Tag: ತ್ಯಾಜ್ಯ

  • ಮಲೀನವಾಗಿ ಹಸಿರು ಬಣ್ಣಕ್ಕೆ ತಿರುಗಿದ ಟಿಬಿ ಡ್ಯಾಂ ನೀರು

    ಮಲೀನವಾಗಿ ಹಸಿರು ಬಣ್ಣಕ್ಕೆ ತಿರುಗಿದ ಟಿಬಿ ಡ್ಯಾಂ ನೀರು

    ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಜಲಕಂಟಕ ಎದುರಾಗಿದ್ದು, ಜಲಾಶಯದ ನೀರು ಸಂಪೂರ್ಣ ಮಲೀನವಾಗಿ, ಹಸಿರು ಬಣ್ಣಕ್ಕೆ (Green Color) ತಿರುಗಿದೆ.

    ಇದೇ ಹಸಿರು ಬಣ್ಣಕ್ಕೆ ತಿರುಗಿದ, ಕುಡಿಯಲು ಯೋಗ್ಯವಲ್ಲದ ನೀರೇ ಮೂರು ರಾಜ್ಯಗಳ 8 ಜಿಲ್ಲೆಗಳ ಜನರಿಗೆ ಅನಿವಾರ್ಯ ಎನ್ನುವಂತಾಗಿದೆ. ಈಗಾಗಲೇ ಹಲವು ಬಾರಿ ತುಂಗಭದ್ರಾ ಜಲಾಶಯದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

    ಜಲಾಶಯದ ನೀರು ಮಲೀನಗೊಂಡಿದ್ದರಿಂದ ಬೃಹತ್ ಗಾತ್ರದ ಮೀನುಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತಿವೆ. ಹೀಗೇ ಸತ್ತು ಬಿದ್ದ ಮೀನುಗಳು ಜಲಾಶಯದ ಹಿನ್ನೀರು ಪ್ರದೇಶಕ್ಕೆ ತೇಲಿ ಬರುತ್ತಿವೆ. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಕಾರ್ಖಾನೆಗಳು ಹಾಗೂ ನಗರಗಳ ತ್ಯಾಜ್ಯವನ್ನು ನದಿಗೆ ಹರಿಬಿಟ್ಟಿದ್ದರಿಂದ ನೀರು ಹಸಿರುಬಣ್ಣಕ್ಕೆ ತಿರುಗಿದೆ.

  • ಹಳ್ಳ ಸೇರುತ್ತಿದೆ ಉಮೇಶ್ ಕತ್ತಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು

    ಹಳ್ಳ ಸೇರುತ್ತಿದೆ ಉಮೇಶ್ ಕತ್ತಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ತ್ಯಾಜ್ಯ ನೀರು

    ಬೆಳಗಾವಿ: ಅರಣ್ಯ ಸಚಿವ ಉಮೇಶ್ ಕತ್ತಿ ಒಡೆತನದ ಸಕ್ಕರೆ ಕಾರ್ಖಾನೆಯಿಂದ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ ಎಂದು ಹುಕ್ಕೇರಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.

    ವಿಶ್ವರಾಜ ಶುಗರ್ಸ್ ಕಾರ್ಖಾನೆಯಿಂದ ತ್ಯಾಜ್ಯ ಮಿಶ್ರಿತ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಜಾಗನೂರು, ಪಾಮಲದಿನ್ನಿ, ಬಡಿಗವಾಡ, ರಾಜಾಪುರ ಗ್ರಾಮಗಳಲ್ಲಿ ತೊಂದರೆ ಆಗ್ತಿದೆ. ಈ ನೀರನ್ನು ಕುಡಿಯುತ್ತಿರುವ ಜಾನುವಾರುಗಳಲ್ಲಿ ಚರ್ಮರೋಗ ಬರುತ್ತಿದೆ. ಇದನ್ನೂ ಓದಿ: ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ

    ನಾಲ್ಕು ವರ್ಷಗಳಿಂದ ದೂರು ನೀಡುತ್ತಿದ್ದರೂ ಇದುವರೆಗೂ ಸಚಿವರ ಪ್ರಭಾವದಿಂದ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಹಳ್ಳಕ್ಕೆ ಕಾರ್ಖಾನೆ ತ್ಯಾಜ್ಯ ನೀರು ಬಿಡದಂತೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಿಲ್ಲದ ಪುಂಡಾಟ – ಕನ್ನಡಿಗರ ಮೇಲೆ ಹಲ್ಲೆಗೈದು ನಿಂದಿಸಿದ ಶಿವಸೇನೆ ಕಾರ್ಯಕರ್ತರು!

  • ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ – ವಾಹನ ಸವಾರರಿಗೆ ಕಿರಿಕಿರಿ

    ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ – ವಾಹನ ಸವಾರರಿಗೆ ಕಿರಿಕಿರಿ

    ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದ ಹಲವಾರು ಗ್ರಾಮಗಳ ಬಳಿ ತ್ಯಾಜ್ಯ ಸಂಗ್ರಹ ಹೆಚ್ಚಾಗುತ್ತಿದೆ. ರಾತ್ರಿ ವೇಳೆಯಲ್ಲಿ ಆಸ್ಪತ್ರೆ ತ್ಯಾಜ್ಯ, ಪ್ಲಾಸ್ಟಿಕ್, ಕೋಳಿ ತ್ಯಾಜ್ಯ, ಇನ್ನೀತರ ಅನುಪಯುಕ್ತ ವಸ್ತುಗಳನ್ನು ಎಸೆದು ಹೋಗುವವರ ಸಂಖ್ಯೆ ಏರಿಕೆಯಾಗಿ ಹೆದ್ದಾರಿ ಪಕ್ಕದಲ್ಲಿ ಮಲಿನ ವಾತಾವರಣವಿದ್ದು, ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.

    ನೆಲಮಂಗಲ ಗ್ರಾಮಾಂತರ ಭಾಗದ ಬೇಗೂರು, ತಾಳೆಕೆರೆ ಗೇಟ್, ಹನುಮಂತಪುರ ಗೇಟ್, ಕುಲವನಹಳ್ಳಿ ಕೆರೆ ಹೀಗೆ ಹಲವೆಡೆ ತ್ಯಾಜ್ಯ ಸಂಗ್ರಹ ಒಂದೆಡೆ ಶೇಖರಣೆಯಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಹೆದ್ದಾರಿ ಪಕ್ಕದಲ್ಲಿ ಗುಬ್ಬು ನಾರುವ ವಾಸನೆ ಕಂಡುಬಂದಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

    ರಾತ್ರಿ ವೇಳೆ ತ್ಯಾಜ್ಯ ತಂದು ಸುರಿಯುವ ಹಿನ್ನೆಲೆ ತಾಲೂಕಿನ, ಟಿ.ಬೇಗೂರು, ಕುಲವನಹಳ್ಳಿ, ಹನುಮಂತಪುರ ಕೆರೆಗಳಲ್ಲಿ, ಕೆರೆ ನೀರಿನ ಪಾತ್ರದಲ್ಲಿ ಉತ್ತಮ ಮಳೆಯಾಗದೆ, ಹಲವಾರು ವರ್ಷಗಳಿಂದ ನೀರಿಲ್ಲದೆ ಒಣಗುತ್ತಿದೆ. ಆದ್ದರಿಂದ ನೀರಿಗೆ ಈ ತ್ಯಾಜ್ಯದ ಸೇರುತ್ತಿಲ್ಲ, ಆದರೆ ಕೆರೆಗೆ ನೀರು ಬಂದರೆ ಕಲ್ಮಶ ಸೇರುವುದು ಕಟ್ಟಿಟ್ಟ ಬುತ್ತಿಯಾಗಿದೆ. ಕೆರೆ ಅಕ್ಕ-ಪಕ್ಕದಲ್ಲಿ ಕೋಳಿ ತ್ಯಾಜ್ಯ ಮತ್ತು ಆಸ್ಪತ್ರೆ ತ್ಯಾಜ್ಯದಿಂದ ರ್ದುವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ, ಈ ಬಗ್ಗೆ ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.

