Tag: ತ್ರಿವಿಕ್ರಮ್

  • BBK 11: ರಜತ್, ತ್ರಿವಿಕ್ರಮ್ ನಡುವೆ ಫೈಟ್- ಮತ್ತೆ ರದ್ದಾಗುತ್ತಾ ಟಾಸ್ಕ್?

    BBK 11: ರಜತ್, ತ್ರಿವಿಕ್ರಮ್ ನಡುವೆ ಫೈಟ್- ಮತ್ತೆ ರದ್ದಾಗುತ್ತಾ ಟಾಸ್ಕ್?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟ ಶುರುವಾದ ದಿನದಿಂದ ಒಂದಲ್ಲಾ ಒಂದು ಕಿರಿಕ್‌ನಿಂದಲೇ ಹೈಲೆಟ್ ಆಗುತ್ತಲೇ ಇದೆ. ಈಗ ಟಾಸ್ಕ್‌ವೊಂದರಲ್ಲಿ ರಜತ್ (Rajath) ಮತ್ತು ತ್ರಿವಿಕ್ರಮ್ (Trivikram) ನಡುವೆ ಕಿರಿಕ್ ಆಗಿದೆ. ಇದರಿಂದ ಆಟವೇ ರದ್ದಾಗುವ ಹಂತಕ್ಕೆ ಬಂದಿದೆ.

    ಇತ್ತೀಚೆಗೆ ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳು ಸಾಕಷ್ಟು ಅರ್ಧಕ್ಕೆ ನಿಂತು ಹೋಗಿದ್ದು ಇದೆ. ಇದೀಗ ಟಾಸ್ಕ್ ಆಡುತ್ತಿದ್ದಾಗ ಉಸ್ತುವಾರಿಗಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರ ನಡೆಗೆ ಮನೆ ಮಂದಿ ಗರಂ ಆಗಿದ್ದಾರೆ. ಇದನ್ನೂ ಓದಿ:ಯಾರನ್ನೂ ದ್ವೇಷಿಸಲಿಲ್ಲ – ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ

    ಒಂದು ತಂಡಕ್ಕೆ ರಜತ್ ಉಸ್ತುವಾರಿಯಾದರೇ, ಮತ್ತೊಂದು ತಂಡದಲ್ಲಿ ತ್ರಿವಿಕ್ರಮ್ ಉಸ್ತುವಾರಿಯಾಗಿದ್ದಾರೆ. ಡ್ರಮ್ ಅನ್ನು ಉರುಳಿಸುತ್ತಾ ಚೀಲಗಳನ್ನು ಸಂಗ್ರಹಿಸಿ, ಬಾರದ ವಸ್ತುವನ್ನು ಮೇಲೆ ಏರಿಸುವ ತಂಡ ಗೆಲ್ಲುತ್ತದೆ. ಇದೇ ಟಾಸ್ಕ್ ಆಡುತ್ತಿದ್ದಾಗ ತ್ರಿವಿಕ್ರಮ್ ತಂಡದವರು ಡ್ರಮ್‌ನಿಂದ ಆಚೆ ಬರುತ್ತಾರೆ. ಆಗ ಉಸ್ತುವಾರಿ ರಜತ್ ಟಾಸ್ಕ್ ಆಡುತ್ತಿದ್ದವರನ್ನು ತಡೆಯುತ್ತಾರೆ. ಹೀಗಾಗಿ ಇದೇ ವಿಚಾರಕ್ಕೆ ಇಬ್ಬರು ಉಸ್ತುವಾರಿಗಳ ಮಧ್ಯೆ ಗಲಾಟೆ ನಡೆದಿದೆ. ಆದರೆ ಈ ಬಾರಿಯೂ ಕೂಡ ಬಿಗ್ ಬಾಸ್ ಕೊಟ್ಟ ಟಾಸ್ಕ್ ರದ್ದಾಗುತ್ತಾ? ಎಂಬ ಕುತೂಹಲದಲ್ಲಿದ್ದಾರೆ ವೀಕ್ಷಕರು.

    ಅಂದಹಾಗೆ, ಈ ಬಾರಿ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಮೋಕ್ಷಿತಾ, ಭವ್ಯಾ, ಧನರಾಜ್, ಚೈತ್ರಾ, ತ್ರಿವಿಕ್ರಮ್, ಶಿಶಿರ್, ರಜತ್, ಹನುಮಂತ ನಾಮಿನೇಟ್ ಹಾಟ್ ಸೀಟ್‌ನಲ್ಲಿದ್ದಾರೆ. ಕಳೆದ ಎಲಿಮಿನೇಷನ್ ನಡೆಯದ ಹಿನ್ನೆಲೆ ಈ ಬಾರಿ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಎಲ್ಲದ್ದಕ್ಕೂ ವಾರಾಂತ್ಯ ಉತ್ತರ ಸಿಗಲಿದೆ.

  • BBK 11: ಶಿಶಿರ್‌ ಹೆಣ್ಮಕ್ಕಳ ಹಿಂದೆ ಸುತ್ತೋ ಜೊಲ್ಲ ಎಂದ್ರಾ ಚೈತ್ರಾ?- ರಣರಂಗವಾಯ್ತು ದೊಡ್ಮನೆ

    BBK 11: ಶಿಶಿರ್‌ ಹೆಣ್ಮಕ್ಕಳ ಹಿಂದೆ ಸುತ್ತೋ ಜೊಲ್ಲ ಎಂದ್ರಾ ಚೈತ್ರಾ?- ರಣರಂಗವಾಯ್ತು ದೊಡ್ಮನೆ

    ಬಿಗ್ ಬಾಸ್ ಮನೆಯ (Bigg Boss Kannada 11) ಅಸಲಿ ಆಟ ಈಗ ಶುರುವಾಗಿದೆ. 70ನೇ ದಿನದತ್ತ ಆಟ ಮುನ್ನುಗ್ಗುತ್ತಿದೆ. ಇದೀಗ ಎಂದಿನಂತೆ ನಾಮಿನೇಷ್ ಪ್ರಕ್ರಿಯೆ  ನಡೆದಿದೆ. ಚೈತ್ರಾರವರು ತ್ರಿವಿಕ್ರಮ್‌ಗೆ ನಾಮಿನೇಟ್ ಮಾಡಿದ್ದಾರೆ. ಈ ವೇಳೆ, ತ್ರಿವಿಕ್ರಮ್ ವಿರುದ್ಧ ತಿರುಗಿಬಿದ್ದ ಚೈತ್ರಾಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಶಿಶಿರ್ (Shishir) ಹೆಣ್ಮಕ್ಕಳ ಹಿಂದೆ ತಿರುಗೋ ಜೊಲ್ಲ ಎಂದು ಚೈತ್ರಾ ಹೇಳಿದ್ದನ್ನು ತ್ರಿವಿಕ್ರಮ್ ಬಾಯ್ಬಿಟ್ಟಿದ್ದಾರೆ.

    ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ‘ಬಿಗ್ ಬಾಸ್’ ಟಾಸ್ಕ್ ನೀಡಲಾಗಿದೆ. ಆಗ ಚೈತ್ರಾ ಅವರು ತ್ರಿವಿಕ್ರಮ್‌ಗೆ ನಾಮಿನೇಟ್ ಮಾಡಿ ಕೊಟ್ಟಿರುವ ಕಾರಣ ಸಿಟ್ಟು ತರಿಸಿದೆ. ತ್ರಿವಿಕ್ರಮ್ ರವರು ಎಲ್ಲರನ್ನು ಮ್ಯಾನಿಫುಲೇಟ್ ಮಾಡುತ್ತಾರೆ. ನೀವು ಮೋಕ್ಷಿತಾರನ್ನು ಸೈಕೋ ಎನ್ನುತ್ತೀರಾ ಎಂದು ಈ ವೇಳೆ ಚೈತ್ರಾ ಬಾಯ್ಬಿಟ್ಟಿದ್ದಾರೆ. ಅದಕ್ಕೆ ರಾಂಗ್ ಆದ ತ್ರಿವಿಕ್ರಮ್, ನೀವು ಅಣ್ಣ ಅಂತೀರಾ ಶಿಶಿರ್‌ಗೆ ಅವರನ್ನೇ ಹೆಣ್ಮುಕ್ಕಳ ಹಿಂದೆ ತಿರುಗೋ ಜೊಲ್ಲ ಎಂದಿದ್ದೀರಾ ಎಂದು ತ್ರಿವಿಕ್ರಮ್ ತಿರುಗೇಟು ನೀಡಿದ್ದಾರೆ.

    ಇದನ್ನು ಕೇಳಿ ಶಿಶಿರ್‌ಗೆ ಶಾಕ್ ಆಗಿದೆ. ನಾನು ಹೀಗೆಲ್ಲಾ ಹೇಳಿಯೇ ಎಂದು ಚೈತ್ರಾ ವಾದ ಮಾಡಿದ್ದಾರೆ. ನನಗೆ ಇದರ ಬಗ್ಗೆ ಕ್ಲ್ಯಾರಿಟಿ ಸಿಗೋವರೆಗೂ ನಾನ್ ಮುಂದೆ ಹೋಗಲ್ಲ ಎಂದು ಶಿಶಿರ್ ಪಟ್ಟು ಹಿಡಿದಿದ್ದಾರೆ. ಮಾನ, ಮರ್ಯಾದೆ ಕಳೆದುಕೊಳ್ಳೋಕೆ ಬಂದಿಲ್ಲ ಇಲ್ಲಿ ಎಂದು ಶಿಶಿರ್ ಗುಡುಗಿದ್ದಾರೆ.

    ಫೈರ್ ಬ್ರ್ಯಾಂಡ್ ಚೈತ್ರಾ ಮಾತು ಎಲ್ಲರ ತಲೆ ಕೆಡಿಸಿದೆ. ನಾಮಿನೇಷನ್ ಪ್ರಕ್ರಿಯೆಯಿಂದ ಸ್ಪರ್ಧಿಗಳ ನಡುವೆ ಬೆಂಕಿ ಬಿದ್ದಿದೆ. ಮುಂದೇನು ಆಗುತ್ತೆ ಎಂಬುದನ್ನು ಎಪಿಸೋಡ್ ನೋಡಿ ತಿಳಿದುಕೊಳ್ಳಬೇಕಿದೆ.

  • BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

    BBK 11: ಮೋಕ್ಷಿತಾ ಎರಡು ತಲೆ ನಾಗರಹಾವು: ಗುಡುಗಿದ ತ್ರಿವಿಕ್ರಮ್

    ದೊಡ್ಮನೆ ಇದೀಗ ಬಿಗ್ ಬಾಸ್ ಸಾಮ್ರಾಜ್ಯವಾಗಿ ಬದಲಾಗಿದೆ. ಉಗ್ರಂ ಮಂಜು (Ugramm Manju) ರಾಜನಾಗಿ ಮನೆಯನ್ನು ಆಳುತ್ತಿದ್ದಾರೆ. ಮಂಜು ಸಾಮ್ರಾಜ್ಯದಲ್ಲಿ ಬಿಗ್ ಬಾಸ್ ನಾಮಿನೇಷನ್ ವಿಭಿನ್ನವಾಗಿದೆ ನಡೆದಿದೆ. ಈ ವೇಳೆ, ಮೋಕ್ಷಿತಾಗೆ ತ್ರಿವಿಕ್ರಮ್ ಎರಡು ತಲೆ ನಾಗರಹಾವು ಎಂದು ಗುಡುಗಿದ್ದಾರೆ. ಇದನ್ನೂ ಓದಿ:ಅನುಷಾ ಜೊತೆಗಿನ ಮದುವೆ ಪ್ರಪೋಸಲ್‌ಗೆ ಧರ್ಮ ಹೇಳೋದೇನು?

    ಬಿಗ್ ಬಾಸ್ ಮನೆಯಲ್ಲಿರುವ ಪ್ರಜೆಯ ಫೋಟೋವನ್ನು ಬಾಣದಿಂದ ಚುಚ್ಚಿ ಮನೆಯ ಮುಖ್ಯದ್ವಾರದಿಂದ ಹೊರಹೋಗುವಂತೆ ಹೊಡೆದು ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ನಿಯಮ ಹೇಳಿರುತ್ತಾರೆ. ಅದರಂತೆ ಮೋಕ್ಷಿತಾ ಪೈ (Mokshitha Pai) ಅವರು ನಾಮಿನೇಷನ್‌ಗೆ ಭವ್ಯ ಗೌಡ ಹಾಗೂ ತ್ರಿವಿಕ್ರಮ್ ಹೆಸರನ್ನು ಹೇಳುತ್ತಾರೆ. ಮಂಜು ಮುಂದೆ ತ್ರಿವಿಕ್ರಮ್ (Trivikram) ಬಿಲ್ಡಪ್ ಕೊಡುತ್ತಾರೆ. ಆಚೆ ಬಂದ್ಮೇಲೆ ತ್ರಿವಿಕ್ರಮ್‌ ಅದೇ ಮಂಜು ಬಗ್ಗೆ ಏನೂ ಅಲ್ಲ ಎನ್ನುವಂತೆ ಮಾತನಾಡುತ್ತಾರೆ ಎಂದು ಮೋಕ್ಷಿತಾ ಕಾರಣ ಕೊಟ್ಟಿದ್ದಾರೆ. ಅದಕ್ಕೆ, ಉಗ್ರಂ ಮಂಜು ಅವರು ಅದು ನಂಬಿಕೆ ದ್ರೋಹ ಎಂದು ತ್ರಿವಿಕ್ರಮ್‌ ಮೇಲೆ ಕೂಗಾಡಿದ್ದಾರೆ.

    ಮೋಕ್ಷಿತಾ ನೀಡಿರುವ ಕಾರಣಕ್ಕೆ ತ್ರಿವಿಕ್ರಮ್ ತಮ್ಮನ್ನು ಸಮರ್ಥಿಸಿಕೊಂಡು, ನಾನು ಇವರನ್ನು ಮ್ಯಾನಿಪುಲೇಟ್ ಮಾಡುತ್ತಿಲ್ಲ. ನಿಜವಾಗಿಯೂ ಮಾಡ್ತಿರೋದು ಇವರು. ಅದಕ್ಕೆ ಸಿಟ್ಟಿಗೆದ್ದ ಉಗ್ರಂ ಮಂಜು, ಮಾತು ಬರುತ್ತದೆ ಎಂದು ನೀವು ಮಾತನಾಡಬೇಡಿ ಎನ್ನುತ್ತಾರೆ. ಆಗ ನನ್ನನ್ನು ಗೋಮುಖ ವ್ಯಾಘ್ರ ಎನ್ನುತ್ತಾರೆ. ನಿಜವಾಗಿಯೂ ಇವರು ಎರಡು ತಲೆ ನಾಗರಹಾವು ಎಂದು ಮೋಕ್ಷಿತಾ ವಿರುದ್ಧ ತ್ರಿವಿಕ್ರಮ್ ರೊಚ್ಚಿಗೆದ್ದಿದ್ದಾರೆ.

    ಕಳೆದ ವಾರಾಂತ್ಯ ಧರ್ಮ ಕೀರ್ತಿರಾಜ್ ಅವರ ಎಲಿಮಿನೇಷನ್ ನಡೆದಿದೆ. ಈ ವಾರ ಇನ್ನೂಳಿದ ಸ್ಪರ್ಧಿಗಳ ನಡುವೆ ಉಳಿವಿಕೆಗಾಗಿ ಜಟಾಪಟಿ ಶುರುವಾಗಿದೆ. ಬಿಗ್ ಬಾಸ್‌ನಲ್ಲಿ ರಾಜನಾಗಿ ಆಳ್ವಿಕೆ ಮಾಡುತ್ತಿರುವ ಉಗ್ರಂ ಮಂಜು ದರ್ಬಾರ್ ಜೋರಾಗಿದೆ. ಹಾಗಾದ್ರೆ ಮುಂದೆ ಏನೆಲ್ಲಾ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

  • BBK 11: ನಾಮಿನೇಷನ್‌ನಲ್ಲಿ ಒಡೆದ ಒಗ್ಗಟ್ಟು- ತ್ರಿವಿಕ್ರಮ್‌ ಮೇಲೆ ಉಗ್ರಂ ಮಂಜು ಕೆಂಡ

    BBK 11: ನಾಮಿನೇಷನ್‌ನಲ್ಲಿ ಒಡೆದ ಒಗ್ಗಟ್ಟು- ತ್ರಿವಿಕ್ರಮ್‌ ಮೇಲೆ ಉಗ್ರಂ ಮಂಜು ಕೆಂಡ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 8ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಹನುಮಂತ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಸ್ಪರ್ಧಿಗಳು ಮತ್ತು ಜನರ ಮನೆಗೆದ್ದಿದ್ದಾರೆ. ಈ ವಾರಾಂತ್ಯ ಕಿಚ್ಚನ ಪಂಚಾಯಿತಿಯಲ್ಲಿ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ದೊಡ್ಮನೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಖಡಕ್ ಎಂಟ್ರಿಯ ನಡುವೆ ನಾಮಿನೇಷನ್ ಪ್ರಕ್ರಿಯೆ ಜರುಗಿದೆ. ಈ ವೇಳೆ, ತ್ರಿವಿಕ್ರಮ್ ಮತ್ತು ಉಗ್ರಂ ಮಂಜು (Ugramm Manju) ನಡುವೆ ವಾಕ್ಸಮರ ನಡೆದಿದೆ. ತ್ರಿವಿಕ್ರಮ್‌ ಮೇಲೆ ಮಂಜು ಕೆಂಡಕಾರಿದ್ದಾರೆ.

    ಇಂದಿನ ಸಂಚಿಕೆಯ ಬಿಗ್ ಬಾಸ್ ಪ್ರೋಮೋದಲ್ಲಿ 50ನೇ ವಾರಕ್ಕೆ ಕಾಲಿಟ್ಟ ಮನೆ ಮಂದಿಗೆ ನಾಮಿನೇಷನ್ ಬಿಸಿ ಮುಟ್ಟಿಸಲಾಗಿದೆ. ಮಡಿಕೆಯನ್ನು ಕೋಲಿನಿಂದ ಹೊಡೆದು ನಾಮಿನೇಟ್ ಮಾಡಬೇಕಿತ್ತು. ಅದರಂತೆ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ನಾಮಿನೇಷನ್‌ಗೆ ಹೆಸರನ್ನು ತೆಗೆದುಕೊಂಡು ಮಡಿಕೆಯನ್ನು ಹೊಡೆದು ಹಾಕಿದ್ದಾರೆ. ಇದನ್ನೂ ಓದಿ:‘ಎಮರ್ಜೆನ್ಸಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್- ಜ.17ಕ್ಕೆ ಕಂಗನಾ ಸಿನಿಮಾ ರಿಲೀಸ್

    ಇದೇ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮೋಕ್ಷಿತಾ (Mokshitha Pai) ಅವರು ಮಂಜುರನ್ನು ನಾಮಿನೇಟ್ ಮಾಡಿದ್ದಾರೆ. ಮಂಜಣ್ಣನ ಕೆಲವು ಮಾತುಗಳು ನನಗೆ ಕುಗ್ಗಿಸುತ್ತದೆ ಅಂತ ಹೇಳಿದ್ದಾರೆ. ಅದಕ್ಕೆ ಉಗ್ರಂ ಮಂಜು ಅವರು ಮೋಕ್ಷಿತಾಗೆ ತಿರುಗೇಟು ನೋಡಿದ್ದಾರೆ. ಇನ್ಮುಂದೆ ನನಗೆ ಅಣ್ಣ ಅಂತ ಕರೆಯಬೇಡ ಎಂದು ಹೇಳಿ ಮೋಕ್ಷಿತಾಗೆ ನಾಮಿನೇಟ್ ಮಾಡಿದ್ದಾರೆ. ಇದಲ್ಲದೇ, ತ್ರಿವಿಕ್ರಮ್ (Trivikram) ಹಾಗೂ ಉಗ್ರಂ ಮಂಜು ನಡುವೆಯೂ ವಾದ ವಿವಾದ ನಡೆದಿದೆ. ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಒಬ್ಬರಿಗೊಬ್ಬರು ನಾಮಿನೇಟ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಈ ಇಬ್ಬರು ಜೋರು ಧ್ವನಿಯಲ್ಲಿ ಮಾತಾಡಿದ್ದಾರೆ.

    ಪರ್ಸನಲ್ ಆಗಿ ಟಾರ್ಗೆಟ್ ಮಾಡುತ್ತಾರೆ ಎಂದು ಹೇಳುತ್ತಾ ಮಂಜುರನ್ನು ತ್ರಿವಿಕ್ರಮ್ ನಾಮಿನೇಟ್ ಮಾಡಿದ್ದಾರೆ. ಎಲ್ಲರನ್ನೂ ತುಳಿದು ಮೇಲಕ್ಕೆ ಬರಬೇಕು ಅನ್ನೋ ಮನೋಭಾವ ನಿನಗಿದೆ ಎಂದು ತ್ರಿವಿಕ್ರಮ್‌ಗೆ ಮಂಜು ತಿರುಗೇಟು ನೀಡಿದ್ದಾರೆ. ಕೆಲಸ ಆಗೋ ತನಕ ಮಾತ್ರ ಇರುತ್ತಾರೆ. ಆಮೇಲೆ ಇರಲ್ಲ ಎಂದು ಮಂಜು ಗುಡುಗಿದ್ದಾರೆ. ಜೋರಾಗಿ ಮಾತನಾಡಲು ನಮಗೂ ಬರುತ್ತ ಎಂದು ತ್ರಿವಿಕ್ರಮ್ ಕೂಡ ಕೆಂಡಕಾರಿದ್ದಾರೆ. ಇಬ್ಬರ ವಾಗ್ವಾದಕ್ಕೆ ಮನೆ ಮಂದಿ ಸೈಲೆಂಟ್ ಆಗಿದ್ದಾರೆ.

    ಇನ್ನೂ ಮನೆಗೆ ಇಬ್ಬರು ಖಡಕ್ ಆಗಿರುವ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನವಾಗಿದೆ. ಹಾಗಾಗಿ ಇನ್ಮುಂದೆ ಆಟದಲ್ಲಿ ಏನೆಲ್ಲಾ ತಿರುವು ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ತ್ರಿವಿಕ್ರಮ್ ಗೋಮುಖ ವ್ಯಾಘ್ರ: ಕೆರಳಿದ ಮೋಕ್ಷಿತಾ

    ತ್ರಿವಿಕ್ರಮ್ ಗೋಮುಖ ವ್ಯಾಘ್ರ: ಕೆರಳಿದ ಮೋಕ್ಷಿತಾ

    ಬಿಗ್ ಬಾಸ್ ಮನೆ (Bigg Boss Kannada 11) ಇದೀಗ ಮತ್ತೆ ರಣರಂಗವಾಗಿದೆ. ಸ್ಪರ್ಧಿಗಳಿಬ್ಬರ ನಡುವೆ ಕಿಚ್ಚು ಹೊತ್ತಿಕೊಂಡಿದೆ. ನಟ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ನಡುವೆ ವಾಕ್ಸಮರ ಶುರುವಾಗಿದೆ. ಮಾತಿನ ಚಕಮಕಿಯ ನಡುವೆ ಮೋಕ್ಷಿತಾ (Mokshitha Pai) ಅವರು ತ್ರಿವಿಕ್ರಮ್ (Trivikram) ಗೋಮುಖ ವ್ಯಾಘ್ರ ಎಂದು ಕರೆದಿದ್ದಾರೆ. ತ್ರಿವಿಕ್ರಮ್ ವಿರುದ್ಧ ನಟಿ ಕೆರಳಿದ್ದಾರೆ. ಇದನ್ನೂ ಓದಿ:ಕೇರಳದ ಹೇಮಾ ಕಮಿಟಿ ಮೂಲಕ ದಾಖಲಾಗಿದ್ದ ಕೇಸ್ ಬೆಂಗಳೂರಿಗೆ ವರ್ಗಾವಣೆ

    ತ್ರಿವಿಕ್ರಮ್ ಮತ್ತು ಮೋಕ್ಷಿತಾ ಈಗ ಮನೆಯಲ್ಲಿ ಹಾವು ಮುಂಗುಸಿಯಾಗಿದ್ದಾರೆ. ಅದರಲ್ಲೂ ತ್ರಿವಿಕ್ರಮ್ ಆಡಿರುವ ಮಾತು ಮೋಕ್ಷಿತಾ ಪೈ ಕಿವಿಗೆ ಬಿದ್ದಿದ್ದು, ಇದೇ ವಿಚಾರವಾಗಿ ವಾಗ್ವಾದಕ್ಕಿಳಿದ್ದಿದ್ದಾರೆ ಮೋಕ್ಷಿತಾ. ಉಗ್ರಂ ಮಂಜು (Ugramm Manju) ಜೊತೆಗೆ ತ್ರಿವಿಕ್ರಮ್ ಮಾತನಾಡುತ್ತಾ, ಅವರು 10 ವಾರಕ್ಕೆ ಬಂದಿರೋರು. 10 ವಾರದ ಬಳಿಕ ಅವರ ಅವಶ್ಯಕತೆ ಇಲ್ಲ ಅಣ್ಣ ಎಂದು ಹೇಳಿದ್ದರು. ಇದೇ ಮಾತು ಈಗ ಮೋಕ್ಷಿತಾ ಕಿವಿಗೆ ಬಿದ್ದಿದೆ. ನಾನು 10 ವಾರ ಇರುತ್ತೇನೆ ಅಂತ ಡಿಸೈಡ್ ಮಾಡೋಕೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ ಮೋಕ್ಷಿತಾ. ಅದಕ್ಕೆ ತ್ರಿವಿಕ್ರಮ್, ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ ಎಂದು ತಿರುಗೇಟು ನೀಡಿದ್ದಾರೆ.

    ರೊಚ್ಚಿಗೆದ್ದ ಮೋಕ್ಷಿತಾ ಇಷ್ಟಕ್ಕೆ ಸುಮ್ಮನಾಗದೆ, ನಾವೆಲ್ಲಾ ಇಲ್ಲಿ ಏನು ಅಲ್ಲ. ಯಾವುದೋ ಒಂದು ಸೀರಿಯಲ್ ಐದುವರೆ ವರ್ಷ ಮಾಡಿಕೊಂಡು ಬಂದಿದ್ದೀವಿ ಸುಮ್ನೆ. ನೀವು ಏನು ಅಲ್ಲ ತಿಳಿದುಕೊಂಡುಬಿಟ್ಟಿದ್ದೀರಿ. ನೀವು ಗೋಮುಖ ವ್ಯಾಘ್ರ ತರಹ ಆಟ ಆಡ್ತಾ ಇದ್ದೀರಾ. ಇವತ್ತಿಂದ ಆಟ ಶುರು ಎಂದು ಮೋಕ್ಷಿತಾ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ನೀವು ಏನು ತಿಳಿದುಕೊಂಡಿದ್ದೀರಾ ಅದನ್ನು ಸಾಬೀತುಪಡಿಸುತ್ತೇನೆ ಎಂದು ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು ಹಾಕಿದ್ದಾರೆ.

