Tag: ತ್ರಿಷಿಕಾ ಕುಮಾರಿ

  • ದಸರಾ ಸಂಭ್ರಮದಲ್ಲಿದ್ದ ಮೈಸೂರು ರಾಜಪರಿವಾರಕ್ಕೆ ಹೊಸ ಅತಿಥಿಯ ಆಗಮನ – 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ

    ದಸರಾ ಸಂಭ್ರಮದಲ್ಲಿದ್ದ ಮೈಸೂರು ರಾಜಪರಿವಾರಕ್ಕೆ ಹೊಸ ಅತಿಥಿಯ ಆಗಮನ – 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಸಂಭ್ರಮದಲ್ಲಿರುವ ಮೈಸೂರು ರಾಜವಂಶಸ್ಥ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್‌ (Trishikha Kumari Wadiyar) ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ.

    ವಿಜಯದಶಮಿಗೆ (Vijayadashami) ಒಂದು ದಿನ ಬಾಕಿಯಿದ್ದು, ದಸರಾ ಜಂಬೂ ಸವಾರಿಗೆ ಸಕಲ ತಯಾರಿಗಳು ಭರದಿಂದ ಸಾಗುತ್ತಲೇ ಇವೆ. ಈಗಲೂ ಅರಮನೆಯಲ್ಲಿ ಆಯುಧಪೂಜೆಯ ಕೈಂಕರ್ಯಗಳು ನೆರವೇರುತ್ತಲೇ ಇವೆ. ಈ ಹೊತ್ತಿನಲ್ಲೇ ಸಂಸದ ಹಾಗೂ ರಾಜವಂಶಸ್ಥ ಯದುವೀರ್‌ಗೆ 2ನೇ ಮಗುವಿನ ಜನನವಾಗಿದೆ. ಮೊದಲ ಮಗು ʻಆದ್ಯವೀರ್‌ʼ. ಇದನ್ನೂ ಓದಿ: ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

    ಯದುವೀರ್‌ ಅವರು ಖಾಸಗಿ ದರ್ಬಾರ್‌ ಚಟುವಟಿಕೆಗಳಲ್ಲಿ ಒಂದು ವಾರದಿಂದ ಭಾಗಿಯಾಗಿದ್ದು. ಶುಕ್ರವಾರ ಆಯುಧಪೂಜೆ ಸಂಭ್ರಮದಲ್ಲಿದ್ದರು. ಈ ವೇಳೆ ಖುಷಿಯ ವಿಚಾರ ಬಂದಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ನವರಾತ್ರಿ ವಿಶೇಷ: ಆಯುಧ ಪೂಜೆ ಯಾಕೆ ಮಾಡಲಾಗುತ್ತದೆ? ಏನಿದರ ಮಹತ್ವ?

    ಇಡೀ ಕುಟುಂಬ ದಸರಾದ ಸಡಗರದಲ್ಲಿದೆ. ಈಗಾಗಲೇ 8 ದಿನ ಖಾಸಗಿ ದರ್ಬಾರ್‌ ನಡೆಸಿರುವ ಯದುವೀರ್‌ ಅವರು ಶನಿವಾರ ವಿಜಯದಶಮಿಗೆ ಅಣಿಯಾಗುತ್ತಿದ್ದರು. ಇದರ ನಡುವೆ ಗುರುವಾರ ರಾತ್ರಿಯೇ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಷಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗಿನ ಜಾವ ನವರಾತ್ರಿ ದಿನವೇ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ ಅರಮನೆಯಲ್ಲಿದ್ದ ಯದುವೀರ್‌ ಒಡೆಯರ್‌ ಅವರಿಗೆ ತಲುಪಿತು. ಇದರಿಂದ ಅವರು ಖುಷಿಗೊಂಡಿದ್ದಾರೆ.

    ಖಾಸಗಿ ದರ್ಬಾರ್‌ ಇರುವ ಕಾರಣದಿಂದ ಕಂಕಣಧಾರಿಯಾಗಿರುವ ಯದುವೀರ್‌ ಅರಮನೆಯಿಂದ ಹೊರಗೆ ಹೋಗುವುದಿಲ್ಲ. ಇಂದು ಖಾಸಗಿ ದರ್ಬಾರ್‌ ಮುಗಿದ ಬಳಿಕ ಹೊರ ಬರಲಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ಕಾಳಿ ದೇವಸ್ಥಾನಕ್ಕೆ ಮೋದಿ ಉಡುಗೊರೆಯಾಗಿ ನೀಡಿದ್ದ ಕಿರೀಟ ಕಳವು

    2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಲಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದರು.

  • ಕೋಟೆನಾಡಿನ ಜಲಾಶಯಗಳ ಬಳಿ ಯದುವೀರ್ ಒಡೆಯರ್ ಫ್ಯಾಮಿಲಿ ರೌಂಡ್ಸ್

    ಕೋಟೆನಾಡಿನ ಜಲಾಶಯಗಳ ಬಳಿ ಯದುವೀರ್ ಒಡೆಯರ್ ಫ್ಯಾಮಿಲಿ ರೌಂಡ್ಸ್

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಬಳಿ ಇರುವ ‘ವಾಣಿವಿಲಾಸ ಜಲಾಶಯ’ ಹಾಗೂ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಯಿತ್ರಿ ಜಲಾಶಯಕ್ಕೆ ಮೈಸೂರು ರಾಜವಂಶಸ್ಥರಾದ ಯದುವೀರ್ ಮತ್ತು ಪತ್ನಿ ತ್ರಿಷಿಕಾ ಕುಮಾರಿ ಅವರು ಭಾನುವಾರ ಭೇಟಿ ನೀಡಿ ಡ್ಯಾಂ ವೀಕ್ಷಿಸಿ ಕಣ್ತುಂಬಿಕೊಂಡರು.

    ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಈ ಎರಡು ಜಲಾಶಯವನ್ನು ನಿರ್ಮಾಣ ಮಾಡಲಾಗಿದ್ದು, ಜಯಚಾಮರಾಜ ಒಡೆಯರ್ ಅವರು ಮನೆತನದ ಹೆಣ್ಣು ಮಗಳಾದ ಗಾಯಿತ್ರಿ ದೇವಿಯ ನೆನಪಿಗಾಗಿ ಜಲಾಶಯ ನಿರ್ಮಿಸಿದ್ದರು. ಗಾಯಿತ್ರಿ ಡ್ಯಾಂಗೆ ಹಾಗೂ ವಿವಿ ಸಾಗರ ಜಲಾಶಯಕ್ಕೆ ಕೆಂಪರಾಜಮ್ಮಣಿ ಹೆಸರನ್ನು ನಾಮಕರಣ ಮಾಡಲಾಗಿದೆ. ಅಜ್ಜಿಯ ಹೆಸರಿನ ಎರಡು ಜಲಾಶಯಗಳನ್ನು ಮೊಮ್ಮಗ ಯದುವೀರ್ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನೈಟ್‍ಕ್ಲಬ್‍ನಲ್ಲಿ 20 ಯುವಕರ ನಿಗೂಢ ಸಾವು

    ಯದುವೀರ್ ಮತ್ತು ತ್ರಿಷಿಕಾ ಕುಮಾರಿ ಅವರು ಜಲಾಶಯ ವೀಕ್ಷಿಸಿದ ಬಳಿಕ ಫೋಟೋ ತೆಗೆಸಿಕೊಂಡಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಂದ ಜಲಾಶಯದ ವಿಸ್ತೀರ್ಣ, ನೀರಿನ ಸಾಮರ್ಥ್ಯ ಮತ್ತು ಉಪಯೋಗದ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾ ದೇವಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಜೊತೆಗಿದ್ದರು. ಹಿರಿಯೂರು ತಾಲೂಕಿನ ರೈತಾಪಿ ವರ್ಗದ ಕೃಷಿಗೆ ಅನುಕೂಲವಾಗುವಂತೆ ಹಿರಿಯೂರು ತಾಲೂಕಿನಲ್ಲಿ ಎರಡು ಜಲಾಶಯಗಳನ್ನು ನಿರ್ಮಿಸಲಾಗಿದೆ. ಇದನ್ನೂ ಓದಿ: ಬೈಕ್‍ಗೆ ಲಾರಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ

    ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ
    ಚಿಕ್ಕಮಗಳೂರಿನ ಗಿರಿ ಕಂದಕಗಳಲ್ಲಿ ಹುಟ್ಟುವ ವೇದಾವತಿ ನದಿಗೆ ಅಡ್ಡಲಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸಪುರದ ಬಳಿ ಮಾರಿಕಣಿವೆ ಅಥವಾ ವಾಣಿವಿಲಾಸಸಾಗರ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ವಾಣಿವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್‌ಪೀಸ್ ಎಂದು ಗುರುತಿಸಲಾಗಿದೆ.

    Live Tv

  • ಅರಮನೆಯಲ್ಲಿ ಮಹಾರಾಣಿ ತ್ರಿಷಿಕಾ ಒಡೆಯರಿಂದ ಗೌರಿ ಪೂಜೆ

    ಅರಮನೆಯಲ್ಲಿ ಮಹಾರಾಣಿ ತ್ರಿಷಿಕಾ ಒಡೆಯರಿಂದ ಗೌರಿ ಪೂಜೆ

    – ಪತ್ನಿಯ ಪೂಜಾ ಫೋಟೋಗಳನ್ನು ಸೋಶಿಯಲ್ ಮಿಡಿಯಾಕ್ಕೆ ಹಾಕಿ ವಿಶ್ ಮಾಡಿದ್ರು ಮಹಾರಾಜ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗೌರಿ ಹಬ್ಬದ ಸಂಭ್ರಮ ಮನೆಮಾಡಿದೆ. ಹೀಗಾಗಿ ಇಂದು ಮೈಸೂರು ಅರಮನೆಯಲ್ಲಿ ಯದುವಂಶದ ಮಹಾರಾಣಿ ತ್ರಿಷಿಕಾ ಒಡೆಯರ್‍ರಿಂದ ಗೌರಿ ಪೂಜೆ ನೆರವೇರಿದೆ.

    ಅರಮನೆಯ ಒಳಭಾಗದಲ್ಲಿ ತ್ರಿಷಿಕಾಕುಮಾರಿ ಒಡೆಯರ್ ಅವರು ಸಂಪ್ರದಾಯಬದ್ಧವಾದ ಗೌರಿ ಪೂಜೆ ನೆರವೇರಿಸಿದರು. ಗೌರಿ ಪೂಜೆಯ ನಂತರ ಅವರು ಅರಮನೆಗೆ ಬಂದಿದ್ದ ಮುತ್ತೈದೆಯರಿಗೆ ಬಾಗಿನ ನೀಡಿ ಶುಭಾಶಯ ಕೋರಿದ್ರು.

    ಪತ್ನಿಯ ಪೂಜಾ ಕೈಂಕರ್ಯಗಳನ್ನ ಯದುವೀರ್ ಒಡೆಯರ್ ಅವರು ತಮ್ಮ ಫೇಸ್‍ಬುಕ್, ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೇ ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಶುಭಾಶಯಗಳು ಅಂತ ತಿಳಿಸಿದ್ದಾರೆ.

    ಮೈಸೂರಿನ ಎರಡು ಕಡೆಗಳಲ್ಲಿ ಇವತ್ತು ಮಾದರಿಯುತವಾಗಿ ಗೌರಿ – ಗಣೇಶ ಹಬ್ಬ ಆಚರಿಸಲಾಯಿತು. ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರಿ ಹಬ್ಬ ಆಚರಿಸಿದರೆ, ಮತ್ತೊಂದು ಕಡೆ ಮುಸ್ಲಿಂ ಮತ್ತು ಹಿಂದೂ ಯುವಕರು ಜೊತೆಯಾಗಿ ಹಬ್ಬ ಆಚರಿಸಿದರು. ಮೈಸೂರು ಮಹಾ ನಗರ ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಪೌರಕಾರ್ಮಿಕರೊಂದಿಗೆ ಆಚರಿಸಿದ್ದಾರೆ. ಈ ವೇಳೆ ಪೌರ ಕಾರ್ಮಿಕ ಮಹಿಳೆಯರಿಗೆ ಸೀರೆ, ಅರಶಿನ ಕುಂಕುಮ, ಬಳೆ, ಹಣ್ಣು, ಹೂವು ಇರುವ ಬಾಗಿನ ನೀಡಲಾಯಿತು. ಸುಮಾರು 30 ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ನೀಡಿ ಸಿಹಿ ತಿನಿಸಿ ಹಬ್ಬದ ಶುಭಾಶಯ ಕೋರಿದರು. ಮೈಸೂರಿನ ವಿದ್ಯಾರಣ್ಯಪುರಂ ನ ತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ಈ ಹಬ್ಬದ ಆಚರಣೆ ನಡೆಯಿತು.

    ಗೌರಿ ಗಣೇಶ ಹಬ್ಬದಲ್ಲಿ ಹಿಂದೂ ಮುಸ್ಲಿಂ ಯುವಕರು ಜೊತೆಯಾಗಿ ಹಬ್ಬ ಆಚರಿಸಿದರು. ಗಣೇಶನಿಗೆ ಪೂಜೆ ನೆರವೇರಿಸುವ ಮೂಲಕ ಭಾವೈಕ್ಯತೆ ಮೆರೆದರು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಮೈಸೂರು ಪ್ರಜ್ಞಾವಂತ ಯುವಕರ ವೇದಿಕೆಯಿಂದ ಭಾವೈಕ್ಯತೆಯ ಹಬ್ಬ ಆಚರಿಸಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರು ಅರಮನೆಯಲ್ಲಿಂದು ಯದುವಂಶದ ಕುಡಿಗೆ ನಾಮಕರಣ

    ಬೆಂಗಳೂರು ಅರಮನೆಯಲ್ಲಿಂದು ಯದುವಂಶದ ಕುಡಿಗೆ ನಾಮಕರಣ

    ಬೆಂಗಳೂರು: ಇಂದು ಬೆಂಗಳೂರು ಅರಮನೆಯಲ್ಲಿ ಯದುವಂಶದ ಕುಡಿಗೆ ನಾಮಕರಣ ಕಾರ್ಯಕ್ರಮ ನಡೆಯಲಿದೆ.

    ಬೆಂಗಳೂರಿನ ಅರಮನೆಯಲ್ಲಿ ನಡೆಯುವ ಸರಳ ಸಮಾರಂಭಕ್ಕೆ ಬಂಧುಗಳು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈಗಾಗಲೇ ರಾಜಮಾತೆ ಪ್ರಮೋದಾದೇವಿ ಬೆಂಗಳೂರಿನ ಅರಮನೆಗೆ ಆಗಮಿಸಿದ್ದಾರೆ. ಆದರೆ ಮೈಸೂರಿನ ಅರಮನೆಯಲ್ಲಿ ಯಾಕೆ ಯದುವಂಶದ ಕುಡಿಯ ನಾಮಕರಣ ಕಾರ್ಯಕ್ರಮ ನಡೆಯುತ್ತಿಲ್ಲ ಎಂಬ ಅಂಶ ಚರ್ಚೆಗೆ ಗ್ರಾಸವಾಗಿದೆ.

    ಕಳೆದ ಡಿಸೆಂಬರ್‍ನಲ್ಲಿ ಮಹಾರಾಜ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದನ್ನೂ ಓದಿ: ದಕ್ಷಿಣ ಕನ್ನಡದ ಈ ಹನುಮನ ಕೃಪೆಯಿಂದ ಯದುವೀರ್ -ತ್ರಿಷಿಕಾಗೆ ಪುತ್ರ ಸಂತಾನ!

    ಮೈಸೂರು ಯದುವಂಶಕ್ಕೆ 1953ರಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನನವಾದ ನಂತರ ಇಲ್ಲಿಯವರೆಗೆ ಯಾವುದೇ ಗಂಡು ಮಕ್ಕಳು ಜನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಯದುವೀರ್ ಅವರನ್ನು 2013ರಲ್ಲಿ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲಾಗಿತ್ತು. 2016 ಜೂನ್ 27ರಂದು ತ್ರಿಷಿಕಾ ಕುಮಾರಿ ಜೊತೆ ಮದುವೆ ಮಾಡಿಕೊಡಲಾಗಿತ್ತು.

    ಇದನ್ನೂ ಓದಿ: ಮೈಸೂರು ರಾಜರಿಗೆ ಪುತ್ರ ಸಂತಾನ: ಅಲಮೇಲಮ್ಮ ಶಾಪ ವಿಮೋಚನೆ ಆಯ್ತಾ? ಶಾಪ ನೀಡಿದ್ದು ಯಾಕೆ?

  • ಯದುವಂಶದ ರಾಣಿ ತ್ರಿಷಿಕಾ ಕುಮಾರಿ ಅವರ ಸೀಮಂತವನ್ನು ಫೋಟೋಗಳಲ್ಲಿ ನೋಡಿ

    ಯದುವಂಶದ ರಾಣಿ ತ್ರಿಷಿಕಾ ಕುಮಾರಿ ಅವರ ಸೀಮಂತವನ್ನು ಫೋಟೋಗಳಲ್ಲಿ ನೋಡಿ

    ಮೈಸೂರು: ಕಳೆದ ಭಾನುವಾರ ಮೈಸೂರಿನ ಅರಮನೆಯಲ್ಲಿ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಅವರ ಸೀಮಂತ ಕಾರ್ಯ ತೀರಾ ಅಂದರೆ ತೀರಾ ಖಾಸಗಿಯಾಗಿ ನೆರವೇರಿತ್ತು. ಸೀಮಂತ ಕಾರ್ಯದ ಒಂದು ದೃಶ್ಯ ಅಥವಾ ಫೋಟೋ ಕೂಡ ಹೊರಬರದಂತೆ ಎಚ್ಚರಿಕೆ ವಹಿಸಿದ್ದರು.

    ಕಾರ್ಯಕ್ರಮ ನಡೆದ ಎರಡು ದಿನ ನಂತರ ಈ ಸೀಮಂತ ಕಾರ್ಯದ ಫೋಟೋಗಳು ಲಭ್ಯವಾಗಿವೆ. ಸೀಮಂತ ಕಾರ್ಯದಲ್ಲಿ ತ್ರಿಷಿಕಾ ಕುಮಾರಿ ಅವರಿಗೆ ಆಭರಣಗಳು, ಹಳೆ ಕಾಲದ ಚಿನ್ನದ ವೀಣೆ, ಚಿನ್ನದ ಕಾಲು, ಚಿನ್ನದ ತೊಟ್ಟಿಲು, ಚಿನ್ನದ ಬುಟ್ಟಿ ಹೀಗೆ ಅಪಾರ ಪ್ರಮಾಣದ ಚಿನ್ನಾಭರಣವನ್ನು ತ್ರಿಷಿಕಾ ಅವರ ಮುಂದೆ ಇಟ್ಟು ಸೀಮಂತ ನೇರವೇರಿಸಲಾಗಿದೆ.

    ರಾಜ ಮನೆತನದ ಸೀಮಂತ ಕಾರ್ಯ ಹೇಗಿರುತ್ತೆ ಎಂಬುದನ್ನು ಇಂದಿನ ಜನರು ನೋಡಿಲ್ಲ. ಏಕೆಂದರೆ 65-70 ವರ್ಷಗಳ ನಂತರ ಈಗ ಇಂತಹ ಸೀಮಂತ ಕಾರ್ಯ ಯದುವಂಶದಲ್ಲಿ ನಡೆದಿದೆ. ಸಾಮಾನ್ಯ ಜನ ಅಥವಾ ಸಿರಿವಂತರ ಮನೆಯ ಸೀಮಂತ ಕಾರ್ಯದಲ್ಲಿ ಹಣ್ಣು, ತಿಂಡಿ ಗಳನ್ನು ಇಡಲಾಗಿರುತ್ತೆ. ಆದರೆ ರಾಜ ಮನೆತನದಲ್ಲಿ ತಿಂಡಿ ಮತ್ತು ಹಣ್ಣುಗಳ ಜೊತೆ ಇಷ್ಟು ಪ್ರಮಾಣದ ಚಿನ್ನ, ವಜ್ರದ ವಸ್ತುಗಳನ್ನು ಇಟ್ಟಿರುವುದು ರಾಜವೈಭೋಗಕ್ಕೆ ಸಾಕ್ಷಿಯಾಗಿದೆ.