Tag: ದಂಡುಪಾಳ್ಯ

  • ಗಣೇಶ್ ಅಡ್ಡಾದಲ್ಲಿ ಉಸ್ತಾದ್ ಹೋಟೆಲ್ ಬೆಡಗಿ ಮಾಳವಿಕಾ ನಾಯರ್

    ಗಣೇಶ್ ಅಡ್ಡಾದಲ್ಲಿ ಉಸ್ತಾದ್ ಹೋಟೆಲ್ ಬೆಡಗಿ ಮಾಳವಿಕಾ ನಾಯರ್

    ದಂಡುಪಾಳ್ಯ (Dandupalya) ಸಿನಿಮಾ ಖ್ಯಾತಿಯ ಶ್ರೀನಿವಾಸ್ ರಾಜು (Srinivas Raju) ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಗೋಲ್ಡನ್ ಸ್ಟಾರ್ ಗಣೇಶ್ (Ganesh) ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದು, ಸದ್ದಿಲ್ಲದೇ ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಇದೊಂದು ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಮಲಯಾಳಂ ಚಿತ್ರ ಖ್ಯಾತಿಯ ಮಾಳವಿಕಾ ನಾಯರ್ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

    ಉಸ್ತಾದ್ ಹೋಟೆಲ್ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬೆಡಗಿ ಮಾಳವಿಕಾ ನಾಯರ್. ಮಲಯಾಳಂ (Malayalam) ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತೆಲುಗು ಚಿತ್ರಗಳಲ್ಲೂ ಮಾಳವಿಕಾ ಅಭಿನಯಿಸಿದ್ದಾರೆ. 2012ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ಅಲ್ಲಿಂದ ನಿರಂತರವಾಗಿ ಹನ್ನೊಂದು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀರಾಗಿದ್ದಾರೆ. ಇದನ್ನೂ ಓದಿ:ಮತ್ತೆ ಸ್ಟೈಲೀಶ್‌ ಆಗಿ ಕಾಣಿಸಿಕೊಂಡ ‘ಬಿಗ್‌ ಬಾಸ್‌’ ಸಾನ್ಯ ಅಯ್ಯರ್

    ಕುಕ್ಕೂ, ಬ್ಲ್ಯಾಕ್ ಬಟರ್ ಫ್ಲೈ ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮಾಳವಿಕಾ ನಾಯರ್ (Malavika Nair), ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗಣೇಶ್ ನಟಿಸುತ್ತಿರುವ ಈ ಹೊಸ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರವನ್ನು ಮಾಳವಿಕ ನಾಯರ್ ನಿರ್ವಹಿಸಿದರೆ ಮತ್ತೊಂದು ಪಾತ್ರಕ್ಕೆ ನಾಯಕಿಯ ಆಯ್ಕೆ ನಡೆಯುತ್ತಿದೆಯಂತೆ.

    ಇದೊಂದು ಪಕ್ಕಾ ಎಂಟರ್ ಟೇನ್ಮೆಂಟ್ ಸಿನಿಮಾವಾಗಿದ್ದರಿಂದ ತಾರಾಗಣದಲ್ಲೂ ಅಂತಹ ಕಲಾವಿದರನ್ನೇ ಕಾಣಬಹುದಾಗಿದೆ. ಸಾಧು ಕೋಕಿಲಾ, ಗಿರಿ ಶಿವಣ್ಣ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಮುಂದಿನ ಹಂತದ ಚಿತ್ರೀಕರಣದಲ್ಲಿ ಮಾಳವಿಕಾ ನಾಯರ್ ಭಾಗಿಯಾಗಲಿದ್ದಾರಂತೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ರೀಮ್ ಸಿನಿಮಾದಲ್ಲಿ ಬೀದಿ ವೇಶ್ಯೆಯಾಗಿ ಕಾಣಿಸಿಕೊಂಡ ಸಂಯುಕ್ತ ಹೆಗ್ಡೆ

    ಕ್ರೀಮ್ ಸಿನಿಮಾದಲ್ಲಿ ಬೀದಿ ವೇಶ್ಯೆಯಾಗಿ ಕಾಣಿಸಿಕೊಂಡ ಸಂಯುಕ್ತ ಹೆಗ್ಡೆ

    ನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಕಲಾವಿದರು ಕೂಡ ಆಯಾ ಪ್ರಯೋಗಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಈ ಯಾದಿಗೆ ಹೊಸ ಸೇರ್ಪಡೆ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ (Samyuktha Hegde). ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡ ಸಂಯುಕ್ತ, ಸದ್ಯ ಕ್ರೀಮ್ (Kreem) ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿ ಅವರು ಬೀದಿ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

    ಅಭಿಷೇಕ್ ಬಸಂತ್ (Abhishek Basant) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ರೋಚಕ ಕ್ರೈಮ್ ಕಥೆಯನ್ನು ಹೇಳಿದ್ದಾರಂತೆ ನಿರ್ದೇಶಕರು. ದಂಡುಪಾಳ್ಯದ ಹಿನ್ನೆಲೆಯ ಕಥೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ದಂಡುಪಾಳ್ಯ (Dandupalya) ಗ್ಯಾಂಗ್ ಬಗ್ಗೆ ಸಾಕಷ್ಟು ಕಥೆಗಳಿವೆ. ಈಗಾಗಲೇ ಮೂರು ಭಾಗಗಳಲ್ಲಿ ಅವರ ಕಥೆಯನ್ನು ಸಿನಿಮಾ ಮಾಡಲಾಗಿದೆ. ಅದೆಲ್ಲವೂ ಕಲ್ಪಿತ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರಂತೆ. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ

    ಕ್ರೀಮ್ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದವರು ಅಗ್ನಿ ಶ್ರೀಧರ್. ಈ ಕುರಿತು ಅವರು ಮಾತನಾಡಿ, ದಂಡುಪಾಳ್ಯದವರು ಕೇವಲ ಕಳ್ಳತನ ಮಾಡಿದ್ದಾರೆ. ಅವರು ಎಂದೂ ಒಂಟಿ ಮಹಿಳೆಯನ್ನು ಬೆನ್ನತ್ತಿ ಕೊಂದಿಲ್ಲ.  ಕೊಲೆ ಮಾಡಿದವರ ಹಿಂದೆ ಬೇರೆಯದ್ದೇ ಕಥೆಯಿದೆ. ಅದನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇನೆ’ ಎಂದಿದ್ದಾರೆ.

    ವಿವಾದ ಆಗುವಂತಹ ಸಾಕಷ್ಟು ವಿಷಯಗಳು ಈ ಸಿನಿಮಾದಲ್ಲಿ ಇದೆ ಎನ್ನುವುದು ಶ್ರೀಧರ್ ಮಾತು. ಎಲ್ಲದಕ್ಕೂ ತಯಾರಿ ಮಾಡಿಕೊಂಡೆ ಈ ಕಥೆಯನ್ನು ಹೇಳಲು ಹೊರಟಿದೆಯಂತೆ ಚಿತ್ರತಂಡ. ಹಾಗಾಗಿ ಈವರೆಗೂ ಕೇಳಿದ ದಂಡುಪಾಳ್ಯದ ಕಥೆಯನ್ನು ಅಲ್ಲಗಳೆಯುವಂತಹ ಸಾಕಷ್ಟು ವಿಷಯಗಳು ಇಲ್ಲಿವೆಯಂತೆ.

