Tag: ತ್ರಿಶ್ಯೂರ್‌

  • ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ – ಸುರೇಶ್‌ ಗೋಪಿಗೆ ಗೆಲುವು

    ಕೇರಳದಲ್ಲಿ ಮೊದಲ ಬಾರಿಗೆ ಅರಳಿದ ಕಮಲ – ಸುರೇಶ್‌ ಗೋಪಿಗೆ ಗೆಲುವು

    ತಿರುವನಂತಪುರಂ: ಕೇರಳದಲ್ಲಿ (Kerala) ಮೊದಲ ಬಾರಿಗೆ ಕಮಲ ಅರಳಿದೆ. ತ್ರಿಶ್ಯೂರ್‌ನಲ್ಲಿ (Thrissur) ಸುರೇಶ್‌ ಗೋಪಿ (Suresh Gopi) ಜಯಗಳಿಸಿದ್ದಾರೆ.

    74 ಸಾವಿರ ಮತಗಳ ಅಂತರದಿಂದ ಸುರೇಶ್‌ ಗೋಪಿ ಜಯಗಳಿಸಿದ್ದಾರೆ. ಸುರೇಶ್‌ ಗೋಪಿ 4,09,302 ಮತಗಳನ್ನು ಪಡೆದರೆ ಸಮೀಪದ ಪ್ರತಿ ಸ್ಪರ್ಧಿ ಸಿಪಿಐ ವಿಎಸ್‌ ಸುನಿಲ್‌ ಕುಮಾರ್‌ 3,34,462 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ನ (Congress) ಕೆ ಮುರಳೀಧರನ್‌ 3,22,102 ಮತಗಳನ್ನು ಗಳಿಸಿದ್ದಾರೆ.

    2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪನ್‌ ಜಯಗಳಿಸಿದ್ದರು. ಸುರೇಶ್‌ ಗೋಪಿ 2,93,822 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

    ಕೇರಳದಲ್ಲಿ ಬಿಜೆಪಿ ಗೆಲ್ಲಿಸಲೇಬೇಕೆಂದು ಸುರೇಶ್‌ ಗೋಪಿ ಅವರಿಗೆ ಬಿಜೆಪಿ ರಾಜ್ಯಸಭಾ ಸ್ಥಾನಮಾನ ನೀಡಿತ್ತು. 2016 ರಿಂದ 2022ವರೆಗೆ ಸುರೇಶ್‌ ಗೋಪಿ ರಾಜ್ಯಸಭಾ ಸದಸ್ಯರಾಗಿ ಈ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದರು.

  • ಸೊಂಡಿಲಿನಿಂದ ಟಿಟಿ ಪಲ್ಟಿ, 2 ಕಾರು ಜಖಂ – ಮದವೇರಿದ ಆನೆಯಿಂದ ದಾಂಧಲೆ

    ಸೊಂಡಿಲಿನಿಂದ ಟಿಟಿ ಪಲ್ಟಿ, 2 ಕಾರು ಜಖಂ – ಮದವೇರಿದ ಆನೆಯಿಂದ ದಾಂಧಲೆ

    ತಿರುವನಂತಪುರಂ: ದೇವಸ್ಥಾನದ ಉತ್ಸವಕ್ಕೆ (Temple Fair) ಕರೆ ತಂದಿದ್ದ ಆನೆಯೊಂದು (Elephant) ಮದವೇರಿ 2 ಕಾರು, ಒಂದು ಟೆಂಪೋ ಟ್ರಾವೆಲ್ಲರ್‌ ಅನ್ನು ಜಖಂಗೊಳಿಸಿದ ಘಟನೆ ತ್ರಿಶ್ಯೂರ್‌ (Thrissur) ಜಿಲ್ಲೆಯಲ್ಲಿ ನಡೆದಿದೆ.

    ತೃಪ್ರಯಾರ್‌ನಲ್ಲಿರುವ ಶ್ರೀರಾಮ ಕ್ಷೇತ್ರದ ಉತ್ಸವಕ್ಕೆ ಪ್ರತಿ ವರ್ಷ ಆನೆಯನ್ನು ಕರೆ ತರಲಾಗುತ್ತಿದೆ. ಈ ರೀತಿಯಾಗಿ ಕರೆ ತಂದಾಗ ಜನರು ಆನೆಯ  ಫೋಟೋ, ವಿಡಿಯೋ ತೆಗೆದಿದ್ದಾರೆ.
    ಇದನ್ನೂ ಓದಿ: Vijay Diwas: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಿಸಿದ ವೀರಯೋಧರಿಗೆ ಮೋದಿ ನಮನ

    ಈ ಸಂದರ್ಭದಲ್ಲಿ ಆನೆಗೆ ಮದವೇರಿ 2 ಕಾರು, ಒಂದು ಟಿಟಿಯನ್ನು ಸಂಪೂರ್ಣ ಜಖಂಗೊಳಿಸಿದೆ. ಸೊಂಡಿಲು ಬಳಸಿ ಟಿಟಿಯನ್ನು ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿದೆ. ಈ ವೇಳೆ ಅಲ್ಲಿದ್ದ ಜನ ಆನೆಯ ಮೇಲೆ ಕಲ್ಲು ಎಸೆದಿದ್ದಾರೆ.

    ವಿಚಾರ ತಿಳಿದು ತ್ರಿಶ್ಯೂರ್‌ನಿಂದ ಎಲಿಫೆಂಟ್ ಸ್ಕ್ವಾಡ್ ಸದಸ್ಯರು ಆಗಮಿಸಿ ಹಗ್ಗ ಬಳಸಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಂದೂವರೆ ಗಂಟೆಯ ಬಳಿಕ ಆನೆ ಶಾಂತವಾಗಿದೆ.