Tag: ತ್ರಿಶೂರ್

  • ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

    ಟ್ರಾಫಿಕ್‌ನಲ್ಲಿ ಸಿಲುಕಿದ ಅಂಬುಲೆನ್ಸ್ – ರಸ್ತೆಯಲ್ಲಿ ಓಡಿ ಟ್ರಾಫಿಕ್ ಕ್ಲಿಯರ್ ಮಾಡಿದ ASI ಅಪರ್ಣಾ

    ತಿರುವನಂತಪುರ: ವಾಹನಗಳ ಉದ್ದನೆಯ ಸಾಲು, ಭಾರೀ ಟ್ರಾಫಿಕ್ ಜಾಮ್… ಈ ಟ್ರಾಫಿಕ್ (Traffic) ಜಾಮ್ ಮಧ್ಯೆ ನಿರಂತರವಾಗಿ ಕೇಳುತ್ತಿದ್ದ ಅಂಬುಲೆನ್ಸ್ (Ambulence) ಸೈರನ್ ಸದ್ದು… ಇದರ ಮಧ್ಯೆ ಓಡೋಡಿ ಬರುತ್ತಿರುವ ಪೊಲೀಸ್ ಅಧಿಕಾರಿ. ಟ್ರಾಫಿಕ್ ಜಾಮ್‌ನಿಂದ ಅಂಬುಲೆನ್ಸ್‌ನಲ್ಲಿ ಒದ್ದಾಡುತ್ತಿದ್ದ ಜೀವ ಉಳಿಸಲು ಕೇರಳದ ತ್ರಿಶೂರ್ (Thrissur) ನಗರದಲ್ಲಿ ಎಎಸ್‌ಐ ಅಪರ್ಣಾ (ASI Aparna) ಲವ್ ಕುಮಾರ್ ರಸ್ತೆಯಲ್ಲಿ ಕಿ.ಮೀಗಟ್ಟಲೇ ಓಡಿ ಟ್ರಾಫಿಕ್ ಕ್ಲಿಯರ್ ಮಾಡಲು ಪ್ರಯತ್ನ ಪಟ್ಟಿದ್ದಾರೆ.

    ಈ ದೃಶ್ಯ ಈಗ ವೈರಲ್ ಆಗಿದ್ದು, ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಅನ್ನುತ್ತಿದ್ದಾರೆ. ವೈದ್ಯಕೀಯ ಕಾಲೇಜಿನಿಂದ ತ್ರಿಶೂರ್‌ನ ಜುಬಿಲಿ ಆಸ್ಪತ್ರೆಗೆ ರೋಗಿ ಶಿಫ್ಟ್ ಆಗಬೇಕಾಗಿತ್ತು. ಕೊನೆಗೆ ಇವರ ಸಮಯ ಪ್ರಜ್ಞೆಯಿಂದ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದೆ. ಇದನ್ನೂ ಓದಿ: ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ

    ಇನ್ನು ಈ ಪೊಲೀಸ್ ಅಧಿಕಾರಿ ಈ ಹಿಂದೆ ದುಡ್ಡಿನ ಕೊರತೆಯಿಂದ ಮಹಿಳೆಯ ಮೃತದೇಹ ನೀಡದ್ದಕ್ಕೆ ತನ್ನ ಬಂಗಾರದ ಬಳೆಯನ್ನು ನೀಡಿ ಗಿರವಿ ಇಡಲು ಹೇಳಿ ದುಡ್ಡಿನ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಕ್ಯಾನ್ಸರ್ ರೋಗಿಗಳಿಗೆ ತಲೆಗೂದಲನ್ನು ಕೂಡ ದಾನ ಮಾಡಿ ಗಮನ ಸೆಳೆದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ

  • ರೈಲಿಗೆ ಸಿಲುಕಿ ಎರಡನೇ ತರಗತಿ ವಿದ್ಯಾರ್ಥಿ ಸಾವು

    ರೈಲಿಗೆ ಸಿಲುಕಿ ಎರಡನೇ ತರಗತಿ ವಿದ್ಯಾರ್ಥಿ ಸಾವು

    ತಿರುವನಂತಪುರಂ: ರೈಲಿ(Train) ಗೆ ಸಿಲುಕಿ ಎರಡನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕೇರಳದ ತ್ರಿಶೂರ್ ನಡೆದಿದೆ.