    ತಮ್ಮ ಪಾತ್ರದ ಕುರಿತು ಮಾತನಾಡಿರುವ ಸಂಯುಕ್ತಾ ಹೆಗ್ಢೆ. ಇಂಥದ್ದೊಂದು ಪಾತ್ರವನ್ನು ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ. ಈ ಟೀಮ್ ಕೊಟ್ಟ ಸಹಕಾರ ದೊಡ್ಡದು. ಶ್ರೀಧರ್ ಅಂತವರು ಇದ್ದರೆ ಎಂತಹ ಪಾತ್ರ ಮಾಡುವುದಕ್ಕೂ ಧೈರ್ಯ ಬರುತ್ತದೆ ಎಂದರು. ಅಲ್ಲದೇ, ಪಾತ್ರದ ಗಟ್ಟಿತನದ ಕುರಿತು ಅವರು ಮಾತನಾಡಿದ್ದಾರೆ.

  • ಮತ್ತೆ ಜನರನ್ನು ಬೆಚ್ಚಿ ಬೀಳಿಸಲು ಬರ್ತಿದೆ ದಂಡುಪಾಳ್ಯ-3

    ಮತ್ತೆ ಜನರನ್ನು ಬೆಚ್ಚಿ ಬೀಳಿಸಲು ಬರ್ತಿದೆ ದಂಡುಪಾಳ್ಯ-3

    ಬೆಂಗಳೂರು: ಒಂದು ಕಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ದಂಡುಪಾಳ್ಯ ಗ್ಯಾಂಗಿನದ್ದು ಕರಾಳ ಕಥೆ. ಅಂತಹ ಭೀಕರ ಕ್ರೌರ್ಯವನ್ನು ಸಿನಿಮಾ ಮಾಡಿ ಎರಡೆರಡು ಸಲ ಗೆದ್ದವರು ನಿರ್ದೇಶಕ ಶ್ರೀನಿವಾಸ ರಾಜು.

    ದಂಡುಪಾಳ್ಯ ಸಿನಿಮಾ ನಿರ್ದೇಶಕ ಶ್ರೀನಿವಾಸ ರಾಜು ಇದೀಗ ಮೂರನೇ ಸಲ ಅದೇ ದಂಡುಪಾಳ್ಯ ಗ್ಯಾಂಗಿನೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

    ದಂಡುಪಾಳ್ಯ ಗ್ಯಾಂಗಿನ ಕಥೆಯನ್ನು ಈ ಹಿಂದೆಯೇ ಎರಡು ಚಿತ್ರಗಳ ಮೂಲಕ ಹೇಳಲಾಗಿತ್ತು. ಇದರ ಮೊದಲ ಭಾಗವಂತೂ ನಿರೀಕ್ಷೆಗೂ ಮೀರಿ ಭಾರಿ ಸದ್ದು ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಎರಡನೇ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಇದೇ ಮಾರ್ಚ್ 2ರಂದು ದಂಡುಪಾಳ್ಯ-3 ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

    ನಿರ್ದೇಶಕ ಶ್ರೀನಿವಾಸ ರಾಜು ಈ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲು ಸಿದ್ಧರಾಗುತ್ತಿದ್ದಾರೆ. ಬೇರೆ ಬೇರೆ ರೀತಿಯಾದ ನಿಜವಾದ ಕ್ರೌರ್ಯ ಕಥಾನಕಗಳು ಬಾಲಿವುಡ್ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸಿಮಿಮಾಗಳಾಗಿವೆ. ಆದರೆ ಸರಣಿಯಂತೆ ಯಶಸ್ವಿಯಾಗಿ ಮೂರು ಚಿತ್ರಗಳಾಗಿ ತೆರೆ ಕಂಡ ಉದಾಹರಣೆಗಳಿಲ್ಲ. ದಂಡುಪಾಳ್ಯ ಸರಣಿ ಯಶಸ್ವಿಯಾಗಿ ಮೂರನೇ ಭಾಗವೂ ತೆರೆ ಕಾಣಲು ಸಜ್ಜಾಗಿದೆ.

