Tag: ಥೈಲೆಂಡ್

  • ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಅಮರಾವತಿ: ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ.

    ಸಮುದ್ರದಲ್ಲಿ ತೇಲುತ್ತಿದ್ದ ರಥವನ್ನು ನೋಡಿದ ಗ್ರಾಮಸ್ಥರು ಅದನ್ನು ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಾಗಿರುವುದರಿಂದಾಗಿ ಇದು ಮಯನ್ಮಾರ್, ಮಲೇಷಿಯಾ ಅಥವಾ ಥೈಲೆಂಡ್‍ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ.

    ಈ ರಥವು ನೋಡಲು ಏಷ್ಯಾ ರಾಷ್ಟ್ರಗಳ ಮಠದ ಆಕಾರವನ್ನು ಹೊಂದಿದೆ. ಚಂಡಮಾರುತದ ಪ್ರಭಾವದಿಂದಾಗಿ ಉಂಟಾದ ಎತ್ತರದ ಅಲೆಗಳ ಕಾರಣದಿಂದಾಗಿ ರಥವು ಕರಾವಳಿಗೆ ಕೊಚ್ಚಿ ಹೋಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದರು. ಜೋತೆಗೆ ಈನ ರಥವನ್ನು ಕೌತುಕದಿಂದ ವೀಕ್ಷಿಸಿದರು. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!

    ಈ ಬಗ್ಗೆ ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಮಾತನಾಡಿ, ಯಾವುದೇ ದೇಶದಿಂದ ಬಂದಿರದಿರಬಹುದು ಅಥವಾ ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿರಬಹುದು. ಇದು ಚಂಡಮಾರುತದ ಪ್ರಭಾವದಿಂದಾಗಿ ಶ್ರೀಕಾಕುಲಂ ತೀರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

  • ಥಮ್ ಲುಮಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ 6 ಬಾಲಕರು ಬಚಾವ್

    ಥಮ್ ಲುಮಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ 6 ಬಾಲಕರು ಬಚಾವ್

    ಚಿಯಾಂಗ್ ರಾಯ್: ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ ಸದ್ಯ 6 ಬಾಲಕರನ್ನು ರಕ್ಷಣೆ ಮಾಡಲಾಗಿದೆ.

    ಜೂನ್ 26ರಂದು ಕೋಚ್ ಸೇರಿದಂತೆ ಫುಟ್‍ಬಾಲ್ ಜೂನಿಯರ್ ತಂಡ 12 ಬಾಲಕರು ಗುಹೆ ಸೇರಿದ್ದರು. ಕಳೆದ 14 ದಿನಗಳಿಂದ ಕೋಚ್ ಹಾಗೂ ಬಾಲಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಸದ್ಯ 6 ಬಾಲಕರು ಜೀವಂತವಾಗಿ ಸಿಕ್ಕಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಡೆದಿದ್ದು ಏನು?
    ಕೋಚ್ ಸಮೇತ ತಂಡದ ಎಲ್ಲಾ ಆಟಗಾರರು ಕಾಡಿನಲ್ಲಿ ಸುತ್ತಾಡಲು ಹೋದಾಗ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಪ್ರವಾಸದ ವೇಳೆ ಬೃಹತ್ ಗುಹೆಯೊಳಗೆ ಪ್ರವೇಶ ಪಡೆದಿದ್ದ ಆಟಗಾರರು ಬಳಿಕ ಉಂಟಾದ ಪ್ರವಾಹದಿಂದ ಕೊಚ್ಚಿ ಹೋಗಿದ್ದರು. ಘಟನೆ ಬೆಳಕಿಗೆ ಬಂದ ನಂತರ ಅಲ್ಲಿನ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಸತತ 9 ದಿನಗಳ ಕಠಿಣ ಕಾರ್ಯಾಚರಣೆಯ ಬಳಿಕ ಎಲ್ಲರನ್ನು ಒಟ್ಟಾಗಿ ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಗೆ ಬ್ರಿಟಿಷ್ ಗುಹಾ ಮುಳುಗು ತಜ್ಞರನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

    ಕಾಣೆಯಾದ ಆಟಗಾರರು 9 ದಿನಗಳ ಆಹಾರವಿಲ್ಲದೇ ಪರದಾಟ ನಡೆಸಿದ್ದು, ಆದರೆ ಎಲ್ಲರೂ ಒಟ್ಟಿಗೆ ಪ್ರಯಾಣ ನಡೆಸಿದ್ದರು. ಆಟಗಾರರು ಪ್ರವಾಸ ತೆರಳಿದ ಬಳಿಕ ಪ್ರವಾಹವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮೊದಲು ಗುಹೆಯಲ್ಲಿ ಕಾರ್ಯಾಚರಣೆ ನಡೆಸಲು ಅಡ್ಡಿಯಾಗಿದ್ದ ನೀರನ್ನು ಹೊರಹಾಕಿದ ರಕ್ಷಣಾ ಸಿಬ್ಬಂದಿ ಬಳಿಕ ಗುಹೆಯೊಳಗೆ ಪ್ರವೇಶಿಸಿದ್ದರು.

    ಸದ್ಯ ಈ ಕುರಿತು ವಿಡಿಯೋವನ್ನು ಸಲ್ಲಿನ ಸರ್ಕಾರ ಬಿಡುಗಡೆ ಮಾಡಿದ್ದು ರಕ್ಷಣೆ ಮಾಡಿರುವ ಎಲ್ಲಾ ಆಟಗಾರಿಗೆ ಆಹಾರ ಹಾಗೂ ಆಮ್ಲಜನಕ ಪೂರೈಸಿ ಬಳಿಕ ಹೊರ ತಂದಿದೆ.

    ಆರಂಭದಲ್ಲಿ ಈ ಕಾರ್ಯಾಚರಣೆ ವಿಫಲವಾಗುತ್ತದೆ ಎಂದೇ ಹಲವರು ವಿಶ್ಲೇಷಿಸಿದ್ದರು. ಆಟಗಾರರು ನಾಪತ್ತೆಯಾದ ಬಳಿಕ ಆ ಪ್ರದೇಶದಲ್ಲಿ ಪ್ರತಿದಿನವೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು. ಸದ್ಯ ಆಟಗಾರರ ರಕ್ಷಣೆಯಿಂದ ಪೋಷಕರು ಆತಂಕದಿಂದ ದೂರವಾಗಿದ್ದು, ಸಂತಸ ವ್ಯಕ್ತಪಡಿಸಿದ್ದರು.