Tag: ತೋಟದಾರ್ಯ ಶ್ರೀ

  • ಕಾವೇರಿ ಹೋರಾಟ – ಆಸ್ತಿ ಪಾಸ್ತಿಗೆ ಹಾನಿ ಮಾಡದೆ ಪ್ರತಿಭಟನೆ ಮಾಡೋಣ: ತೋಂಟದಾರ್ಯ ಶ್ರೀ

    ಕಾವೇರಿ ಹೋರಾಟ – ಆಸ್ತಿ ಪಾಸ್ತಿಗೆ ಹಾನಿ ಮಾಡದೆ ಪ್ರತಿಭಟನೆ ಮಾಡೋಣ: ತೋಂಟದಾರ್ಯ ಶ್ರೀ

    ಗದಗ: ಕಾವೇರಿ ನೀರಿಗಾಗಿ (Cauvery water) ನಡೆಯುತ್ತಿರುವ ಹೋರಾಟಕ್ಕೆ ಗದಗದ ತೋಂಟದಾರ್ಯ ಮಠದ ಶ್ರೀಗಳು (Tontadarya Swamiji) ಬೆಂಬಲ ಸೂಚಿಸಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ರೈತರ ಹೋರಾಟವನ್ನು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.

    ತೋಂಟದಾರ್ಯ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೋರಾಟಗಾರರು ಯಾವುದೇ ಆಸ್ತಿಪಾಸ್ತಿಗಳಿಗೆ ಹಾನಿ ಮಾಡದೇ ಹೋರಾಟ ಮಾಡಬೇಕಿದೆ. ಶಾಂತಿಯುತ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ. ತಮಿಳುನಾಡಿನವರೂ ಬರಗಾಲ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಇದನ್ನು ಅರಿತು ಸರ್ಕಾರದ ಮೇಲೆ ಒತ್ತಡ ಹಾಕಬಾರದು ಎಂದು ಹೇಳಿದರು.

    ಕುಡಿಯುವ ನೀರು ಬಹಳ ಮುಖ್ಯ ಎಂಬುದನ್ನು ಗಮನಿಸಬೇಕು. ತಮಿಳುನಾಡಿನ ಜನ ಪ್ರಜ್ಞಾಪೂರ್ವಕ ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ. ಮಳೆ ಅಭಾವ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಕೆಆರ್‌ಎಸ್ ಜಲಾಶಯವಷ್ಟೇ ಅಲ್ಲ ಇತರ ಎಲ್ಲಾ ಜಲಾಶಯಗಳಲ್ಲೂ ನೀರು ಕಡಿಮೆಯಾಗಿದೆ. ಮಳೆಯ ಅಭಾವದಿಂದ ಕರ್ನಾಟಕದ ಸಮಸ್ತ ರೈತಾಪಿ ಜನ ಸಂಕಷ್ಟದಲ್ಲಿದ್ದಾರೆ. ಸಾಮಾಜಿಕ ಸೇವಾ ಸಂಸ್ಥೆಗಳು, ಮಠಮಾನ್ಯಗಳು, ಸರ್ಕಾರ ರೈತರ ನೆರವಿಗೆ ಬರಬೇಕು. ಇನ್ನು ಸರ್ಕಾರ ಸಹ ಜಾಣ್ಮೆ ಪ್ರದರ್ಶಿಸಿ ಸಾರ್ವಜನಿಕರ ಸಂಕಷ್ಟ ನೀಗಿಸಬೇಕು ಎಂದರು. ಇದನ್ನೂ ಓದಿ: ಮಂಡ್ಯದಲ್ಲಿ ಕಾವೇರಿ, ದಾವಣಗೆರೆಯಲ್ಲಿ ಭದ್ರಾ ನೀರಿಗಾಗಿ ಬೀದಿಗಿಳಿದ ರೈತರು

    ಈ ವರ್ಷ ಮಳೆಯ ಅಭಾವದಿಂದ ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ಭವಿಷ್ಯದ ಬಗ್ಗೆ ರೈತರು ಚಿಂತಾಕ್ರಾಂತರಾಗಿದ್ದಾರೆ. ಜಲಾಶಯಗಳಿಂದ ನಗರಗಳಿಗೆ ಕುಡಿಯುವ ನೀರಿನ ಪೂರೈಕೆಯಾಗುವುದು ಕಷ್ಟದ ಕೆಲಸ. ಈ ಸಂದರ್ಭಗಳಲ್ಲಿ ಕಾವೇರಿ ಸಮಸ್ಯೆ ಕಾಡುತ್ತಿದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರು ಅತ್ಯಂತ ಕೆಳ ಮಟ್ಟಕ್ಕೆ ಹೋಗಿದೆ. ಈಗಿರುವ ನೀರು ಮೈಸೂರು, ಮಂಡ್ಯ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಮಾತ್ರ ಸಾಧ್ಯವಾಗಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಕಷ್ಟದ ಕೆಲಸ. ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯ ನೀರು ಬಿಡಲು ಸೂಚಿಸಿದೆ. ಜಲಾಶಯದಲ್ಲಿ ನೀರು ಇಲ್ಲದಿರುವುದು ಜನರಿಗೆ ಬರಸಿಡಿಲ ಆಘಾತ ನೀಡಿದೆ. ಇಂತಹ ಸಂದರ್ಭದಲ್ಲಿ ರೈತರು ಹೋರಾಟ ಮಾಡಬೇಕಾಗಿರುವುದು ಅವಶ್ಯಕ ಎಂದು ಗದಗದ ಜಗದ್ಗುರು ತೋಂಟದಾರ್ಯ ಮಠದ ಡಾ. ಸಿದ್ದರಾಮ ಶ್ರೀಗಳು ಹೇಳಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್‌ 26ರಂದು ಬೆಂಗಳೂರು ಬಂದ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳುವವರು ಕಮಂಗಿಗಳು: ತೋಂಟದಾರ್ಯ ಶ್ರೀ

    ಬಳ್ಳಾರಿ: ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳುವ ಶಾಸಕರು, ಹೋರಾಟಗಾರು ಕಮಂಗಿಗಳು ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಆಯೋಜಿಸಿದ್ದ ದಿವಂಗತ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ 78 ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಪ್ರತ್ಯೇಕ ರಾಜ್ಯ ಕೇಳುವುದು ಹೇಗಿದೆ ಎಂದರೆ ಪತಿಗೆ ಹೆದರಿಸುವುದಕ್ಕೆ ಪತ್ನಿ ಪದೇ ಪದೇ ಬಾವಿಗೆ ಬೀಳುತ್ತೇನೆ ನೋಡು ಎನ್ನುವಂತಿದೆ ಎಂದು ಹೇಳಿ ಪರೋಕ್ಷವಾಗಿ ಶಾಸಕ ಶ್ರೀರಾಮುಲು, ಉಮೇಶ ಕತ್ತಿ ಸೇರಿದಂತೆ ಹಲವು ನಾಯಕರ ವಿರುದ್ಧ ವ್ಯಂಗ್ಯವಾಡಿದರು.

    ಕರ್ನಾಟಕ ಏಕೀಕರಣವಾಗಿ 70 ವರ್ಷಗಳು ಕಳೆದಿವೆ. ಈಗ ಮತ್ತೇ ಪ್ರತ್ಯೇಕ ಮಾಡುವುದು ಹುಡುಗಾಟಿಕೆ ಅಲ್ಲ. ಒಂದು ವೇಳೆ ಕರ್ನಾಟಕ ಒಡೆಯುವ ಕೆಲಸಕ್ಕೆ ಮುಂದಾದರೆ ಅದು ಮಹಾ ಪಾಪದ ಕೆಲಸವಾಗುತ್ತದೆ. ಉತ್ತರ ಕರ್ನಾಟಕ್ಕೆ ಅನ್ಯಾಯವಾಗಿದ್ದರೆ ಚರ್ಚೆ ನಡೆಸಿ, ಹೋರಾಟ ಮಾಡಿ. ಆದರೆ ಅದೂ ಬಿಟ್ಟು ಬಜೆಟ್ ವಿಚಾರ ಇಟ್ಟುಕೊಂಡು ಪ್ರತ್ಯೇಕ ರಾಜ್ಯ ಕೇಳಲು ಮುಂದಾಗುವ ರಾಜಕಾರಣಿಗಳು ಕಮಂಗಿಗಳು ಎಂದು ಹೇಳಿದರು.

  • “ಬಾರ್ ಹಠಾವ್, ಮಠ ಬಚಾವ್”- ತೋಂಟದಾರ್ಯ ಶ್ರೀ ಗಳಿಂದ ಜಾಥಾ

    “ಬಾರ್ ಹಠಾವ್, ಮಠ ಬಚಾವ್”- ತೋಂಟದಾರ್ಯ ಶ್ರೀ ಗಳಿಂದ ಜಾಥಾ

    ಗದಗ : ಧಾರ್ಮಿಕ ಕೇಂದ್ರಗಳ ಸುತ್ತಮುತ್ತಲಿನ ಬಾರ್ ಮತ್ತು ರೆಸ್ಟೋರೆಂಟ್‍ ಗಳನ್ನ ತೆರವುಗೊಳಿಸುವಂತೆ ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ಜಾಥಾ ನಡೆಸಲಾಗಿದೆ.

    ಮಠದ ಆವರಣದಿಂದ ಆರಂಭವಾದ ಜಾತ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಯಿತು. ಜಾಥಾ ವೇಳೆ ಮಾತನಾಡಿದ ಶ್ರೀಗಳು ಮಠ ಹಾಗೂ ಧಾರ್ಮಿಕ ಕೇಂದ್ರಗಳ ಸುತ್ತ-ಮುತ್ತ ಬಾರ್ ಮತ್ತು ರೆಸ್ಟೋರೆಂಟ್‍ ಗಳನ್ನ ತೆರವುಗೊಳಿಸುವಂತೆ ಆಗ್ರಹಿಸಿದರು.

    ತೋಂಟದಾರ್ಯ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಜಾಥಾ ನೇತೃತ್ವ ವಹಿಸಿದ್ದರು. ಈ ವೇಳೆ “ಬಾರ್ ಹಠಾವ್, ಮಠ ಬಚಾವ್” ಎಂಬ ಪ್ರತಿಭಟನೆ ಘೋಷಣೆಯನ್ನು ಮಾಡಲಾಯಿತು. ಜಾಥಾ ಮೆರವಣಿಗೆಯಲ್ಲಿ ನಗರದ ತಿರಂಗಾ ಯುವಮೋರ್ಚಾ ಘಟಕ ಕಾರ್ಯಕರ್ತರು ಸೇರಿದಂತೆ ಹಲವು ಭಾಗವಹಿಸಿದ್ದರು.

    ತೋಂಟದಾರ್ಯ ಮಠದ ಸುತ್ತ-ಮುತ್ತ ಸುಮಾರು 6 ಮದ್ಯದ ಅಂಗಡಿಗಳಿದ್ದು ಮಠಕ್ಕೆ ಬರುವ ಭಕ್ತರಿಗೆ, ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪತ್ರಿಭಟನಾಕಾರರು, ಮದ್ಯವೆಸನಿಗಳ ವರ್ತನೆಗೆ ಬೇಸತ್ತು ಸ್ವಾಮಿಜಿಗಳು, ಸಂಘಟಿಕರು, ಸಾರ್ವಜನಿಕರರು, ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    ಮಠದ ಸುತ್ತಲಿನ ಸುಮಾರು 200 ಮೀಟರ್ ಒಳಗಿರುವ ಮದ್ಯದ ಅಂಗಡಿಗಳನ್ನ ಸ್ಥಳಾಂತರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮದ್ಯ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಒಳ ಒಪ್ಪಂದಿಂದ ಬಾರ್ ತೆರವಿಗೆ ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪವನ್ನು ತೋಂಟದ ಶ್ರೀಗಳು ಮಾಡಿದ್ದಾರೆ.