Tag: ಥಾಣೆ

  • ಮೊಬೈಲ್ ಆಪ್ ಶೋಕಿಗೆ ಬಿದ್ದವ ಮುಂಬೈನಿಂದ ಗೋವಾಗೆ ಬಂದ!

    ಮೊಬೈಲ್ ಆಪ್ ಶೋಕಿಗೆ ಬಿದ್ದವ ಮುಂಬೈನಿಂದ ಗೋವಾಗೆ ಬಂದ!

    ಥಾಣೆ: ಹದಿಹರೆಯದ ಮಕ್ಕಳು ಹಲವಾರು ಕಾರಣಗಳಿಗೆ ನೊಂದು ಮನೆ ಬಿಟ್ಟು ಓಡಿ ಹೋಗುವ ಘಟನೆಗಳನ್ನು ನಾವು ಆಗಾಗ ನೋಡಿರುತ್ತೇವೆ. ಇಲ್ಲೊಬ್ಬ 13 ವರ್ಷದ ಹುಡುಗ ಮೊಬೈಲ್ ಆ್ಯಪ್ ಒಂದರ ಶೋಕಿಗೆ ಬಿದ್ದು, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾನೆ.

    POLICE JEEP

    ಈ ವಿಚಾರ ತಿಳಿದುಕೊಂಡ ಪೋಷಕರು ಪೊಲೀಸರಿಗೆ ಮಗನನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುಂಬೈ ಪೊಲೀಸರು ಬಾಲಕನನ್ನು ಗೋವಾದಲ್ಲಿ ಪತ್ತೆ ಹಚ್ಚಿ ಬಳಿಕ ಆತನನ್ನು ಪೋಷಕರ ಜೊತೆ ಸೇರಿಸಿದ್ದಾರೆ.

    ಏನಾಗಿತ್ತು?: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರ್ ಎಂಬಲ್ಲಿನ ಹುಡುಗ ಇದೇ ಅಕ್ಟೋಬರ್ 21ರಂದು ಮನೆಯಿಂದ ಹೊರಟಿದ್ದ. ಈ ವೇಳೆ ಪೋಷಕರಿಗೆ ನಾನು ಒಂದು ವರ್ಷ ದೂರ ಇರುವುದಾಗಿ ತಿಳಿಸಿದ್ದ. ಆದರೆ ಈ ವೇಳೆ ಪೋಷಕರಿಗೆ ಯಾವುದೇ ರೀತಿಯ ಅನುಮಾನ ಬಾರದಂತೆ ನಡೆದುಕೊಂಡಿದ್ದ ಎಂದು ಬದ್ಲಾಪುರ ಈಸ್ಟ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಮೋರೆ ಮಾಹಿತಿ ನೀಡಿದ್ದಾರೆ.

    ಬಾಲಕನ ಪೋಷಕರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಬಾಲಕನ ಗೆಳೆಯರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಬಾಲಕ ಡಿಸ್ಕಾರ್ಡ್ ಎಂಬ ಆ್ಯಪ್‍ನಲ್ಲಿ ಸಕ್ರಿಯನಾಗಿದ್ದ ವಿಚಾರ ಬಯಲಾಗಿದೆ. ಗ್ರೂಪ್ ಚ್ಯಾಟ್‍ನಲ್ಲಿ ಕೆಲವರು ಜೀವನದಲ್ಲಿ ಸಾಧನೆ ಮಾಡಬೇಕು, ತಮ್ಮನ್ನು ತಾವು ಸಾಬೀತು ಪಡಿಸಬೇಕು ಎಂಬ ಕಾರಣಕ್ಕೆ ಮನೆ ಬಿಟ್ಟು ದೂರ ಹೋಗಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಇದನ್ನೂ ಓದಿ: ಜಿಮ್ ಮಾಡುವ ವೇಳೆ ಕೈ ಬೆರಳು ಮುರಿದುಕೊಂಡ Junior NTR

    ಈ ಚ್ಯಾಟ್‍ಗಳಿಂದ ಪ್ರಭಾವಿತಾದ ಹುಡುಗ ಓಡಿ ಹೋಗಿದ್ದ. ಆತ ಚ್ಯಾಟಿಂಗ್ ಮಾಡಲು ಬಳಸಿದ್ದ ಮೊಬೈಲ್ ಫೋನ್‍ನ ಐಪಿ ಅಡ್ರೆಸ್ ಮೂಲಕ ಆತ ಗೋವಾದಲ್ಲಿದ್ದಾನೆ ಎಂದು ಸೈಬರ್ ಸೆಲ್ ಪೊಲೀಸರು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಗೋವಾದ ಕಾಲಂಗೂಟ್ ಎಂಬಲ್ಲಿದ್ದ ಆತನನ್ನು ಮತ್ತೆ ಪೋಷಕರ ಜೊತೆ ಸೇರಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

  • 33 ಜನರಿಂದ 9 ತಿಂಗಳ ಕಾಲ 15ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    33 ಜನರಿಂದ 9 ತಿಂಗಳ ಕಾಲ 15ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ

    – ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರು

    ಮುಂಬೈ: ಇಬ್ಬರು ಅಪ್ರಾಪ್ತರು ಸೇರಿ 30ಕ್ಕೂ ಹೆಚ್ಚು ಜನ 9 ತಿಂಗಳ ಕಾಲ 15 ವರ್ಷದ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆಯ ಡೊಂಬಿವ್ಲಿಯಲ್ಲಿ ನಡೆದಿದೆ.

    ಪೊಲೀಸರು ಇದೀಗ ಇಬ್ಬರು ಅಪ್ರಾಪ್ತರು ಸೇರಿ 28 ಆರೋಪಿಗಳನ್ನು ಬಂಧಿಸಿದ್ದು, 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಭಯಾನಕ ಪ್ರಕರಣವನ್ನು ಭೇದಿಸಲು ಎಸ್‍ಐಟಿ ತಂಡವನ್ನು ರಚಿಸಲಾಗಿದೆ. ಸಂತ್ರಸ್ತೆ ಒಟ್ಟು 30 ಜನರ ಹೆಸರನ್ನು ಹೇಳಿದ್ದು, ಅದರಲ್ಲಿ 28 ಜನರನ್ನು ಈಗಾಗಲೇ ಥಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದ್ದ ಕಾರಣ ಬಾಲಕಿಯನ್ನು ಪೊಲೀಸರು ಮನೆಗೆ ಕಳುಹಿಸಿದ್ದಾರೆ.

    ಜನವರಿಯಿಂದ ನಿರಂತರ ಅತ್ಯಾಚಾರ
    ಬಾಲಕಿಯ ಸ್ನೇಹಿತ ಜನವರಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ವೀಡಿಯೋ ರೆಕಾರ್ಡ್ ಮಾಡಿದ್ದು, ಇಲ್ಲಿಂದ ಪ್ರಕರಣ ಶುರುವಾಗಿದೆ. ವೀಡಿಯೋ ರೆಕಾರ್ಡ್ ಮಾಡಿಕೊಂಡ ಬಳಿಕ ಆಕೆಯ ಸ್ನೇಹಿತ ಬಾಲಕಿಗೆ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ವೀಡಿಯೋವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು, ಅವರೂ ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಬಳಿಕ ಆರೋಪಿಗಳ ಗುಂಪು ಡೊಂಬಿವ್ಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದೆ. ಇದನ್ನೂ ಓದಿ: ಸ್ನಾನ ಮಾಡಲ್ಲವೆಂದು ಪತಿ ತಲಾಖ್ ನೀಡಿದ್ದಕ್ಕೆ ಠಾಣೆ ಮೆಟ್ಟಿಲೇರಿದ ಪತ್ನಿ!

    ಬಾಲಕಿಯ ಸ್ನೇಹಿತ ಜನವರಿಯಲ್ಲಿ ಅತ್ಯಾಚಾರ ಎಸಗಿದ ಬಳಿಕ ಇದು ಆರಂಭವಾಗಿದೆ. ವೀಡಿಯೋ ರೆಕಾರ್ಡ್ ಮಾಡಿಕೊಂಡು ಬಾಲಕಿಯನ್ನು ಬ್ಲ್ಯಾಕ್‍ಮೇಲ್ ಮಾಡಲು ಆರಂಭಿಸಿದ್ದಾನೆ. ಬಳಿಕ ಆತನ ಸ್ನೇಹಿತರೆಲ್ಲ ಸೇರಿಕೊಂಡು ವಿವಿಧ ಸ್ಥಳಗಳಲ್ಲಿ ಕನಿಷ್ಟ ನಾಲ್ಕೈದು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಡೊಂಬಿವ್ಲಿ, ಬದ್ಲಾಪುರ, ಮುರ್ಬಾದ್ ಹಾಗೂ ರಬಾಲೆಗಳಲ್ಲಿ ಕೃತ್ಯ ಎಸಗಿದ್ದಾರೆ ಎಂದು ಪೂರ್ವ ವಲಯದ ಎಸಿಪಿ ದತ್ತಾತ್ರೇಯ ಕರಾಳೆ ವಿವರಿಸಿದ್ದಾರೆ. ಇದನ್ನೂ ಓದಿ:  ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

    ಸಂತ್ರಸ್ತೆ ಬುಧವಾರ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ದೂರು ನೀಡಿ ಎರಡು ದಿನ ಕಳೆದಿದೆ. ಈಗಾಗಲೇ 28 ಜನರನ್ನು ಬಂಧಿಸಿದ್ದೇವೆ. ಪ್ರಕರಣದಲ್ಲಿ ಒಟ್ಟು 33 ಜನ ಆರೋಪಿಗಳ ಹೆಸರು ಕೇಳಿ ಬಂದಿದೆ. ಬಂಧಿತರಲ್ಲಿ ಇಬ್ಬರು 17 ವರ್ಷದವರಾಗಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಬಾಲಕಿ ಮೇಲೆ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಲಾಗಿದೆ. ಎಲ್ಲ ಆರೋಪಿಗಳೂ ಸಂತ್ರಸ್ತೆಗೆ ಪರಿಚಿತರು, ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಾದವರು. ವಾಟ್ಸಪ್ ಗ್ರೂಪ್ ಹಾಗೂ ವೀಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ. ಯಾವುದೇ ಆರೋಪಿಗೆ ರಾಜಕೀಯ ವ್ಯಕ್ತಿಗಳ ಸಂಬಂಧ ಇಲ್ಲ ಎಂದು ತನಿಖೆ ನಿರ್ವಹಿಸುತ್ತಿರುವ ಎಸಿಪಿ ಸೋನಾಲಿ ಧೋಲ್ ಮಾಹಿತಿ ನೀಡಿದ್ದಾರೆ.

  • ವರುಣಾರ್ಭಟಕ್ಕೆ ಮೃತಪಟ್ಟ 138 ಮಂದಿಯ ಕುಟುಂಬಕ್ಕೆ 2 ಲಕ್ಷ ಪರಿಹಾರ

    ವರುಣಾರ್ಭಟಕ್ಕೆ ಮೃತಪಟ್ಟ 138 ಮಂದಿಯ ಕುಟುಂಬಕ್ಕೆ 2 ಲಕ್ಷ ಪರಿಹಾರ

    – ಗಾಯಗೊಂಡವರಿಗೆ 50 ಸಾವಿರ ರೂ.

    ಮುಂಬೈ: ಭಾರೀ ಮಳೆಯಿಂದಾಗಿ 138 ಮಂದಿ ಸಾವನ್ನಪ್ಪಿದ್ದು, 90 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಕಳೆದೊಂದು ವಾರದಿಂದ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಥಾಣೆ, ಪುಣೆ, ರಾಯಘಡ ಮುಂತಾದ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಹೆಚ್ಚಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮಳೆ ಮತ್ತು ಭೂಕುಸಿತದಿಂದ ಇದುವರೆಗೂ 138 ಜನರು ಸಾವನ್ನಪ್ಪಿದ್ದಾರೆ. ರಾಯಘಡ ಜಿಲ್ಲೆಯೊಂದರಲ್ಲೇ ಭೂಕುಸಿತದಿಂದ 36 ಜನರು ಸಾವನ್ನಪ್ಪಿದ್ದಾರೆ. ಮುಂಬೈನ ಗೋವಂಡಿ ಪ್ರದೇಶದಲ್ಲಿ ಕಟ್ಟಡ ಕುಸಿದಿದ್ದು ಇದರಲ್ಲಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು 7 ಜನರು ಗಾಯಗೊಂಡಿದ್ದಾರೆ. ಸತಾರ ಜಿಲ್ಲೆಯಲ್ಲಿ ಮಳೆಯಿಂದ 27 ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಮಳೆಯಲ್ಲಿ ಸಿಲುಕಿದವರನ್ನು ರಕ್ಷಿಸಲು 9ಎನ್​ಡಿಆರ್​ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕೊಂಕಣ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

     

    ಮಳೆಗೆ ತತ್ತರಿಸಿರುವ ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಫೋನ್ ಮಾಡಿರುವ ರಾಷ್ಟ್ರಪತಿ ಕೋವಿಂದ್ ಮಹಾರಾಷ್ಟ್ರದ ರಕ್ಷಣಾ ಕಾರ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ:  ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

    ಮಹಾರಾಷ್ಟ್ರದ ರಾಯಘಡದ ಭೂಕುಸಿತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚುವರಿಯಾಗಿ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿಗಳ ಕಚೇರಿ ಘೋಷಿಸಿದೆ. ಭೂಕುಸಿತದಲ್ಲಿ ಗಾಯಗೊಂಡಿರುವವರಿಗೆ 50 ಸಾವಿರ ರೂ. ನೀಡುವುದಾಗಿ ಘೋಷಿಸಲಾಗಿದೆ.

  • ದಿನಸಿ ವಸ್ತುಗಳನ್ನು ಖರೀದಿಸಿ ಬರ್ತಿದ್ದ ಬಾಲಕಿ ಮೇಲೆ ಅಪ್ರಾಪ್ತರಿಂದ ರೇಪ್

    ದಿನಸಿ ವಸ್ತುಗಳನ್ನು ಖರೀದಿಸಿ ಬರ್ತಿದ್ದ ಬಾಲಕಿ ಮೇಲೆ ಅಪ್ರಾಪ್ತರಿಂದ ರೇಪ್

    ಮುಂಬೈ: ದಿನಸಿ ವಸ್ತುಗಳನ್ನು ಖರೀದಿಸಿ ಮನೆಗೆ ವಾಪಸ್ ಬರುತ್ತಿದ್ದ ಬಾಲಕಿ ಮೇಲೆ ಅಪ್ರಾಪ್ತರು ಅತ್ಯಾಚಾರ ಎಸಗಿದ್ದಾರೆ. ಈ ವಿಚಾರವನ್ನು ಹೊರಗೆ ಹೇಳಿದರೆ ನಿನ್ನ ತಂದೆಯನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಿದ ನಾಲ್ವರು ಅಪ್ರಾಪ್ತ ವಯಸ್ಸಿನ ಬಾಲಕರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಜುಲೈ 2020ರಂದು 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಈ ಬಗ್ಗೆ ಯಾರಿಗಾದರೂ ಹೇಳಿದರೆ ಬಾಲಕಿಯ ತಂದೆಯನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತ ವಯಸ್ಸಿನ ಬಾಲಕರು ಎಂದು ಗಣೇಶಪುರಿ ಪೊಲೀಸರು ತಿಳಿಸಿದ್ದಾರೆ.

    ಅಪ್ರಾಪ್ತ ಬಾಲಕಿ ಮನೆಗೆ ಕೆಲವು ದಿನಸಿ ವಸ್ತುಗಳನ್ನು ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿಗಳಲ್ಲಿ ಒಬ್ಬ ಹಳ್ಳಿಯ ಬಳಿಯಿರುವ ಹಳೆಯ ಪ್ರತ್ಯೇಕ ಬಂಗಲೆಗೆ ಬರುವಂತೆ ಕೇಳಿಕೊಂಡಿದ್ದಾನೆ. ನಂತರ ಆತ ಮತ್ತು ಅವನ ಮೂವರು ಸ್ನೇಹಿತರು ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿದ್ದಾರೆ. ಕೆಲವು ದಿನಗಳ ನಂತರ ಇಬ್ಬರು ಆರೋಪಿಗಳು ಅವಳನ್ನು ಕರೆದುಕೊಂಡು ಮತ್ತೆ ಅದೇ ಬಂಗಲೆಗೆ ಹೋಗಿ ಮತ್ತೆ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಈ ಕುರಿತಾಗಿ ಹಲವು ದಿನಗಳ ನಂತರ ತಿಳಿದ ಕುಟುಂಬ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಡೆದಿರುವ ಘಟನೆಯ ಬಗ್ಗೆ ದೂರನ್ನು ನೀಡಿದ್ದಾರೆ. ಬಳಿಕ ನಾಲ್ವರು ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

  • ಕಸಾಯಿಖಾನೆ ಮೇಲೆ ದಾಳಿ – 3 ಲಕ್ಷ ರೂ ಮೌಲ್ಯದ ಎಮ್ಮೆ ಮಾಂಸ ವಶಕ್ಕೆ

    ಕಸಾಯಿಖಾನೆ ಮೇಲೆ ದಾಳಿ – 3 ಲಕ್ಷ ರೂ ಮೌಲ್ಯದ ಎಮ್ಮೆ ಮಾಂಸ ವಶಕ್ಕೆ

    ಮುಂಬೈ: ಅಕ್ರಮವಾಗಿ ನಡೆಸುವ ಕಸಾಯಿಖಾನೆ ಮೇಲೆ ದಾಳಿ ನಡೆಸಿದ ನಗರ ಸಭೆ ಅಧಿಕಾರಿಗಳು 3 ಲಕ್ಷ ಮೌಲ್ಯದ 2 ಸಾವಿರ ಕೆಜಿ ಎಮ್ಮೆ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ದೂರಿನ ಮೇರೆಗೆ ಥಾಣೆ ಮುನ್ಸಿಪಲ್ ಕಾರ್ಪೋರೇಶನ್ (ಟಿಎಂಸಿ) ಅಧಿಕಾರಿಗಳು ಮುಂಬ್ರಾ ಪ್ರದೇಶದ ಕೌಸಾದಲ್ಲಿರುವ ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 2 ಸಾವಿರ ಕೆಜಿ ಎಮ್ಮೆ ಮಾಂಸವನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಈ ಸಂಬಂಧ ಒಬ್ಬನನ್ನು ಬಂಧಿಸಿದ್ದಾರೆ.

    ಯಾವುದೇ ಪರವಾನಿಗೆ ಇಲ್ಲದೆ ಕಸಾಯಿಖಾನೆ ನಡೆಸಲಾಗುತ್ತಿತ್ತು ಎಂದು ಟಿಎಂಸಿಯ ಪಶುವೈದ್ಯಕೀಯ ವಿಭಾಗದ ಉಸ್ತುವಾರಿ ಅಧಿಕಾರಿ ಶಾಮಾ ಶಿರೋಡ್ಕರ್ ಹೇಳಿದ್ದಾರೆ.

    ದಾಳಿಯಲ್ಲಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 2 ಸಾವಿರ ಕೆಜಿ ಎಮ್ಮೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಮತ್ತು ಈ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಇತರ ಕಸಾಯಿಖಾನೆಗಳನ್ನು ಪತ್ತೆಹಚ್ಚಲು ಮುಂಬ್ರಾದಲ್ಲಿ ಇನ್ನು ಹಲವು ಕಡೆ ದಾಳಿ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್- ಸಿಗರೇಟ್ ಕೊಡದಿದ್ದಕ್ಕೆ ಬರ್ಬರವಾಗಿ ಕೊಲೆಗೈದ್ರು

    ಲಾಕ್‍ಡೌನ್ ಎಫೆಕ್ಟ್- ಸಿಗರೇಟ್ ಕೊಡದಿದ್ದಕ್ಕೆ ಬರ್ಬರವಾಗಿ ಕೊಲೆಗೈದ್ರು

    – ಹೊಟ್ಟೆ, ಎದೆಗೆ ಸ್ಕ್ರೂಡ್ರೈವರ್‌ನಿಂದ ಇರಿದ ಪಾಪಿಗಳು
    – ಸಿಗರೇಟ್ ಕೊರತೆಯೇ ಕೊಲೆಗೆ ಕಾರಣವಾಯಿತಾ?

    ಮುಂಬೈ: ಸಿಗರೇಟ್ ನೀಡಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯನ್ನು ಇಬ್ಬರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‍ನಲ್ಲಿ ನಡೆದಿದೆ.

    ಉತ್ತರ ಪ್ರದೇಶ ಮೂಲದ ಅರವಿಂದ್ ಶಂಕರ್ ಕುಮಾರ್ (38) ಕೊಲೆಯಾದ ವ್ಯಕ್ತಿ. ಕಲ್ಯಾಣ್‍ನ ಎಪಿಎಂಸಿ ಮಾರುಕಟ್ಟೆ ಬಳಿ ಬುಧವಾರ ಕೊಲೆಗೈದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧಕಾರ್ಯ ಅಪ್ರಾರಂಭಿಸಿದ್ದಾರೆ.

    ಆಗಿದ್ದೇನು?:
    ಮೃತ ತರಕಾರಿ ವ್ಯಾಪಾರಿ ಅರವಿಂದ್ ತನ್ನ ಸೋದರಸಂಬಂಧಿ ಆನಂದ್ ಗುಪ್ತಾ ಜೊತೆಗೆ ಕಲ್ಯಾಣ್‍ನ ಗೋವಿಂದ್ ವಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅರವಿಂದ್ ಎಂದಿನಂತೆ ಬುಧವಾರ ತರಕಾರಿ ಮಾರಾಟಕ್ಕೆ ಹೋಗಿದ್ದರು. ಬಳಿಕ ಎಪಿಎಂಸಿ ಮಾರುಕಟ್ಟೆಯಲ್ಲಿನ ಶೌಚಾಲಯದ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಅಲ್ಲಿಗೆ ಬಂದು ಸಿಗರೇಟ್ ಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಅರವಿಂದ್ ಸಿಗರೇಟ್ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಜಗಳ ಆರಂಭಿಸಿದ್ದರು. ಅಷ್ಟಕ್ಕೆ ಬಿಡದೇ ಸ್ಕ್ರೂಡ್ರೈವರ್‌ನಿಂದ ಅರವಿಂದ್ ಹೊಟ್ಟೆ ಮತ್ತು ಎದೆಗೆ ಅನೇಕ ಬಾರಿ ಇರಿದು ಪರಾರಿಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆನಂದ್ ಗುಪ್ತಾ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರವಿಂದ್ ಅವರನ್ನು ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರವಿಂಗ್ ಸಾವನ್ನಪಿದ್ದಾರೆ ಎಂದು ತಿಳಿಸಿದ್ದಾರೆ.

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಯಾಣ್‍ದ ಬಜಾರ್‍ಪೇಟೆ ಪೊಲೀಸರು, ಆರೋಪಿಗಳು ಅರವಿಂದ್ ಅವರ ಮೇಲೆ ಹಲ್ಲೆ ನಡೆಸಲು ಸ್ಕ್ರೂಡ್ರೈವರ್ ಬಳಸಿದ್ದಾರೆ. ಇಬ್ಬರು ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಮತ್ತು 326 (ಸ್ವಯಂಪ್ರೇರಣೆಯಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ತೀವ್ರ ನೋವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗೆ ಶೋಧಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆ ಪಾನ್ ಅಂಗಡಿಗಳು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಸಿಗರೇಟ್ ಕೊರತೆ ಉಂಟಾಗಿ ಸಿಗರೇಟ್ ಸಿಗದೆ ಇರುವುದಕ್ಕೆ ಆರೋಪಿಗಳು ಕೃತ್ಯ ಎಸೆಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಸಾಲ ವಾಪಸ್ ಕೊಡಲಿಲ್ಲ ಎಂದು 11 ಮಹಡಿಯಿಂದ ಸ್ನೇಹಿತನನ್ನೇ ತಳ್ಳಿದ್ರು

    ಸಾಲ ವಾಪಸ್ ಕೊಡಲಿಲ್ಲ ಎಂದು 11 ಮಹಡಿಯಿಂದ ಸ್ನೇಹಿತನನ್ನೇ ತಳ್ಳಿದ್ರು

    – ಮೂವರು ಸ್ನೇಹಿತರಿಂದ ಇಂಜಿನಿಯರ್ ವಿದ್ಯಾರ್ಥಿ ಬರ್ಬರ ಹತ್ಯೆ

    ಥಾಣೆ: 15 ಸಾವಿರ ಸಾಲ ಪಡೆದು ಸರಿಯಾದ ಸಮಯಕ್ಕೆ ವಾಪಸ್ ಕೊಡಲಿಲ್ಲ ಎಂದು ಸ್ನೇಹಿತನನ್ನೇ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿಕೊಂಡು 11 ಮಹಡಿಯಿಂದ ಕೆಳಗೆ ತಳ್ಳಿ ಕೊಲೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಮೂವರು ಆರೋಪಿಗಳನ್ನು ಅಭಿನವ್ ಜಾಧವ್, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಎಂದು ಗುರುತಿಸಲಾಗಿದೆ. ಮೃತನನ್ನು ಸಾಗರ್ ಚಿಲ್ವೆರಿ ಎಂದು ಗುರುತಿಸಲಾಗಿದೆ. ಕೊಲೆಯಾದ ಸಾಗರ್ ಮತ್ತು ಆರೋಪಿಗಳು ಫ್ಲ್ಯಾಟ್‍ನಲ್ಲಿ ಒಟ್ಟಿಗೆ ಇರುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆಯಾದ ಸಾಗರ್ ಜನವರಿ 9 ರಂದು ಅಭಿನವ್ ಜಾಧವ್ ಕಡೆಯಿಂದ ಶೇ.10 ಬಡ್ಡಿಗೆ 15 ಸಾವಿರ ಸಾಲ ಪಡೆದುಕೊಂಡಿರುತ್ತಾನೆ. ಈ ಹಣವನ್ನು ಕಳೆದ ಸೋಮವಾರಕ್ಕೆ ವಾಪಸ್ ಕೊಡುವುದಾಗಿ ಸಾಗರ್ ಹೇಳಿರುತ್ತಾನೆ. ಆದರೆ ಕೊಡಲು ಸಾಧ್ಯವಾಗಿರಲಿಲ್ಲ. ಈ ವಿಚಾರಕ್ಕೆ ಫ್ಲ್ಯಾಟ್‍ನ ಪಾರ್ಕಿಂಗ್ ಜಾಗದಲ್ಲಿ ಜಾಧವ್ ಮತ್ತು ಸಾಗರ್ ಜಗಳವಾಡಿರುತ್ತಾರೆ. ಆಗ ಮಧ್ಯೆ ಬಂದ ಸೆಕ್ಯೂರಿಟಿ ಗಾರ್ಡ್ ಜಗಳ ಬಿಡಿಸಿ ವಾಪಸ್ ಕಳುಹಿಸಿರುತ್ತಾರೆ.

    ಈ ಘಟನೆಯ ನಂತರ ಫ್ಲ್ಯಾಟ್‍ಗೆ ಹೋದ ಇಬ್ಬರು ಮತ್ತೆ ಜಗಳವಾಡುತ್ತಾರೆ. ಈ ವೇಳೆ ಜಾಧವ್‍ಗೆ ಅಕ್ಷಯ್ ಮತ್ತು ತೇಜಸ್ ಸಾಥ್ ಕೊಡುತ್ತಾರೆ. ಆಗ ಮೂವರು ಸೇರಿಕೊಂಡು ಸಾಗರ್ ಅನ್ನು 11 ಮಹಡಿಯಿಂದ ತಳ್ಳಿದ್ದಾರೆ. ಇದನ್ನು ನೋಡಿದ ಸೆಕ್ಯೂರಿಟಿ ಗಾರ್ಡ್, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸೆಕ್ಯೂರಿಟಿ ಗಾರ್ಡ್ ನೀಡಿದೆ ಹೇಳಿಕೆ ಮೇಲೆ ಅಭಿನವ್ ಜಾಧವ್, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಮೂವರನ್ನು ಬಂಧಿಸಿದ್ದಾರೆ.

  • ಒಂದು ರೂಪಾಯಿಯಲ್ಲಿ ರೈಲ್ವೇ ಆಸ್ಪತ್ರೆಯಲ್ಲಿ ಹೆರಿಗೆ

    ಒಂದು ರೂಪಾಯಿಯಲ್ಲಿ ರೈಲ್ವೇ ಆಸ್ಪತ್ರೆಯಲ್ಲಿ ಹೆರಿಗೆ

    ಮುಂಬೈ: ಮಹಾರಾಷ್ಟ್ರದ ಥಾಣೆ ರೈಲ್ವೇ ನಿಲ್ದಾಣದ ಆಸ್ಪತ್ರೆಯಲ್ಲಿ ಕೇವಲ ಒಂದು ರೂಪಾಯಿಯಲ್ಲಿ ಹೆರಿಗೆ ಮಾಡಿಸಲಾಗಿದೆ.

    ರಾಯಗಢ ಜಿಲ್ಲೆಯ ಸಮೀಪದ ಕರ್ಜತ್‍ನಿಂದ 29 ವರ್ಷದ ತುಂಬು ಗರ್ಭಿಣಿ ಸುಭಂತಿ ಪಾತ್ರಾ ಮುಂಬೈಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಸುಮಾರು 35 ಕಿ.ಮೀ. ದೂರದ ಊರಿಗೆ ಪ್ರಯಾಣಿಸುವಷ್ಟರಲ್ಲಿ ಸುಭಂತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ರೈಲ್ವೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

    ಮಾರ್ಗ ಮಧ್ಯೆ ಥಾಣೆ ರೈಲ್ವೇ ನಿಲ್ದಾಣಕ್ಕೆ ರೈಲು ಬಂದು ನಿಲ್ಲುತ್ತಿದ್ದಂತೆ ಸುಭಂತಿ ಪಾತ್ರಾರನ್ನು 1 ರೂ. ಕ್ಲಿನಿಕ್‍ಗೆ ದಾಖಲಿಸಿದರು. ಕ್ಲಿನಿಕ್‍ಗೆ ಸೇರಿಸಿ 15 ನಿಮಿಷದೊಳಗೆ ಸುಭಂತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು, ಹೆರಿಗೆಯಾದ ಬಳಿಕ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

    ಥಾಣೆ ರೈಲ್ವೇ ನಿಲ್ದಾಣದಲ್ಲಿರುವ 1 ರೂ. ಕ್ಲಿನಿಕ್ ಅನ್ನು ಖಾಸಗಿಯವರು ನಡೆಸುತ್ತಿದ್ದಾರೆ. ಈ ಕ್ಲಿನಿಕ್‍ನಲ್ಲಿ ಇದುವರೆಗೂ 10 ಮಂದಿಗೆ ಹೆರಿಗೆ ಮಾಡಿಸಲಾಗಿದೆ. ರೈಲ್ವೇ ನಿಲ್ದಾಣದಲ್ಲಿರುವ ಒಂದು ರೂಪಾಯಿ ಆಸ್ಪತ್ರೆಗೆ ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

  • ರೈಲ್ವೇ ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

    ರೈಲ್ವೇ ನಿಲ್ದಾಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

    ಮುಂಬೈ: ಥಾಣೆ ರೈಲ್ವೇ ನಿಲ್ದಾಣದಲ್ಲಿ ಇಂದು ಬೆಳಗ್ಗೆ 20 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಪೂಜಾ ಚೌಹ್ಹಾಣ್ ಅವರು ಕೊಂಕಣ್ ಕನ್ಯಾ ಎಕ್ಸ್ ಪ್ರೆಸ್ ನಲ್ಲಿ ಮುಂಬೈಗೆ ತೆರಳುತ್ತಿದ್ದರು. ಹೀಗೆ ಹೋಗುತ್ತಿರಬೇಕಾದರೆ ಇಂದು ಮುಂಜಾನೆ 5.40ರ ಸುಮಾರಿಗೆ ಪೂಜಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದೇ ವೇಳೆ ರೈಲು ಥಾಣೆ ನಿಲ್ದಾಣದಲ್ಲಿ ನಿಲುಗಡೆಯಾಯಿತು. ಈ ವೇಳೆ ನಿಲ್ದಾಣದ ಸಿಬ್ಬಂದಿ ಮಹಿಳೆಯನ್ನು ಅಲ್ಲೇ ಇದ್ದ ಒನ್ ರೂಪಿ ಕ್ಲಿನಿಕ್‍ಗೆ ಕರೆದುಕೊಂಡು ಹೋದರು.

    ಕ್ಲಿನಿಕ್ ಗೆ ಅಡ್ಮಿಟ್ ಆದ ಬಳಿಕ ಮಹಿಳೆ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿದ್ದಾರೆ. ಅಲ್ಲಿ ಮಹಿಳೆ ಕುಳಿತಾಗ ಮಗುವಿನ ತಲೆ ಹೊರಬಂದಿದೆ. ಈ ವಿಚಾರ ತಿಳಿದ ಸಿಬ್ಬಂದಿ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಹೆರಿಗೆ ಮಾಡಿಸಿದ್ದಾರೆ.

    ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಇನ್ ರುಪಿ ಕ್ಲಿನಿಕ್ ಸಿಇಓ ರಾಹುಲ್ ಘುಲೆ ತಿಳಿಸಿದ್ದಾರೆ.

  • ಪತ್ನಿಯ ಕೆಲಸದಿಂದ ಬೇಸತ್ತ ಪತಿ – ಕೊಲೆಗೈದು 8 ಪೀಸ್ ಮಾಡಿ ಬಿಸಾಕಿದ!

    ಪತ್ನಿಯ ಕೆಲಸದಿಂದ ಬೇಸತ್ತ ಪತಿ – ಕೊಲೆಗೈದು 8 ಪೀಸ್ ಮಾಡಿ ಬಿಸಾಕಿದ!

    ಥಾಣೆ: ಪತ್ನಿ ಮಾಡುತ್ತಿರುವ ವೃತ್ತಿಯಿಂದ ಬೇಸತ್ತ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆಗೈದು ಬಳಿಕ ಆಕೆಯ ದೇಹವನ್ನು 8 ಪೀಸ್ ಮಾಡಿ ಬಿಸಾಕಿದ ಅಮಾನವೀಯ ಘಟನೆಯೊಂದು ಥಾಣೆ ಜಿಲ್ಲೆಯ ಬಿವಾಂಡಿ ಪ್ರದೇಶದಲ್ಲಿ ನಡೆದಿದೆ.

    ಪತ್ನಿ ಸಬಿನಾಬಿ ಸರ್ದಾರ್‍ಳನ್ನು ಪತಿ ಹಮೀದ್ ಅನ್ಸಾರಿ ಕೊಲೆ ಮಾಡಿದ್ದಾನೆ. ದಂಪತಿ ಬಿವಾಂಡಿಯ ನರ್ಪೊಲಿ ಪ್ರದೇಶದ ನಿವಾಸಿಗಳಾಗಿದ್ದಾರೆ.

    ಪತ್ನಿ ಸಬಿನಾಬಿ ಡಾನ್ಸ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದಾಗಿ ಆರೋಪಿ ಪತಿ ಬೇಸತ್ತಿದ್ದನು. ಅಲ್ಲದೆ ಪತ್ನಿಯ ಕತ್ತು ಸೀಳಿ ಆಕೆಯ ದೇಹವನ್ನು 8 ಪೀಸ್ ಮಾಡಿ ಪ್ಲಾಸ್ಟಿಕ್ ಡ್ರಮ್ ಗೆ ಹಾಕಿ ಸೋನಾಲಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಬಿಸಾಕಿ ಬಂದಿದ್ದಾನೆ.

    ಹೀಗೆ ಬಿಸಾಕಿದ ಡ್ರಮ್ ನಿಂದ ಸ್ಥಳೀಯ ನಿವಾಸಿಗಳಿಗೆ ಕೊಳೆತ ವಾಸನೆ ಬರತೊಡಗಿದೆ. ಹೀಗಾಗಿ ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಗೆ ಮಹಿಳೆಯನ್ನು ಕೊಲೆ ಮಾಡಿ ಪೀಸ್ ಮಾಡಿರುವ ಬಗ್ಗೆ ಬೆಳಕಿಗೆ ಬಂತು. ಹೀಗಾಗಿ ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಅಲ್ಲದೆ ಸ್ಥಳೀಯ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಪ್ಲಾಸ್ಟಿಕ್ ಡ್ರಮ್ ಬಿಸಾಕಿ ಹೋಗಿರುವ ದೃಶ್ಯ ಪೊಲೀಸರ ಗಮನಕ್ಕೆ ಬಂದಿದೆ.

    ಗ್ರಾಮೀಣ ಭಾಗದ ಪೊಲೀಸ್ ಅಧಿಕಾರಿ ಡಾ. ಶಿವಾಜಿ ರಾಥೋರ್ ಹಾಗೂ ಕ್ರೈಂ ಬ್ರ್ಯಾಂಚ್ ಇನ್ಸ್ ಪೆಕ್ಟರ್ ವೆಂಕಟ್ ಅಂಧಾಲೆಯವರ ನೇತೃತ್ವದ ತಂಡ ತನಿಖೆ ನಡೆಸಿತ್ತು. ಈ ವೇಳೆ ಪೀಸ್ ಪೀಸ್ ಆದ ದೇಹವನ್ನು ತುಂಬಿದ್ದ ಪ್ಲಾಸ್ಟಿಕ್ ಡ್ರಮ್ ತಾರಾಪುರದಲ್ಲಿ ತಯಾರಾಗಿದ್ದು, ಅದನ್ನು ಬಿವಾಂಡಿ ಅಂಗಡಿಯಲ್ಲಿ ಮಾರಾಟ ಮಾಡಲಾಗಿತ್ತು. ಈ ಡ್ರಮ್ಮನ್ನು ಆರೋಪಿ ಖರೀದಿ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಆರೋಪಿಯನ್ನು ಥಾಣೆ ನಗರ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.