Tag: ತ್ಯಾಜ್ಯ ಹಾಗೂ ರಾಸಾಯನಿಕ ವಸ್ತು

  • ದಾರಿಯ ಮಧ್ಯದಲ್ಲಿಯೇ ಹೊತ್ತಿ ಉರಿದ ಕ್ಯಾಂಟರ್!

    ದಾರಿಯ ಮಧ್ಯದಲ್ಲಿಯೇ ಹೊತ್ತಿ ಉರಿದ ಕ್ಯಾಂಟರ್!

    ಬೆಂಗಳೂರು: ತ್ಯಾಜ್ಯ ಮತ್ತು ರಸಾಯನಿಕ ವಸ್ತುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಹೊತ್ತಿ ಉರಿದ ಘಟನೆ ಆನೇಕಲ್ ಹೊರವಲಯ ಬನ್ನೇರುಘಟ್ಟ ಸಮೀಪದ ಕೆಂಪನಾಯಕನಹಳ್ಳಿ ಬಳಿ ನಡೆದಿದೆ.

    ಜಿಗಣಿಯ ಕೈಗಾರಿಕಾ ಪ್ರದೇಶದ ಹೈಕಲ್ ಕಂಪೆನಿಯಿಂದ ಬೆಂಗಳೂರಿನ ಕಡೆ ಕ್ಯಾಂಟರ್ ಹೊರಟಿತ್ತು. ದಾರಿಯ ಮಧ್ಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಕ್ಯಾಂಟರ್‍ನ ಹಿಂಬದಿಯ ಭಾಗ ಸಂಪೂರ್ಣ ಸುಟ್ಟುಕರಕಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ. ಇತ್ತ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಕ್ಯಾಂಟರ್‍ನಲ್ಲಿ ತ್ಯಾಜ್ಯ ಮತ್ತು ರಾಸಾಯನಿಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಹೀಗಾಗಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv