Tag: ಥಾಣೆ

  • ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ

    ಥಾಣೆ: ಬಾರ್ ಗಲಾಟೆಯಲ್ಲಿ ತನ್ನ ಗೆಳೆಯನನ್ನು ರಕ್ಷಿಸಲು ಹೋಗಿ 26 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ.

    ಥಾಣೆಯ ಮಿರಾ ರಸ್ತೆಯಲ್ಲಿರೋ ಬಾರ್ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು 26 ವರ್ಷದ ನೊವೇಶ್ ಶೆಟ್ಟಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: ದಾಹಿಸರ್ ಪೂರ್ವದ ಅನುಪಮ್ ಬಿಲ್ಡಿಂಗ್ ನಿವಾಸಿಯಾದ ನೊವೇಶ್ ಗುರುವಾರ ರಾತ್ರಿ ತನ್ನ ಗೆಳೆಯರಾದ ನಿಖಿಲ್ ಹಾಗೂ ನೀಲೆಶ್‍ರೊಂದಿಗೆ ಮೀರಾ ರೋಡ್‍ನ ಬಾರ್‍ಗೆ ಬಂದು ಮತ್ತೊಬ್ಬ ಗೆಳೆಯನಿಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಏನೋ ಜಗಳವಾಗ್ತಿರೋದು ಕೇಳಿಸಿತ್ತು. ಆಗ ಈ ಮೂವರು ಅಲ್ಲಿಗೆ ಹೋಗಿ ನೋಡಿದಾಗ ಅವರ ಗೆಳೆಯ ಕಾರ್ತಿಕ್, ಆರೋಪಿ ಸುಜಿತ್ ಮಿಶ್ರಾ ಹಾಗೂ ಮತ್ತಿಬ್ಬರೊಂದಿಗೆ ಜೋರಾಗಿ ವಾಗ್ವಾದ ನಡೆಸುತ್ತಿದ್ದ.

    ಈ ನಡುವೆ ನೊವೇಶ್ ಶೆಟ್ಟಿ ಗೆಳೆಯನ ಜಗಳ ಬಿಡಿಸಲೆಂದು ಮಧ್ಯೆ ಹೋಗಿದ್ದ. ಆಗ ಸುಜಿತ್ ನೊವೇಶ್‍ನನ್ನು ತಳ್ಳಿದ್ದಾನೆ. ಇದರಿಂದ ಸಿಟ್ಟುಗೊಂಡ ನೊವೇಶ್‍ನ ಗೆಳೆಯ ನಿಖಿಲ್ ಸುಜಿತ್ ಗೆ ಹೊಡೆದಿದ್ದಾನೆ.

    ನಂತರ ಜಗಳ ತಾರಕಕ್ಕೇರಿದ್ದು, ಕಾರ್ತಿಕ್‍ನನ್ನು ಸುಜಿತ್ ನಿಂದಿಸಿದ್ದಾನೆ. ಬಳಿಕ ಕಾರ್ತಿಕ್ ಹತ್ತಿರದ ಪೆಟ್ರೋಲ್ ಬಂಕ್‍ನ ಕಿಟಕಿ ಗಾಜಿನ ಮೇಲೆ ಬಿದ್ದಿದ್ದಾನೆ. ಈ ವೇಳೆ ಸುಜಿತ್ ಗಾಜಿನ ಪೀಸ್ ತೆಗೆದುಕೊಂಡು ನಿಖಿಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹಲ್ಲೆಯನ್ನು ತಡೆಯಲು ನೊವೇಶ್ ಅಡ್ಡ ಬಂದಿದ್ದು, ಗಾಜಿನ ಪೀಸ್ ಆತನ ಕುತ್ತಿಗೆಗೆ ಇರಿದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನನಪ್ಪಿದ್ದಾನೆ.

    ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ನೊವೇಶ್ ಮೂರು ದಿನಗಳ ಹಿಂದೆಯಷ್ಟೇ ಮುಂಬೈಗೆ ತೆರಳಿದ್ದ ಅಂತ ಪೊಲೀಸ್ ಮೂಲಗಳು ತಿಳಿಸಿವೆ.

    ಸದ್ಯ ನೊವೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದೇವೆ ಅಂತ ಕಾಶಿಮಿರಾ ಪೊಲೀಸ್ ಠಾಣೆಯ ಎಸ್‍ಐ ಸುರೇಶ್ ಖೆಡೆಕರ್ ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಿಖಿಲ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

  • ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

    ಥಾಣೆ: ಬಾಲಕಿಯೊಬ್ಬಳ ಎಡಗೈ ಲಿಫ್ಟ್ ಗೆ ಸಿಲುಕಿ ತುಂಡಾಗಿದ್ದರೂ ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದ ಘಟನೆ ಥಾಣೆಯಲ್ಲಿ ನಡೆದಿದೆ.

    ಮಂಗಳವಾರ ಸಂಜೆ 8 ವರ್ಷದ ಬಾಲಕಿ ಅರ್ಚನಾಳ ತಾಯಿ ಮನೆ ಬಾಗಿಲು ತೆಗೆದು ನೋಡಿದಾಗ ಮಗಳ ಮೈಮೇಲೆಲ್ಲಾ ರಕ್ತ ಇದ್ದಿದ್ದು ಕಂಡು ಶಾಕ್ ಆಗಿದ್ರು. ಅಲ್ಲದೆ ಆಕೆಯ ಎಡಗೈ ಕೂಡ ಕಾಣಿಸುತ್ತಿರಲಿಲ್ಲ. ಅರ್ಚನಾ ಅಳುತ್ತಿರಲಿಲ್ಲ. ಬದಲಿಗೆ ಶಾಂತವಾಗಿಯೇ ನಡೆದಿದ್ದನ್ನು ಅಮ್ಮನಿಗೆ ವಿವರಿಸಿದ್ದಳು. ಅರ್ಚನಾ ಟ್ಯೂಷನ್ ಕ್ಲಾಸ್‍ಗೆ ಹೋಗುವ ಥಾಣೆಯ ಕಾಸರವಡಾವ್ಲಿಯ ಕಟ್ಟಡದಲ್ಲಿ ಲಿಫ್ಟ್ ನ ಬಾಗಿಲಿಗೆ ಸಿಲುಕಿ ಕೈ ಕಟ್ ಆಗಿತ್ತು.

    ಈ ವಿಷಯವನ್ನ ತಾಯಿಗೆ ತಿಳಿಸಲು ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ವೈದ್ಯರು ಕಟ್ ಆದ ಕೈ ಎಲ್ಲಿ ಎಂದು ಕೇಳಿದ ನಂತರವಷ್ಟೇ ಪೋಷಕರು ಕಟ್ಟಡದ ಲಿಫ್ಟ್ ಬಳಿ ಹುಡುಕಲು ಹೋಗಿದ್ದಾರೆ. ದುರಾದೃಷ್ಟವೆಂಬಂತೆ ಅರ್ಚನಾಳ ನರಗಳು ಹಾಗೂ ರಕ್ತನಾಳಗಳಿಗೆ ಗಂಭೀರ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಕೈ ಮರುಜೋಡಣೆ ಮಾಡಲು ಅಸಾಧ್ಯವಾಗಿದೆ. ಅರ್ಚನಾ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿದ್ದು, ಥಾಣೆಯ ಆದರ್ಶ ವಿದ್ಯಾ ಮಂದಿರದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

    ಲಿಫ್ಟ್ ನಲ್ಲಿ ಶೂ ಸಿಕ್ಕಿಹಾಕೊಂಡಿತ್ತು: ಅರ್ಚನಾ ಇತ್ತೀಚೆಗಷ್ಟೇ ಟ್ಯೂಷನ್‍ಗೆ ಸೇರಿಕೊಂಡಿದ್ದಳು. ಲಿಫ್ಟ್ ನ ಸಂದಿಯಲ್ಲಿ ಆಕೆಯ ಪಾದರಕ್ಷೆ ಸಿಲುಕಿಕೊಂಡಿದ್ದು, ಅದನ್ನ ಬಿಡಿಸಿಕೊಳ್ಳಲು ಯತ್ನಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ಎಡಗೈ ಸಿಲುಕಿಕೊಳ್ತು ಎಂದು ನಮಗೆ ಹೇಳಿದಳು ಅಂತ ಅರ್ಚನಾಳ ಸಂಬಂಧಿ ನವಿತ್ ಹೇಳಿದ್ದಾರೆ.

    ಇಷ್ಟಾದರೂ ಅರ್ಚನಾ ಗಾಬರಿಯಾಗದೇ, ಶಾಂತ ರೀತಿಯಲ್ಲೇ ಘಟನೆಯನ್ನ ವಿವರಿಸಿದ್ದು ನೋಡಿ ಕುಟುಂಬಕ್ಕೆ ಶಾಕ್ ಆಗಿದೆ. ಗೋಧ್‍ಬುಂದರ್ ರಸ್ತೆಯಿಂದ ಕೆಇಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಆಕೆ ಎಚ್ಚರವಾಗೇ ಇದ್ದಳು. ನಮ್ಮೊಂದಿಗೆ ಮಾತಾಡುತ್ತಿದ್ದಳು. ವೈದ್ಯರು ಕೇಳಿದ ನಂತರವಷ್ಟೇ ನಮಗೆ ಆಕೆಯ ಕಟ್ ಆಗಿದ್ದ ಎಡಗೈ ನಮ್ಮ ಬಳಿ ಇಲ್ಲದಿರುವುದು ಗೊತ್ತಾಯಿತು. ಥಾಣೆಯ ನರ್ಸಿಂಗ್ ಹೋಮ್‍ವೊಂದರಲ್ಲಿ ಡ್ರೆಸ್ಸಿಂಗ್ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಹೇಳಿದ್ರು ಎಂದು ನವಿತ್ ಹೇಳಿದ್ದಾರೆ.

    ಅರ್ಚನಾಳ ಎಡಗೈಯಲ್ಲಿ ಮೊಣಕೈಯಿಂದ ಮೇಲ್ಭಾಗಕ್ಕೆ ಆಂಪ್ಯುಟೇಷನ್ ಚಿಕಿತ್ಸೆ ನೀಡಲಾಗಿದೆ. ಈಗ ಆಕೆಯ ಸ್ಥಿತಿ ಸಹಜವಾಗಿದೆ. ಆರ್ಥೋಪೆಡಿಕ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವೈದ್ಯರಾದ ಡಾ. ಅವಿನಾಶ್ ಸುಪೆ ಹೇಳಿದ್ದಾರೆ.

    ಕಾಸರವಡಾವ್ಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಡಿಎಸ್ ಧೋಲೆ ಈ ಬಗ್ಗೆ ಮಾತನಾಡಿ, ದೂರು ದಾಖಲಿಸಲು ಬಯಸುತ್ತೀರಾ ಎಂದು ನಾವು ಅವರ ಕುಟುಂಬಕ್ಕೆ ಕೇಳಿದೆವು. ಆದ್ರೆ ಅವರು ನಿರಾಕರಿಸಿದ್ರು. ಇದು ಬಾಲಕಿಯ ತಪ್ಪೇ ಇರಬಹುದು ಎಂದು ಹೇಳಿದ್ರು. ಆದ್ರೆ ನಾವು ಬಾಲಕಿಯ ಹೇಳಿಕೆ ಪಡೆಯಲು ನಮ್ಮ ಅಧಿಕಾರಿಗಳನ್ನ ಆಸ್ಪತ್ರೆಗೆ ಕಳಿಸಿದ್ದೇವೆ ಅಂದ್ರು.

    ಕೈ ದಾನ: ಈ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ಬಾಲಕಿಯ ಮುರಿದ ಕೈಯನ್ನ ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ. ಬಾಲಕಿಯ ಕೈನ ರಕ್ತನಾಳಗಳಿಗೆ ತೀವ್ರವಾದ ಗಾಯವಾಗಿದ್ರಿಂದ ಅದನ್ನು ಮರುಜೋಡಣೆ ಮಾಡಲು ಸಾಧ್ಯವಿಲ್ಲ. ಆದ್ರೆ ಕಟ್ ಆಗಿರೋ ಕೈಯನ್ನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಬಹುದು. ಮೂಳೆ ಮತ್ತು ಸ್ನಾಯುಗಳು ಉಪಯೋಗಕ್ಕೆ ಬರುತ್ತದೆ ಎಂದು ವೈದ್ಯರು ತಿಳಿಸಿದ್ದಾಗಿ ಅರ್ಚನಾ ಸಂಬಂಧಿ ಹೇಳಿದ್ದಾರೆ. ಶೀಘ್ರದಲ್ಲೇ ನಾವು ಕೈ ದಾನದ ಎಲ್ಲಾ ಪ್ರಕ್ರಿಯೆ ಮುಗಿಸಲಿದ್ದೇವೆ ಎಂದಿದ್ದಾರೆ.

  • ಪತಿಯ ಸ್ನೇಹಿತರಿಂದಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್!

    ಪತಿಯ ಸ್ನೇಹಿತರಿಂದಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್!

    ಥಾಣೆ: ಪತಿಯ ಇಬ್ಬರು ಸ್ನೇಹಿತರು ಸೇರಿ ಗ್ಯಾಂಗ್‍ರೇಪ್ ಮಾಡಿರುವ ಬಗ್ಗೆ 36 ವರ್ಷದ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ.

    ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ಪತಿ ಜೈಲಿನಲ್ಲಿದ್ದು, ಈ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿಗಳು ಸಂತ್ರಸ್ತೆಗೆ ನಿನ್ನ ಗಂಡನನ್ನು ಜೈಲಿನಿಂದ ಬಿಡಿಸಲು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿ ಅತ್ಯಾಚಾರ ಎಸಗಿದ್ದಾರೆ ಎಂದು ತುಲಿಂಜ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    sಶುಕ್ರವಾರ ಜಿಲ್ಲೆಯ ನಲ್ಲ ಸೋಪಾರ ಪ್ರದೇಶದ ಚಾವಲ್‍ನಲ್ಲಿರುವ ಸಂತ್ರಸ್ತೆಯ ಮನೆಗೆ ಬಂದ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

    ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಶೋಧ ಕಾಐ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.

  • ಮೊದಲ ಮಗುವಿನ ಹೆರಿಗೆ ಆಟೋದಲ್ಲಿ, 2ನೇ ಮಗುವಿಗೆ ರೈಲ್ವೇ ಸ್ಟೇಷನ್‍ನಲ್ಲಿ ಜನ್ಮ ನೀಡಿದ ಮಹಿಳೆ

    ಮೊದಲ ಮಗುವಿನ ಹೆರಿಗೆ ಆಟೋದಲ್ಲಿ, 2ನೇ ಮಗುವಿಗೆ ರೈಲ್ವೇ ಸ್ಟೇಷನ್‍ನಲ್ಲಿ ಜನ್ಮ ನೀಡಿದ ಮಹಿಳೆ

    ಥಾಣೆ: ರೈಲ್ವೇ ಸ್ಟೇಷನ್ ನಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಥಾಣೆಯಲ್ಲಿ ನಡೆದಿದೆ.

    ಮೀನಾಕ್ಷಿ ಎಂಬವರು ಥಾಣೆ ರೈಲ್ವೆ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದು, ರೈಲ್ವೇ ಭದ್ರತಾ ಪಡೆಯ ಮಹಿಳಾ ಪೇದೆಯೊಬ್ಬರು ಇವರಿಗೆ ಸಹಾಯ ಮಾಡಿದ್ದಾರೆ.

    ನಿಲ್ದಾಣದಲ್ಲಿ ಸ್ಕ್ಯಾನಿಂಗ್ ಮಷೀನ್ ನೋಡಿಕೊಳ್ಳೋ ಮಹಿಳಾ ಪೇದೆ ಶೋಭಾ ಮೊಟೆ, ಮೀನಾಕ್ಷಿ ಎಂಬವರಿಗೆ ಸಹಾಯ ಮಾಡಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ತಾಯಿ ಮಗು ಇಬ್ಬರನ್ನೂ ಥಾಣೆಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

    ಏನಿದು ಘಟನೆ?: ಶೋಭಾ ಮೋಟೆ ಅವರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಫ್ಲಾಟ್‍ಫಾರಂನಲ್ಲಿ ಮಹಿಳೆಯೊಬ್ಬರು ನರಳಾಡುತ್ತಿರುವುದು ಕೇಳಿತ್ತು. ಕೂಡಲೇ ಶೋಭಾ ಸ್ಥಳಕ್ಕೆ ತೆರಳಿದಾಗ ಗರ್ಭಿಣಿಯೊಬ್ಬರು ಪ್ರಸವ ವೇದನೆಯಿಂದ ನರಳಾಡುತ್ತಿದ್ದರು. ಇದನ್ನು ಕಂಡ ಶೋಭಾ ಅವರಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಒಂದು ಕಂಬಳಿ ತರಿಸಿ ಮಹಿಳೆಗೆ ಸಹಾಯ ಮಾಡಿ ಹೆರಿಗೆ ಮಾಡಿಸಿದ್ದಾರೆ.

    ಗರ್ಭಿಣಿಯಾಗಿದ್ದ 24 ವರ್ಷದ ಮೀನಾಕ್ಷಿ ಸಂದೇಶ್ ಜಾಧವ್ ಬದ್ಲಾಪುರ್ ನಿವಾಸಿಯಾಗಿದ್ದು ಅವರ ಹೆಸರನ್ನು ಪತಿ ಸಂದೇಶ್ ಘಾಟ್ಕೋಪರ್ ಮೂಲದ ರಾಜವಾಡಿ ಆಸ್ಪತ್ರೆಯಲ್ಲಿ ನೊಂದಾಯಿಸಿದ್ದರು. ಮೀನಾಕ್ಷಿ ಅವರ ಹೆರಿಗೆಗೆ ಇನ್ನೂ 25 ದಿನಗಳ ಸಮಯವಿತ್ತು.

    ನನ್ನ ಸಹೋದರಿಯೊಬ್ಬಳು ಘೋಟ್ಕೋಪರ್ ನಲ್ಲಿ ನೆಲೆಸಿದ್ದು, ನಾವು ಕೂಡ ಅಲ್ಲಿಗೆ ಹೋಗಲು ನಿರ್ಧರಿಸಿದ್ದೆವು. ಆದ್ರೆ ಕಳೆದ ಸಂಜೆ ಮೀನಾಕ್ಷಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯನ್ನು ಥಾಣೆಗೆ ಕರೆದುಕೊಂಡು ಬರಲು ತಾಯಿಗೆ ಹೇಳಿದ್ದೆ. ಅಲ್ಲಿಂದ ಕಾರ್‍ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದೆ ಅಂತಾ ಸಂದೇಶ್ ಹೇಳಿದ್ದಾರೆ. ಮೀನಾಕ್ಷಿ ಅವರಿಗೆ ಈ ಮಗು ಎರಡನೆಯದಾಗಿದ್ದು, ಮೊದಲ ಮಗುವಿನ ಹೆರಿಗೆ ಆಟೋ ರಿಕ್ಷಾದಲ್ಲಿ ಆಗಿತ್ತು ಅಂತಾ ಸಂದೇಶ್ ಹೇಳಿದ್ದಾರೆ.

  • ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ಪ್ರೇಮಿ

    ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ಪ್ರೇಮಿ

    ಥಾಣೆ: ಪ್ರೇಮ ವೈಫಲ್ಯದಿಂದ ಬೇಸತ್ತು ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ಆಕೆಯ ಕಣ್ಣೆದುರೇ ಆತ್ಮಹತ್ಯೆಗೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಹನಿ ಅಸ್ವಾನಿ (26) ಆತ್ಮಹತ್ಯೆಗೆ ಶರಣಾದ ಯುವಕ. ಮೇ 21ರಂದು ಉಲ್ಲಾಸನಗರದಲ್ಲಿರುವ ತಮ್ಮ ನಿವಾಸದಲ್ಲಿ ಹನಿ ಅಸ್ವಾನಿ ನೇಣಿಗೆ ಶರಣಾಗಿದ್ದು, ಈಗ ಆತನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏನಿದು ಲವ್ ಸ್ಟೋರಿ?
    ಅಸ್ವಾನಿ ತನ್ನ ಕಾಲೇಜಿನ ಯುವತಿಯನ್ನು 6 ವರ್ಷದಿಂದ ಪ್ರೀತಿಮಾಡುತ್ತಿದ್ದ. ಯುವತಿ ಕೂಡ ಈತನನ್ನು ತುಂಬಾ ಪ್ರೀತಿಸುತ್ತಿದ್ದಳು. ಏನೋ ಒಂದು ಕಾರಣಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಲವ್ ಬ್ರೇಕಪ್ ಆಗಿತ್ತು.

    ಬ್ರೇಕಪ್ ಆಗಿದ್ದರೂ ಅಸ್ವಾನಿ ಪ್ರೀತಿ ಮಾಡಿದ ತನ್ನ ಹಳೇ ಪ್ರೇಯಸಿಯನ್ನು ಮರೆತಿರಲಿಲ್ಲ. ಮೇ 21 ರಂದು ಹನಿ ಅಸ್ವಾನಿ ಮತ್ತೆ ತನ್ನ ಮಾಜಿ ಪ್ರೇಯಸಿಯನ್ನು ಭೇಟಿಯಾಗಿದ್ದ. ಆ ವೇಳೆ ಇಬ್ಬರ ಮಧ್ಯೆ ಸಣ್ಣ ಜಗಳವಾಗಿತ್ತು. ಆತ ಇದರಿಂದ ನೊಂದು ತನ್ನ ಮನೆಗೆ ಬಂದು ತನ್ನ ಮಾಜಿ ಪ್ರೇಯಸಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡುತ್ತಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ವಿಡಿಯೋ ಈಗ ಸಿಕ್ಕಿತು:
    ಹನಿ ನೇಣಿಗೆ ಶರಣಾಗುತ್ತಿರುವ ವಿಡಿಯೋ ಆತನ ಪೋಷಕರಿಗೆ ಕೆಲ ದಿನಗಳ ಹಿಂದೆ ಸಿಕ್ಕಿದೆ. ಈ ವಿಡಿಯೋವನ್ನು ಪೊಲೀಸರಿಗೆ ಜೂನ್ 18ರಂದು ತೋರಿಸಿ ದೂರು ನೀಡಿದ್ದಾರೆ. ಪೊಲೀಸರು ಹನಿ ಅಸ್ವಾನಿಯ ಮಾಜಿ ಪ್ರೇಯಸಿ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರೇರಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.