Tag: ತೊಗರಿ ಬೆಳೆ

  • ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ – ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯದಿಂದ ಪ್ರೋತ್ಸಾಹ ಧನ

    ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ – ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯದಿಂದ ಪ್ರೋತ್ಸಾಹ ಧನ

    ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂಬ ಭರವಸೆಗೆ ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಅನುಮೋದನೆ ನೀಡಿದ್ದು, ಈ ಮೂಲಕ ಸರ್ಕಾರ ತೊಗರಿ ಬೆಳೆಗಾರರಿಗೆ ಸಂತಸದ ಸುದ್ದಿ ನೀಡಿದೆ.

    2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ರಾಜ್ಯದ ಸರ್ಕಾರದಿಂದ ಪ್ರೋತಾಹ ಧನ ನೀಡಲಾಗುವುದು ಎಂದು ಜವಳಿ, ಕಬ್ಬು ಅಭಿವೃಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಕಳೆದ ಜನವರಿ ತಿಂಗಳಲ್ಲಿ ಭರವಸೆ ನೀಡಿದ್ದರು.ಇದನ್ನೂ ಓದಿ: ‘ಬಿಗ್ ಬಾಸ್‌’ನಲ್ಲಿ ಗೆದ್ದ 50 ಲಕ್ಷ ಏನಾಯ್ತು?- ಅಚ್ಚರಿಯ ಉತ್ತರ ಕೊಟ್ಟ ಹನುಮಂತ

    ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನ 450 ರೂ. ಅಂದರೆ ಪ್ರತಿ ಕ್ವಿಂಟಾಲ್‌ಗೆ ಒಟ್ಟು 8,000 ರೂ. ನೀಡುವುದಾಗಿ ಭರವಸೆ ನೀಡಿದ್ದರು.

    ಸದ್ಯ ಈ ಸಂಬಂಧ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆಯೂ ಸಹ ಸಹಮತಿ ನೀಡಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗೆ ತಕ್ಷಣ ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ.

    ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಂದಾಜು 330 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ರೈತರು ತಮ್ಮ ಹತ್ತಿರದ PACS / FPO / TAPCMS ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು ಬೆಂಬಲ ಬೆಲೆ ಯೋಜನೆ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ:ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ – ಬೆಂಗಳೂರು ತಲುಪಿದ 2ನೇ ಡ್ರೈವರ್‌ಲೆಸ್‌ ಮೆಟ್ರೋ

  • ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಕಲಬುರಗಿ: ಜಿಲ್ಲೆಯಾದ್ಯಂತ ಪ್ರಸಕ್ತ 2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ತೊಗರಿ (Pigeon pea Crop) ಖರೀದಿ ಆರಂಭವಾಗಿದ್ದು, ಜಿಲ್ಲಾಯದ್ಯಂತ 177 ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

    ಪ್ರಸಕ್ತ 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ FAQ ಗುಣಮಟ್ಟದ 3,06,150 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಸರ್ಕಾರ ಆದೇಶಿಸಿದೆ ಎಂದಿರುವ ಅವರು, ಜಿಲ್ಲೆಯಲ್ಲಿ ಈಗಾಗಲೆ ಗುರುತಿಸಿರುವ 177 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಥವಾ ರೈತ ಉತ್ಪಾದಕ ಸಂಘಗಳಲ್ಲಿ ತೊಗರಿ ಖರೀದಿಗೆ ನೊಂದಣಿ ಪ್ರಕ್ರಿಯೆ ಆರಂಭವಾಗಿದೆ. ಖರೀದಿಗೆ 134 ಕೇಂದ್ರ ಮ್ಯಾಪಿಂಗ್ ಆಗಿದ್ದು, ಇನ್ನುಳಿದ 43 ಕೇಂದ್ರ ತುರ್ತಾಗಿ ಮ್ಯಾಪಿಂಗ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಶಾರ್ಟ್‌ ಸರ್ಕ್ಯೂಟ್; ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನ

    ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ತೊಗರಿಗೆ 7,550 ರೂ. ನಿಗದಿ ಮಾಡಲಾಗಿದ್ದು, ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುತ್ತದೆ. ಹಣವನ್ನು ಡಿಬಿಟಿ ಮೂಲಕ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ವಿರುದ್ಧ ವಂಚನೆ ಆರೋಪ – ಕೋರ್ಟ್‌ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ

    ಇನ್ನು ನ್ಯಾಫೆಡ್ ನಿಂದ ತೊಗರಿ ಖರೀದಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ನೋಡಲ್ ಏಜೆನ್ಸಿಗಳನ್ನಾಗಿ ನೇಮಿಸಿದ್ದು, ರೈತ ಬಾಂಧವರು ಇದರ ಲಾಭ ಪಡೆಯಬೇಕೆಂದು ಡಿಸಿ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗರ್ಭಿಣಿಯರ ಬೃಹತ್ ಆರೋಗ್ಯ ತಪಾಸಣಾ ಶಿಬಿರ – ಮಾತೃತ್ವ ಸುರಕ್ಷತಾ ಅಭಿಯಾನಕ್ಕೆ ಆರೋಗ್ಯ ಇಲಾಖೆ ಒತ್ತು

  • ತೊಗರಿ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

    ತೊಗರಿ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

    ಕಲಬುರಗಿ: ಜಿಲ್ಲೆಯಲ್ಲಿ ಬೆಳೆಯಲಾದ ತೊಗರಿ ಆರೋಗ್ಯದ ಕುರಿತ ಕೃಷಿ ವಿಜ್ಞಾನಿ ಮತ್ತು ಅಧಿಕಾರಿಗಳು ಕ್ಷಿಪ್ರ ಸಂಚಾರ ಸಮೀಕ್ಷೆ ಕೈಗೊಂಡು ರೈತರಿಗೆ ನಿರ್ವಹಣಾ ಕ್ರಮಗಳ ಕುರಿತು ಮಾಹಿತಿ ನೀಡುವ ಸಮೀಕ್ಷೆ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಚಾಲನೆ ನೀಡಿದರು.

    ಡಿ.ಸಿ.ಕಚೇರಿ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತಾಲೂಕುವಾರು ಹಂಚಿಕೆಯಾದ ಕೃಷಿ ವಾಹನಗಳಿಗೆ ಸಚಿವರು ಮತ್ತು ಗಣ್ಯರು ಚಾಲನೆ ನೀಡಿದರು. ಇದನ್ನೂ ಓದಿ: ಭಾರತದ ಭೂಮಿಯ ಮೇಲೆ ಒಂದಿಂಚೂ ಕಾಂಪ್ರಮೈಸ್ ಮಾಡಲ್ಲ: ಮೋದಿ ಭರವಸೆ

    ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಈ ಸಂದರ್ಭದಲ್ಲಿ ಮಾತನಾಡಿ, ಕಲಬುರಗಿ (Kalaburagi) ಜಿಲ್ಲೆಯಲ್ಲಿ ಸುಮಾರು 30 ವರ್ಷಗಳಿಂದ ಕ್ಷಿಪ್ರ ಸಂಚಾರಿ ಸಮೀಕ್ಷೆ ಮಾಡುವ ಮೂಲಕ ತೊಗರಿ ಆರೋಗ್ಯದ ಬಗ್ಗೆ ರೈತರಿಗೆ ಪ್ರತಿ ವಾರ ಮಾಹಿತಿ ನೀಡುತ್ತಿದ್ದು, ಇದರಿಂದ ರೈತರಿಗೆ ಕಾಲಕಾಲಕ್ಕೆ ತೊಗರಿ ಬೆಳೆಗೆ ಬರುವ ಸಂಭವನೀಯ ರೋಗ ಮತ್ತು ಬಾಧೆಗಳ ನಿರ್ವಹಣೆಗೆ ಅನುಕೂಲವಾಗುತ್ತಿದೆ ಎಂದರು. ಇದನ್ನೂ ಓದಿ: ಶಕ್ತಿ ಯೋಜನೆ ನಿಲ್ಲಿಸಲು ಸರ್ಕಾರದ ಹುನ್ನಾರ, ಮರು ಪರಿಶೀಲನೆ ಎಂಬುದು ನಾಟಕ: ಹೆಚ್‌ಡಿಕೆ

    ಪ್ರಸಕ್ತ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ, ಕಬ್ಬು ಹಾಗೂ ಹತ್ತಿಯನ್ನು ಕ್ರಮವಾಗಿ 6.06, 0.49 ಹಾಗೂ 1.06 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಇನ್ನು ಹಿಂಗಾರು ಹಂಗಾಮಿನಲ್ಲಿ ಕಡಲೆ ಮತ್ತು ಜೋಳ ಕ್ರಮವಾಗಿ 1.10 ಮತ್ತು 0.77 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕುತಂತ್ರದಿಂದ ನಾನು ಎರಡು ಬಾರಿ ಸೋತಿದ್ದೇನೆ: ಭಾಷಣದ ವೇಳೆ ನಿಖಿಲ್ ಕಣ್ಣೀರು

    ಕೃಷಿ ಇಲಾಖೆಯು ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ತಾಲೂಕಿಗೆ ಒಂದರಂತೆ ತಂಡಗಳನ್ನು ರಚಿಸಿದ್ದು, ಮುಂಗಾರು ಮತ್ತು ಹಿಂಗಾರು ಹಂಗಾಮಿನ ತಾಲೂಕುಗಳಿಗೆ ಸಾಪ್ತಾಹಿಕವಾಗಿ 8 ವಾರಗಳ ಕಾಲ ಸತತ ಭೇಟಿ ನೀಡಿ ಬೆಳೆಗಳ ಬೆಳವಣಿಗೆ, ಅವುಗಳಲ್ಲಿರುವ ರೋಗ ಮತ್ತು ಬಾಧೆಗಳನ್ನು ಗುರುತಿಸುವುದು. ಹಾಗೆಯೇ ಅವಶ್ಯಕವಿರುವ ನಿಯಂತ್ರಣ ಮಾಹಿತಿಗಳನ್ನು ತಿಳಿದುಕೊಂಡು, ತಾಂತ್ರಿಕವಾಗಿ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಧ್ಯಮದ ಮೂಲಕ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಇದರಿಂದ ರೈತರಿಗೆ ರೋಗ ಮತ್ತು ಕೀಟನಾಶಕ ಸಿಂಪಡಣೆಯಲ್ಲಿ ವೆಚ್ಚ ಕಡಿಮೆಯಾಗಲಿದೆ. ಇದನ್ನೂ ಓದಿ: ಸೇನಾ ವಾಪಸಾತಿ ಬಳಿಕ ಗಡಿಯಲ್ಲಿ ದೀಪಾವಳಿ ಸಿಹಿ ಹಂಚಿಕೊಂಡ ಭಾರತ-ಚೀನಾ ಸೈನಿಕರು

    ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಉಪಸ್ಥಿತರಿದ್ದರು. ಇದನ್ನೂ ಓದಿ: ಗ್ಯಾರಂಟಿ ಯೋಜನೆ ಕೊಡಲು ಆಗದ ಕಾಂಗ್ರೆಸ್ ಸರ್ಕಾರ ಯೂಟರ್ನ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

  • ವಿದ್ಯುತ್‌ ಬಿಲ್‌ ಏರಿಕೆ, ತೊಗರಿ ಬೇಳೆ ದರ ಗಗನಕ್ಕೆ

    ವಿದ್ಯುತ್‌ ಬಿಲ್‌ ಏರಿಕೆ, ತೊಗರಿ ಬೇಳೆ ದರ ಗಗನಕ್ಕೆ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹಳೆಯ ದ್ವೇಷಕ್ಕೆ ತೊಗರಿ ಬೆಳೆಗೆ ಬೆಂಕಿ- ಠಾಣೆ ಮೆಟ್ಟಿಲೇರಿದ್ರೂ ರೈತನಿಗೆ ಸಿಗಲಿಲ್ಲ ನ್ಯಾಯ

    ಹಳೆಯ ದ್ವೇಷಕ್ಕೆ ತೊಗರಿ ಬೆಳೆಗೆ ಬೆಂಕಿ- ಠಾಣೆ ಮೆಟ್ಟಿಲೇರಿದ್ರೂ ರೈತನಿಗೆ ಸಿಗಲಿಲ್ಲ ನ್ಯಾಯ

    ಬೀದರ್: ತಾಲೂಕಿನ ನೌಬಾದ್‍ನಲ್ಲಿ ದುಷ್ಕರ್ಮಿಗಳು ಹಳೆಯ ದ್ವೇಷಕ್ಕೆ ಬೆಳೆಗೆ ಬೆಂಕಿಹಚ್ಚಿ ಅಟ್ಟಹಾಸ ಮೆರೆದ್ದಾರೆ. ಲಕ್ಷ ಲಕ್ಷ ಬೆಲೆ ಬಾಳುವ ತೊಗರಿ ಹಾಗೂ ಕಾರಳು ಕಟಾವು ಮಾಡಿಟ್ಟಿದ್ದ ರಾಶಿಗೆ ಕೀಡಿಗೇಡಿಗಳು ಬೆಂಕಿ ಹಂಚಿದ್ದಾರೆ.

    ಈ ಕೃತ್ಯಕ್ಕೆ ಸಂಬಂಧಿಕರಲ್ಲಿ ಇದ್ದ ಹಳೆಯ ದ್ವೇಷವೇ ಕಾರಣ ಎಂದು ರೈತ ಬಂಡೆಪ್ಪಾ ಆರೋಪಿಸಿದ್ದಾರೆ. ಈಗ ಬಂಡೆಪ್ಪಾ ಬೆಳೆ ಕಳೆದುಕೊಂಡು ಇಗಾ ಪೊಲೀಸ್ ಠಾಣೆ ಸುತ್ತಿ ಸುತ್ತಿ ಬೇಸತ್ತಿದ್ದಾರೆ.

    ಜಿಲ್ಲಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಈ ಕುರಿತು ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಕೊಲೆ ಮಾಡಲು ಕೀಡಿಗೇಡಿಗಳು ಸಂಚು ರೂಪಿಸಿ ಯತ್ನ ಮಾಡಿ ವಿಫಲರಾಗಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಎಂದು ರೈತ ಬಂಡೆಪ್ಪಾ ಅಂಗಲಾಚುತ್ತಿದ್ದಾರೆ.