    ಬಾಲಕನನ್ನು ಮಹಮ್ಮದ್ ರಿಜ್ವಾನ್ (8) ಎಂದು ಗುರುತಿಸಲಾಗಿದೆ. ಈತ ಕೌಮುಲ್ಲಂಪಾರಂ ನಿವಾಸಿ ಫೈಸಲ್ ಅವರ ಪುತ್ರ. ಇಂದು ಬೆಳಗ್ಗೆ ಮದರಸಾ (Madarasa) ದಿಂದ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಇದನ್ನೂ ಓದಿ: ವೃದ್ಧೆಯನ್ನು ಹತ್ಯೆ ಮಾಡಿ, ಆಕೆಯ ದೇಹವನ್ನ ತುಂಡರಿಸಿ ಗೋಣಿ ಚೀಲದಲ್ಲಿ ಎಸೆದ ಮಗ, ಮೊಮ್ಮಗ

    ರಿಜ್ವಾನ್ ಮದರಸಾದಿಂದ ಮನೆಗೆ ಹಿಂದಿರುಗುತ್ತಿದ್ದನು. ಹೀಗೆ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಎರ್ನಾಕುಲಂ-ಪಾಲಕ್ಕಾಡ್ ಮೆಮು (Ernakulam Palakkad Memu) ಎಕ್ಸ್ ಪ್ರೆಸ್ ರೈಲಿಗೆ ರಿಜ್ವಾನ್ ಸಿಲುಕಿದ್ದು, ಆತನನ್ನು ಸ್ವಲ್ಪ ದೂರ ರೈಲು ಎಳೆದುಕೊಂಡು ಹೋಗಿದೆ. ಪರಿಣಾಮ ರಿಜ್ವಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಥಣಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೋಗಿ ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ!

    ರಸ್ತೆಯಲ್ಲೇ ಅಟ್ಟಾಡಿಸಿಕೊಂಡು ಹೋಗಿ ಅಪ್ಪ-ಅಮ್ಮನ ಮಚ್ಚಿನಿಂದ ಕೊಚ್ಚಿ ಕೊಂದ!

    ತಿರುವನಂತಪುರಂ: ಪಾಪಿ ಮಗನೊಬ್ಬ ತನ್ನ ತಂದೆ-ತಾಯಿಯನ್ನು ಮಚ್ಚಿನಿಂದ ಕೊಚ್ಚಿ ನಿರ್ದಯವಾಗಿ ಕೊಚ್ಚಿ ಕೊಲೆಗೈದ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ.

    ಈ ಗಟನೆ ಇಂದು ಬೆಳಗ್ಗೆ ನಡೆದಿದ್ದು, ಮಗನಿಂದ್ಲೇ ಮೃತಪಟ್ಟ ದುರ್ದೈವಿಗಳನ್ನು ಕುಟ್ಟನ್ ಹಾಗೂ ಚಂದ್ರಿಕಾ ಎಂದು ಗುರುತಿಸಲಾಗಿದೆ. ಅನೀಶ್ ಕೊಲೆ ಆರೋಪಿಯಾಗಿದ್ದು, ಗಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹದಿಂದಲೇ ಹತ್ಯೆ ನಡೆದಿದೆ ಎಂಬುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಮನೆ ಮುಂದೆ ರಸ್ತೆ ಬದಿಯಲ್ಲಿ ಇಬ್ಬರ ಮೃತದೇಹ ದೊರೆತಿದೆ.

    ಮನೆಯಲ್ಲಿ ಆಗಾಗ ಮಗ ಹಾಗೂ ಹತ್ತವರ ನಡುವೆ ಜಗಳ ನಡೆಯುತ್ತಿತ್ತು. ಈ ಜಗಳ ಇಂದು ಬೆಳಗ್ಗೆ ತಾರಕ್ಕೇರಿದ್ದು, ತಂದೆ-ತಾಯಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ. ಅನಿಶ್ ಹೆತ್ತವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ಇಬ್ಬರನ್ನು ರಸ್ತೆಯಲ್ಲಿ ಅಟ್ಟಿಸಿಕೊಂಡು ಹೋಗಿದ್ದಾನೆ ಎಮದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

    ಸದ್ಯ ಅನೀಶ್ ಬಮಧಿಸಿರುವ ಪೊಲಿಸರು, ಕೊಲೆಯ ಹಿಂದಿನ ಉದ್ದೇಶದ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 3 ವರ್ಷದಿಂದ ದೈಹಿಕ ಸಂಪರ್ಕ ಬೆಳೆಸಿ ವಂಚನೆ- ಸತ್ಯ ತಿಳಿದ ಬಳಿಕ ಯುವತಿ ದೂರು

  • ಕೇರಳ ಪ್ರವಾಹ – ಮಾರುತಿ ಸುಜುಕಿಯ 357 ಹೊಸ ಕಾರುಗಳು ಗುಜುರಿಗೆ!

    ಕೇರಳ ಪ್ರವಾಹ – ಮಾರುತಿ ಸುಜುಕಿಯ 357 ಹೊಸ ಕಾರುಗಳು ಗುಜುರಿಗೆ!

    ತಿರುವನಂತಪುರ: ಕೇರಳ ಪ್ರವಾಹಕ್ಕೆ ಒಂದೇ ಕಾರ್ ಶೋರೂಂನ 357 ಹೊಸ ಕಾರುಗಳು ಸಂಪೂರ್ಣ ಹಾಳಾಗಿದ್ದು, ಎಲ್ಲಾ ಕಾರುಗಳನ್ನು ಗುಜುರಿಗೆ ಹಾಕಲು ಶೋರೂಂ ಮಾಲೀಕರು ನಿರ್ಧರಿಸಿದ್ದಾರೆ.

    ಪ್ರವಾಹದಿಂದಾಗಿ ತ್ರಿಶೂರ್ ನ ಮಾರುತಿ ಸುಜುಕಿ ಕಾರು ಡೀಲರ್ ಬಿಆರ್‌ಡಿ ಕಾರ್ ವರ್ಲ್ಡ್ ಶೋರಂನ ಒಟ್ಟು 357 ಹೊಸ ಕಾರುಗಳೂ ನೀರಿನಿಂದ ತುಂಬಿಕೊಂಡು ಸಂಪೂರ್ಣ ಹಾಳಾಗಿ ಹೋಗಿದೆ. ಇದಲ್ಲದೇ 147 ಬಳಸಿದ ಕಾರುಗಳು ಹಾಗೂ 110 ಗ್ರಾಹಕರ ವಾಹನಗಳಿಗಾಗಿರುವ ಹಾನಿಯ ಬಗ್ಗೆಯೂ ಸಹ ವಿಮೆ ಸಮೀಕ್ಷಕರು ಮೌಲ್ಯಮಾಪನ ನಡೆಸುತ್ತಿದ್ದಾರೆ.

    ನಷ್ಟವಾದ 357 ಹೊಸ ಕಾರುಗಳ ಮಾರುಕಟ್ಟೆ ಮೌಲ್ಯ ಜಿಎಸ್‍ಟಿ ಸೇರಿದಂತೆ ಒಟ್ಟು 28.75 ಕೋಟಿ ರೂಪಾಯಿಯಾಗಿದೆ. ಅಲ್ಲದೇ ಶೋರೂಮಿನಲ್ಲಿ ಸುಮಾರು 500 ಹೊಸ ಕಾರುಗಳನ್ನು ಶೇಖರಿಸಿ ಇಡಲಾಗಿತ್ತು, ನೀರಿನ ಪ್ರಮಾಣ ಹೆಚ್ಚಾದ ಕಾರಣ ಕೆಲವು ಕಾರುಗಳನ್ನು ಮಾತ್ರ ಸುರಕ್ಷತಾ ಸ್ಥಳಕ್ಕೆ ರವಾನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

    ಈ ಎಲ್ಲಾ ಕಾರುಗಳಲ್ಲಿ ಡ್ಯಾಶ್‍ಬೋರ್ಡ್‍ನವರೆಗೂ ನೀರು ತುಂಬಿದ್ದ ಕಾರಣ ವಿಮಾ ಸಂಸ್ಥೆಯವರು `ಸಿ’ ವಿಭಾಗದಡಿ ಸೇರಿಸಿ ಸಂಪೂರ್ಣ ನಷ್ಟ ಎಂದು ವರದಿ ನೀಡಿದ್ದಾರೆ. ಹೀಗಾಗಿ ವಾಹನಗಳನ್ನು ಕಡಿಮೆ ಬೆಲೆಗೆ ಪುಣೆ, ಜೈಪುರ ಹಾಗೂ ಅಹಮದಾಬಾದಿನ ಗುಜುರಿದಾರರಿಗೆ ಮಾರಲು ಕಂಪೆನಿ ನಿರ್ಧರಿಸಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಶೋರೂಂ ಅಧಿಕಾರಿಗಳು, ಪ್ರವಾಹದಿಂದ ಸಂಪೂರ್ಣ ಹಾಳಾಗಿರುವ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಅಲ್ಲದೇ ಆ ಕಾರುಗಳ ಮಾರಾಟವನ್ನು ಸಹ ನಿಷೇಧಿಸಲಾಗುತ್ತದೆ. ಅಂತಹ ವಾಹನಗಳು ನಮ್ಮ ಶೋರೂಂಗಳಲ್ಲಿ ಕಾಣಿಸುವುದಿಲ್ಲ ಎಂದು ತಿಳಿಸಿದ್ದಾರೆ.

    ಕೇರಳ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮನೋಜ್ ಕುರುಪ್ ಮಾತನಾಡಿ, ಪ್ರವಾಹದಲ್ಲಿ ಹಾನಿಯಾಗಿರುವ ವಾಹನಗಳನ್ನು ಮತ್ತೆ ಶೋರೂಂಗಳಲ್ಲಿ ಮಾರಾಟಕ್ಕೆ ಇಡುವುದಿಲ್ಲ. ವಾಹನಗಳು ವಿಮೆಯ ವಿಧಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಯಾವ ಡೀಲರ್ ಸಹ ಅಂತಹ ವಾಹನಗಳನ್ನು ಮಾರಾಟ ಮಾಡುವುದಿಲ್ಲ. ಕೇರಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವು ಆಟೋಮೊಬೈಲ್ ಕಂಪನಿಗಳ ಸುಮಾರು 1,000 ಹೊಸ ಕಾರುಗಳು ಹಾಗೂ 7,000 ದಿಂದ 8,000 ಗ್ರಾಹಕರ ಕಾರುಗಳು ಹಾನಿಗೀಡಾಗಿವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv