Tag: ಥೀಮ್ ಪಾರ್ಕ್

  • ತುಮಕೂರಿನ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶ – 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಥೀಮ್ ಪಾರ್ಕ್

    ತುಮಕೂರಿನ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶ – 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಥೀಮ್ ಪಾರ್ಕ್

    ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತವಾಗಿರುವ ಡಾ.ಶ್ರೀ.ಶಿವಕುಮಾರ ಸ್ವಾಮೀಜಿಯವರ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶವನ್ನು ನೀಡಲು ನಿರ್ಧರಿಸಿದ್ದು, ಸಾವಿರಾರು ಭಕ್ತರ ಕಣ್ಮನ ತಣಿಸಲು 60 ಎಕರೆ ವಿಸ್ತೀರ್ಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ (Theme Park) ಸಿದ್ಧಗೊಳ್ಳುತ್ತಿದೆ.

    ಈ ಥೀಮ್ ಪಾರ್ಕ್ ಸಿದ್ದಗಂಗಾ ಮಠ (Siddaganga Mutt) ಬೆಳೆದು ಬಂದ ಸಮಗ್ರ ಇತಿಹಾಸ ಮತ್ತು ಶಿವಕುಮಾರ ಶ್ರೀಗಳ (Shivakumara Swamiji) ಜೀವನ ಚರಿತೆಯನ್ನು ಹೇಳುವ ಕಲಾಕೃತಿಗಳನ್ನು ಒಳಗೊಂಡಿದ್ದು, ಪಾರ್ಕ್‌ನಲ್ಲಿ 100ಕ್ಕೂ ಹೆಚ್ಚು ಶಿಲ್ಪಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದ್ದು, ಉದ್ಯಾನವನದಲ್ಲಿ 10 ಜನ ಕಲಾವಿದರು ಹಗಲು ರಾತ್ರಿ ಈ ಕಾರ್ಯದಲ್ಲಿ ಶ್ರಮಿಸುತಿದ್ದಾರೆ. ಒಂದು ವರ್ಷದಿಂದ ಕಲಾವಿದರ ಅವಿರತ ಪ್ರಯತ್ನ ಥೀಮ್ ಪಾರ್ಕ್‌ಗೆ ಮತ್ತಷ್ಟು ಕಳೆ ತುಂಬಿದೆ. ಇದನ್ನೂ ಓದಿ: ರಾತ್ರೋ ರಾತ್ರಿ ರೈಲ್ವೇ ಕಂಬಿಗಳ ಸಾಗಾಟ – ಮಾಲು ಸಮೇತ ವಾಹನ ವಶಕ್ಕೆ

    ತ್ರಿವಿಧಿ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜೊತೆಗೆ ಸಿದ್ದಗಂಗಾ ಮಠದ ಇತಿಹಾಸ ಹೇಳುವ ಪಾರ್ಕ್ ಕೂಡ ಹೌದು. 60 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಒಂದೆಡೆ ಸಿದ್ದಲಿಂಗೇಶ್ವರರು, ಅಟವಿ ಶ್ರೀಗಳು, ಉದ್ಧಾನ ಶಿವಯೋಗಿಗಳು, ಡಾ.ಶ್ರೀ.ಶಿವಕುಮಾರ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶಿಲ್ಪಗಳು ಗಮನ ಸೆಳೆದರೆ ಇನ್ನೊಂದೆಡೆ ಡಾ.ಶಿವಕುಮಾರ ಸ್ವಾಮೀಜಿ ಅವರ ಬಾಲ್ಯ, ವಿದ್ಯಾಭ್ಯಾಸ, ಸನ್ಯಾಸತ್ವ ದೀಕ್ಷೆ, ಜೀವನ ಸಾಧನೆ ಸಾರುವ ಪ್ರತಿಯೊಂದು ಸಾಧನೆಗಳ ಹೂರಣವೇ ಇಲ್ಲಿ ಶಿಲ್ಪ ಕಲೆಯಾಗಿ ಹೊರ ಹೊಮ್ಮಿದೆ. ನಿರ್ಮಾಣ ಹಂತ ತಲುಪಿರುವ ಉದ್ಯಾನವನ ಈಗಾಗಲೇ ಲಕ್ಷಾಂತರ ಜನರ ಮನಸೂರೆಗೊಂಡಿದೆ. ಭಕ್ತರು, ಪ್ರವಾಸಿಗಳು, ಸ್ಥಳೀಯರು ಬೆಟ್ಟ ಹತ್ತುವ ಪ್ರತಿಯೊಬ್ಬರೂ ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು ಎಂದು ಅನಿಸಿದರೆ ಆಶ್ಚರ್ಯವೆನಿಲ್ಲ. ಇದನ್ನೂ ಓದಿ: 21 ಲಕ್ಷ ಮೌಲ್ಯದ ಟೊಮೆಟೋ ತುಂಬಿದ್ದ ಲಾರಿ ನಾಪತ್ತೆ ಕೇಸ್‌ – ಹಣದೊಂದಿಗೆ ಚಾಲಕ, ಕ್ಲೀನರ್ ಪರಾರಿ

    ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದ ಜೊತೆಗೆ ವಿದೇಶಗಳಿಂದಲೂ ಶ್ರೀಗಳ ಗದ್ದಿಗೆ ದರ್ಶನಕ್ಕೆ ಭಕ್ತಾದಿಗಳು, ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಷ್ಟು ದಿನ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರ ಸ್ವಾಮಿಜಿಗಳ ಗದ್ದಿಗೆ ದರ್ಶನದಿಂದ ಪುನೀತರಾಗುತಿದ್ದ ಭಕ್ತರು ಇನ್ನುಮುಂದೆ ಲಿಂಗೈಕ್ಯ ಶ್ರಿಗಳ ಜೀವನ ಚರಿತ್ರೆಯ ಸಂಪೂರ್ಣ ಶಿಲ್ಪ ಕಲಾಕೃತಿಗಳನ್ನು ಕಂಡು ಪುಳಕಿತರಾಗೋದು ಗ್ಯಾರಂಟಿ. ವೀಕೆಂಡ್, ಜಾತ್ರೆ ಮತ್ತಿತರ ಸಂದರ್ಭದಲ್ಲಿ ಶ್ರೀ ಸಿದ್ಧಗಂಗಾ ಮಠಕ್ಕೆ ಬರುವ ಪ್ರವಾಸಿಗರಿಗೆ ಥೀಮ್ ಪಾರ್ಕ್ ಆಕರ್ಷಣೆಯ ಕೇಂದ್ರವಾಗಲಿದೆ. ಇದನ್ನೂ ಓದಿ: Udupi College Video Row – ತನಿಖೆ ಶುರು ಮಾಡಿದ ಕುಂದಾಪುರ ಡಿವೈಎಸ್ಪಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂತ್ರಾಲಯದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ – ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

    ಮಂತ್ರಾಲಯದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮ ಪ್ರತಿಮೆ ನಿರ್ಮಾಣ – ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

    ರಾಯಚೂರು: ಮಂತ್ರಾಲಯದ (Mantralaya) ಹೊರವಲಯದಲ್ಲಿ ಸ್ಥಾಪಿಸಲಾಗುವ ವಿಶ್ವದ ಅತಿ ಎತ್ತರದ 108 ಅಡಿಯ ಪಂಚಲೋಹ ಶ್ರೀರಾಮ ಪ್ರತಿಮೆ (Shreeram Idol) ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿಶ್ ಶಾ (Amit Shah) ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

    ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭೂಮಿ ಪೂಜೆ ಮಾಡಿ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ಹೈದರಾಬಾದ್ ಮೂಲದ ಜೈ ಶ್ರೀರಾಮ್ ಫೌಂಡೇಶನ್‌ನಿಂದ 300 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದೆ. ಇದನ್ನೂ ಓದಿ: ಕಾಂತರಾಜು ವರದಿ ಜಾರಿಯಿಂದ ಅಸಮಾನತೆ ತೊಡೆದು ಹಾಕಲು ಸಾಧ್ಯ: ಸಚಿವ ತಂಗಡಗಿ

    ಗುಜರಾತ್‌ನಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಹಾಂಜಿ ಸುತಾರ್‌ಗೆ ಶ್ರೀರಾಮ ಪ್ರತಿಮೆ ತಯಾರಿಕೆ ಜವಾಬ್ದಾರಿ ನೀಡಲಾಗಿದೆ. ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ ವಿಶ್ವದಲ್ಲೇ ಅತಿ ಎತ್ತರದ ಶ್ರೀರಾಮ ಪ್ರತಿಮೆ ಮಂತ್ರಾಲಯದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನದಲ್ಲಿ 5 TMC ನೀರಿನ ಒಳಹರಿವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವದಲ್ಲೇ ಅತೀ ಎತ್ತರದ ಪಂಚಲೋಹ ಶ್ರೀರಾಮನ ಪ್ರತಿಮೆ ನಿರ್ಮಾಣ- ಅಮಿತ್ ಶಾ ಶಂಕುಸ್ಥಾಪನೆ

    ವಿಶ್ವದಲ್ಲೇ ಅತೀ ಎತ್ತರದ ಪಂಚಲೋಹ ಶ್ರೀರಾಮನ ಪ್ರತಿಮೆ ನಿರ್ಮಾಣ- ಅಮಿತ್ ಶಾ ಶಂಕುಸ್ಥಾಪನೆ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralaya) ಬಳಿ ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹ ಶ್ರೀರಾಮ ವಿಗ್ರಹ (Shreeram Idol) ಸ್ಥಾಪನೆಗೆ ಇಂದು (ಭಾನುವಾರ) ಶಂಕುಸ್ಥಾಪನೆ ನೆರವೇರಲಿದೆ. ಮಂತ್ರಾಲಯದ ಹೊರವಲಯದಲ್ಲಿ ಪ್ರತಿಷ್ಠಾಪನೆಯಾಗಲಿರುವ 108 ಅಡಿ ಎತ್ತರದ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್‌ಗೆ (Theme Park) ಇಂದು ಮಧ್ಯಾಹ್ನ 3 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವರ್ಚೂವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಮಂತ್ರಾಲಯ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳಿಂದ ಭೂಮಿ ಪೂಜೆ ನಡೆಯಲಿದೆ. ಹೈದರಾಬಾದ್ (Hyderabad) ಮೂಲದ ಜೈ ಶ್ರೀರಾಮ್ ಫೌಂಡೇಶನ್ 300 ಕೋಟಿ ರೂ. ವೆಚ್ಚದಲ್ಲಿ ಶ್ರೀರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಮಾಡಲಿದೆ. ಈ ಮೂಲಕ ಮಂತ್ರಾಲಯ – ಬೆಂಗಳೂರು ಮಾರ್ಗದಲ್ಲಿ ದೇವಾಲಯ ಹಾಗೂ ಪ್ರವಾಸಿ ತಾಣ ತಲೆ ಎತ್ತಲಿದೆ. ಇದನ್ನೂ ಓದಿ: ಭಾರೀ ಮಳೆ – ತುಂಬಿ ಹರಿಯುತ್ತಿದೆ ಮೂಕನಮನೆ ಜಲಪಾತ; ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ

    ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಜಾಗದಲ್ಲಿ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣವಾಗುತ್ತಿದ್ದು, ಪ್ರತಿಮೆ ಬಳಿ ಶ್ರೀರಾಮ ದೇವಾಲಯ ಹಾಗೂ ಥೀಮ್ ಪಾರ್ಕ್‌ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಪ್ರತಿರೂಪದ ದೇವಾಲಯಗಳ ನಿರ್ಮಾಣ ನಡೆಯಲಿದೆ. ಗುಜರಾತ್‌ನಲ್ಲಿನ (Gujarat) ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ರಾಮ ಹಾಂಜಿ ಸುತಾರ್‌ಗೆ ಶ್ರೀರಾಮ ಪ್ರತಿಮೆ ನಿರ್ಮಾಣ ಜವಾಬ್ದಾರಿ ನೀಡಲಾಗಿದೆ. ದೆಹಲಿಯಲ್ಲಿ (Dehi) ಪ್ರತಿಮೆ ತಯಾರಿಕೆ ಕಾರ್ಯ ಆರಂಭವಾಗಿದ್ದು, ಮುಂದಿನ ವರ್ಷ ಅಂತ್ಯಕ್ಕೆ ಪ್ರತಿಮೆ ಪ್ರತಿಷ್ಠಾಪನೆ ಸಾಧ್ಯತೆಯಿದೆ. ಇದನ್ನೂ ಓದಿ: ಭಾರೀ ಮಳೆಯಿಂದ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂಳೆ ಮುರಿತ – ಆಟ ನಿಲ್ಲಿಸಿದ ವಿಶ್ವದ ವೇಗದ ರೋಲರ್ ಕೋಸ್ಟರ್

    ಮೂಳೆ ಮುರಿತ – ಆಟ ನಿಲ್ಲಿಸಿದ ವಿಶ್ವದ ವೇಗದ ರೋಲರ್ ಕೋಸ್ಟರ್

    ಟೋಕಿಯೋ: ವಿಶ್ವದ ವೇಗದ ರೋಲರ್ ಕೋಸ್ಟರ್ ತನ್ನ ಆಟವನ್ನು ನಿಲ್ಲಿಸಿದೆ. ಪ್ರವಾಸಿಗರ ಮೂಳೆಗಳು ಮುರಿದ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಜಪಾನ್ ಪ್ರವಾಸಿ ತಾಣ ರೋಲರ್ ಕೋಸ್ಟರ್ ಸೇವೆಯನ್ನು ನಿಲ್ಲಿಸಿದೆ.

    ಜಪಾನ್‍ನ ಯಮನಶಿಯ ಫುಜಿಯೊಶಿಡಾದ ದೋ-ಡೋಡೊನ್ಪಾ ಥೀಮ್ ಪಾರ್ಕಿನಲ್ಲಿದ್ದ ರೋಲರ್ ಕೋಸ್ಟರ್ 1.8 ಸೆಕೆಂಡಿನಲ್ಲಿ 172 ಕಿ.ಮೀ/ಗಂಟೆ ವೇಗ ಪಡೆದುಕೊಳ್ಳುತ್ತಿದ್ದರಿಂದ ವಿಶ್ವದ ಅತಿ ವೇಗದ ರೋಲರ್ ಕೋಸ್ಟರ್ ಎಂಬ ಪಟ್ಟ ಸಿಕ್ಕಿತ್ತು. ಈ ರೋಲರ್ ಕೋಸ್ಟರ್ ನಲ್ಲಿ ಕುಳಿತುಕೊಳ್ಳಲೆಂದೇ ವಿಶ್ವದಿಂದ ಪ್ರವಾಸಿಗರು ಈ ಥೀಮ್ ಪಾರ್ಕ್ ವೀಕ್ಷಣೆಗೆ ಆಗಮಿಸುತ್ತಿದ್ದರು. ಇದನ್ನೂ ಓದಿ: ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ 

    2001ರಲ್ಲಿ ಈ ಸೇವೆ ಆರಂಭಗೊಂಡಿದ್ದು ಈಗ ಮೂಳೆ ಮುರಿತ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಡಿಸೆಂಬರ್ 2020 ರಿಂದ ಇಲ್ಲಿಯವರೆಗೆ 6 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರೋಲರ್ ಕೋಸ್ಟರ್ ಆಟವನ್ನು ಬಂದ್ ಮಾಡಲಾಗಿದೆ. ಇದಕ್ಕೂ ಮೊದಲು 2007ರಲ್ಲಿ ಒಂದು ಪ್ರಕರಣ ವರದಿಯಾಗಿತ್ತು.

    ಈ ಪ್ರಕರಣದ ಬಳಿಕ ಇತ್ತೀಚಿನ ಪ್ರಕರಣಗಳು ಹೆಚ್ಚು ಗಂಭೀರವಾಗಿದ್ದ ಕಾರಣ ಥೀಮ್ ಪಾರ್ಕ್ ಆಡಳಿತ ಮಂಡಳಿ ಈ ಸೇವೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ರೋಲರ್ ಕೋಸ್ಟರ್ ನಲ್ಲಿ  ಯಾವುದೇ ತಾಂತ್ರಿಕ ದೋಷ ಇಲ್ಲದಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಟ್ಟೆಯಲ್ಲಿ ಪೌಡರ್ ಹಾಕಿ ಎಟಿಎಂ ಕಾರ್ಡ್‍ನಿಂದ ಉಜ್ಜಿ ಕೊಕೇನ್ ಸೇವಿಸಿದ್ದ ರಾಗಿಣಿ 

    ರೋಲರ್ ಕೋಸ್ಟರ್ ವಿನ್ಯಾಸಗಳಲ್ಲಿ ಪರಿಣತಿ ಹೊಂದಿರುವ ನಿಹಾನ್ ವಿಶ್ವವಿದ್ಯಾನಿಲಯದ ವಾಸ್ತುಶಿಲ್ಪ ಪ್ರಾಧ್ಯಾಪಕರಾದ ನಯೋಯಾ ಮಿಯಾಸಾಟೊ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರೋಲರ್ ಕೋಸ್ಟರ್ ನಲ್ಲಿ ವೇಗ ಜಾಸ್ತಿ ಇದ್ದು, ಸರಿಯಾಗಿ ಕುಳಿತುಕೊಳ್ಳದ ಕಾರಣ ಮೂಳೆಗಳು ಮುರಿದಿರಬಹುದು. ಹೀಗಾಗಿ ಪಾರ್ಕ್ ಸಿಬ್ಬಂದಿ ವ್ಯಕ್ತಿಗಳು ಸರಿಯಾಗಿ ಕುಳಿತುಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು. ಇದು ಸಿಬ್ಬಂದಿಯ ಜವಾಬ್ದಾರಿ ಎಂದು ಹೇಳಿದ್ದಾರೆ.