  • ಮಾಸ್ಕ್, ಗ್ಲೌಸ್ ಇಲ್ಲದೆ ಕೋವಿಡ್ ಆಸ್ಪತ್ರೆ ತ್ಯಾಜ್ಯ ವಿಲೇವಾರಿ- ಪೌರಕಾರ್ಮಿಕರಿಗಿಲ್ಲ ಸುರಕ್ಷತೆ

    ಮಾಸ್ಕ್, ಗ್ಲೌಸ್ ಇಲ್ಲದೆ ಕೋವಿಡ್ ಆಸ್ಪತ್ರೆ ತ್ಯಾಜ್ಯ ವಿಲೇವಾರಿ- ಪೌರಕಾರ್ಮಿಕರಿಗಿಲ್ಲ ಸುರಕ್ಷತೆ

    ರಾಯಚೂರು: ಸುರಕ್ಷತಾ ಕ್ರಮಗಳಿಲ್ಲದೆ ರಾಯಚೂರು ನಗರಸಭೆ ಪೌರಕಾರ್ಮಿಕರು ಖಾಸಗಿ ಕೋವಿಡ್ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ.

    ರಾಯಚೂರು ನಗರವೊಂದರಲ್ಲೇ 19 ಖಾಸಗಿ ಕೋವಿಡ್ ಆಸ್ಪತ್ರೆಗಳಿದ್ದು, ಆಸ್ಪತ್ರೆ ತ್ಯಾಜ್ಯವನ್ನ ನಗರಸಭೆ ಸಿಬ್ಬಂದಿಗಳೇ ವಿಲೇವಾರಿ ಮಾಡುತ್ತಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ಸೌಲಭ್ಯವನ್ನೂ ಸಮರ್ಪಕವಾಗಿ ನೀಡಿದೆ ಬೇಜವಾಬ್ದಾರಿತನ ಮೆರೆದಿದ್ದಾರೆ. ಗ್ಲೌಸ್, ಮಾಸ್ಕ್ ಧರಿಸದೆ ಕೋವಿಡ್ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದ ಪೌರಕಾರ್ಮಿಕರಿಗೆ ಕೊರೊನಾ ಸೋಂಕಿನ ಭಯ ಕಾಡುತ್ತಿದೆ.

    ನಗರಸಭೆ ಎಲ್ಲಾ ಪೌರಕಾರ್ಮಿಕರಿಗೂ ಮಾಸ್ಕ್,ಗ್ಲೌಸ್ ಸಮರ್ಪಕವಾಗಿ ವಿತರಿಸದ ಹಿನ್ನೆಲೆ ಕಾರ್ಮಿಕರು ಸುರಕ್ಷತೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಡೀ ನಗರವನ್ನ ಸ್ವಚ್ಛವಾಗಿಡುವ ಪೌರಕಾರ್ಮಿಕರಿಗೆ ಸುರಕ್ಷತೆಯಿಲ್ಲದಂತಾಗಿದೆ. ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕಾದ ನಗರಸಭೆ ಸೌಲಭ್ಯ ನೀಡದ ಹಿನ್ನೆಲೆ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ ಅಂತ ಪೌರಕಾರ್ಮಿಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

  • ರಸ್ತೆ ಬದಿಯಲ್ಲೇ ತ್ಯಾಜ್ಯ ಸುರಿದ ಬಿಬಿಎಂಪಿ- ಸ್ಥಳೀಯರಿಂದ ಪ್ರತಿಭಟನೆ

    ರಸ್ತೆ ಬದಿಯಲ್ಲೇ ತ್ಯಾಜ್ಯ ಸುರಿದ ಬಿಬಿಎಂಪಿ- ಸ್ಥಳೀಯರಿಂದ ಪ್ರತಿಭಟನೆ

    ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯ ನೆಲಮಂಗಲದಲ್ಲಿ ಬಿಬಿಎಂಪಿ ವಾಹನವೊಂದು ತ್ಯಾಜ್ಯವನ್ನು ರಸ್ತೆ ಬದಿಯಲ್ಲಿಯೇ ಸುರಿದು ಹೋಗಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬಿಬಿಎಂಪಿಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಪಟ್ಟಣದ ವಿಶ್ವೇಶ್ವರಪುರ ರಸ್ತೆಯ ಪಕ್ಕದಲ್ಲಿ ಬಿಬಿಎಂಪಿ ವಾಹನ ತ್ಯಾಜ್ಯ ಸುರಿದು ಹೋಗಿದ್ದಾರೆ. ಪರಿಣಾಮ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈ ರೀತಿ ತ್ಯಾಜ್ಯ ಸುರಿದರೆ ಯಾರು ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುಮಾರು 40ಕ್ಕೂ ಹೆಚ್ಚು ಬಿಬಿಎಂಪಿ ವಾಹನಗಳನ್ನು ತಡೆದು ಸ್ಥಳೀಯರು ಪ್ರತಿಭಟಿಸಿದ್ದಾರೆ. ಸ್ಥಳಕ್ಕೆ ಬಸವನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮಾಜಾನ್.ಬಿ ಭೇಟಿ ಪರಶೀಲನೆ ನಡೆಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಕಸವನ್ನು ತಂದು ಸುರಿದು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಸ್ಥಳದಲ್ಲಿ ಕರವೇ ಶಿವರಾಮೇಗೌಡ ಬಣದಿಂದಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಕರವೇ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಬಿಎಂಪಿ ಮೇಯರ್ ಗೌತಮ್ ಮತ್ತು ಗುತ್ತಿಗೆದಾರರ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.

    ಸ್ಥಳಕ್ಕೆ ಮಾಜಿ ಶಾಸಕ ನರೇಂದ್ರ ಬಾಬು ಭೇಟಿ ನೀಡಿ, ಮೇಯರ್ ಜೊತೆ ಫೋನ್ ಮೂಲಕ ಮಾತನಾಡಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ತ್ಯಾಜ್ಯದ ಲಾರಿ ಚಾಲಕ ಹಾಗೂ ಕಂಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನರೇಂದ್ರ ಬಾಬು ಒತ್ತಾಯಿಸಿದ್ದಾರೆ.

  • ನಾನೇ ಸೂಪರ್ ಮ್ಯಾನ್ ಅಂತೀರಾ, ಕೆಲ್ಸಾನೇ ಮಾಡಲ್ಲ-ದೆಹಲಿ ಗವರ್ನರ್ ಗೆ ಸುಪ್ರೀಂ ಚಾಟಿ

    ನಾನೇ ಸೂಪರ್ ಮ್ಯಾನ್ ಅಂತೀರಾ, ಕೆಲ್ಸಾನೇ ಮಾಡಲ್ಲ-ದೆಹಲಿ ಗವರ್ನರ್ ಗೆ ಸುಪ್ರೀಂ ಚಾಟಿ

    ನವದೆಹಲಿ: ನಾನೇ ಸೂಪರ್ ಮ್ಯಾನ್ ಎಂದು ಹೇಳುತ್ತೀರಿ, ಆದರೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಗುರುವಾರ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

    ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತು ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಮತ್ತು ದೀಪಕ್ ಗುಪ್ತರ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

    ಈ ವೇಳೆ ಕಸದ ಸಮಸ್ಯೆಯನ್ನು ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ “ನನಗೆ ಅಧಿಕಾರ ಇದೆ, ನಾನೇ ಸೂಪರ್ ಮ್ಯಾನ್ ಎಂದು ನೀವು ಹೇಳುತ್ತೀರಿ. ಆದರೆ ನೀವು ಏನೂ ಕೆಲಸ ಮಾಡುವುದಿಲ್ಲ” ಎಂದು ಹೇಳಿ ಚಾಟಿ ಬೀಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಕಸ ವಿಲೇವಾರಿ ಸಂಬಂಧ ಸುಪ್ರೀಂ ಕೋರ್ಟ್ ಕೇಳಿದ್ದ ಸಮಯ ನಿಗದಿಗೆ ಸಮಪರ್ಕವಾದ ಉತ್ತರ ನೀಡದ್ದಕ್ಕೆ ಗರಂ ಆದ ನ್ಯಾಯಾಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

    ಈ ಸಮಸ್ಯೆಗೆ ದೆಹಲಿ ಮಹಾನಗರ ಪಾಲಿಕೆ ಕಾರಣ ಎಂದು ನೀವು ಹೇಳುತ್ತೀರಿ. ಪಾಲಿಕೆಯ ನಿಯಂತ್ರಣ ನಿಮ್ಮಲ್ಲಿರುವಾಗ ನಾವು ಯಾಕೆ ಅವರನ್ನು ಪ್ರಶ್ನೆ ಮಾಡಬೇಕು. ಹೀಗಾಗಿ ಈ ಸಮಸ್ಯೆ ಪರಿಹಾರಕ್ಕೆ ಮಾರ್ಗಗಳನ್ನು ಹುಡುಕಿ ಎಂದು ಆದೇಶಿಸಿತು.

    ರಾಷ್ಟ್ರ ರಾಜಧಾನಿಯ ಕಸದ ಸಮಸ್ಯೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೂರುವಂತಿಲ್ಲ. ಈ ವಿಚಾರದಲ್ಲಿ  ದೆಹಲಿ ಸಿಎಂ ಅವರನ್ನು ಎಳೆದು ತರಬೇಡಿ ಎಂದು ಹೇಳಿತು.

    ಜುಲೈ 16ರ ಒಳಗಡೆ ಕಸ ವಿಲೇವಾರಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸಿ ಎಂದು ಕೋರ್ಟ್ ಲೆಫ್ಟಿನೆಂಟ್ ಗವರ್ನರ್ ಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.

  • ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಧಾರವಾಡ: ನಗರದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚೆಲ್ಲುವುದರ ವಿರುದ್ಧ ಅರಿವು ಮೂಡಿಸಿದ ಧಾರವಾಡ ಕಿರಾಣಿ ಮತ್ತು ಕಾಯಿಪಲ್ಲೆ ವರ್ತಕರ ಸಂಘ, ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಿದೆ.

    ಧಾರವಾಡ ನಗರದ ಸೂಪರ್ ಮಾರುಕಟ್ಟೆ ಯಾವತ್ತೂ ಕಸದಿಂದ ತುಂಬಿರುತ್ತೆ ಇದರ ಅರಿವನ್ನ ಮೂಡಿಸಲು ವರ್ತಕರ ಸಂಘದ ಸದಸ್ಯರು ಮಾರುಕಟ್ಟೆಗೆ ಕಾಯಿಪಲ್ಲೆ ವ್ಯಾಪಾರಿಗಳಿಗೆ ಒಂದೊಂದು ಗುಲಾಬಿ ಹೂವನ್ನ ನೀಡುವ ಮೂಲಕ ವಿನೂತನ ಜಾಗೃತಿ ಮೂಡಿಸಿದ್ದಾರೆ.

    ಬೀದಿ ಬದಿ ವ್ಯಾಪಾರ ಮುಗಿದ ನಂತರ ಉಳಿದ ಕಾಯಿಪಲ್ಲೆ ಜಾಗದಲ್ಲೇ ಬಿಟ್ಟು ಹೋಗುತ್ತಿದ್ದ ವ್ಯಾಪಾರಿಗಳಿಗೆ, ಕಸ ಬುಟ್ಟಿಗೆ ಅದನ್ನ ಹಾಕಬೇಕು ಎಂದು ಅರಿವು ಮೂಡಿಸಲಾಯಿತು. ಅಷ್ಟೇ ಅಲ್ಲದೇ ಸಂಘದಿಂದ ಪ್ರತಿ ದಿನ ಇದರ ಬಗ್ಗೆ ನಿಗಾವಹಿಸಲು ಜನರನ್ನು ಕೂಡಾ ವರ್ತಕರ ಸಂಘದಿಂದಲೇ ನೇಮಿಸಲಾಗುವುದು ಎಂದು ತಿಳಿಸಿದರು.