    ಬಿಗ್ ಬಾಸ್‌ಗೆ ಬಂದ ದಿನದಿಂದ ಸೈಲೆಂಟ್ ಆಗಿದ್ದ ಪಾರು ಇದೀಗ ತ್ರಿವಿಕ್ರಮ್ ವಿರುದ್ಧ ವೈಲೆಂಟ್ ಆಗಿ ಸಮರ ಸಾರಿರೋದನ್ನು ನೋಡಿ ಸ್ಪರ್ಧಿಗಳು,ಪ್ರೇಕ್ಷಕರು ದಂಗಾಗಿದ್ದಾರೆ. ಮೋಕ್ಷಿತಾ ಇನ್ ಫೈರ್ ಅಂತ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

  • BBK 11: ತ್ರಿವಿಕ್ರಂ, ಉಗ್ರಂ ಮಂಜು ಕ್ರೌರ್ಯ- ಸ್ಪರ್ಧಿಗಳಿಗೆ ತಕ್ಕ ಪಾಠ ಕಲಿಸಿದ ಬಿಗ್ ಬಾಸ್

    BBK 11: ತ್ರಿವಿಕ್ರಂ, ಉಗ್ರಂ ಮಂಜು ಕ್ರೌರ್ಯ- ಸ್ಪರ್ಧಿಗಳಿಗೆ ತಕ್ಕ ಪಾಠ ಕಲಿಸಿದ ಬಿಗ್ ಬಾಸ್

    ದೊಡ್ಮನೆಯಲ್ಲಿ (Bigg Boss Kannada 11) ಈಗ ಪಾಲಿಟಿಕ್ಸ್ ಆಟ ನಡೆಯುತ್ತಿದೆ. ಧರ್ಮಪರ ಸೇನಾ ಪಕ್ಷ ಮತ್ತು ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ಎಂಬ ಎರಡು ರಾಜಕೀಯ ಪಾರ್ಟಿಗಳನ್ನು ರಚನೆ ಮಾಡಲಾಗಿದೆ. ಒಂದಕ್ಕೆ ತ್ರಿವಿಕ್ರಂ ಲೀಡರ್ ಆಗಿದ್ದರೆ, ಮತ್ತೊಂದಕ್ಕೆ ಐಶ್ವರ್ಯಾ ಲೀಡರ್ ಆಗಿದ್ದಾರೆ. 2 ತಂಡಕ್ಕೂ ‘ಬಿಗ್ ಬಾಸ್’ ಟಾಸ್ಕ್ ಅನ್ನು ನೀಡಿದರು. ಎರಡು ತಂಡದವರು, ಕಿತ್ತಾಟ ಮಾಡಿ ಟಾಸ್ಕ್ ರದ್ದಾಗುವಂತೆ ಮಾಡಿದ ಪರಿಣಾಮ, ಸ್ಪರ್ಧಿಗಳಿಗೆ ಬಿಗ್ ಬಾಸ್ ತಕ್ಕ ಶಾಸ್ತಿ ಮಾಡಿದ್ದಾರೆ. ಇದನ್ನೂ ಓದಿ:BBK 11: ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ: ಐಶ್ವರ್ಯಾಗೆ ಚೈತ್ರಾ ಆವಾಜ್

    ಕೊಟ್ಟಿರುವ ಬೋರ್ಡ್‌ಗೆ ಎರಡು ತಂಡಗಳು ಬಿಗ್ ಬಾಸ್ ಕಳುಹಿಸುವ ವಸ್ತುಗಳನ್ನು ತೆಗೆದುಕೊಂಡು ತಮ್ಮ ತಮ್ಮ ಪಕ್ಷಗಳ ಪೋಸ್ಟರ್ ಅನ್ನು ರಚಿಸಿ, ಅದನ್ನು ಗೋಡೆ ಮೇಲೆ ಅಂಟಿಸಬೇಕು. ಒಂದು ಪಕ್ಷದವರು ಪೋಸ್ಟರ್ ಅಂಟಿಸಿದರೆ, ಮತ್ತೊಂದು ಪಕ್ಷದವರು ಅದನ್ನು ಕಿತ್ತುಹಾಕಬೇಕು. ಪಕ್ಷಗಳ ಸದಸ್ಯರು ತಮ್ಮ ಪಕ್ಷಗಳ ಪೋಸ್ಟರ್‌ಗಳನ್ನು ಯಾರೂ ಕೀಳದಂತೆ ಕಾಯಬೇಕು. ಇದು ಟಾಸ್ಕ್ ಆಗಿತ್ತು.

    ಕೊಟ್ಟ ಆಟವನ್ನು ಕ್ರೀಡಾ ಮನೋಭಾವದಿಂದ ಸ್ಪರ್ಧಿಗಳು ತೆಗೆದುಕೊಳ್ಳಲಿಲ್ಲ. ಅದರಲ್ಲೂ ತ್ರಿವಿಕ್ರಂ, ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಮಂಜು ಅವರ ಆರ್ಭಟ ಜೋರಾಗಿತ್ತು. ಇವರೆಲ್ಲರ ರೌದ್ರವತಾರಕ್ಕೆ ಹನುಮಂತ ಸುಸ್ತಾಗಿ ಬಿದ್ದು ಬಿಟ್ಟರು. ಟಾಸ್ಕ್ನಲ್ಲಿ ಮಂಜು ಅವರನ್ನು ತಡೆಯಲು ಹೋದ ತ್ರಿವಿಕ್ರಂ (Trivikram) ಜೋರಾಗಿ ಗುದ್ದಿದರು. ಅದರ ಪರಿಣಾಮ, ಮಂಜು ಬಾಯಿಗೆ ಪೆಟ್ಟಾಯಿತು. ಎರಡು ಬಾರಿ ಟಾಸ್ಕ್ ಆಡಿಸಿದರೂ ಯಾವುದೇ ಫಲಿತಾಂಶ ಬರಲಿಲ್ಲ. ಪ್ರತಿಬಾರಿಯೂ ಮಂಜು (Ugramm Manju) ಮತ್ತು ತ್ರಿವಿಕ್ರಂ ಬಹಳ ಆರ್ಭಟದಿಂದಲೇ ಅಖಾಡಕ್ಕೆ ಇಳಿಯುತ್ತಿದ್ದರು. ಉಸ್ತುವಾರಿ ಆಗಿದ್ದ ಮೋಕ್ಷಿತಾ (Mokshitha Pai) ಅವರು ತುಂಬಾ ಸಲ ಇದನ್ನು ತಪ್ಪಿಸಲು ಪ್ರಯತ್ನಿಸಿದರು. ಆದರೆ ಏನು ಪ್ರಯೋಜನ ಆಗಲಿಲ್ಲ.

    ಯಾವಾಗ ತಾವು ನೀಡಿದ ಟಾಸ್ಕ್ ಅನ್ನು ಸ್ಪರ್ಧಿಗಳು ಸರಿಯಾಗಿ ಆಡಲಿಲ್ಲವೋ, ಆಗ ಸ್ಪರ್ಧಿಗಳ ಮೇಲೆ ಬಿಗ್ ಬಾಸ್ ಕೆಂಡವಾದರು. ರಾಜಕೀಯ ಮಾಡಲು ಬೇಕಿರುವುದು ತಂತ್ರಗಳು ಮತ್ತು ಯುಕ್ತಿ. ಹೆಚ್ಚಾಗಿ ದೈಹಿಕ ಬಲದ ಪ್ರದರ್ಶನಕ್ಕೆ ಒತ್ತು ನೀಡಿದ್ದೀರಿ ಎಂದು ಬಿಗ್ ಬಾಸ್ ಆಕ್ರೋಶ ವ್ಯಕ್ತಪಡಿಸಿದರು. ಈ ಟಾಸ್ಕ್ ವಿಚಾರಕ್ಕೆ ಬಂದರೆ, ಎರಡು ಸುತ್ತು ನಡೆದರೂ, ಫಲಿತಾಂಶ ಘೋಷಣೆ ಮಾಡಲು ಸಾಧ್ಯವಾಗದಂತೆ ಆಗಿದೆ. ಹಾಗಾಗಿ ಈ ಟಾಸ್ಕ್ ಅನ್ನು ರದ್ದು ಮಾಡಿದರು ಬಿಗ್ ಬಾಸ್. ಇಂದಿನ ತಪ್ಪು ಮುಂದಿನ ಪಾಠವಾಗುತ್ತದೆ ಮರೆಯದಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕಿವಿಹಿಂಡಿದರು. ಇನ್ನಾದರೂ ಬಲ ಪ್ರದರ್ಶನ ಬಿಟ್ಟು ಯುಕ್ತಿಯಿಂದ ಸ್ಪರ್ಧಿಗಳು ಆಟ ಆಡುತ್ತಾರಾ? ಕಾದುನೋಡಬೇಕಿದೆ.

  • BBK 11: ಟಾಸ್ಕ್‌ ವೇಳೆ ಪೆಟ್ಟು, ಆಸ್ಪತ್ರೆಗೆ ದಾಖಲಾದ ತ್ರಿವಿಕ್ರಮ್?

    BBK 11: ಟಾಸ್ಕ್‌ ವೇಳೆ ಪೆಟ್ಟು, ಆಸ್ಪತ್ರೆಗೆ ದಾಖಲಾದ ತ್ರಿವಿಕ್ರಮ್?

    ಟಾಸ್ಕ್ ವೇಳೆ ಕಂಟೆಸ್ಟೆಂಟ್‌ಗೆ ಗಾಯವಾಗೋದು, ಅವರನ್ನು ಆಸ್ಪತ್ರೆಗೆ ದಾಖಲಿಸೋದು ಪ್ರತಿ ಸೀಸನ್‌ನಲ್ಲೂ ನಡೆದಿದೆ. ಕಳೆದ ಬಾರಿ ಸಂಗೀತಾ ಮತ್ತು ಡ್ರೋನ್ ಪ್ರತಾಪ್‌ಗೆ ಕೆಮಿಕಲ್ ಮಿಕ್ಸ್ ಮಾಡಿದ್ದ ನೀರು ಎರೆಚಿದ್ದರಿಂದ ಕಣ್ಣಿಗೆ ಹಾನಿಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕನ್ನಡಕ ಹಾಕಿಕೊಂಡೇ ದೊಡ್ಮನೆಗೆ ವಾಪಸ್ಸಾಗಿದ್ದರು. ಕೈ ಕಾಲು ಮುರಿದುಕೊಂಡು ಕೆಲ ಕಂಟೆಸ್ಟೆಂಟ್‌ಗಳು ಬಿಗ್‌ಬಾಸ್ ಮನೆಯಿಂದಲೇ ಆಚೆ ಬಂದಿದ್ದೂ ಇದೆ. ಸೀಸನ್ 11ರಲ್ಲೂ ಅದು ಮುಂದುವರೆದಿದೆ. ಈ ಸೀಸನ್‌ನಲ್ಲಿ ಇದೇ ಮೊದಲ ಬಾರಿಗೆ ಟಾಸ್ಕ್‌ನಲ್ಲಿ ‘ಬಿಗ್‌ ಬಾಸ್’ ಸ್ಪರ್ಧಿ ತ್ರಿವಿಕ್ರಮ್ (Trivikram) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ‘ಬಿಗ್‌ ಬಾಸ್ ಸೀಸನ್ 11’ (Bigg Boss Kannada 11) ಶುರುವಾಗಿ ಐದು ದಿನಗಳಾಗಿವೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಮನೆ ಕಾವು ಪಡೆದುಕೊಳ್ಳುತ್ತಿದೆ. ಮೊದಲ ದಿನದಿಂದಲೇ ಸ್ಪರ್ಧಿಗಳು ದ್ವೇಷ ಸಾಧಿಸ್ತಾ ಇದ್ದಾರೆ. ಬಿಗ್‌ಬಾಸ್ ಮನೆ ಒಂದು ದಿನವೂ ಶಾಂತವಾಗಿ ಉಳಿದಿಲ್ಲ. ಸ್ವರ್ಗ ನಿವಾಸಿಗಳು ಮತ್ತು ನಕರ ನಿವಾಸಿಗಳ ಮಧ್ಯೆ ಬಿಗ್ ಫೈಟ್ ನಡೆಯುತ್ತಲೇ ಇದೆ. ಒಂದೊಂದು ಸಲ ತಮ್ಮದೇ ಗುಂಪಿನ ಸದಸ್ಯರ ಜೊತೆಯೇ ಸ್ಪರ್ಧಿಗಳು ಜಗಳಕ್ಕೆ ಇಳಿದದ್ದುಂಟು. ಹಾಗಾಗಿ ಟಾಸ್ಕ್‌ನಲ್ಲಿ ತೀರಾ ತೀವ್ರತೆ ಕಾಣುತ್ತಿದೆ. ಗೆಲ್ಲುವುದಕ್ಕಾಗಿ ಎಂತಹ ರಿಸ್ಕ್ ತಗೆದುಕೊಳ್ಳಲು ಸ್ಪರ್ಧಿಗಳು ರೆಡಿ ಆಗಿದ್ದಾರೆ. ಈ ಪರಿಣಾಮ, ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್ ಗಾಯಗೊಂಡಿದ್ದಾರೆ. ಇದನ್ನೂ ಓದಿ:‘ನನ್ನ ಹೃದಯದ ಒಂದು ಭಾಗ’ ಎನ್ನುತ್ತಾ ಸಿಹಿಸುದ್ದಿ ಕೊಟ್ಟ ಶ್ರೀನಿಧಿ ಶೆಟ್ಟಿ

    5ನೇ ದಿನಕ್ಕೆ ಕಾಲಿಟ್ಟಿರೋ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ವೊಂದನ್ನು ನೀಡಲಾಗಿತ್ತು. ಬ್ಯಾಸ್ಕೆಟ್ ಬಾಲ್ ಚೆಂಡುಗಳನ್ನು ಸಂಗ್ರಹಿಸೋದು ಮತ್ತು ಅವುಗಳನ್ನು ತಮ್ಮ ಗೋಲ್‌ನಲ್ಲಿ ಇರಿಸಬೇಕಿತ್ತು. ಎದುರಾಳಿ ತಂಡದವರು ಗೋಲ್‌ನಲ್ಲಿ ಚೆಂಡುಗಳನ್ನು ಹಾಕದೇ ಇರೋ ರೀತಿಯಲ್ಲಿ ತಡೆಯಬೇಕಿತ್ತು. ಚೆಂಡು ಸಂಗ್ರಹಿಸಲು ಮತ್ತು ಅದನ್ನು ತಡೆಯಲು ಹರಸಾಹಸವೇ ನಡೆದಿದೆ. ಭಾರೀ ಜಟಾಪಟಿಯ ಮಧ್ಯ ಅವಘಡ ಸಂಭವಿಸಿದೆ. ತುಂಬಾ ಅಗ್ರೆಸ್ಸಿವ್ ಆಗಿ ಆಡುತ್ತಿದ್ದ ತ್ರಿವಿಕ್ರಮ್ ಈ ಟಾಸ್ಕ್‌ನಲ್ಲಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕನ್ಪೆಷನ್ ರೂಮ್‌ಗೆ ಕರೆಯಿಸಿ, ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಲಾಗ್ತಿದೆ. ಚಿಕಿತ್ಸೆ ಪಡೆದ ನಂತರ ಅವರು ವಾಪಸ್ ಬಿಗ್‌ ಬಾಸ್ ಮನೆಗೆ ಬಂದಿದ್ದಾರೆ ಅನ್ನೋದು ಸುದ್ದಿ.

    ರಿಲೀಸ್ ಆಗಿರೋ ಪ್ರೊಮೋದಲ್ಲಿ ಚೆಂಡು ಕಬಳಿಸುವ ವೇಳೆ ಶಿಶಿರ್ ಕೂಡ ಕೆಳಗೆ ಬಿದ್ದಿರುವುದನ್ನು ನೋಡಬಹುದು. ಇದಷ್ಟೇ ಅಲ್ಲ, ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ಏನೂ ಸುರೇಶ್‌ಗೆ ಆಗಿಲ್ಲವಂತೆ. ಒಂದು ಕಡೆ ಮನೆಯಲ್ಲಿ ಕುಸ್ತಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಲವ್‌ ಸ್ಟೋರಿ ಕೂಡ ಶುರುವಾಗಿದೆ. ಧರ್ಮ ಕೀರ್ತಿರಾಜ್ ಮೇಲೆ ಅನುಷಾ ಹಾಗೂ ಐಶ್ವರ್ಯಾಗೆ ಲೈಟ್ ಆಗಿ ಲವ್ವಾದಂತೆ ಕಾಣುತ್ತಿದೆ. ಇದೊಂದು ತ್ರಿಕೋನ ಲವ್‌ಸ್ಟೋರಿ ಆಗಿದ್ದು, ನಿಜವಾಗಿಯೂ ಇವರ ಮಧ್ಯ ಪ್ರೀತಿ ಅರಳಿದೆಯಾ? ಕಾದು ನೋಡಬೇಕು.

  • BBK 11: ದೊಡ್ಮನೆಗೆ ಕಾಲಿಟ್ಟ ಶಿಶಿರ್, ತ್ರಿವಿಕ್ರಮ್, ಮಾನಸಾ

    BBK 11: ದೊಡ್ಮನೆಗೆ ಕಾಲಿಟ್ಟ ಶಿಶಿರ್, ತ್ರಿವಿಕ್ರಮ್, ಮಾನಸಾ

    ನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ಕ್ಕೆ (Bigg Boss Kannada 11) ತ್ರಿವಿಕ್ರಮ್ ಮತ್ತು ಶಿಶಿರ್ ಶಾಸ್ತ್ರಿ, ಮಾನಸಾ (Manasa Tukali Santhosh) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

    ತ್ರಿವಿಕ್ರಮ್ ಪದ್ಮಾವತಿ ಸೀರಿಯಲ್ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ರೆ, ಶಿಶಿರ್ ಕುಲವಧು ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. 8ನೇ ಮತ್ತು 9ನೇ ಸ್ವರ್ಧಿಯಾಗಿ ಆಗಮಿಸಿದ್ದಾರೆ. ಶಿಶಿರ್ (Shishir Shastry) ನರಕಕ್ಕೆ ಎಂಟ್ರಿ ಪಡೆದರೆ, ತ್ರಿವಿಕ್ರಮ್ (Trivikram) ಸ್ವರ್ಗಕ್ಕೆ ಬಂದಿದ್ದಾರೆ.

    ಇತ್ತ ಮಾನಸಾ ತುಕಾಲಿ ಸಂತೋಷ್ ಅವರು ಗಿಚ್ಚಿ ಗಿಲಿಗಿಲಿ 3ರ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.

    ಪ್ರಸ್ತುತ ಭವ್ಯಾ ಗೌಡ, ಯಮುನಾ, ಧನರಾಜ್, ಗೌತಮಿ, ಅನುಷಾ ರೈ, ಧರ್ಮ ಕೀರ್ತಿರಾಜ್ ದೊಡ್ಮನೆ ಪ್ರವೇಶ ಪಡೆದಿದ್ದಾರೆ. ಒಟ್ಟು 17 ಸ್ಪರ್ಧಿಗಳ ಜಟಾಪಟಿ ದೊಡ್ಮನೆಯಲ್ಲಿ ನೋಡಬಹುದು.

  • ಮತ್ತೆ ಒಂದಾದ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್

    ಮತ್ತೆ ಒಂದಾದ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್

    ‘ಅಲ ವೈಕುಂಠಪುರಮುಲೋ’ ಸಿನಿಮಾದ ಮೂಲಕ ಹಿಟ್ ಜೋಡಿ ಎಂದೇ ಹೆಸರು ಪಡೆದಿದ್ದ ಅಲ್ಲು ಅರ್ಜುನ್ (Allu Arjun) ಮತ್ತು ತ್ರಿವಿಕ್ರಮ್  (Trivikram) ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ.  ಗುರು ಪೂರ್ಣಿಮೆ ದಿನದಂದು ಈ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.

    ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರಾಜೆಕ್ಟ್ ಹೊರತುಪಡಿಸಿ ಬನ್ನಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಅನಿಮಲ್ ಸಿನಿಮಾ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಟೀ-ಸೀರಿಸ್ ನಿರ್ಮಾಣ ಸಂಸ್ಥೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಇದೀಗ ಅಲ್ಲು ಅರ್ಜುನ್ ತ್ರಿವಿಕ್ರಮ್ ಜೊತೆ ಕೈ ಜೋಡಿಸಿದ್ದಾರೆ. ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

    ಟಾಲಿವುಡ್ ಹಿಟ್ ಜೋಡಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಮತ್ತೆ ಒಂದಾಗಿದ್ದಾರೆ. ‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲ ವೈಕುಂಠಪುರಮುಲೋ’ ಸಿನಿಮಾಗಳಂತಹ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಈ ಕಾಂಬೋ ನಾಲ್ಕನೇ ಚಿತ್ರಕ್ಕೆ ಸಜ್ಜಾಗಿದ್ದಾರೆ. ಬಹಳ ದಿನಗಳಿಂದಲೂ ಅಲ್ಲು-ತ್ರಿವಿಕ್ರಮ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಈ ಗಾಸಿಪ್ ಗೆ ಅಧಿಕೃತ ಮುದ್ರೆ ಬಿದ್ದಿದೆ.

    ಗುರು ಪೂರ್ಣಿಮಾ ದಿನದ ಅಂಗವಾಗಿ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ.

    ಅಲ ವೈಕುಂಠಪುರಮುಲೂ ಸಿನಿಮಾದಂತಹ ಭರ್ಜರಿ ಹಿಟ್ ಕೊಟ್ಟಿರುವ ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್  ಹಾಗೂ ಗೀತಾ ಆರ್ಟ್ಸ್ (Geetha Arts) ಬ್ಯಾನರ್ ನಡಿಯಲ್ಲಿಯೇ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ನಾಲ್ಕನೇ ಸಿನಿಮಾ ತಯಾರಾಗಲಿದೆ. ಈಗಾಗಲೇ ಸೂಪರ್ ಹಿಟ್ ಜೋಡಿ ಎನಿಸಿಕೊಂಡಿರುವ ಇವರಿಬ್ಬರು ಮತ್ತೆ ಒಂದಾಗಿರುವುದು ಭಾರೀ ನಿರೀಕ್ಷೆ ಹೆಚ್ಚಿಸಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಅಪ್ ಡೇಟ್ ಕೊಡಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ

    ರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಲಕ್ ಕೈಕೊಟ್ಟಿದೆ. ಸಾಲು ಸಾಲು ಸಿನಿಮಾ ಸೋಲುಗಳಿಂದ ಪೂಜಾ ಕಂಗೆಟ್ಟಿದ್ದಾರೆ. ಬಿಗ್ ಬ್ರೇಕ್‌ಗಾಗಿ ಎದುರು ನೋಡ್ತಿದ್ದಾರೆ. ಹೀಗಿರುವಾಗ ನಿರ್ದೇಶಕ ತ್ರಿವಿಕ್ರಮ್ (Director Trivikram) ಕೂಡ ಪೂಜಾಗೆ ಒಂದಿಷ್ಟು ಸಲಹೆ ಕೊಟ್ಟಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.

    ನಟಿ ಪೂಜಾ ಹೆಗ್ಡೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಂತಹ ನಟಿ, ರಶ್ಮಿಕಾ (Rashmika) ಜೊತೆ ಪೈಪೋಟಿ ಕೊಟ್ಟವರಲ್ಲಿ ಪೂಜಾ ಕೂಡ ಒಬ್ಬರು. ಹೀಗಿರುವಾಗ ಕಳೆದ ವರ್ಷ ಪೂಜಾ ನಟಿಸಿರುವ ಬ್ಯಾಕ್ ಟು ಬ್ಯಾಕ್ ಚಿತ್ರಗಳು ನೆಲಕಚ್ಚಿದೆ. ತಮ್ಮ ವೃತ್ತಿ ಜೀವನಕ್ಕೆ ಬಿಗ್ ಬ್ರೇಕ್‌ಗಾಗಿ ಕಾಯ್ತಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ಪೂಜಾ ಸದ್ಯ ದಕ್ಷಿಣದ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಸತತ ಸೋಲುಗಳನ್ನು ಕಂಡಿರೋ ಪೂಜಾ ಹೆಗ್ಡೆ ಕೈಯಲ್ಲಿ ತೆಲುಗಿನ ಏಕೈಕ ಸಿನಿಮಾವಿದೆ. ಈಗಾಗಲೇ ಮಹೇಶ್ ಬಾಬು (Mahesh Babu) ಅಭಿನಯದ 28ನೇ ಸಿನಿಮಾಗೆ ಸಹಿ ಮಾಡಿರೋ ನಟಿ ಸಿನಿಮಾದಲ್ಲಿ ನಟಿಸೋಕೆ ಹೈದರಾಬಾದ್‌ಗೆ ಬಂದಿದ್ದಾರೆ. ಇನ್ನೇನು ಲ್ಯಾಂಡ್ ಆಗುತ್ತಿದ್ದಂತೆ ಜುಬಿಲಿ ಹಿಲ್ಸ್‌ನಲ್ಲಿರುವ ದೇವಿ ಟೆಂಪಲ್‌ಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

    ಮಹೇಶ್ ಬಾಬು ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ಸಿನಿಮಾಗೆ ತ್ರಿವಿಕ್ರಮ್ (Trivikram) ಆಕ್ಷನ್ ಕಟ್ ಹೇಳುತ್ತಿರೋದು ಗೊತ್ತೇ ಇದೆ. ಇವರಿಗೂ ಸಿನಿಮಾ ಬಗ್ಗೆ ಭಯ ಇರೋದ್ರಿಂದ ಪೂಜಾ ಹೆಗ್ಡೆಗೆ ಟೆಂಪಲ್ ರನ್ ಮಾಡುವಂತೆ ಸಲಹೆಗಳನ್ನು ನೀಡಿದ್ದಾರಂತೆ. ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಸಲ್ಲಿಸುವಂತೆ ನಟಿಗೆ ನಿರ್ದೇಶಕರು ಸಲಹೆ ನೀಡಿದ್ದಾರಂತೆ. ಪೂಜಾ ಹೆಗ್ಡೆ ಕೂಡ ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಓಡಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k