Tag: ತೋಳ

  • ತೋಳ ದಾಳಿಗೆ 15 ಕುರಿಗಳು ಬಲಿ- ಕುಟುಂಬಸ್ಥರ ಆಕ್ರಂದನ

    ತೋಳ ದಾಳಿಗೆ 15 ಕುರಿಗಳು ಬಲಿ- ಕುಟುಂಬಸ್ಥರ ಆಕ್ರಂದನ

    ಗದಗ: ತೋಳ ದಾಳಿ ನಡೆಸಿದ ಪರಿಣಾಮ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿಯಲ್ಲಿ ನಡೆದಿದೆ.

    ಬಸವರಾಜ್ ಪೂಜಾರ ಅವರಿಗೆ ಸೇರಿದ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಜಮೀನಿನಲ್ಲಿರುವ ಕುರಿ ದಡ್ಡಿ ಮೇಲೆ ತೋಳಗಳ ಹಿಂಡು ದಾಳಿಮಾಡಿವೆ ಎನ್ನಲಾಗುತ್ತಿದೆ. ದಡ್ಡಿಯಲ್ಲಿ ಯಾರೂ ಇಲ್ಲದ ವೇಳೆ ಏಕಾಏಕಿ ತೋಳಗಳು ದಾಳಿ ನಡೆಸಿದ್ದು, 15 ಕುರಿ ಹಾಗೂ ಮರಿಗಳು ಸಾವನ್ನಪ್ಪಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

    ಆರ್ಥಿಕ ನಷ್ಟ ಅನುಭವಿಸಿದ ಕುರಿ ಮಾಲಿಕ ಬಸವರಾಜ್ ಅವರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕುರಿಗಳನ್ನು ಕಳೆದುಕೊಂಡ ಮಾಲೀಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಶಿರಹಟ್ಟಿ ತಾಲೂಕು ಅರಣ್ಯ ಇಲಾಖೆಯ ಅಧಿಕಾರಿಗಳು, ಪಶುವೈದ್ಯಾಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಹಿರ್ದೆಸೆಗೆ ಹೋದವರ ಮೇಲೆ ತೋಳ ದಾಳಿ – 12 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಬಹಿರ್ದೆಸೆಗೆ ಹೋದವರ ಮೇಲೆ ತೋಳ ದಾಳಿ – 12 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ರಾಯಚೂರು: ಮಸ್ಕಿ ತಾಲೂಕಿನ ಚಿಲ್ಕರಾಗಿ ಹಾಗೂ ಇರಕಲ್ ಗ್ರಾಮದಲ್ಲಿ ಹುಚ್ಚು ತೋಳವೊಂದು ದಾಳಿ ನಡೆಸಿ 12 ಮಂದಿಯನ್ನು ಗಾಯಗೊಳಿಸಿದೆ. ಇದರಲ್ಲಿ ಇಬ್ಬರ ಪರಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಬಹಿರ್ದೆಸೆಗೆ ತೆರಳಿದ್ದವರ ಮೇಲೆ ಮೊದಲು ದಾಳಿ ನಡೆಸಿದ ತೋಳ, ಬಳಿಕ ಗ್ರಾಮಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಎಗರಿ ದಾಳಿ ಮಾಡಿದೆ. ಚಿಲ್ಕರಾಗಿ ಗ್ರಾಮದ ಅಮರಪ್ಪ ಕುಂಬಾರ್, ವೀರಭದ್ರಪ್ಪ ಕುಂಬಾರ್, ಈರಮ್ಮ, ಹುಲುಗಪ್ಪ ಚಲುವಾದಿ ಸೇರಿ 9 ಮಂದಿ ತೋಳದ ದಾಳಿಗೆ ತುತ್ತಾಗಿದ್ದಾರೆ. ಇರಕಲ್ ಗ್ರಾಮಕ್ಕೆ ನುಗ್ಗಿದ ತೋಳ ಅಲ್ಲಿ ಮೂವರ ಮೇಲೆ ದಾಳಿ ನಡೆಸಿದೆ. ಇದರಿಂದ ರೊಚ್ಚಿಗೆದ್ದ ಇರಕಲ್ ಗ್ರಾಮಸ್ಥರು ತೋಳವನ್ನ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಗಾಯಗೊಂಡ 12 ಜನರನ್ನ ಮಸ್ಕಿ ಹಾಗೂ ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಳಗ್ಗೆ 5 ಗಂಟೆ ಸಮಯಕ್ಕೆ ತೋಳ ದಾಳಿ ಶುರು ಮಾಡಿ ಕೊನೆಗೆ ಇರಕಲ್ ಗ್ರಾಮದಲ್ಲಿ ಸಾವನ್ನಪ್ಪಿದೆ. ಇಷ್ಟೆಲ್ಲಾ ಘಟನೆ ನಡೆದಿದ್ದರೂ ಗ್ರಾಮಸ್ಥರ ಮಾಹಿತಿಗೆ ಸ್ಪಂದಿಸಬೇಕಾದ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ತೋಳಗಳ ದಾಳಿಯಿಂದ 21 ಮಂದಿಗೆ ಗಾಯ- ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರ

    ತೋಳಗಳ ದಾಳಿಯಿಂದ 21 ಮಂದಿಗೆ ಗಾಯ- ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರ

    ಗದಗ: ನಾಲ್ಕು ಗ್ರಾಮಗಳ ಜನರ ಮೇಲೆ ತೋಳಗಳು ದಾಳಿ ನಡೆಸಿರೋ ಘಟನೆಯೊಂದು ಬೆಳಕಿಗೆ ಬಂದಿದೆ.

    ಗದಗ ತಾಲೂಕು ಹಾಗೂ ರೋಣ ತಾಲೂಕಿನ ಹುಯಿಲಗೋಳ, ಕುರುಡಗಿ, ಗುಜಮಾಗಡಿ, ಯರೇಬೇಲೆರಿ ಗ್ರಾಮಗಳಿಗೆ ಶನಿವಾರ ತಡರಾತ್ರಿ ತೋಳಗಳು ನುಗ್ಗಿದ್ದು, ಗ್ರಾಮದ ಜನರ ಮೇಲೆ ದಾಳಿ ನಡೆಸಿವೆ. 21 ಜನ್ರಿಗೆ ಗಾಯಗಳಾಗಿದ್ದು, ಇದರಲ್ಲಿ ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರವಾಗಿದೆ.

    ಗದಗ ತಾಲೂಕಿನ ಹುಯಿಲಗೋಳದಲ್ಲಿ 3, ರೋಣ ತಾಲೂಕಿನ ಗುಜಮಾಗಡಿಯಲ್ಲಿ 9, ಯರೇಬೇಲೆರಿಯಲ್ಲಿ 8 ಹಾಗೂ ಕುರುಡಗಿಯಲ್ಲಿ 5 ಜನರ ಮೇಲೆ ತೋಳಗಳು ದಾಳಿ ನಡೆಸಿವೆ. ಸದ್ಯ ಗಾಯಾಳುಗಳಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆಯ ಬಳಿಕ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ತೋಳ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.