Tag: ತ್ರಿಷಾ ಕೃಷ್ಣನ್

  • ಮದುವೆ ಬಗ್ಗೆ ಮೌನ ಮುರಿದ ನಟಿ ತ್ರಿಷಾ

    ಮದುವೆ ಬಗ್ಗೆ ಮೌನ ಮುರಿದ ನಟಿ ತ್ರಿಷಾ

    ಚೆನ್ನೈ: ಬಹುಭಾಷಾ ನಟಿ ತ್ರಿಷಾ ಕೊನೆಗೂ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ.

    ತ್ರಿಷಾ ತಮ್ಮ ಇನ್‍ಸ್ಟಾದಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಪೋಸ್ಟ್ ಹಾಕಿಕೊಂಡಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ನಿಮ್ಮ ಬಕೆಟ್ ಲಿಸ್ಟ್ ನಲ್ಲಿರುವ ಕ್ರೇಝಿಯೆಸ್ಟ್ ವಿಷಯ ಏನು ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ತ್ರಿಷಾ “ಲಾಸ್ ವೇಗಾಸ್‍ನಲ್ಲಿ ಮದುವೆಯಾಗುವುದು” ಎಂದು ಉತ್ತರಿಸಿದ್ದಾರೆ. ಈ ಉತ್ತರ ನೋಡಿದ ಅಭಿಮಾನಿಗಳು ತ್ರಿಷಾ ಅತಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಈ ಹಿಂದೆ ತ್ರಿಷಾ ತೆಲುಗು ನಟ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಬಳಿಕ ಇಬ್ಬರ ಸಂಬಂಧ ಸರಿ ಹೋಗಲಿಲ್ಲ. ಹಾಗಾಗಿ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ತ್ರಿಷಾ ಉದ್ಯಮಿ ವರುಣ್ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಡಿಸೆಂಬರ್ 2015ರಲ್ಲಿ ತ್ರಿಷಾ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು. ಕೆಲವೇ ತಿಂಗಳಲ್ಲಿ ಮುರಿದು ಬಿದ್ದಾಗಲೂ ಧೈರ್ಯದಿಂದ ಮಾತನಾಡಿದ್ದರು.

    ಸದ್ಯ ತ್ರಿಷಾ ಮಲೆಯಾಳಂ ನಟ ಮೋಹನ್‍ಲಾಲ್ ನಟಿಸುತ್ತಿರುವ ‘ರಾಮ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ತ್ರಿಷಾ ಡಾ. ವಿನಿತಾ ಪಾತ್ರ ನಿರ್ವಹಿಸುತ್ತಿದ್ದು, ಇಂದ್ರಜಿತ್ ಸುಕುಮಾರನ್, ಆದಿಲ್ ಹುಸೇನ್, ದುರ್ಗಾ ಕೃಷ್ಣನ್, ಸಾಯಿಕುಮಾರ್, ಸುಮನ್ ಸೇರಿದಂತೆ ಹಲವು ಕಲಾವಿದರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.