Tag: ತ್ರಿಯನಯನಿ

  • ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ರಾಧಾ ರಮಣ, ತ್ರಿಯನಯನಿ ಸೀರಿಯಲ್‌ ನಟಿ ಪವಿತ್ರಾ ಜಯರಾಮ್ (Pavithra Jayaram) ಕೆಲದಿನಗಳ ಹಿಂದೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಬಳಿಕ ಮೇ 17ರಂದು ಪವಿತ್ರಾ ಅವರ ಗೆಳೆಯ ಚಂದು ಅಲಿಯಾಸ್ ಚಂದ್ರಕಾಂತ್ (Actor Chandrakanth) ಆತ್ಮಹತ್ಯೆಗೆ ಶರಣಾದರು. ಈ ಬೆನ್ನಲ್ಲೇ ಇಬ್ಬರ ಸಂಬಂಧದ ಬಗ್ಗೆ ಮುನ್ನೆಗೆ ಬಂತು. ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಚಾರವಾಗಿ ಪವಿತ್ರಾ ಪುತ್ರ (Son) ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ.

    ಚಂದ್ರಕಾಂತ್ ಸಾವನ್ನಪ್ಪಿದ ಬಳಿಕ ಅವರ ಕುಟುಂಬಸ್ಥರು ಪವಿತ್ರಾ ಬಗ್ಗೆ ಹಲವು ವಿಚಾರಗಳ ಬಗ್ಗೆ ದೂರಿದ್ದರು. ಪ್ರವಿತ್ರಾ ಬಂದ ಮೇಲೆ ನಮ್ಮ ಸಂಸಾರ ಹಾಳಾಯ್ತು ಎಂದು ತೆಲುಗು ಮಾಧ್ಯಮಗಳಲ್ಲಿ ಕಣ್ಣೀರಿಟ್ಟಿದ್ದರು. ಈ ಬಗ್ಗೆ ಇದೇ ಮೊದಲ ಬಾರಿಗೆ ಪವಿತ್ರಾ ಜಯರಾಮ್ ಅವರ ಪುತ್ರ ಪ್ರಜ್ವಲ್ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗ ಹೇಗೆ ಅಂತ ನಿಮಗೂ ಗೊತ್ತು. ನಾನು ಇಂಡಸ್ಟ್ರಿಗೆ ಬಂದರೂ ಕೂಡ ಹಾಗೆಯೇ. ನನ್ನ ಜೊತೆ ಯಾರಾದರೂ ಇದ್ದರೆ ಮೊದಲು ಆ ರೀತಿಯ ಗಾಸಿಪ್ ಹುಟ್ಟಿಕೊಳ್ಳುತ್ತದೆ.

    ಅಮ್ಮ ಮತ್ತು ಚಂದ್ರಶೇಖರ್ ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು. ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ (Wedding) ಆಗುವ ಪ್ಲ್ಯಾನ್ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

    ಚಂದು ಕುಟುಂಬದವರು ಮಾತನಾಡಿರುವುದನ್ನು ನಾನು ನೋಡಿದ್ದೇನೆ. ಅದಕ್ಕೆ ಏನ್ ಸಾಕ್ಷಿ ಬೇಕು, ಅದು ನನ್ನ ಬಳಿ ಇದೆ. ಅದರ ಬಗ್ಗೆ ನಾವೂ ಮಾತನಾಡುವುದಕ್ಕೆ ಶುರು ಮಾಡಿದರೆ, ಮನಸ್ತಾಪಗಳು ಜಾಸ್ತಿ ಆಗುತ್ತವೆ. ಈಗ ನನ್ನ ಮತ್ತು ನನ್ನ ತಂಗಿ ಭವಿಷ್ಯ ಮುಖ್ಯ. ಅವರಲ್ಲೂ ದುಃಖ ಇದೆ. ಆದರೆ ಸತ್ಯ ಏನಿದೆ, ಅದನ್ನು ಮಾತನಾಡಲಿ ಎಂದು ಪ್ರಜ್ವಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ:ವೈಯಕ್ತಿಕ ಜೀವನದಲ್ಲಿ ಏರುಪೇರಾಗಿದೆ: ನೊಂದುಕೊಂಡು ಪೋಸ್ಟ್ ಮಾಡಿದ ನಿಶ್ವಿಕಾ

    ಅವರಿಬ್ಬರು ಉತ್ತಮ ಸ್ನೇಹಿತರು. ಚಂದ್ರಕಾಂತ್ ಆತ್ಮಹತ್ಯೆ ಬಗ್ಗೆ ನ್ಯೂಸ್ ನೋಡಿದಾಗಲೇ ಗೊತ್ತಾಗಿದ್ದು. ನಾವಿಲ್ಲಿ ನಮ್ಮ ತಾಯಿಯ ಕಾರ್ಯಗಳಲ್ಲಿ ಬ್ಯುಸಿ ಇದ್ದೆವು. ಇದೇ ವೇಳೆ ಚಂದ್ರಕಾಂತ್ ಸಾವಿನ ವಿಚಾರ ಗೊತ್ತಾಗಿ, ಇನ್ನೂ ಬೇಜಾರಾಯಿತು. ಹೈದರಾಬಾದ್‌ನಲ್ಲಿ ನಮಗೆ ತುಂಬ ಹತ್ತಿರದಲ್ಲಿ ಇದ್ದವರು ಎಂದರೆ ಅದು ಚಂದ್ರಕಾಂತ್. ಅವರು ಈ ರೀತಿ ಮಾಡಿಕೊಂಡಿದ್ದು, ನಮಗೂ ತುಂಬಾ ಬೇಜಾರಾಯಿತು. ನಾವು ಹೋಗಬೇಕಿತ್ತು. ಆದರೆ ಇಲ್ಲಿ ಕಾರ್ಯಗಳು ಇದ್ದಿದ್ದರಿಂದ ನಾವು ಹೋಗುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಪವಿತ್ರಾ ಪ್ರಜ್ವಲ್ ಮಾತನಾಡಿದ್ದಾರೆ.

  • ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪವಿತ್ರಾ ಜಯರಾಂ ಅಂತ್ಯಕ್ರಿಯೆ

    ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಕಿರುತೆರೆ ನಟಿ ಪವಿತ್ರಾ ಜಯರಾಂ (Pavitra Jayaram) ಅಂತ್ಯಕ್ರಿಯೆ ಹುಟ್ಟುರಾದ ಮಂಡ್ಯದ ಉಮ್ಮಡಹಳ್ಳಿಯಲ್ಲಿ ಜರುಗಿದೆ. ಒಕ್ಕಲಿಗ ಸಂಪ್ರದಾಯದಂತೆ ಪವಿತ್ರಾ ಕಾರ್ಯ ನೆರವೇರಿದೆ. ಇದನ್ನೂ ಓದಿ:ಸೀರಿಯಲ್‌ ಚಿತ್ರೀಕರಣದ ವೇಳೆ ಮಾಡಿದ ತಪ್ಪು – ʻಸೀತಾರಾಮʼ ನಟಿ ವೈಷ್ಣವಿ ಗೌಡಗೆ ಟ್ರಾಫಿಕ್‌ ಫೈನ್‌!

    ಪವಿತ್ರಾರ ಅಂತ್ಯಕ್ರಿಯೆ ವೇಳೆ ಸಹನಟ ಚಂದ್ರಶೇಖರ್, ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಚಂದು ಗೌಡ ಕೂಡ ಭಾಗಿಯಾಗುವ ಮೂಲಕ ಅಂತಿಮ ದರ್ಶನ ಪಡೆದರು.

    ಪವಿತ್ರಾ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಕಾರು ನಿನ್ನೆ (ಮೇ 12) ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿತ್ತು. ಇದೀಗ ನಟಿಯ ಸಾವು ಕುಟುಂಬಕ್ಕೆ, ಆಪ್ತರಿಗೆ ಶಾಕ್‌ ಕೊಟ್ಟಿದೆ.

  • ಕಾರು ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಂ ದುರ್ಮರಣ

    ಕಾರು ಅಪಘಾತದಲ್ಲಿ ಕಿರುತೆರೆ ನಟಿ ಪವಿತ್ರಾ ಜಯರಾಂ ದುರ್ಮರಣ

    ನ್ನಡ ಕಿರುತೆರೆ ನಟಿ ಪವಿತ್ರಾ ಜಯರಾಂ (Pavitra Jayaram) ಕಾರು ಅಪಘಾತದಲ್ಲಿ ಇಂದು (ಮೇ 12) ಕೊನೆಯುಸಿರೆಳೆದಿದ್ದಾರೆ. ಭೀಕರ ರಸ್ತೆ ಅಪಘಾತದಲ್ಲಿ ನಟಿ ಸಾವನ್ನಪ್ಪಿದ್ದಾರೆ. ಈ ಸಾವಿನ ಸುದ್ದಿ ಕೇಳಿ ಅವರ ಆಪ್ತರಿಗೆ ಶಾಕ್‌ ಆಗಿದ್ದಾರೆ.

    ನಟಿ ಪವಿತ್ರಾ ಅವರು ಪ್ರಯಾಣಿಸುತ್ತಿದ್ದ ಕಾರು ಇಂದು (ಮೇ 12) ಬೆಳಿಗ್ಗೆ ಆಂಧ್ರ ಪ್ರದೇಶದ ಕರ್ನೂಲಿನ ಬಳಿ ಅಪಘಾತಕ್ಕೆ ಈಡಾಗಿದೆ. ಭೀಕರ ಅಪಘಾತದಲ್ಲಿ (Car Accident) ನಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಇದನ್ನೂ ಓದಿ:ಟರ್ಕಿಯಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ಮೂಲತಃ ಮಂಡ್ಯದವರಾದ ಪವಿತ್ರಾ ಅವರು ರೋಬೋ ಫ್ಯಾಮಿಲಿ, ನೀಲಿ, ರಾಧಾ ರಮಣ, ಜೋಕಾಲಿ ಸೀರಿಯಲ್‌ನಲ್ಲಿ ಪವಿತ್ರಾ ನಟಿಸಿದ್ದರು. ತೆಲುಗಿನ ‘ತ್ರಿನಯನಿ’ ಸೀರಿಯಲ್‌ನಲ್ಲಿ ವಿಲನ್ ಆಗಿ ಪವಿತ್ರಾ ಪ್ರೇಕ್ಷಕರ ಗಮನ ಸೆಳೆದಿದ್ದರು.