Tag: ತೋಟಗಾರಿಕೆ ಬೆಳೆ

  • ದಾಖಲೆಯ ಮಳೆಗೆ ಬೀದರ್ ತತ್ತರ – 5 ಕೋಟಿಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆ ನಾಶ

    ದಾಖಲೆಯ ಮಳೆಗೆ ಬೀದರ್ ತತ್ತರ – 5 ಕೋಟಿಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆ ನಾಶ

    ಬೀದರ್: ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೀದರ್ (Bidar) ಜಿಲ್ಲೆ ತತ್ತರಿಸಿ ಹೋಗಿದ್ದು, 5 ಕೋಟಿ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.

    ಬೀದರ್ ತಾಲೂಕಿನ ಟಿ.ಮರ್ಜಾಪೂರ್ ಗ್ರಾಮದ ಮಾಣಿಕ್ಯರಾವ್ ಪಾಟೀಲ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ನಿಂಬೆಹಣ್ಣು, ಸೀಬೆ ಹಣ್ಣು, ಪಪ್ಪಾಯ ಹಾಗೂ ತರಕಾರಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಮಳೆ ಪಾಲಾಗಿವೆ.ಇದನ್ನೂ ಓದಿ: ಯೂಟ್ಯೂಬರ್‌ ಅಭಿಷೇಕ್‌ಗೆ SIT ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

    600 ನಿಂಬೆಹಣ್ಣು, 400 ಸೀಬೆ ಹಣ್ಣು, 200 ಮಾವಿನಕಾಯಿ ಸೇರಿದಂತೆ ಹಲವು ಹಣ್ಣುಗಳು ನೆಲಕ್ಕೆ ಬಿದ್ದು ಕೊಳೆತು ಹೋಗಿವೆ. ಒಟ್ಟು 5 ಲಕ್ಷ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.

    ಇನ್ನೂ ಜಿಲ್ಲೆಯಾದ್ಯಂತ 5 ಕೋಟಿ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿದೆ. ಇದರಿಂದ ನೊಂದ ರೈತರು ಪರಿಹಾರ ಕೊಡಿ ಇಲ್ಲ ಸಾಯಲು ಬಿಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ಇದನ್ನೂ ಓದಿ: ಟ್ರಾಫಿಕ್ ಫೈನ್ ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್ – 35.72 ಕೋಟಿ ದಂಡ ಪಾವತಿ

  • ಭಾರತದಲ್ಲಿ ಒಂದು ವರ್ಷದಲ್ಲಿ 320 ದಶಲಕ್ಷ ಟನ್ ಹಣ್ಣು ಉತ್ಪಾದನೆ

    ಭಾರತದಲ್ಲಿ ಒಂದು ವರ್ಷದಲ್ಲಿ 320 ದಶಲಕ್ಷ ಟನ್ ಹಣ್ಣು ಉತ್ಪಾದನೆ

    ಮಂಡ್ಯ: ನಮ್ಮ ದೇಶ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಸಾಧನೆ ಮಾಡಿದ್ದು, ಒಂದು ವರ್ಷದಲ್ಲಿ ಸುಮಾರು 320 ದಶಲಕ್ಷ ಟನ್ ಹಣ್ಣು ಉತ್ಪಾದಿಸಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ದಾರೆ.  

    ಮಂಡ್ಯದ ಗಾಂಧಿಭವನದಲ್ಲಿ ಅಖಂಡ ಕರ್ನಾಟಕ ರೈತ ಸಂಘ, ಕೃಷಿ ಸಂಶೋಧನಾ ಕೇಂದ್ರ, ವಿ.ಸಿ.ಫಾರಂ, ಯಲಿಯೂರು ನಮ್ಮ ರೈತ ಕೂಟದ ವತಿಯಿಂದ ಶನಿವಾರ ನಡೆದ ಉಚಿತ ಬಿಳಿರಾಗಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ರೈತರು ಅಗತ್ಯದಷ್ಟು ಆಹಾರ ಉತ್ಪಾದನೆ ಮಾಡಿ ಬೇರೆ ದೇಶಗಳಿಗೂ ರಫ್ತು ಮಾಡುತ್ತಿದೆ. 200 ದಶಲಕ್ಷ ಟನ್ ಹಾಲು ಉತ್ಪಾದನೆ ಮಾಡಿದೆ. ಎಲ್ಲ ದೇಶಗಳಿಗೂ ಆಹಾರ ಉತ್ಪಾದನೆಯೇ ಪ್ರಮುಖ ಆದ್ಯತೆಯಾಗಿದೆ. ಆಹಾರ ಭದ್ರತೆ ಸಾಧಿಸಬೇಕು ಎಂಬುದು ವಿಜ್ಞಾನಿಗಳು ಬಹಳ ಹಿಂದೆಯೇ ತಿಳಿಸಿದ್ದರು. ಹೊಸ ತಳಿಗಳ ಸಂಶೋಧನೆಯಿಂದ 2020-21ನೇ ಸಾಲಿನಲ್ಲಿ 303 ದಶಲಕ್ಷ ಟನ್ ಆಹಾರ ಉತ್ಪಾದನೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಸೋಶಿಯಲ್ ಮೀಡಿಯಾಕ್ಕೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್-ಟೀಕಾಕಾರರಿಗೆ ಖಡಕ್ ಉತ್ತರ

    ಕೃಷಿ ವಿಜ್ಞಾನಿ ಸಂಶೋಧಕ ಡಾ.ಸಿ.ಆರ್.ರವಿಶಂಕರ್ ಮಾತನಾಡಿ, ಬಿಳಿರಾಗಿಯಲ್ಲಿ ಆರೋಗ್ಯ ವೃದ್ಧಿಸುವ ಅಂಶಗಳು ಯೆಥೇಚ್ಛವಾಗಿದೆ ಎಂದು ಹೇಳಿದರು. ಬಿಳಿರಾಗಿಯಲ್ಲಿ ಕಬ್ಬಿಣಾಂಶ ಹೆಚ್ಚಿದೆ. ಕಪ್ಪು ರಾಗಿಗೆ ಇರುವಂಥ ಗುಣಗಳು ಬಿಳಿರಾಗಿಯಲ್ಲಿಯೂ ಇದೆ. ಅಜೀರ್ಣ ಸಮಸ್ಯೆ ಶಮನಗೊಳಿಸುತ್ತದೆ. ಇದನ್ನು ಬಳಸುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಬಿಳಿರಾಗಿಗೆ ಕೆ/360 ಎಂದು ಹೆಸರನ್ನಿಟ್ಟು 2016 ರಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಮೊದಲೇ ಕಿಚ್ಚನಿಗೆ ಸರ್ಪ್ರೈಸ್ ನೀಡಿದ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ

    ಕಿರುಧಾನ್ಯಗಳಾದ ರಾಗಿ, ಆರ್ಕಾ, ನವಣೆ, ಊದ್ಲು, ಸಾಮೆ, ಕೂರಲು, ಬುರುಗು, ಸಜ್ಜೆ ಸೇರಿದಂತೆ ಎಂಟು ಧಾನ್ಯಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬೇಕು. ಜಿಲ್ಲೆಯ ವಿ.ವಿ.ಫಾರಂನ ಕೃಷಿ ಕೇಂದ್ರದಲ್ಲಿ 3,500 ರಾಗಿ ತಳಿಗಳು ಇವೆ ಎಂದು ವಿವರಿಸಿದರು.

  • ನರೇಗಾ ಯೋಜನೆಯಡಿ ಬಾಳೆ ಬೆಳೆದು ಬಾಳು ಹಸನಾಗಿಸಿಕೊಂಡ ಕೊಪ್ಪಳದ ರೈತ

    ನರೇಗಾ ಯೋಜನೆಯಡಿ ಬಾಳೆ ಬೆಳೆದು ಬಾಳು ಹಸನಾಗಿಸಿಕೊಂಡ ಕೊಪ್ಪಳದ ರೈತ

    ಕೊಪ್ಪಳ: ತಾಲೂಕಿನ ಹ್ಯಾಟಿ ಗ್ರಾಮ ಬಾಳೆ ಬೆಳೆಗೆ ಖ್ಯಾತಿ ಪಡೆದಿದ್ದು, ಇಲ್ಲಿಯ ಮಸಾರಿ ಮಣ್ಣು ಹಾಗೂ ನೀರು ಬಾಳೆ ಬೆಳೆಗೆ ಉತ್ತಮವಾಗಿದೆ. ಈ ಗ್ರಾಮದ ವಿರೂಪಾಕ್ಷಪ್ಪ ಇಲ್ಲಿy ನೈಸರ್ಗಿಕ ಸಂಪತ್ತಿನ ಜತೆಗೆ 2020-21ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ಹಾಗೂ ತೋಟಗಾರಿಕೆ ಇಲಾಖೆ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಒಂದು ಹೆಕ್ಟರ್ ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಕೋವಿಡ್ ಸಂಕಷ್ಟದಲ್ಲೂ ಸಹ ತೋಟಗಾರಿಕೆ ಅಧಿಕಾರಿಗಳ ಸಹಾಯ ಪಡೆದು ಆರ್ಥಿಕ ಪ್ರಗತಿ ಸಾಧಿಸಿದ್ದಾರೆ.

    ವಿರೂಪಾಕ್ಷಪ್ಪ ಅವರಿಗೆ ಹೋಬಳಿ ಅಧಿಕಾರಿ ಕೃಷ್ಣಮೂರ್ತಿ ಪಾಟೀಲ್ ಮಾರ್ಗದರ್ಶನ ನೀಡಿದ್ದಾರೆ. ಅದರಂತೆ 2020ರ ಜೂನ್ ನಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯಿಂದ ಬಾಳೆ ಸಸಿಗಳನ್ನು 13 ರೂ. ಗೆ ಒಂದರಂತೆ ತಂದು 6*6 ಅಡಿ ಅಂತರದಲ್ಲಿ 2 ಎಕರೆಯಲ್ಲಿ 3,000 ಗಿಡಗಳನ್ನು ನಾಟಿ ಮಾಡಿದ್ದಾರೆ. ಬಾಳೆ ನಾಟಿ, ಸಸ್ಯ ಸಂರಕ್ಷಣೆ, ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರಿಂದ ಸಲಹೆ ಪಡೆದಿದ್ದಾರೆ. ಜೂನ್‍ನಲ್ಲಿ ನಾಟಿ ಮಾಡಿದ ಬಾಳೆ ಈಗ ಕೊಯ್ಲಿಗೆ ಬಂದಿದ್ದು, ಸುಮಾರು 5 ಕ್ವಿಂಟಲ್ ಕಾಯಿಗಳನ್ನು 5 ರೂ. ಗೆ ಒಂದು ಕಿ.ಗ್ರಾಂ. ನಂತೆ ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಬೆಲೆ ಕಡಿಮೆ ಆಗಿ ಹಾಗೂ ಖರೀದಿದಾರರೇ ಇಲ್ಲದ ಸಮಯದಲ್ಲಿ ತೋಟಗಾರಿಕೆ ಇಲಾಖೆ ಮಧ್ಯ ಪ್ರವೇಶಿಸಿ, ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಮಾರಾಟ ಮಾಡುವುದೊಂದೇ ಸವಾಲಾಗಿದೆ. ಮಾರಾಟವಾಗದಿದ್ದಲ್ಲಿ ಹಣ್ಣುಗಳು ಹಾಳಾಗುತ್ತವೆ. ಮೊದಲೇ ಗಾಳಿಯಿಂದಾಗಿ ನೂರಾರು ಗಿಡಗಳು ಬಿದ್ದು ನಷ್ಟವಾಗಿವೆ, ಈಗ ಮತ್ತಷ್ಟು ನಷ್ಟವಾಗುವುದು ಬೇಡ ಎಂದು ಅಧಿಕಾರಿಗಳ ಸಲಹೆ ನೀಡಿದ್ದಾರೆ. ತೋಟಗಾರಿಕೆ ಅಧಿಕಾರಿಗಳ ಸಲಹೆಯಂತೆ ಬೆಳೆದ ಬಾಳೆ ಉತ್ತಮವಾಗಿದೆ, ಮುಂದಿನ ದಿನಗಳಲ್ಲಿ ಉತ್ತಮ ದರ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ.

    ಇಲಾಖೆಯ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಅಧಿಕಾರಿಗಳ ಸಲಹೆ ಪಡೆದ ವಿರೂಪಾಕ್ಷ ಅವರು ಉತ್ತಮ ಬೆಳೆ ಬೆಳೆದಿದ್ದಾರೆ. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಇವರಿಗೆ ಮಾರುಕಟ್ಟೆ ತೊಂದರೆ ಆಗಿತ್ತು. ಸದ್ಯ ಕಡಿಮೆ ದರ ಇದ್ದರೂ ಸ್ಥಳೀಯ ವ್ಯಾಪಾರಸ್ಥರು ತಾವೇ ಕೊಯ್ಲು ಮಾಡಿ ಕಾಯಿಗಳನ್ನು ಒಯ್ಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದರ ಸಿಗಬಹುದು. ರೈತರು ಎದೆಗುಂದಬಾರದು. ತೋಟಗಾರಿಕೆ ಇಲಾಖೆ ಸದಾ ರೈತರ ನೆರವಿಗೆ ಇರುತ್ತದೆ ಎಂದು ಹಿರಿಯ ಸಹಾಯಕ ತೋಟಗಾರಿಗೆ ನಿರ್ದೇಶಕರಾದ (ಹಿ.ಸ.ತೋ.ನಿ) ಜಗನ್ನಾಥರೆಡ್ಡಿ ಹೇಳುತ್ತಾರೆ.

  • ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅನುಮತಿ ಕಾಯಬೇಕಿಲ್ಲ: ಶಿವರಾಮ್ ಹೆಬ್ಬಾರ್

    ಕೃಷಿ, ತೋಟಗಾರಿಕೆ ಬೆಳೆಗಳಿಗೆ ಅನುಮತಿ ಕಾಯಬೇಕಿಲ್ಲ: ಶಿವರಾಮ್ ಹೆಬ್ಬಾರ್

    ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಮುಂಜಾಗೃತಾ ಕ್ರಮದಿಂದ ಕೊರೊನಾ ವೈರಸ್ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ, ಮೀನುಗಾರರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

    ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಕೊರೊನಾ ತಡೆ ಬಗ್ಗೆ ಸಭೆ ನಡೆಸಿದ ಅವರು, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಆಗದಂತೆ ಮುಕ್ತವಾಗಿ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ನಿರ್ಣಯದಂತೆ ಜಿಲ್ಲೆಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಮೀನುಗಾರಿಕೆಗೂ ಸಹ ಅವಕಾಶ ನೀಡಲಾಗಿದೆ. ಅಡಿಕೆ ಸೇರಿದಂತೆ ಇತರೆ ಬೆಳೆಗಳನ್ನು ರೈತರು ದೇಶದ ಯಾವುದೇ ಭಾಗಗಳಿಗೆ ಸಾಗಿಸಲು ಅನುಮತಿಗಾಗಿ ಕಾಯಬೇಕಾಗಿಲ್ಲ. ಜಿಲ್ಲಾಧಿಕಾರಿ ಮೂಲಕ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮೂಲಕವು ಅನುಮತಿ ಪಡೆದುಕೊಳ್ಳಬಹುದು ಎಂದರು.

    ಘಟ್ಟದ ಕೆಳಗೆ ಕಲ್ಲಂಗಡಿ, ಘಟ್ಟದ ಮೇಲ್ಬಾಗದಲ್ಲಿ ಅನಾನಸ್, ಬಾಳೆಹಣ್ಣು, ಪಪ್ಪಾಯಿ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ಕೊಂಡುಕೊಳ್ಳುವವರು ಇಲ್ಲದ ಕಾರಣ ಸುಮಾರು 12 ಸಾವಿರ ಟನ್ ಅನಾನಸ್ ಹಾಗೆ ಇದೆ. ಈ ಬಗ್ಗೆ ಭಾರತ ಸರ್ಕಾರದ ಅಧಿಕಾರಿಗಳ ಜೊತೆ ಮಾತಾಡಿದ್ದು, ಈ ವಾರದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

    ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಯಾವುದೇ ತೊಂದರೆಯಾಗಿಲ್ಲ. ಓಟಿಪಿ ಬದಲು ಈ ಮೂರು ತಿಂಗಳು ಸಹಿ ಪಡೆದು ಪಡಿತರ ವಿತರಣೆ ಮಾಡಲು ಸೂಚಿಸಲಾಗಿದ್ದು, ಈಗಾಗಲೇ ಶೇ. 80ರಷ್ಟು ಪಡಿತರ ನೀಡಲಾಗಿದೆ. ಜೊತೆಗೆ ಬಿಪಿಎಲ್‍ಗಾಗಿ ಜಿಲ್ಲೆಯಲ್ಲಿ 3,427 ಜನರು ಅರ್ಜಿ ಸಲ್ಲಿಸಿದ್ದು, ಅವರಿಗೂ ಮೂರು ತಿಂಗಳು ಪಡಿತರ ವಿತರಣೆ ಮಾಡುವುದಾಗಿ ತಿಳಿಸಿದರು.

    ಶಿರಸಿ ಸಿದ್ದಾಪುರದಲ್ಲಿ ನಾಲ್ಕು ಜನರಲ್ಲಿ ಮಂಗನ ಕಾಯಿಲೆ ಕಂಡು ಬಂದಿದೆ. ಈಗಾಗಲೇ ಆರೋಗ್ಯ ಇಲಾಖೆ ಕಾರ್ಯೋನ್ಮುಕವಾಗಿದ್ದು, ಶಿರಸಿ ಉಪವಿಭಾಗಾಧಿಕಾರಿ ಪ್ರತಿ ಎರಡು ದಿನಕ್ಕೊಮ್ಮೆ ಸ್ಥಳಕ್ಕೆ ತೆರಳಿ ಜನರಲ್ಲಿ ಧೈರ್ಯ ತುಂಬಲು ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಔಷಧಿ ಪಡೆಯಲು ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಪಿಡಿಓಗಳಿಗೆ ಆಯಾ ಭಾಗದ ಜನರು ಯಾವ ಔಷಧಿಗಳು ಬೇಕು ಎಂಬುದನ್ನು ತಿಳಿಸಿದಲ್ಲಿ ಅವರ ಮೂಲಕ ಪೂರೈಸಲು ಸೂಚಿಸಲಾಗಿದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗುವ ವಾಹನಗಳಿಗೆ ಡಿಸೆಲ್ ವ್ಯವಸ್ಥೆ ಕೂಡ ಪಿಡಿಓ ಮೂಲಕ ಮಾಡಲಾಗಿದೆ ಎಂದು ಹೇಳಿದರು.