    ದಂಡುಪಾಳ್ಯದ ಸತ್ಯಕಥೆ ಅಪ್ಪಟ ರಕ್ತಸಿಕ್ತ. ಅದರ ಕಥೆಗೂ ಮನುಷ್ಯತ್ವಕ್ಕೂ ಸಂಬಂಧವೇ ಇಲ್ಲ. ಜೀವಂತವಾಗಿಯೇ ಮನುಷ್ಯರ ಕತ್ತು ಕುಯ್ದು ಆ ಸದ್ದನ್ನು ಸಂಭ್ರಮಿಸುವ, ಹೆಣ್ಣು-ಗಂಡೆನ್ನದೆ ಶವವನ್ನೇ ಸಂಭೋಗಿಸುವ ಪರಮ ವಿಕೃತಿ ದಂಡುಪಾಳ್ಯ ಗ್ಯಾಂಗಿನದ್ದು. ಇಂತಹ ಸಿನಿಮಾವನ್ನು ನಿರ್ಮಿಸಿವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಈ ಹಿಂದೆ ಎರಡು ಆವೃತ್ತಿಯ ಮೂಲಕ ಶ್ರೀನಿವಾಸ ರಾಜು ಅದರಲ್ಲಿ ಗೆದ್ದಿದ್ದಾರೆ. ಈಗ ಮೂರನೇ ಆವೃತ್ತಿ ಬಿಡುಗಡೆಗೆ ಸಿದ್ಧವಾಗಿದೆ.

    ಮೂರನೇ ಆವೃತ್ತಿಯ ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಆದ್ದರಿಂದ ಈ ಬಾರಿ ಹ್ಯಾಟ್ರಿಕ್ ಗೆಲುವು ದಂಡುಪಾಳ್ಯ ಚಿತ್ರತಂಡಕ್ಕೆ ಸಿಗುವ ನಿರೀಕ್ಷೆ ಇದೆ. ಇದನ್ನೂ ಓದಿ: 17 ವರ್ಷಗಳ ಬಳಿಕ ಮರುವಿಚಾರಣೆ- ದಂಡುಪಾಳ್ಯ ಗ್ಯಾಂಗ್ ಗೆ ಮತ್ತೊಂದು ಪ್ರಕರಣದಲ್ಲೂ ಜೀವಾವಧಿ ಶಿಕ್ಷೆ

  • ದಂಡುಪಾಳ್ಯ 2 ಸಿನಿಮಾ ತಂಡದ ವಿರುದ್ಧ ಹುಚ್ಚ ವೆಂಕಟ್ ಆಕ್ರೋಶ

    ದಂಡುಪಾಳ್ಯ 2 ಸಿನಿಮಾ ತಂಡದ ವಿರುದ್ಧ ಹುಚ್ಚ ವೆಂಕಟ್ ಆಕ್ರೋಶ

    ಬೆಂಗಳೂರು: ನಟಿ ಸಂಜನಾ ಬೆತ್ತಲಾಗಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ಹುಚ್ಚ ವೆಂಕಟ್ ಗರಂ ಆಗಿ ದಂಡುಪಾಳ್ಯ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ಈ ರೀತಿ ಚಿತ್ರವನ್ನು ನಿರ್ಮಾಣ ಮಾಡುವುದು ಎಷ್ಟು ಸರಿ ಎಂದು ಹುಚ್ಚ ವೆಂಕಟ್ ಪ್ರಶ್ನಿಸಿದ್ದಾರೆ.

