Tag: ಥಾಣೆ ಪೊಲೀಸ್

  • 17ರ ಬಾಲಕಿ ಮೇಲೆ ಅತ್ಯಾಚಾರ – ಮೃತ ವ್ಯಕ್ತಿಯ ವಿರುದ್ಧ ಪೋಕ್ಸೋ ಕೇಸ್‌

    17ರ ಬಾಲಕಿ ಮೇಲೆ ಅತ್ಯಾಚಾರ – ಮೃತ ವ್ಯಕ್ತಿಯ ವಿರುದ್ಧ ಪೋಕ್ಸೋ ಕೇಸ್‌

    ಥಾಣೆ: 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೃತ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಘಟನೆ ಮಹಾರಾಷ್ಟ್ರ ಥಾಣೆ (Maharashtra’s Thane) ಜಿಲ್ಲೆಯಲ್ಲಿ ನಡೆದಿದೆ.

    ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸೆಕ್ಷನ್ 64(1)(ಅತ್ಯಾಚಾರ) ಅಡಿಯಲ್ಲಿ ಶನಿವಾರ (ಫೆ.15) ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆದಾಗ್ಯೂ, ಎಫ್‌ಐಆರ್‌ನಲ್ಲಿ ಆರೋಪಿಯ ಸಾವಿನ ಸಮಯ ಮತ್ತು ಸಂದರ್ಭಗಳ ಬಗ್ಗೆ ವಿವರ ನೀಡಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ದೆಹಲಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ, ಬಿಕ್ಕಟ್ಟು ನಿರ್ವಹಣೆಗಾಗಿ ಎಐ ತಂತ್ರಜ್ಞಾನ ಬಳಕೆ

    ಆರೋಪಿಯು ಮುಂಬ್ರಾದ ತನ್ನ ನೆರೆಹೊರೆಯ 17 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. 2024ರ ಜೂನ್ ಮತ್ತು ಆಗಸ್ಟ್ ನಡುವೆ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಕುಟುಂಬಸ್ಥರ ವಿರೋಧದ ನಡುವೆಯೂ ಬಾಲಕಿಯನ್ನು ವಿವಾಹವಾಗಿದ್ದ. ಫೆ.14ರಂದು ಬಾಲಕಿ ಮಗುವಿಗೆ ಜನ್ಮ ನೀಡಿದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲಾ ಹಣ ಕೇಂದ್ರವೇ ಕಿತ್ತುಕೊಂಡು ಹೋಗುತ್ತೆ, ನಮಗೆಲ್ಲಿ ಹಣ ಉಳಿಯುತ್ತೆ? – ರಾಮಲಿಂಗಾ ರೆಡ್ಡಿ

    ಸದ್ಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಈಜಲು ತೆರಳಿದ್ದ ಯುವಕ ಸುಳಿಗೆ ಸಿಲುಕಿ ಸಾವು – ಎರಡು ದಿನವಾದ್ರೂ ಪತ್ತೆಯಾಗದ ಮೃತದೇಹ

  • ನಡುರಸ್ತೆಯಲ್ಲೇ ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡಿದ ಲವರ್ಸ್‌

    ನಡುರಸ್ತೆಯಲ್ಲೇ ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡಿದ ಲವರ್ಸ್‌

    ಮುಂಬೈ: ಯುವಕ-ಯುವತಿ ಇಬ್ಬರು ನಡುರಸ್ತೆಯಲ್ಲೇ ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡುತ್ತಿರುವ ವಿಲಕ್ಷಣ ಘಟನೆಯೊಂದು ಮಹಾರಾಷ್ಟ್ರದ (Maharashtra) ಉಲ್ಹಾಸ್‌ನಗರದಲ್ಲಿ ನಡೆದಿದೆ.

    ದೇಶದ ವಿವಿಧ ಭಾಗಗಳಲ್ಲಿ ತಾಪಮಾನ ಏರಿಕೆ ನಡುವೆ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮಿಗಳಿಬ್ಬರು (Lovers) ಸ್ಕೂಟಿ ಮೇಲೆ ಕುಳಿತು ಸ್ನಾನ ಮಾಡುತ್ತಿರುವ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    WeDeserveBetterGovt ಎಂಬ ಟ್ವಿಟ್ಟರ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ಉಲ್ಲಾಸ್‌ನಗರದ ಸೆಕ್ಟರ್‌ 17ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಈ ವೀಡಿಯೋದಲ್ಲಿ ಯುವಕ-ಯುವತಿ ಇಬ್ಬರೂ ಸ್ಕೂಟಿ ಮೇಲೆ ಕುಳಿತು ಬಕೆಟ್‌ ನಲ್ಲಿ ನೀರು ಸುರಿದುಕೊಳ್ಳುತ್ತಿದ್ದಾರೆ. ಇತರ ಸವಾರರು ವೀಕ್ಷಣೆ ಮಾಡುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಟೀ ಕುಡಿತಾ ಕುಳಿತಿದ್ದ ವ್ಯಕ್ತಿಯ ಕಿಸೆಯಲ್ಲಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್- ಮುಂದೇನಾಯ್ತು?

    ಈ ವೀಡಿಯೋ ನೋಡಿರುವ ಥಾಣೆ ನಗರ ಪೊಲೀಸರು (Thane City Police) ಸೂಕ್ತ ಕ್ರಮ ಕೈಗೊಳ್ಳುವಂತೆ ಥಾಣೆಯ ಸಂಚಾರ ನಿಯಂತ್ರಣ ಕೊಠಡಿಗೆ ವರದಿ ಮಾಡಿದೆ. ಇದನ್ನೂ ಓದಿ: 15 ಜನ ನಿರಂತರವಾಗಿ ರೇಪ್‌ ಮಾಡಿದ್ರೆ ಹೇಗೆ ಪುರಾವೆ ಕೊಡ್ತೀರಾ – ಅದಾ ಶರ್ಮಾ ಪ್ರಶ್ನೆ

  • ಸಲ್ಮಾನ್ ತಂಗಿ ಮನೆಯಲ್ಲಿ ಕಳ್ಳತನ : ಸಿಕ್ಕಿಬಿದ್ದ ಕಳ್ಳ

    ಸಲ್ಮಾನ್ ತಂಗಿ ಮನೆಯಲ್ಲಿ ಕಳ್ಳತನ : ಸಿಕ್ಕಿಬಿದ್ದ ಕಳ್ಳ

    ಬಾಲಿವುಡ್ (Bollywood) ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಸಹೋದರಿಯ ಮನೆಯಲ್ಲಿ ಕಳ್ಳತನವಾಗಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಮನೆಯಲ್ಲಿ ಚಿನ್ನಾಭರಣ ಕಳುವಾದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸಲ್ಮಾನ್ ಸಹೋದರಿ ಅರ್ಪಿತಾ ದೂರು ದಾಖಲಿಸಿದ್ದರು. ಅಲ್ಲದೇ, ದೂರಿನಲ್ಲಿ ಮನೆಗೆಲಸದ ವ್ಯಕ್ತಿಯ ಮೇಲೆ ಅನುಮಾನ ಇರುವ ಕುರಿತು ಉಲ್ಲೇಖಿಸಿದ್ದರು. ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.

    ಅರ್ಪಿತಾ (Arpita) ಮನೆಯಲ್ಲಿ ವಜ್ರದ ಕಿವಿಯೋಲೆ ಸೇರಿದಂತೆ ಹಲವು ಆಭರಣಗಳು ಕಳುವಾಗಿದ್ದವು (Theft). ದೂರಿನಲ್ಲಿ ಉಲ್ಲೇಖ ಮಾಡಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಅರ್ಪಿತಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ ಹೆಗ್ಡೆ ಎನ್ನುವವರನ್ನು ಪೊಲೀಸರು ಇದೀಗ ಬಂದಿಸಿದ್ದಾರೆ. ಆತನಿಂದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಸಂದೀಪ್ ಹೆಗ್ಡೆ (Sandeep Hegde) ಕಳೆದ ನಾಲ್ಕು ತಿಂಗಳಿಂದ ಅರ್ಪಿತಾ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಒಟ್ಟು ಹತ್ತು ಜನರು ಕೆಲಸ ಮಾಡುತ್ತಿದ್ದು, ಅವರಲ್ಲಿ ಸಂದೀಪ್ ಬಗ್ಗೆ ಅರ್ಪಿಯಾ ಅನುಮಾನ ವ್ಯಕ್ತ ಪಡಿಸಿದ್ದರು. ಸಿಸಿಟಿವಿ ಪರಿಶೀಲನೆ ಮಾಡಿದ ಬಳಿಕವೇ ಥಾಣೆ ಪೊಲೀಸರು (Thane Police) ಸಂದೀಪ್ ನನ್ನು ಬಂಧಿಸಿದ್ದಾರೆ. ಸಂದೀಪ್ ಒಟ್ಟು ನಾಲ್ಕು ಲಕ್ಷ ಮೌಲ್ಯದ ಆಭರಣವನ್ನು ಕಳ್ಳತನ ಮಾಡಿದ್ದನೆಂದು ತಿಳಿದು ಬಂದಿದೆ.

