Tag: ತೋಟಗಾರಿಕ ಸಚಿವ

  • ಉಗ್ರರ ಮೇಲೆ ಏರ್ ಸ್ಟ್ರೈಕ್ – ಮೃದು ಧೋರಣೆ ತಾಳಿದ ತೋಟಗಾರಿಕಾ ಸಚಿವ

    ಉಗ್ರರ ಮೇಲೆ ಏರ್ ಸ್ಟ್ರೈಕ್ – ಮೃದು ಧೋರಣೆ ತಾಳಿದ ತೋಟಗಾರಿಕಾ ಸಚಿವ

    ಬಾಗಲಕೋಟೆ: ಯೋಧರೇ ಇರಲಿ, ಉಗ್ರಗಾಮಿಗಳೇ ಇರಲಿ ಬಾಂಬ್ ದಾಳಿ ನಡೆಯಬಾರದಿತ್ತು ಎಂದು ತೋಟಗಾರಿಕಾ ಸಚಿವ ಮನಗೋಳಿ ಮೃದು ಧೋರಣೆ ತಾಳಿದ್ದಾರೆ.

    ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವರು, ಮಾನವೀಯತೆ ದೃಷ್ಟಿಯಿಂದ ಯಾರ ಮೇಲೂ ಬಾಂಬ್ ಹಾಕಬಾರದು. ಯೋಧರೇ ಇರಲಿ, ಉಗ್ರಗಾಮಿಗಳೇ ಇರಲಿ ಬಾಂಬ್ ದಾಳಿ ಉತ್ತಮವಲ್ಲ ಎಂದು ತಿಳಿಸಿದರು.

    ಭಾರತ ಪಾಕಿಸ್ತಾನದ ಉಗ್ರರ ಮೇಲೆ ನಡೆಸಿದ ದಾಳಿಯ ಕುರಿತು ಮಾಧ್ಯಮಗಳು ಪ್ರಶ್ನೆ ಮಾಡಿದ ವೇಳೆ ಸಚಿವರು ಉತ್ತರಿಸಿದ್ದು, ನಡೆದದ್ದು ನಡೆದು ಹೋಗಿದೆ. ಈಗ ಘಟನೆ ನಡೆದು ಹೋಗಿರುವುದರಿಂದ ಆದರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ತೆರಳಿದರು.

    ಪುಲ್ವಾಮಾ ದಾಳಿಯ ಸೇಡು ತಿರಿಸಿಕೊಂಡಿರುವ ಭಾರತ ವಾಯುಸೇನೆಯನ್ನು ಬಳಿಸಿ ಪಾಕಿಸ್ತಾನದಲ್ಲಿದ್ದ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಬಾಂಬ್ ದಾಳಿ ನಡೆಸಿ ನಾಶ ಪಡಿಸಿತ್ತು. ಈ ಸಂಬಂಧ ಕೇಂದ್ರ ಸರ್ಕಾರ ನಿರ್ಣಯವನ್ನು ಹಲವು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv