Tag: ತ್ರಿಶಾ ಕೃಷ್ಣನ್‌

  • ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ

    – 42ನೇ ವಯಸ್ಸಿನಲ್ಲಿ ಮದ್ವೆಯಾಗ್ತಿದ್ದಾರಾ ಖ್ಯಾತ ನಟಿ

    ಮದ್ವೆ ವಿಚಾರಕ್ಕೆ ಬಹುಭಾಷಾ ನಟಿ ತ್ರಿಶಾ (Trisha Krishnan) ಸುದ್ದಿಯಲ್ಲಿದ್ದಾರೆ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿ. ನಟ ಪುನೀತ್ ರಾಜ್‌ಕುಮಾರ್ ಅಭಿನಯದ ʻಪವರ್‌ʼ ಸಿನಿಮಾದಲ್ಲಿ ನಾಯಕಿ ಕನ್ನಡಿಗರ ಮನ ಗೆದ್ದಿದ್ದರು.

    ಸೋಷಿಯಲ್‌ ಮೀಡಿಯಾದಲ್ಲಿ (Social Media) ನಟಿ 42ನೇ ವಯಸ್ಸಿನಲ್ಲಿ ಮದ್ವೆಯಾಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಚಂಡೀಗಢ ಮೂಲದ ಉದ್ಯಮಿಯೊಂದಿಗೆ ನಟಿ ಹಸೆಮಣೆ ಏರುತ್ತಿದ್ದಂತೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಇನ್‌ಸ್ಟಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ನಟಿ ವದಂತಿಗಳಿಗೆ (Marriage Rumours) ತೆರೆ ಎಳೆದಿದ್ದಾರೆ.

    ʻಜನ ನನಗಾಗಿ ನನ್ನ ಲೈಫ್‌ ಪ್ಲ್ಯಾನ್‌ ಮಾಡಿದಾಗ ನನಗೆ ತುಂಬಾ ಇಷ್ಟ. ಅವ್ರು ನನ್ನ ಹನಿಮೂನ್‌ ಸಹ‌ ನಿಗದಿಮಾಡೋದನ್ನೂ ಕಾಯ್ತಿದ್ದೀನಿʼ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ಬೇಸರದ ಎಮೋಜಿಯನ್ನು ಹಾಕಿದ್ದಾರೆ.

    ನಟಿ ತ್ರಿಶಾ ಆಗಾಗ್ಗೆ ಮದ್ವೆ ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ಈ ಹಿಂದೆ ನಟ ಸಿಂಬು ಹಾಗೂ ಬಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್‌ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. 2015 ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದು ಸಹ ಶೀಘ್ರದಲ್ಲೇ ರದ್ದಾಯಿತು. ಮದ್ವೆ ಬಳಿಕವೂ ಸಿನಿಮಾದಲ್ಲಿ ನಟಿಸುವ ಬಗ್ಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹಾಗಾಗಿ ನಿಶ್ಚಿತಾರ್ಥದ ಬಳಿಕ ಸಂಬಂಧವನ್ನ ರದ್ದುಗೊಳಿಸಲಾಯ್ತು. ಆದ್ರೆ ಈವರೆಗೆ ನಟಿಯ ಕುಟುಂಬಸ್ಥರು ಮದ್ವೆ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

  • ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ

    ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ

    ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್‌ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಸದಸ್ಯ ಎ.ವಿ.ರಾಜು (A.v Raju) ಅಸಂಬದ್ಧ ಹೇಳಿಕೆ ನೀಡಿದ್ದರು. ಈ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ತ್ರಿಶಾ (Trisha Krishnan) ಕೂಡ ಪ್ರತಿಕ್ರಿಯಿಸಿ ತಕ್ಕ ಪಾಠ ಕಲಿಸೋದಾಗಿ ಹೇಳಿದ್ದರು. ಅದರಂತೆ ಎ.ವಿ ರಾಜು ನಡೆಗೆ ಇದೀಗ ತ್ರಿಶಾ ಕಾನೂನು ಸಮರ ಸಾರಿದ್ದಾರೆ.

    ನಟಿ ತ್ರಿಶಾ ಅವರು ಎ.ವಿ ರಾಜು ಅವರ ಕುರಿತ ನೋಟಿಸ್ ಅನ್ನು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎ.ವಿ ರಾಜು ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪರಿಹಾರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ರಾಜು ಕೊಟ್ಟಿರುವ ಹೇಳಿಕೆಗಳಿಂದ ನಟಿ ತ್ರಿಶಾ ಮಾನಸಿಕವಾಗಿ ನೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಮಾಧ್ಯಮಗಳಲ್ಲಿ ಅವಹೇಳನಕಾರಿ ಕಾಮೆಂಟ್‌ಗಳನ್ನು ನೀಡದಂತೆ ಎಚ್ಚರಿಸಿದ್ದಾರೆ. ಇದನ್ನೂ ಓದಿ:‘ನಮ್ ಗಣಿ ಬಿ.ಕಾಂ ಪಾಸ್’ ಪಾರ್ಟ್ 2ಗೆ ಅಭಿಷೇಕ್ ಶೆಟ್ಟಿ ಸಿದ್ಧತೆ

    ಈಗಾಗಲೇ ರಾಜು (A.v Raju) ಮಾಡಿರುವ ಹೇಳಿಕೆಗಳನ್ನು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್‌ ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾಗಳಿಂದ ಸಂಪೂರ್ಣ ಅಳಿಸಿ ಹಾಕಬೇಕು ಎಂದು ಹೇಳಿದ್ದಾರೆ. ಈ ನೋಟಿಸ್ ಸ್ವೀಕರಿಸಿದ 24 ಗಂಟೆಗಳ ಒಳಗೆ ನಟಿ ತ್ರಿಶಾಗೆ ಎ.ವಿ ರಾಜು ಮತ್ತೆ ಕ್ಷಮೆಯಾಚಿಸಬೇಕು. ಇಲ್ಲದೆ ಹೋದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ತ್ರಿಶಾ ವಾರ್ನಿಂಗ್ ಕೊಟ್ಟಿದ್ದಾರೆ.

    ನಿನ್ನೆಯಷ್ಟೇ (ಫೆ.21) ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದರು. ಆದರೂ ಆಡಿದ ಮಾತಿಗೆ ರಾಜು ಬೆಲೆ ತೆರಬೇಕಾಗಿದೆ.

    ಪದೇ ಪದೇ ನಟಿ ತ್ರಿಶಾ ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳುನಾಡಿನಲ್ಲಿ ನಡೆಯುತ್ತಿವೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾರ ಬಗ್ಗೆ ಅವಹೇಳನ ಮಾಡುವಂತ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ನಾಡಿನ ರಾಜಕೀಯ ಮುಖಂಡ ಎ.ವಿ.ರಾಜು ನಾಲಿಗೆ ಹರಿಬಿಟ್ಟಿದ್ದರು. ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗಾಗಿ ಕಾನೂನು ಕ್ರಮ ಮೂಲಕವೇ ನಟಿ ಉತ್ತರ ಕೊಟ್ಟಿದ್ದಾರೆ.

  • Leo ಪೋಸ್ಟರ್‌ ಔಟ್- ರಗಡ್‌ ಲುಕ್‌ನಲ್ಲಿ ಅರ್ಜುನ್ ಸರ್ಜಾ

    Leo ಪೋಸ್ಟರ್‌ ಔಟ್- ರಗಡ್‌ ಲುಕ್‌ನಲ್ಲಿ ಅರ್ಜುನ್ ಸರ್ಜಾ

    ಟ ಅರ್ಜುನ್ ಸರ್ಜಾ (Arjun Sarja) ಬಹುಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಜಯ್ ದಳಪತಿ (Vijay Thalapathy) ಜೊತೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಬ್ಬರಿಸಲಿದ್ದಾರೆ. ಚಿತ್ರದ ಲುಕ್ ಕೂಡ ರಿವೀಲ್ ಆಗಿದ್ದು, ರಗಡ್ ಆಗಿ ನಟ ಕಾಣಿಸಿಕೊಂಡಿದ್ದಾರೆ.

    ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರಗಳ ಜೊತೆಗೆ ಯಾವುದೇ ಪಾತ್ರವಾಗಿದ್ದರೂ, ಆ ಪಾತ್ರವೇ ತಾವಾಗಿ ನಟಿಸುವ ಸಹಜ ಅರ್ಜುನ್ ಸರ್ಜಾ ಈಗ ‘ಲಿಯೋ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹೆರಾಲ್ಡ್ ದಾಸ್’ ಪಾತ್ರದಲ್ಲಿ ನಟ ಜೀವ ತುಂಬಿದ್ದಾರೆ. ಸದ್ಯ ಅನಾವರಣವಾಗಿರುವ ಪೋಸ್ಟರ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

    ವಿಜಯ್ ದಳಪತಿ, ತ್ರಿಶಾ ಕೃಷ್ಣನ್ (Thrisha Krishnan) ನಟನೆಯ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರ ರೋಲ್ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಇದನ್ನೂ ಓದಿ:ಗ್ರಾಮಾಯಣಕ್ಕೆ ಎಂಟ್ರಿ ಕೊಟ್ಟ ಲೂಸ್ ಮಾದ ಯೋಗಿ

    ಅಕ್ಟೋಬರ್ 5ಕ್ಕೆ ‘ಲಿಯೋ’ (Leo Film) ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಲಿದೆ. ಚಿತ್ರದ ಝಲಕ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಸಿನಿಮಾ ಯಾವಾಗ ತೆರೆ ಕಾಣಲಿದೆ ಎಂದು ದಳಪತಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಮಲ್ ಹಾಸನ್‌ಗೆ ನಾಯಕಿಯಾದ ಕನ್ನಡದ ನಟಿ ತ್ರಿಶಾ

    ಕಮಲ್ ಹಾಸನ್‌ಗೆ ನಾಯಕಿಯಾದ ಕನ್ನಡದ ನಟಿ ತ್ರಿಶಾ

    ‘ಪೊನ್ನಿಯನ್ ಸೆಲ್ವನ್’ (Ponniyin Selvan) ಚಿತ್ರದ ಸಕ್ಸಸ್ ನಂತರ ತ್ರಿಶಾ ಕೃಷ್ಣನ್‌ಗೆ (Thrisha Krishnan) ಬೇಡಿಕೆ ಜಾಸ್ತಿ ಆಗಿದೆ. ಸ್ಟಾರ್ ಹೀರೋಗಳ ಬಿಗ್ ಬಜೆಟ್ ಸಿನಿಮಾಗಳಿಗೆ ನಾಯಕಿಯಾಗಿ ಕನ್ನಡದ ಪವರ್ (Power) ಚಿತ್ರದ ನಟಿ ತ್ರಿಶಾ ಕೃಷ್ಣನ್ ಬುಕ್ ಆಗಿದ್ದಾರೆ. ಹೀಗಿರುವಾಗ ಅವರ ಹೊಸ ಚಿತ್ರದ ಬಗ್ಗೆ ಅಪ್‌ಡೇಟ್ ಸಿಕ್ಕಿದೆ.

    ವಿಜಯ್ ದಳಪತಿ (Vijay Thalapathy) ನಟನೆಯ ಲಿಯೋ (Leo Film) ಚಿತ್ರದಲ್ಲಿ ತ್ರಿಶಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಶ್ಮೀರ ಸೇರಿದಂತೆ ಹಲವೆಡೆ ಸಿನಿಮಾದ ಚಿತ್ರೀಕರಣ ನಡೆದಿದೆ. ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಅಜಿತ್ (Ajith) ನಟನೆಯ ‘ವಿದಮುಯರ್ಚಿ’ ಸಿನಿಮಾದಲ್ಲಿ ತ್ರಿಶಾ ಹೀರೋಯಿನ್ ಆಗಿದ್ದು, ದುಬೈನಲ್ಲಿ ಶೂಟಿಂಗ್ ನಡೆಯುತ್ತಿದೆ. ಈ ಬೆನ್ನಲ್ಲೇ ಕಮಲ್ ಹಾಸನ್‌ಗೆ ನಾಯಕಿಯಾಗಿ ನಟಿ ಸೆಲೆಕ್ಟ್ ಆಗಿದ್ದಾರೆ. ಇದನ್ನೂ ಓದಿ:ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆಗೆ ‘ಬನ್ ಟೀ’ಯಲ್ಲಿದೆ ಪರಿಹಾರ

    ಮಣಿರತ್ನಂ (Maniratnam) ನಿರ್ದೇಶನದ ಸಿನಿಮಾದಲ್ಲಿ ಕಮಲ್ ಹಾಸನ್ (Kamal Haasan) ಹೀರೋ ಆಗಿದ್ದು, ಇದು ಕಮಲ್ 234ನೇ ಚಿತ್ರವಾಗಿದೆ. ಈ ಚಿತ್ರಕ್ಕೆ ಕಮಲ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

    40ರ ಹರೆಯದಲ್ಲೂ ಫಿಟ್ ಆಗಿರೋ ತ್ರಿಶಾಗೆ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಫಿಕ್ಸ್ ಆಗ್ತಿದ್ದಾರೆ. 2014ರಲ್ಲಿ ಕನ್ನಡದ ‘ಪವರ್’ ಸಿನಿಮಾದಲ್ಲಿ ಪುನೀತ್‌ಗೆ(Puneeth Rajkumar) ನಾಯಕಿಯಾಗಿ ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]