    ಸಲ್ಮಾನ್ ದತ್ತು ಸಹೋದರಿ ಅರ್ಪಿತಾ ಬಾಲಿವುಡ್ ನಟ ಆಯುಷ್ ಶರ್ಮಾರನ್ನು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಸಲ್ಮಾನ್ ಗೆ ಅರ್ಪಿತಾ ಅಂದರೆ ಎಲ್ಲಿಲ್ಲದ ಪ್ರೀತಿ. ಸಹೋದರಿಯ ಹುಟ್ಟು ಹಬ್ಬಕ್ಕೆ ಪ್ರತಿ ಬಾರಿಯೂ ಬಾಲಿವುಡ್ ಸೆಲೆಬ್ರಿಟಿಗಳನ್ನು ಆಹ್ವಾನಿಸುವ ಸಂಪ್ರದಾಯವನ್ನು ಸಲ್ಮಾನ್ ಇಟ್ಟುಕೊಂಡಿದ್ದಾರೆ.

  • ಐಎಎಸ್ ಅಧಿಕಾರಿಯಿಂದ 7 ಕೋಟಿ ರೂ. ಸುಲಿಗೆ ಮಾಡಲೆತ್ನಿಸಿದ ದಂಪತಿ ಬಂಧನ

    ಐಎಎಸ್ ಅಧಿಕಾರಿಯಿಂದ 7 ಕೋಟಿ ರೂ. ಸುಲಿಗೆ ಮಾಡಲೆತ್ನಿಸಿದ ದಂಪತಿ ಬಂಧನ

    ಥಾಣೆ: ಮಹಾರಾಷ್ಟ್ರದ ಹಿರಿಯ ಐಎಎಸ್ ಅಧಿಕಾರಿಯೊಬ್ಬರಿಂದ 7 ಕೋಟಿ ರೂ. ಸುಲಿಗೆ ಮಾಡಲು ಯತ್ನಿಸಿದ ಖಾಸಗಿ ಡಿಟೆಕ್ಟಿವ್ ಹಾಗೂ ಆತನ ಪತ್ನಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

    ಅಮಾನತುಗೊಂಡಿರೋ ಅಧಿಕಾರಿ ರಾಧೆಶ್ಯಾಮ್ ಮೊಪಾಲ್ವರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹಿಂತೆಗೆದುಕೊಳ್ಳಲು ಆರೋಪಿ ಸತೀಶ್ ಮಂಗ್ಲೆ ಬರೋಬ್ಬರಿ 7 ಕೋಟಿ ರೂ. ಗೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದಿದ್ದರೆ ಫೋನ್ ಸಂಭಾಷಣೆಯ ಆಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದ ಎಂದು ವರದಿಯಾಗಿದೆ.

    ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಧೇಶ್ಯಾಮ್ ಅವರನ್ನು ಆಗಸ್ಟ್ ನಲ್ಲಿ ಸಿಎಂ ದೇವೇಂದ್ರ ಫಡ್ನಾವಿಸ್ ಹುದ್ದೆಯಿಂದ ತೆಗೆದುಹಾಕಿದ್ದರು. ಸತೀಶ್ ಲೀಕ್ ಮಾಡಿದ್ದ ಆಡಿಯೋದ ಫಲವಾಗಿ ರಾಧೇಶ್ಯಾಮ್ ಅಮಾನತುಗೊಂಡಿದ್ದರು. ಆಡಿಯೋದಲ್ಲಿ ಅಧಿಕಾರಿ ಡೀಲ್‍ವೊಂದರ ಬಗ್ಗೆ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ.

