Tag: ಥಗ್ಸ್ ಆಫ್ ಹಿಂದೊಸ್ತಾನ್

  • ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕೆ ಕತ್ರಿನಾ ಭರ್ಜರಿ ತಯಾರಿ

    ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕೆ ಕತ್ರಿನಾ ಭರ್ಜರಿ ತಯಾರಿ

    ಮುಂಬೈ: ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಖಾನ್‍ಗೆ ಜೋಡಿಯಾಗಿ ಗೆಲುವಿನ ಮೆಟ್ಟಿಲೇರಿದ ಕತ್ರಿನಾ ಕೈಫ್ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

    ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರವು 1839 ರ ‘ಕನ್‍ಫೆಶನ್ ಆಫ್ ಎ ಥಗ್’ ಎಂಬ ಕಾದಂಬರಿ ಆಧಾರಿತ ಚಿತ್ರವಾಗಿದೆ. ಇದರಲ್ಲಿ ಆಮೀರ್ ಖಾನ್‍ರ ಜೊತೆ ಮೊಟ್ಟ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ತೆರೆ ಹಂಚಿಕೊಂಡಿದ್ದಾರೆ. ದಂಗಲ್ ಖ್ಯಾತಿಯ ಫಾತಿಮಾ ಸನಾ ಶೇಕ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

     

    ಕತ್ರಿನಾ ಬಾಲಿವುಡ್ ನಲ್ಲಿ ತಮ್ಮ ಅದ್ಭುತ ನೃತ್ಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಚಿತ್ರಕ್ಕಾಗಿ ಕತ್ರಿನಾ ಡ್ಯಾನ್ಸರ್ ಪ್ರಭುದೇವ ಅವರಿಂದ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಎಲ್ಲರ ಹುಬ್ಬೆರಿಸುವಂತೆ ಗಾಳಿಯಲ್ಲಿ ತೇಲುವ ರೀತಿಯಲ್ಲಿ ಮತ್ತು ಜಿಮ್ನಾಸ್ಟಿಕ್ ಮಾದರಿಯಲ್ಲಿ ಕತ್ರಿನಾ ಡಾನ್ಸ್ ಮಾಡಿದ್ದಾರೆ. ಕತ್ರಿನಾ ಕೈಫ್ ತಮ್ಮ ನೃತ್ಯಾಭ್ಯಾಸದ ವಿಡಿಯೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಚಿತ್ರದಲ್ಲಿ ಕತ್ರಿನಾ ಕೈಫ್, ಫಾತಿಮಾ ಶೇಕ್ ತೆರೆಯನ್ನು ಹಂಚಿಕೊಂಡಿದ್ದಾರೆ. ತಾವು ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುತ್ತಿರುವುದರ ಬಗ್ಗೆ ನಟಿ ಫಾತಿಮಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಆಮೀರ್ ಮತ್ತು ಅಮಿತಾಬ್ ಅವರ ಫಸ್ಟ್ ಲುಕ್ ನೋಡಿ ಮೆಚ್ಚುಗೆ ನೀಡಿದ ಜನರು ನಾಯಕಿಯರ ಫಸ್ಟ್ ಲುಕ್‍ಗಾಗಿ ಕಾಯುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿಜಯ್ ಕೃಷ್ಣ ಆಚಾರ್ಯ ಆಕ್ಷನ್-ಕಟ್ ಹೇಳಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರ ನವೆಂಬರ್ 7ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

  • ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್‍ಗೆ ಮತ್ತೆ ಶಾಕಿಂಗ್ ನ್ಯೂಸ್

    ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್‍ಗೆ ಮತ್ತೆ ಶಾಕಿಂಗ್ ನ್ಯೂಸ್

    ಮುಂಬೈ: ಕೆಲವು ದಿನಗಳ ಹಿಂದೆ ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರದ ಅಮಿರ್ ಖಾನ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿ ವೈರಲ್ ಆಗಿತ್ತು. ಆದರೆ ಈಗ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳುವ ಪಾತ್ರದ ಲುಕ್ ಕೂಡ ಲೀಕ್ ಆಗಿದೆ.

    ಅಮಿತಾಬ್ ಬಚ್ಚನ್ ಸಿನಿಮಾ ಸೆಟ್‍ನಿಂದ ಹೊರ ಬರುವಾಗ ಫೋಟೋವನ್ನು ತೆಗೆಯಲಾಗಿದೆ. ಫೋಟೋದಲ್ಲಿ ಅಮಿತಾಬ್ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ತೀವ್ರವಾಗಿ ಹೆದರಿಸುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಅಮಿರ್ ಅವರ ಫಸ್ಟ್ ಲುಕ್ ‘ಗೇಮ್ ಆಫ್ ಥ್ರೋನ್ಸ್’ ಚಿತ್ರದ ಥರ ಇದ್ದರೆ, ಅಮಿತಾಬ್ ಫೋಟೋದಲ್ಲಿ ಕಬ್ಬಿಣದ ರಕ್ಷಾ ಕವಚ, ಕತ್ತಿ, ತಲೆ ಮೇಲೆ ಕಪ್ಪು ಬಣ್ಣದ ಬಟ್ಟೆಯನ್ನು ಸುತ್ತಿಕೊಂಡು ವಾರಿಯರ್ ರೀತಿ ಕಾಣುತ್ತಿದ್ದಾರೆ.

    ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಮಿರ್ ಖಾನ್ ಮೊದಲನೇ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಕತ್ರಿನಾ ಕೈಫ್, ಫಾತಿಮಾ ಶೇಕ್ ತೆರೆಯನ್ನು ಹಂಚಿಕೊಂಡಿದ್ದಾರೆ. ತಾವು ಅಮಿತಾಬ್ ಬಚ್ಚನ್ ಅವರ ಜೊತೆ ನಟಿಸುತ್ತಿರುವುದರ ಬಗ್ಗೆ ನಟಿ ಫಾತಿಮಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅಮಿರ್ ಮತ್ತು ಅಮಿತಾಬ್ ಅವರ ಫಸ್ಟ್ ಲುಕ್ ನೋಡಿ ಮೆಚ್ಚುಗೆ ನೀಡಿದ ಜನರು ನಾಯಕಿಯರ ಫಸ್ಟ್ ಲುಕ್‍ಗಾಗಿ ಕಾಯುತ್ತಿದ್ದಾರೆ.

    ಯಶ್ ರಾಜ್ ಫಿಲ್ಸ್‍ಂ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ವಿಜಯ್ ಕೃಷ್ಣ ಆಚಾರ್ಯ ಆಕ್ಷನ್-ಕಟ್ ಹೇಳಲಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರ 2018 ರಲ್ಲಿನವೆಂಬರ್ 7, 2018 ರಂದು ಬಿಡುಗಡೆಯಾಗಲಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಲೀಕ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಮೀರ್ ಖಾನ್ ಶೂಟಿಂಗ್ ನಲ್ಲಿ ಮತ್ತಷ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದರು. ಆದರೆ ಈಗ ಮತ್ತೆ ಶೂಟಿಂಗ್ ಚಿತ್ರಗಳು ಲೀಕ್ ಆಗಿದೆ.

  • ಅಮೀರ್ ನಟನೆಯ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಸೆಟ್ ಗೆ ಭಾರೀ ಭದ್ರತೆ

    ಅಮೀರ್ ನಟನೆಯ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಸೆಟ್ ಗೆ ಭಾರೀ ಭದ್ರತೆ

    ಮುಂಬೈ: ದಂಗಲ್ ಚಿತ್ರದ ಯಶಸ್ಸಿನ ನಂತರ ಅಮೀರ್ ಖಾನ್ ತಮ್ಮ ಮುಂದಿನ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಸೆಟ್ ಗೆ ಭಾರೀ ಭದ್ರತೆಯನ್ನು ಪಡೆದುಕೊಂಡಿದ್ದಾರೆ.

    ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಅಮೀರ್‍ಗೆ ಬೇಸರ ತಂದಿದೆ. ತಮ್ಮ ಡ್ರೀಮ್ ಪ್ರಾಜೆಕ್ಟ್ ಗೆ ಮತ್ತಷ್ಟು ಹಾನಿ ಮಾಡಿಕೊಳ್ಳಲು ಇಚ್ಛಿಸದ ಅಮೀರ್ ಸಿನಿಮಾ ಸೆಟ್ ಗೆ ಹೆಚ್ಚಿನ ಭದ್ರತೆ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ.

    ಈ ಸಿನಿಮಾದಲ್ಲಿ ಜನರಿಗೆ ಕುತೂಹಲ ಮೂಡಿಸಲು ಅಮೀರ್ ಖಾನ್ ಅಸಾಧ್ಯವಾದುದ್ದನ್ನು ಸಾಧ್ಯವನ್ನಾಗಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್, ಫಾತಿಮಾ ಸನಾ ಶೇಕ್, ಜಾಕಿ ಶ್ರಾಫ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ. ಸಿನಿಮಾ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ವಿಜಯ್ ಕೃಷ್ಣನ್ ಆಚಾರ್ಯ ಅವರ ನಿರ್ದೇಶನವಿದೆ.