಯುಕ್ತ ಲಾಭೂರಾಮ್ 

    ದಾವಣಗೆರೆ ಜಿಲ್ಲಾ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರಿಂದ ಆರು ತಿಂಗಳಲ್ಲಿ ಒಟ್ಟು 25,088 ಕೇಸ್‍ಗಳಲ್ಲಿ 1 ಕೋಟಿ 3 ಲಕ್ಷ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹಿಸಿದ್ದಾರೆ. ಇದಲ್ಲದೆ 83 ತ್ರಿಬಲ್ ರೈಡಿಂಗ್, 76 ರ‍್ಯಾಶ್ ಡ್ರೈವಿಂಗ್‍ನಲ್ಲಿ ಲೈಸೆನ್ಸ್ ಕ್ಯಾನ್ಸಲ್, 52 ಡಿಫೆಕ್ಟಿವ್ ಸೈಲೆನ್ಸರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಿದ್ದಾರೆ.

    ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ದಂಡ ವಸೂಲಿ ಮಾಡಲಾಗಿದೆ. ಇದಲ್ಲದೆ ದಾವಣಗೆರೆ ನಗರದಲ್ಲಿ ಕರ್ಕಷವಾಗಿ ಶಬ್ಧ ಮಾಡುತ್ತಿದ್ದ ಬುಲೆಟ್‍ಗಳಿಗೆ ಅಳವಡಿಸಿದ್ದ 52 ಸೈಲೆನ್ಸರ್ ಪೈಪ್‍ಗಳನ್ನು ವಶಕ್ಕೆ ಪಡೆದು ಎಸ್.ಪಿ.ಸಿಬಿರಿಷ್ಯಂತ್ ಸಮ್ಮುಖದಲ್ಲಿ ರೋಲರ್ ಹತ್ತಿಸುವ ಮೂಲಕ ನಾಶ ಪಡಿಸಿದ್ರು. ಸಂಚಾರಿ ಠಾಣೆ ಪೊಲೀಸರ ಈ ಸಾಧನೆಗೆ ಎಸ್‍ಪಿಸಿಬಿ ರಿಷ್ಯಂತ್ ಅಭಿನಂಧನೆ ತಿಳಿಸಿದರು. ಇದನ್ನೂ ಓದಿ: ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ವಶ 

    Live Tv
    [brid partner=56869869 player=32851 video=960834 autoplay=true]