    ಶುಕ್ರವಾರದಂದು ಖಾಸಗಿ ಡಿಟೆಕ್ಟೀವ್ ಸತೀಶ್ ಹಾಗೂ ಆತನ ಪತ್ನಿ ಶ್ರದ್ಧಾಳನ್ನು ದೊಂಬಿಲ್ವಿ ಮನೆಯಿಂದ ಎಇಸಿ(ಆ್ಯಂಟಿ ಎಕ್ಸ್ಟಾರ್ಷನ್ ಸೆಲ್) ಅಧಿಕಾರಿಗಳು ಬಂಧಿಸಿದ್ದಾರೆ. ಸತೀಶ್ ಮನೆಯಿಂದ ಪೊಲೀಸರು 2 ಲ್ಯಾಪ್‍ಟಾಪ್, 5 ಮೊಬೈಲ್‍ಗಳು, 4 ಪೆನ್‍ಡ್ರೈವ್, 15 ಸಿಡಿ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಥಾಣೆ ಪೊಲೀಸ್ ವರಿಷ್ಠಾಧಿಕಾರಿ ಪರಂ ಬೀರ್ ಹೇಳಿದ್ದಾರೆ.

    ರಾಧೇಶ್ಯಾಮ್ ಅವರು ಸತೀಶ್ ನಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಪೊಲೀಸರ ಮೊರೆ ಹೋಗಿದ್ದರು. ಸತೀಶ್ ತನ್ನ ಪತ್ನಿ ಹಾಗೂ ಗೆಳೆಯ ಅನಿಲ್ ವೇದ್ ಮೆಹ್ತಾ ಜೊತೆ ಅಧಿಕಾರಿಯನ್ನ ಸಂಪರ್ಕಿಸಿ ಅಕ್ಟೋಬರ್ 23ರಂದು ಹಣದ ಸಮೇತ ನಾಸಿಕ್ ಹೆದ್ದಾರಿಯ ಕರೇಗಾಂವ್ ಟೋಲ್ ಪ್ಲಾಜಾ ಬಳಿ ಬರುವಂತೆ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನಿಮ್ಮ ಕುಟುಂಬಸ್ಥರು ಸುರಕ್ಷಿತವಾಗಿರಬೇಕಾದ್ರೆ 7 ಕೋಟಿ ರೂ. ಹಣ ಕೊಡ್ಬೇಕು ಅಂತ ದಂಪತಿ ಅಧಿಕಾರಿಯನ್ನ ಬೆದರಿಸಿದ್ದರು. ಆದ್ರೆ ಐಎಎಸ್ ಅಧಿಕಾರಿ ಆ ಫೋನ್ ಸಂಭಾಷಣೆಯನ್ನ ಥಾಣೆ ಪೊಲೀಸರಿಗೆ ಒದಗಿಸಿದ್ದರು. ನಂತರ ಪೊಲೀಸರು ಸತೀಶ್ ಮತ್ತು ಆತನ ಪತ್ನಿಯನ್ನ ಬಂಧಿಸಲು ಪ್ಲ್ಯಾನ್ ರೂಪಿಸಿದ್ದರು. ಪೊಲೀಸ್ ಪೇದೆಯೊಬ್ಬರು ಬೇರೆ ವೇಷದಲ್ಲಿ 1 ಕೋಟಿ ರೂ. ತೆಗೆದುಕೊಂಡು ಸತೀಶ್ ಮನೆಗೆ ಹೋಗಿ ರೆಡ್ ಹ್ಯಾಂಡ್ ಆಗಿ ಆರೋಪಿಯನ್ನ ಹಿಡಿದಿದ್ದಾರೆ.

    ಸತೀಶ್ ಈ ಹಿಂದೆ ರಾಧೇಶ್ಯಾಮ್ ಅವರ ಫೋನ್ ಸಂಭಾಷಣೆಯನ್ನ ಮಾಧ್ಯಮಗಳಿಗೆ ಲೀಕ್ ಮಾಡಿ, ರಾಜ್ಯದ ಆಡಳಿತದಲ್ಲಿ ಲಂಚ ಕೊಡದಿದ್ದರೆ ಕೆಲಸ ಆಗಲ್ಲ ಎಂದು ಆರೋಪ ಮಾಡಿದ್ದ. ಮೊದಲಿಗೆ ಫೋನ್ ಸಂಭಾಷಣೆಯ ಆಡಿಯೋವನ್ನ ಹಿಂದಿರುಗಿಸಲು 10 ಕೋಟಿಗೆ ಡಿಮ್ಯಾಂಡ್ ಮಾಡಿ, ರಾಧಶ್ಯಾಮ್ ಹಣ ಕೊಡಲು ನಿರಾಕರಿಸಿದ ನಂತರ 7 ಕೋಟಿಗೆ ಬೇಡಿಕೆ ಇಟ್ಟಿದ್ದ ಎಂದು ವರದಿಯಾಗಿದೆ.