Tag: ತ್ರಿಗುಣ್‌

  • ಸೆನ್ಸಾರ್ ಪಾಸಾದ ‘ಲೈನ್ ಮ್ಯಾನ್’ಗೆ ಸಿಕ್ತು ಯು ಸರ್ಟಿಫಿಕೇಟ್

    ಸೆನ್ಸಾರ್ ಪಾಸಾದ ‘ಲೈನ್ ಮ್ಯಾನ್’ಗೆ ಸಿಕ್ತು ಯು ಸರ್ಟಿಫಿಕೇಟ್

    ಭಿನ್ನ, ಡಿಯರ್ ಸತ್ಯ (Dear Sathya Film) ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಕೊಡುಗೆ ಲೈನ್ ಮ್ಯಾನ್ ಸಿನಿಮಾ. ಟಕ್ಕರ್ ಹಾಗೂ ರನ್ ಆಂಟೋನಿ ಚಿತ್ರ ನಿರ್ದೇಶಿಸಿದ್ದ, ರಘು ಶಾಸ್ತ್ರಿ ಈ ಚಿತ್ರದ ಸಾರಥಿ. ಈಗಾಗಲೇ ಶೂಟಿಂಗ್ ಮುಗಿಸಿರುವ ಲೈನ್ ಮ್ಯಾನ್  (Line Man) ಸೆನ್ಸಾರ್ ಪಾಸಾಗಿದ್ದು, ಯು ಸರ್ಟಿಫಿಕೇಟ್ ಸಿಕ್ಕಿದೆ.

    ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ನಿರ್ಮಿಸುತ್ತಿರುವ ಲೈನ್ ಮ್ಯಾನ್ ಸಿನಿಮಾಗೆ ತ್ರಿಗುಣ್ ನಾಯಕ. ಆರ್‌ಜಿವಿ (RGV) ನಿರ್ದೇಶನದ ತೆಲುಗಿನ ಕೊಂಡ (Konda) ಚಿತ್ರ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ (Trigun)  ಈಗ ಕನ್ನಡ ಚಿತ್ರರಂಗಕ್ಕೆನಾಯಕನಾಗಿ ಚೊಚ್ಚಲ ಹೆಜ್ಜೆ ಇಡ್ತಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದು, ಹಿರಿಯ ನಟಿ ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದ್ದಾರೆ. ಇದನ್ನೂ ಓದಿ:‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

    ಹಳ್ಳಿ ಕಡೆ ದಿನಾ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ಸಂಬಂಧಿಸಿ ತೊಂದರೆ ಸರಿಪಡಿಸುವ ಲೈನ್ ಮ್ಯಾನ್ ಸುತ್ತ ಈ ಕಥೆ ನಡೆಯಲಿದೆ. ತ್ರಿಗುಣ್ ಲೈನ್ ಮ್ಯಾನ್ ಪಾತ್ರದಲ್ಲಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ರಘು ಶಾಸ್ತ್ರಿ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಚಾಮರಾಜನಗರ ಚಂದಕವಾಡಿ ಶೂಟಿಂಗ್ ನಡೆಸಲಾಗಿದ್ದು, ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದೆ. ಸೆನ್ಸಾರ್ ಪಾಸಾಗಿರುವ ಲೈನ್ ಮ್ಯಾನ್ ಸದ್ಯದಲ್ಲೇ ತೆರೆಗೆ ಬರಲಿದೆ.

    ತೆಲುಗು (Tollywood) ಸಿನಿಮಾ ಮೂಲಕ ತ್ರಿಗುಣ್ ಗುರುತಿಸಿಕೊಂಡಿದ್ದಾರೆ. ಲೈನ್ ಮ್ಯಾನ್ ಸಿನಿಮಾ ಈಗ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಕನ್ನಡ ಸಿನಿಪ್ರೇಕ್ಷಕರ ಮನ ಗೆಲುತ್ತಾರಾ ತ್ರಿಗುಣ್ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಯಾಂಡಲ್‌ವುಡ್‌ಗೆ ತೆಲುಗು ನಟ ತ್ರಿಗುಣ್ ಪಾದಾರ್ಪಣೆ

    ಸ್ಯಾಂಡಲ್‌ವುಡ್‌ಗೆ ತೆಲುಗು ನಟ ತ್ರಿಗುಣ್ ಪಾದಾರ್ಪಣೆ

    ತೆಲುಗು ಮತ್ತು ತಮಿಳು ಚಿತ್ರದ ಮೂಲಕ ಈಗಾಗಲೇ ಗಮನ ಸೆಳೆದಿರುವ ನಟ ತ್ರಿಗುಣ್ ಈಗ ವೃತ್ತಿರಂಗದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. `ಲೈನ್‌ಮ್ಯಾನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ.

    ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಸೈ ಎನಿಸಿಕೊಂಡಿರುವ ಕಲಾವಿದ ತ್ರಿಗುಣ್ ಈಗ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ್ದಾರೆ. ವಿ. ರಾಘು ಶಾಸ್ತ್ರಿ ನಿರ್ದೇಶನದ ದ್ವಿಭಾಷಾ ಪ್ರಾಜೆಕ್ಟ್ನಲ್ಲಿ ತ್ರಿಗುಣ್ ಕಾಣಿಸಿಕೊಳ್ಳಲಿದ್ದಾರೆ. ಏಕಕಾಲದಲ್ಲಿ ತೆಲುಗು ಮತ್ತು ಕನ್ನಡದಲ್ಲಿ ಈ ಚಿತ್ರ ಮೂಡಿ ಬರಲಿದೆ. ಮಂಡ್ಯ ಸೊಗಡು ಕೂಡ ಈ ಚಿತ್ರದಲ್ಲಿದ್ದು, ಮಂಡ್ಯ ಭಾಷೆಯಲ್ಲಿ ಮೂಡಿ ಬರಲಿದೆ.

    ಮಂಡ್ಯದಲ್ಲಿ `ಲೈನ್‌ಮ್ಯಾನ್’ ಕೆಲಸ ಮಾಡುವ ಪಾತ್ರದಲ್ಲಿ ತ್ರಿಗುಣ್ ಬಣ್ಣ ಹಚ್ಚಲಿದ್ದಾರೆ. ಇನ್ನು ಶೂಟಿಂಗ್ ಶುರುವಾಗುವ ಮೊದಲೇ ತಮ್ಮ ಪಾತ್ರಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಜತೆಗೆ ಕನ್ನಡ ಭಾಷೆಯನ್ನು ಕೂಡ ಕಲಿಯುತ್ತಿದ್ದಾರೆ. ಭಿನ್ನ ಕಥೆ ಮತ್ತು ಪಾತ್ರದ ಮೂಲಕ ಕನ್ನಡಕ್ಕೆ ನಟ ತ್ರಿಗುಣ್ ಬರುತ್ತಿದ್ದಾರೆ. ಇದನ್ನೂ ಓದಿ:`ಹೊಯ್ಸಳ’ ಡಾಲಿಗೆ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಸಾಥ್

     

    View this post on Instagram

     

    A post shared by Thrigun (@thrigun_aactor)

    `ಲೈನ್‌ಮ್ಯಾನ್’ ಚಿತ್ರದ ರಿಲೀಸ್‌ಗೂ ಮುನ್ನವೇ ಕನ್ನಡದ ಮತ್ತೊಂದು ಸಿನಿಮಾ ತ್ರಿಗುಣ್ ಪಾಲಾಗಿದ್ದು, `ಗಂಜಾಂ’ ಎನ್ನುವ ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣದ ಸಿನಿಮಾದಲ್ಲಿ ಗಮನ ಸೆಳೆದ ಹಾಗೇ ಕನ್ನಡ ಚಿತ್ರದಲ್ಲೂ ತ್ರಿಗುಣ್ ಕಮಾಲ್ ಮಾಡುತ್ತಾರಾ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]