Tag: ದಂಗೆ

  • France Shooting – ಕಾರು ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಶೂಟೌಟ್‌ – ಹತ್ಯೆ ಖಂಡಿಸಿ ಹಿಂಸಾಚಾರ

    France Shooting – ಕಾರು ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಶೂಟೌಟ್‌ – ಹತ್ಯೆ ಖಂಡಿಸಿ ಹಿಂಸಾಚಾರ

    ಪ್ಯಾರಿಸ್‌: ಕಾರು ನಿಲ್ಲಿಸದ್ದಕ್ಕೆ 17 ವರ್ಷದ ಯುವಕನನ್ನು ಗುಂಡಿನ ದಾಳಿ (France Shooting) ನಡೆಸಿ ಹತ್ಯೆ ಮಾಡಿದ್ದನ್ನು ಖಂಡಿಸಿ ಫ್ರಾನ್ಸ್ (France) ದೇಶಾದ್ಯಂತ ಹಿಂಸಾಚಾರ (Violence)  ನಡೆದಿದೆ.

    ಕಲ್ಲು ತೂರಾಟ ಮಾಡಿರುವ ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. 40ಕ್ಕೂ ಹೆಚ್ಚು ಕಾರುಗಳು ಧಗಧಗಿಸಿವೆ. ಘರ್ಷಣೆಗಳಲ್ಲಿ 25ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.  ಇದನ್ನೂ ಓದಿ: ಚೀನಾ, ಪಾಕಿಸ್ತಾನದೊಂದಿಗೆ ಸಂಬಂಧ ಕಷ್ಟ: ಜೈಶಂಕರ್

    ಪೊಲೀಸರು ಪರಿಸ್ಥಿತಿ ನಿಭಾಯಿಸಲು ಟಿಯರ್ ಗ್ಯಾಸ್ ಪ್ರಯೋಗಿಸಿದ್ದಾರೆ. 160ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಚಾಲಕನನ್ನು ಕೊಂದ ಪೊಲೀಸರ ಕೃತ್ಯವನ್ನು ಖುದ್ದು ದೇಶಾಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಖಂಡಿಸಿದ್ದಾರೆ. ಇದು ಕ್ಷಮಿಸಲಾಗದ ಅಪರಾಧ ಎಂದು ಅಭಿಪ್ರಾಯಪಟ್ಟು ಜನ ಶಾಂತಿಯಿಂದ ಇರಬೇಕು ಎಂದು ಕರೆ ನಿಡಿದ್ದಾರೆ.

    ಚಾಲಕನ ಮೇಲೆ ಗುಂಡು ಹಾರಿಸಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಿ ಹತ್ಯೆ ಆರೋಪ ಹೊರಿಸಿ ಕೇಸ್ ದಾಖಲಿಸಲಾಗಿದೆ. ಪ್ಯಾರಿಸ್‌ ಸುತ್ತಮುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

    ನಡೆದಿದ್ದು ಏನು?
    ಮಂಗಳವಾರ ಪ್ಯಾರಿಸ್‌ನಲ್ಲಿ ಪೊಲೀಸರು ಎಂದಿನಿಂದ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚೆಕ್‌ಪಾಯಿಂಟ್‌ನಲ್ಲಿ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಉತ್ತರ ಆಫ್ರಿಕಾದ ಮೂಲದ ಚಾಲಕ ಕಾರು ಚಲಾಯಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಆ ದಿನ’ ನೀವು ಬೆಂಗಳೂರಿನಲ್ಲೇ ಇರಿ, ಯಾವುದೇ ಕಾರಣಕ್ಕೂ ಮಿಸ್ ಆಗಬಾರದು- ಬಿಎಸ್‍ವೈ

    `ಆ ದಿನ’ ನೀವು ಬೆಂಗಳೂರಿನಲ್ಲೇ ಇರಿ, ಯಾವುದೇ ಕಾರಣಕ್ಕೂ ಮಿಸ್ ಆಗಬಾರದು- ಬಿಎಸ್‍ವೈ

    ಬೆಂಗಳೂರು: ಸರ್ಕಾರ ಪತನ ಆಗುತ್ತಾ ಎನ್ನುವ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಆ ದಿನ ನೀವು ಬೆಂಗಳೂರಿನಲ್ಲಿಯೇ ಇರಬೇಕು. ಯಾವುದೇ ಕಾರಣಕ್ಕೂ ತಪ್ಪಬಾರದು ಅಂತಾ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು, ಹಾಲಿ ಶಾಸಕರು, ಕೆಲ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಿಗೂ ಸೂಚನೆ ನೀಡಿದ್ದಾರೆ.

    ರಾಜ್ಯ ರಾಜಕಾರಣದಲ್ಲಿ ‘ಆ ದಿನ’ ದೊಡ್ಡ ರಾಜಕೀಯ ದಂಗೆ ಆರಂಭಿಸಲು ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಆಪ್ತರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಆ ದಿನ ಅಂದರೆ ಸೋಮವಾರ, ಅಂದು ಬಿಜೆಪಿಯು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ‘ದಂಗೆ’ ದಂಗಲ್‍ಗೆ ಕ್ಲೈಮ್ಯಾಕ್ಸ್ ನೀಡಲು ಸಿದ್ಧತೆ ನಡೆಸಿಕೊಂಡಿದೆಯಂತೆ. ಜೊತೆಗೆ ಆಪರೇಷನ್ ಕಮಲಕ್ಕೂ ಯೋಜನೆ ರೂಪಿಸುತ್ತಿದೆ ಎನ್ನುವ ಸುಳಿವು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಗುರುವಾರ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಸಿಎಂ ಎಚ್‍ಡಿಕೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು ಎಂದು ಹೇಳಿದ್ದರು. ಈಗ ಈ ವಿಚಾರ ಭಾರೀ ಚರ್ಚೆಯಾಗುತ್ತಿದ್ದು, ಆಡಳಿತ ಮತ್ತು ಪ್ರತಿ ಪಕ್ಷದ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಂಗೆ ಅಂದ್ರೆ ಜನ ಪ್ರತಿಭಟನೆ ಮಾಡ್ತಾರೆ ಅಂತ ಅರ್ಥ: ಎಚ್‍ಡಿಕೆ ಸ್ಪಷ್ಟನೆ

    ದಂಗೆ ಅಂದ್ರೆ ಜನ ಪ್ರತಿಭಟನೆ ಮಾಡ್ತಾರೆ ಅಂತ ಅರ್ಥ: ಎಚ್‍ಡಿಕೆ ಸ್ಪಷ್ಟನೆ

    ಬೆಂಗಳೂರು: ಕಾರ್ಯಕ್ರಮದ ಭಾಷಣದ ವೇಳೆ ದಂಗೆ ಪದವನ್ನು ಬಳಸಿದ್ದಕ್ಕೆ ಭಾರೀ ಟೀಕೆ ಬರುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಅದನ್ನು ಶಮನ ಮಾಡುವ ನಿಟ್ಟಿನಲ್ಲಿ ಅರ್ಥವನ್ನು ಕಟ್ಟಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡದ್ದಾರೆ.

    ಮಾಧ್ಯಮಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ದಂಗೆ ಅಂದರೆ ಜನ ಪ್ರತಿಭಟನೆ ಮಾಡುತ್ತಾರೆ ಅಂತ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ಉತ್ತರಿಸಿದರು.

    ಯಡಿಯೂರಪ್ಪ ಈ ಹಿಂದೆ ಸರಕಾರ ವಿರುದ್ಧ ದೊಣ್ಣೆ, ಬಡಿಗೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದರು. ಇದಕ್ಕಿಂತ ಕೆಟ್ಟ ಪದವನ್ನು ನಾನು ಬಳಸಿದ್ದೇನಾ? ಬಿಜೆಪಿ ಮುಖಂಡರು ಭೂಗತ ವ್ಯಕ್ತಿಗಳ ಸಂಪರ್ಕ ಇಟ್ಟುಕೊಂಡವರ ಮೂಲಕ ಸರ್ಕಾರ ಕೆಡವಲು ಮುಂದಾದರೆ ನಾನು ಸುಮ್ಮನೆ ಕೂರಬೇಕಾ ಎಂದು ಗರಂ ಆಗಿಯೇ ಪ್ರಶ್ನಿಸಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.

    ಗುರುವಾರ ಚನ್ನರಾಯಪಟ್ಟಣ ತಾಲೂಕಿನ ತೋಟಿ ಗ್ರಾಮದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಜನಪರ ಸರ್ಕಾರವನ್ನು ಉರುಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಇಂತವರ ವಿರುದ್ಧ ನಾಡಿನ ಜನ ದಂಗೆ ಏಳಬೇಕು. ಈ ನಾಡಿನ ಜನರಿಗೆ ಈ ಪುಣ್ಯ ಭೂಮಿಯಿಂದಲೇ ನಾನು ದಂಗೆಗೆ ಕರೆ ನೀಡುತ್ತೇನೆ. ಅಷ್ಟೇ ಅಲ್ಲದೇ ನನ್ನಿಂದಲೂ ಏನದರೂ ತಪ್ಪಾಗಿದ್ದರೆ ಅಥವಾ ನಾನೇದರೂ ನಿಮಗೆ ದ್ರೋಹವನ್ನು ಮಾಡಿದ್ದರೆ, ಈ ನಾಡಿನ ಜನತೆ ನನ್ನ ವಿರುದ್ಧವೂ ದಂಗೆ ಏಳಿ ಎಂದು ಹೇಳಿದ್ದರು. ಇದನ್ನೂ ಓದಿ: ನಾಡಿನ ಜನತೆ ಬಿಜೆಪಿ ವಿರುದ್ಧ ದಂಗೆ ಏಳಬೇಕು: ಸಿಎಂ ಎಚ್‍ಡಿಕೆ

    https://www.youtube.com/watch?v=CU5WQCUElu8