Tag: ತೋಂಟದಾರ್ಯ ಸ್ವಾಮೀಜಿ

  • ಕಗ್ಗೆರೆ ಗವಿಮಠದ ತೋಂಟದಾರ್ಯ ಸ್ವಾಮೀಜಿ ಲಿಂಗೈಕ್ಯ

    ಕಗ್ಗೆರೆ ಗವಿಮಠದ ತೋಂಟದಾರ್ಯ ಸ್ವಾಮೀಜಿ ಲಿಂಗೈಕ್ಯ

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗವಿಮಠದ ತೋಂಟದಾರ್ಯ ಸ್ವಾಮೀಜಿ(80) ಇಂದು ಲಿಂಗೈಕ್ಯರಾಗಿದ್ದಾರೆ.

    ಶ್ರೀಗಳಿಗೆ ಕಳೆದ ಭಾನುವಾರ ಹೃದಯಾಘಾತವಾಗಿತ್ತು, ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಕಗ್ಗೆರೆಯ ಗವಿಮಠದಲ್ಲಿ ಶ್ರೀಗಳ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು ಸಂಜೆ 6 ಗಂಟೆಗೆ ವೀರಶೈವ ಸಂಪ್ರದಾಯದಂತೆ ಗಮಿಮಠದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಸಿದ್ದಗಂಗಾ ಶ್ರೀಗಳು, ಸತ್ತೂರು ಶ್ರೀಗಳು ಸೇರಿದಂತೆ ನಾಡಿನ ಹಲವು ಸಾಧುಸಂತರು ಅಂತಿಮ ದರ್ಶನ ಪಡೆದಿದ್ದಾರೆ. ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರ ಆರಾಧ್ಯ ಕ್ಷೇತ್ರ ಇದಾಗಿದ್ದು, ತೋಂಟದಾರ್ಯ ಶ್ರೀಗಳು ದಾಸೋಹ, ಸಮಾಜ ಸೇವೆಯಲ್ಲಿ ಸದಾ ಮುಂದೆ ಇದ್ದರು.

  • ತೋಂಟದಾರ್ಯ ಶ್ರೀ ಅಂತಿಮ ದರ್ಶನ- ಸಂಜೆ 4 ಗಂಟೆಗೆ ಕ್ರಾಂತಿಯೋಗಿಯ ಅಂತ್ಯಕ್ರಿಯೆ

    ತೋಂಟದಾರ್ಯ ಶ್ರೀ ಅಂತಿಮ ದರ್ಶನ- ಸಂಜೆ 4 ಗಂಟೆಗೆ ಕ್ರಾಂತಿಯೋಗಿಯ ಅಂತ್ಯಕ್ರಿಯೆ

    ಗದಗ: ಲಿಂಗಾಯತ ಧರ್ಮದ ಪ್ರಮುಖ ರೂವಾರಿ, ಸಮಾಜ ಸುಧಾರಕ, ಗದಗಿನ ತೋಂಟದಾರ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ನಿನ್ನೆ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅವರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದು, ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಮಠದತ್ತ ಬರ್ತಿದ್ದಾರೆ.

    ಶನಿವಾರ ರಾತ್ರಿವರೆಗೂ ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಡಂಬಳದ ತೋಂಟದಾರ್ಯ ಮೂಲ ಮಠಕ್ಕೆ ರವಾನಿಸಿ, ಬೆಳಗ್ಗೆ 4 ಗಂಟೆವರೆಗೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತ್ರ ಪುನಃ ಗದುಗಿನ ತೋಂಟದಾರ್ಯ ಮಠಕ್ಕೆ ತರಲಾಯ್ತು. ಅಲ್ಲದೆ ಬೆಳಗ್ಗೆ 11 ಗಂಟೆವರೆಗೆ ಮಠದ ಆವರಣದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


    ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ. ಇದಾದ ಬಳಿಕ 11 ಘಂಟೆಯ ನಂತರ ಗದಗ ಬೆಟಗೇರಿ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಗದಗ ತೋಂಟದಾರ್ಯ ಮಠಕ್ಕೆ ಪಿಠಾಧಿಪತಿ ಇಲ್ಲದ ಕಾರಣ ಶಿವಮೊಗ್ಗದ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜಿ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ ಅಂತ ಮುಂಡರಗಿ ತೋಂಟದಾರ್ಯ ಮಠಸ ನಿಜಗುಣಾನಂದ ಸ್ವಾಮಿಜಿ ತಿಳಿಸಿದ್ದಾರೆ.

    ಶ್ರೀಗಳ ನಿಧನದಿಂದ ಗದಗದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ನಿನ್ನೆ ಮತ್ತು ಇಂದು ಚಿತ್ರಪ್ರದರ್ಶನಗಳನ್ನೂ ರದ್ದು ಮಾಡಲಾಗಿದೆ. ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=E_XsKW_w2yA