    ಹೆಣ್ಣು ಮಕ್ಕಳನ್ನು ಬೆತ್ತಲುಗೊಳಿಸಿ ಚಿತ್ರೀಕರಣ ನಡೆಸಿದ್ದು ಸರಿಯಲ್ಲ. ಕಾವೇರಿಗಾಗಿ ಹೇಗೆ ಕನ್ನಡಿಗರು ಒಂದಾಗುತ್ತಾರೋ ಅದೇ ರೀತಿಯಾಗಿ ಈ ವಿಚಾರದಲ್ಲಿ ಒಂದಾಗಿ ಪ್ರತಿಭಟಿಸಬೇಕು. ಹೆಣ್ಣು ಮಕ್ಕಳಿಗೆ ಆಗುವ ಅನ್ಯಾಯವನ್ನು ನಾನು ಸಹಿಸುವುದಿಲ್ಲ. ಈ ವಿಚಾರದಲ್ಲಿ ನಾನು ಜೈಲಿಗೆ ಹೋಗಲು ಸಿದ್ಧ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಏನಿದು ವಿವಾದ?
    ಸೆನ್ಸಾರ್ ಮಂಡಳಿ ಸಂಜನಾ ಅಭಿನಯಿಸಿದ್ದ ಈ ದೃಶ್ಯಕ್ಕೆ ಕತ್ತರಿ ಹಾಕಿದೆ. ಹೀಗಾಗಿ ಸಿನಿಮಾದಲ್ಲಿ ಈ ದೃಶ್ಯ ಕಾಣಿಸುವುದಿಲ್ಲ. ರವಿಶಂಕರ್ ಪೊಲೀಸ್ ಆಫೀಸರ್ ಆಗಿದ್ದು ಸಂಜನಾಗೆ ಶಿಕ್ಷೆ ಕೊಡೋ ದೃಶ್ಯ ಇದಾಗಿದೆ. ನಿಜವಾಗಿಯೂ ಇದು ಸಿನಿಮಾಗೆ ಅವಶ್ಯಕಥೆ ಇತ್ತಾ ಅನ್ನೋದು ಒಂದು ಪ್ರಶ್ನೆಯಾದ್ರೆ? ಇನ್ನು ಸಂಜನಾ ಸಿನಿಮಾಗೆ ಈ ದೃಶ್ಯದ ಅವಶ್ಯಕಥೆ ಇತ್ತಾ? ನೈಜ ಘಟನೆ ಆಧಾರಿತ ಸಿನಿಮಾ ಆಗಿರೋದ್ರಿಂದ ಆ ಗ್ಯಾಂಗ್‍ಗೆ ರೀಯಲ್ಲಾಗಿ ಪೋಲೀಸರು ಈ ಶಿಕ್ಷೆ ಕೊಟ್ಟಿದ್ರಾ ಅನ್ನೊ ಪ್ರಶ್ನೆಗಳು ಕಾಡ್ತಿವೆ.

    ಈ ವಿಚಾರದ ಬಗ್ಗೆ ಸೆನ್ಸಾರ್ ಮಂಡಳಿ ನಮ್ಮಿಂದ ಯಾವುದೇ ದೃಶ್ಯ ಲೀಕ್‍ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.

     

     

  • ಮೈ ಜುಮ್ಮೆನಿಸುವ ದಂಡುಪಾಳ್ಯ-2 ಸಿನಿಮಾದ ಟ್ರೇಲರ್ ನೋಡಿ

    ಮೈ ಜುಮ್ಮೆನಿಸುವ ದಂಡುಪಾಳ್ಯ-2 ಸಿನಿಮಾದ ಟ್ರೇಲರ್ ನೋಡಿ

    ಬೆಂಗಳೂರು: ದಂಡುಪಾಳ್ಯ ತಂಡ ಮತ್ತೊಮ್ಮೆ ಬೆಳ್ಳಿತೆರೆಗೆ ಅಪ್ಪಳಿಸಲಿಕ್ಕೆ ಸಿದ್ಧವಾಗಿದೆ. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್‍ಗಳಿಂಗ ಸಿನಿರಸಿಕರನ್ನು ಸೆಳೆದಿರುವ ಸಿನಿಮಾ ಶೀಘ್ರದಲ್ಲೇ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿರಿಸಲಿದೆ.

    ಪ್ರಥಮ ಭಾಗ ದಂಡುಪಾಳ್ಯ ಚಿತ್ರರಸಿಕರು ಹಾಗು ವಿಮರ್ಶಕರನ್ನು ಮೆಚ್ಚಿಸಿತ್ತು. ಅದರ ಮುಂದುವರೆದ ಭಾಗವೇ ದಂಡುಪಾಳ್ಯ ಭಾಗ-2. ಈಗ ಮತ್ತೆ ಆ ಕರಾಳ ಪಾತಕಿಗಳ ಮತ್ತಷ್ಟು ವಿಕೃತ ಕೃತ್ಯಗಳನ್ನ ಬೆಳ್ಳಿತೆರೆ ಮೇಲೆ ಅಷ್ಟೇ ರೋಚಕವಾಗಿ ಬಿಚ್ಚಿಡಲು ಚಿತ್ರತಂಡ ಹೊರಟಿದೆ.

    ಇಂದು ಖಾಸಗಿ ಹೋಟೆಲ್‍ನಲ್ಲಿ ಶ್ರೀನಿವಾಸ್ ರಾಜು ಸಾರಥ್ಯದ ದಂಡುಪಾಳ್ಯ 2 ಚಿತ್ರದ ಟ್ರೈಲರ್ ಲಾಂಚ್ ಮಾಡಲಾಯ್ತು. ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬಂದಿರೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

    ಚಿತ್ರದಲ್ಲಿ ಮಕರಂದ್ ದೇಶ್‍ಪಾಂಡೆ, ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಶೃತಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಟ್ರೈಲರ್ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ.

     

  • 36 ವರ್ಷದ ಬಳಿಕ ಮಂಡ್ಯ ಪೊಲೀಸರಿಂದ ದಂಡುಪಾಳ್ಯ ಗ್ಯಾಂಗ್‍ನಲ್ಲಿದ್ದ ಕಳ್ಳ ಅರೆಸ್ಟ್!

    36 ವರ್ಷದ ಬಳಿಕ ಮಂಡ್ಯ ಪೊಲೀಸರಿಂದ ದಂಡುಪಾಳ್ಯ ಗ್ಯಾಂಗ್‍ನಲ್ಲಿದ್ದ ಕಳ್ಳ ಅರೆಸ್ಟ್!

    ಮಂಡ್ಯ: ದಂಡುಪಾಳ್ಯ ಗ್ಯಾಂಗ್‍ನಲ್ಲಿ ಗುರುತಿಸಿಕೊಂಡಿದ್ದ ಓರ್ವ ಸೇರಿದಂತೆ ಇಬ್ಬರು ಕಳ್ಳರನ್ನು 36 ವರ್ಷದ ಬಳಿಕ ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ದೊಡ್ಡಮುನಿಯ ಮತ್ತು ಚಿಕ್ಕಮುನಿಯ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ಅಣ್ಣ-ತಮ್ಮಂದಿರಾಗಿದ್ದು, 1981ರಲ್ಲಿ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು 1984ರಲ್ಲಿ ನಾಗಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಯಲ್ಲಿ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಬಂಧಿತರ ಪೈಕಿ ದೊಡ್ಡಮುನಿಯ ಕುಖ್ಯಾತ ದಂಡುಪಾಳ್ಯದ ತಂಡದಲ್ಲಿ ಗುರುತಿಸಿಕೊಂಡಿದ್ದ.

    ಸುಮಾರು ವರ್ಷ ತಲೆಮರೆಸಿಕೊಂಡಿದ್ದ ಈ ಇಬ್ಬರು ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಮಾರ್ಚ್ 6ರಂದು ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಬಂಧಿಸಲಾಗಿದೆ. ನಾಗಮಂಗಲ ಸಿಪಿಐ ಹರೀಶ್ ಬಾಬು, ಎಎಸೈ ರವಿ, ಮುಖ್ಯಪೇದೆ ಸೋಮಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

    ಬಂಧನದ ಬಳಿಕ ಆರೋಪಿಗಳನ್ನ ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಂಧಿತ ಆರೋಪಿಗಳು ಕೇವಲ ಕಳ್ಳತನದಲ್ಲಷ್ಟೇ ಭಾಗಿಯಾಗಿದ್ದಾರೆಯೇ ಅಥವಾ ಬೇರೆ ಪ್ರಕರಣದಲ್ಲಿ ಇದ್ದಾರೆಯೇ ಎಂಬುದು ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ.