Tag: ಥಾವರ್ ಚಂದ್ ಗೆಹ್ಲೊಟ್

  • ರಾಜ್ಯಪಾಲರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವೆ: ಡಿಸಿಎಂ ಟಾಂಗ್

    ರಾಜ್ಯಪಾಲರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವೆ: ಡಿಸಿಎಂ ಟಾಂಗ್

    ಬೆಂಗಳೂರು: ರಾಜ್ಯಪಾಲರಿಗೆ (Thawar Chand Gehlot)  ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಟಾಂಗ್ ನೀಡಿದ್ದಾರೆ.

    ದೆಹಲಿಗೆ ಹೊರಡುವ ಮುನ್ನ ಮಾಧ್ಯಮದ ಮುಂದೆ ಮಾತನಾಡಿದ ಅವರು, ಯಾವ ರೀತಿ ನಮ್ಮ ಗವರ್ನರ್ ಕಚೇರಿ ದುರುಪಯೋಗ ಆಗಿದೆ ಎಂದು ಪ್ರಾಸಿಕ್ಯೂಷನ್ ಆದಮೇಲೆ ಎಲ್ಲವನ್ನೂ ಹೈಕಮಾಂಡ್‌ಗೆ ತಿಳಿಸಬೇಕು. ಹದಿನೈದು ಬಿಲ್‌ಗಳನ್ನು ಗವರ್ನರ್ ವಾಪಸ್ ಕಳುಹಿಸಿದ್ದಾರೆ. ನಾನು ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ಕೇಳಲಿ, ಹೇಳುವುದಿಲ್ಲ ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾಕೆ ಇರಬೇಕು? ಬಿಜೆಪಿ ನಾಯಕರು ಹೇಳಿದ ಕೂಡಲೇ ವಾಪಸ್ಸು ಕಳುಹಿಸಿಬಿಟ್ಟರೆ ಸರೀನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ : ನೇಪಾಳದಲ್ಲಿ ನದಿಗೆ ಉರುಳಿತು 40 ಭಾರತೀಯರಿದ್ದ ಬಸ್ಸು – 14 ಮಂದಿ ಸಾವು

    ಸರ್ಕಾರ ಬೀಳಿಸುವುದಕ್ಕೆ ಯಾರು ಯಾವ ಪ್ರಯತ್ನ ಮಾಡಿದರು ಆಗುವುದಿಲ್ಲ. ನಾವು ಸುಮ್ಮನೆ ಕೂರುವುದಿಲ್ಲ, ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಜಿಂದಾಲ್‌ನಲ್ಲಿ ಕೈಗಾರಿಕೆಗಳು ಬರಬೇಕು. ಕೈಗಾರಿಕೋದ್ಯಮಿಗಳಿಗೆ ಉತ್ತೇಜನ ಕೊಡಬೇಕು. ಪಾಲಿಸಿ ಪ್ರಕಾರ ನಾವು ಮಾಡಿದ್ದೇವೆ. ಹೊಸದಾಗಿ ನಾವು ಏನು ಕೊಟ್ಟಿಲ್ಲ. ಹಳೆಯ ಪದ್ಧತಿ ಪ್ರಕಾರವೇ ಬಿಜೆಪಿಯವರ ರೀತಿಯಲ್ಲಿಯೇ ನಾವು ಮಾಡಿದ್ದೇವೆ ಎಂದರು. ಇದನ್ನೂ ಓದಿ : ನಕಲಿ ಎನ್‍ಸಿಸಿ ಶಿಬಿರದಲ್ಲಿ ಲೈಂಗಿಕ ದೌರ್ಜನ್ಯ ಕೇಸ್ – ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣು

    ಯಾರು ಬೇಕಾದರೂ ದೆಹಲಿಗೆ ಬರಬಹುದು. ಬರುವವರನ್ನು ನಾವು ಬೇಡ ಅನ್ನುವುದಕ್ಕೆ ಹೋಗುವುದಿಲ್ಲ. ನಮಗೆ ಪಾರ್ಟಿ, ಇಲಾಖೆ ಸೇರಿ ಎಲ್ಲಾ ಕೆಲಸವೂ ಇದೆ. ಅದಕ್ಕಾಗಿ ನಾನು ಸಿಎಂ (CM Siddaramaiah) ದೆಹಲಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ : ಅನಿಲ್‌ ಅಂಬಾನಿಗೆ ಸೆಬಿ ಶಾಕ್‌ – ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 5 ವರ್ಷ ಬ್ಯಾನ್‌, 25 ಕೋಟಿ ದಂಡ

  • ನೂತನ ಶಿಕ್ಷಣ ನೀತಿಯಲ್ಲಿ ರಾಷ್ಟ್ರ ಭಾಷೆಯ ಜೊತೆಗೆ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್

    ನೂತನ ಶಿಕ್ಷಣ ನೀತಿಯಲ್ಲಿ ರಾಷ್ಟ್ರ ಭಾಷೆಯ ಜೊತೆಗೆ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್

    ಹುಬ್ಬಳ್ಳಿ: ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ರಾಷ್ಟ್ರದಲ್ಲಿ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ರಾಷ್ಟ್ರ ಭಾಷೆ ಹಿಂದಿ ಜೊತೆಗೆ ಸ್ಥಳೀಯ ಭಾಷೆ ಹಾಗೂ ಇಂಗ್ಲೀಷ್ ಕಲಿಕೆಗೂ ಆದ್ಯತೆಯನ್ನು ನೀಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

    ಹುಬ್ಬಳ್ಳಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯಕ್ಕೆ ಭೇಟಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ ಎಂದರು.

    ಕಾನೂನು ವಿಶ್ವ ವಿದ್ಯಾಲಯದಲ್ಲಿ ಓದಿದವರು ದೇಶದ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಕೆಲಸ ನಿರ್ವಹಸಿ ಹೆಸರುಗಳಿಸಿದ್ದಾರೆ. ನ್ಯಾಯಮೂರ್ತಿಗಳಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ. ಕಾನೂನು ವಿಶ್ವ ವಿದ್ಯಾಲಯದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಸಿದ್ಧವಿದೆ. ವಿಶ್ವ ವಿದ್ಯಾಲಯ ಸುಧಾರಣೆ ಕುರಿತು ಸಿಂಡಿಕೇಟ್ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಇವುಗಳ ಕುರಿತು ಸರ್ಕಾರಕ್ಕೆ ಲಿಖಿತವಾಗಿ ಬರೆದು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಅವರು ಆಶ್ವಾಸನೆ ನೀಡಿದರು.

    ಸಂವಾದದಲ್ಲಿ ಮಾತನಾಡಿದ ವಿದ್ಯಾರ್ಥಿ ಪ್ರೋಭಯ್ಯನ್ ಚಕ್ರಭೋರ್ತಿ, ವಿಶ್ವ ವಿದ್ವಾಯಲಯದಲ್ಲಿನ ಅಣಕು ನ್ಯಾಯಾಲಯ ಕಲ್ಪನೆ ವಿದ್ಯಾರ್ಥಿಗಳಗೆ ಅನುಕೂಲವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಕಾನೂನು ಜ್ಞಾನ ಲಭಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಸಿದ್ಧಿ ನಾಗವೇಕರಿ ನೂತನ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಕಲಿಕೆಯ ಅನುಷ್ಠಾನದ ಕುರಿತು ಸಂವಾದಿಸಿದರು.

    ರಾಜ್ಯಪಾಲರ ಕನ್ನಡ ಕಲಿಕೆ ಪ್ರೀತಿ:
    ಸಂವಾದದ ಆರಂಭದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ನಾನು ಮಧ್ಯಪ್ರದೇಶದವನು. ಹಿಂದಿ ಭಾಷಿಕ. ಇಂಗ್ಲೀಷ್‍ನಲ್ಲಿ ಸಭೆ ಉದ್ದೇಶಿಸಿ ಮಾತನಾಡುವುದು ಕಡಿಮೆ. ಕರ್ನಾಟಕ ಆಗಮಿಸಿದ ಮೇಲೆ ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ಕನ್ನಡ ಭಾಷೆಯ ಕುರಿತಾದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರು ವಿಶ್ವ ವಿದ್ಯಾಲಯದ ಗ್ರಂಥಾಲಯ ಹಾಗೂ ಮುಖ್ಯ ಸಮುಚ್ಚಯ ಕಟ್ಟಡ, ಅಣುಕು ನ್ಯಾಯಾಲಯಗಳನ್ನು ವೀಕ್ಷಿಸಿದರು. ಇದನ್ನೂ ಓದಿ: ಹೊಸ ಬಟ್ಟೆ ಧರಿಸಿ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು!

    ಕಾನೂನು ವಿ.ವಿ.ಉಪಕುಲಪತಿ ಫ್ರೋ.ಪಿ.ಈಶ್ವರ ಭಟ್, ರಿಜಿಸ್ಟಾರ್ ಮಹಮದ್ ಜುಬೇರ್, ಕುಲಸಚಿವೆ ಪ್ರೋ. ರತ್ನ ಭರಮಗೌಡರ್, ನೊಂದಣಿ ಮತ್ತು ಮೌಲ್ಯಮಾಪನ ವಿಭಾಗದ ಪ್ರೋ.ಜಿ.ಬಿ.ಪಾಟೀಲ ಸೇರಿದಂತೆ ಸಿಂಡಿಕೇಟ್ ಸದ್ಯರಾದ ಮಹೇಶ್ ಓಡೆಯರ್, ಗಿರಿಜಾ ಹಿರೇಮಠ್, ಚಂದ್ರಮೋಹನ್ ಕಾಳೆ ಮತ್ತಿತರು ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರವಾಹದ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ- ಪಾತ್ರೆಯಲ್ಲಿ ಕುಳಿತು ಮಂಟಪಕ್ಕೆ ತೆರಳಿದ್ರು!