Tag: ತೊಗರಿ

  • 5 ಲಕ್ಷ ಹೆಕ್ಟರ್ ತೊಗರಿ ಹೂ ಬಿಡದೇ ಸರ್ವನಾಶ – ಬೆಳೆ ಹಾನಿ ಸಮೀಕ್ಷೆಗೆ ರೈತರ ಒತ್ತಾಯ

    5 ಲಕ್ಷ ಹೆಕ್ಟರ್ ತೊಗರಿ ಹೂ ಬಿಡದೇ ಸರ್ವನಾಶ – ಬೆಳೆ ಹಾನಿ ಸಮೀಕ್ಷೆಗೆ ರೈತರ ಒತ್ತಾಯ

    – ತೊಗರಿ ಕಣಜದ ನಾಡಲ್ಲಿಯೇ ತೊಗರಿಗೆ ಬರ

    ವಿಜಯಪುರ: ಗುಮ್ಮಟ ನಗರಿ ವಿಜಯಪುರ (Vijayapura) ತೊಗರಿಯ ಕಣಜ ಎಂದು ಖ್ಯಾತಿ ಪಡೆದಿದೆ. ಆದರೆ ಖ್ಯಾತಿಯಾಗಿರುವ ಜಿಲ್ಲೆಯಲ್ಲಿ ತೊಗರಿಗೆ ಈಗ ಬರ ಬಂದಿದೆ. ಚಿತ್ರದುರ್ಗದ (Chitradurga) ಕೃಷಿ ಇಲಾಖೆಯಲ್ಲಿ ತೊಗರಿ ಬೀಜ ಖರೀದಿಸಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ರೈತರಿಗೆ ತೊಗರಿ ಬೆಳೆ ಕೈಕೊಟ್ಟಿದೆ.

    ಜಿಲ್ಲೆಯನ್ನು ಜೋಳದ ನಾಡು ಎಂದು ಕರೆಯುತ್ತಿದ್ದರು. ಆದರೆ ದಶಕದ ಈಚೆಗೆ ತೊಗರಿಯ ಕಣಜ ಎಂದು ಕರೆಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯಲ್ಲಿ ಅತೀ ಹೆಚ್ಚು ತೊಗರಿ ಬೆಳಯಲಾಗುತ್ತಿತ್ತು. ಆದರೆ ಇದೀಗ ಈ ಹೆಸರು ಅಳಿಸುವಂತೆ ಗೋಚರಿಸುತ್ತಿದೆ. ಅದಕ್ಕೆ ಕಾರಣ ಈ ಬಾರಿ ಜಿಲ್ಲೆಯಲ್ಲಿ ತೊಗರಿ ಬೆಳೆ ಹೂ ಬಿಡದೇ ಸಂಪೂರ್ಣ ಹಾಳಾಗಿ ಹೋಗಿದೆ.ಇದನ್ನೂ ಓದಿ: ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ: ಆದಿತ್ಯ ಠಾಕ್ರೆ ಕಿರಿಕ್‌

    ಜಿಲ್ಲೆಯಲ್ಲಿ 5 ಲಕ್ಷ 34 ಹೆಕ್ಟರ್‌ನಲ್ಲಿ ತೊಗರಿ ಬೆಳೆಯಲಾಗಿದ್ದು, 80% ರಷ್ಟು ಬೆಳೆ ಹಾನಿಯಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇಷ್ಟೊಂದು ಬೆಳೆ ಹಾಳಾಗಲು ರಾಜ್ಯ ಸರ್ಕಾರದಿಂದ ವಿತರಿಸಿದ ಬೀಜ ಒಂದು ಕಡೆಯಾದರೆ, ಇನ್ನೊಂದೆಡೆ ಅಕಾಲಿಕ ಮಳೆ, ಮೋಡಕವಿದ ವಾತಾವರಣದಿಂದ ಇಬ್ಬನಿ ಬಿದ್ದು, ಬೆಳೆ ಹಾಳಾಗಿದೆ. ಇದರಿಂದ ಜಿಲ್ಲೆಯ ಸಾವಿರಾರು ರೈತರು ಕಂಗಾಲಾಗಿ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಕೊಟಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಗೊಳ್ಳದ ಅಧಿಕಾರಿಗಳು, ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಡಿ.10ರಂದು ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

    ಚಿತ್ರದುರ್ಗ ಜಿಲ್ಲೆಯಾದ್ಯಂತ ಕೃಷಿ ಇಲಾಖೆ ಸರಬರಾಜು ಮಾಡಿರುವ ತೊಗರಿಯ ಬಿತ್ತನೆ ಬೀಜಗಳು ಕಳಪೆಯಾಗಿವೆ. ಹೀಗಾಗಿ ತೊಗರಿ ಬೆಳೆ ಸಂಪಾಗಿ ಬೆಳೆದಿವೆ. ಆದರೆ ಕಾಯಿ ಮಾತ್ರ ಹಿಡಿದಿಲ್ಲ. ಕೆಲವೆಡೆ ಕಾಯಿಹಿಡಿದರೂ ಗಟ್ಟಿಯಾಗದೇ ಉದುರುತ್ತಿವೆ. ಹೂವು ಕಾಯಾಗುವ ಮುನ್ನವೇ ನೆಲಕ್ಕೆ ಬೀಳುತ್ತಿವೆ. ಹೀಗಾಗಿ ಒಂದು ಎಕರೆಗೆ 10 ರಿದ 15 ಸಾವಿರ ಖರ್ಚು ಮಾಡಿ, ತೊಗರಿ ಬೆಳೆದ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ.

    ಇನ್ನೂ ಬಿತ್ತನೆ ಬೀಜದ ಬೆಲೆಯನ್ನು ಸಹ ದಿಢೀರ್ ಎಂದು 2 ಪಟ್ಟು ಹೆಚ್ಚಿಸಿರುವ ಸರ್ಕಾರ ರೈತರಿಗೆ ಕಳಪೆ ಬೀಜ ಕೊಟ್ಟು ವಂಚಿಸಿದೆ. ಹೀಗಾಗಿ ರೈತರು ಭಾರೀ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡ ಬೆಳೆನಷ್ಟ ಪರಿಹಾರ ಒದಗಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

    ಒಟ್ಟಾರೆ ಕಳಪೆ ತೊಗರಿ ಬೀಜದ ದೆಸೆಯಿಂದ ವಿಜಯಪುರ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಹೇಳಿಕೊಂಡಂತೆ ಬೆಳೆ ಬಂದಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ತೊಗರಿಬೆಳೆ ಕೈಕೊಡಲು ಕಳಪೆ ಬೀಜ, ಅಕಾಲಿಕ ಮಳೆ ಕಾರಣವಾಗಿದೆ. ನಷ್ಟದಲ್ಲಿರುವ ರೈತರಿಗೆ ಸರ್ಕಾರ ಪರಿಹಾರ ನೀಡಲು ಮುಂದಾದರೆ, ಬೆಳೆ ಸಿಗದೆ ಕುಗ್ಗಿಹೋಗಿರುವ ರೈತರು ಕೊಂಚ ಸುಧಾರಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಕುತೂಹಲವಾಗಿದೆ.ಇದನ್ನೂ ಓದಿ: ಉಗ್ರರು ಕೈವಶ ಮಾಡಿದ ಬೆನ್ನಲ್ಲೇ ಸಿರಿಯಾದ ಮೇಲೆ ಅಮೆರಿಕ ವಾಯು ದಾಳಿ

  • ನಾಲ್ವರು ತೊಗರಿ ಕಳ್ಳರ ಬಂಧನ – 7.80 ಸಾವಿರ ಮೌಲ್ಯದ ತೊಗರಿ ಜಪ್ತಿ

    ನಾಲ್ವರು ತೊಗರಿ ಕಳ್ಳರ ಬಂಧನ – 7.80 ಸಾವಿರ ಮೌಲ್ಯದ ತೊಗರಿ ಜಪ್ತಿ

    ಬೀದರ್: ಖಚಿತ ಮಾಹಿತಿ ಮೇರೆಗೆ ನ್ಯೂಟೌನ್ ಪೊಲೀಸರು ದಾಳಿ ಮಾಡಿ ನಾಲ್ವರು ತೊಗರಿ ಕಳ್ಳರನ್ನು ಬಂಧಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಇದನ್ನೂ ಓದಿ: ಟ್ರೇಲರ್ ಹೊತ್ತು ತಂದ ‘ಪೆಟ್ರೋಮ್ಯಾಕ್ಸ್’ ಚಿತ್ರತಂಡ – ನಗುವಿನ ರಸದೌತಣ ಪಕ್ಕಾ ಎಂದ ಪ್ರೇಕ್ಷಕರು

    Pigeon pea Thieves

     

    ಬಂಧಿತ ಖದೀಮರಿಂದ ಬರೋಬ್ಬರಿ ಪೊಲೀಸರು ಏಳು ಲಕ್ಷದ ಎಂಬತ್ತು ಸಾವಿರ ಮೌಲ್ಯದ ತೊಗರಿ ಜಪ್ತಿ ಮಾಡಿದ್ದು, ಬಂಧಿತ ನಾಲ್ವರು ತೊಗರಿ ಕಳ್ಳರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಬರೋಬ್ಬರಿ 120 ಚೀಲ ತೊಗರಿ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮರ ವಿರುದ್ಧ ಇತ್ತೀಚೆಗೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ಐಟಿ ದಾಳಿ ಬಳಿಕ ಕೊನೆಗೂ ಮೌನ ಮುರಿದ ಸೋನು ಸೂದ್

    ಪ್ರಕರಣ ದಾಖಲಾದ ಬಳಿಕ ತೊಗರಿ ಕಳ್ಳರಿಗಾಗಿ ಬಲೆ ಬಿದ್ದ ಬೀದರ್ ಪೊಲೀಸರು, ಸೋಮವಾರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ತೊಗರಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಟಾವಿಗೆ ಬಂದಿದ್ದ ತೊಗರಿಬೆಳೆ ನಾಶ – ತಡೆಯಲು ಮುಂದಾಗಿದ್ದಕ್ಕೆ ಹಲ್ಲೆ!

    ಕಟಾವಿಗೆ ಬಂದಿದ್ದ ತೊಗರಿಬೆಳೆ ನಾಶ – ತಡೆಯಲು ಮುಂದಾಗಿದ್ದಕ್ಕೆ ಹಲ್ಲೆ!

    ನೆಲಮಂಗಲ: ಕಟಾವಿಗೆ ಬಂದಿದ್ದ ತೊಗರಿಬೆಳೆಯನ್ನ ಜೆಸಿಬಿ ಯಂತ್ರದ ಮೂಲಕ ನಾಶ ಮಾಡುತ್ತಿದ್ದ ವೇಳೆ ತಡೆಯಲು ಮುಂದಾದ ಯುವಕನ ಮೇಲೆ ಕೋಲು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಹೇಶ್ (28) ಹಲ್ಲೆಗೊಳಗಾದ ಯುವಕ. ತೊಗರಿಬೆಳೆ ನಾಶ ಮಾಡುತ್ತಿರುವವನ್ನು ತಡೆಯಲು ಹೋದ ವೇಳೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬರಗೇನಹಳ್ಳಿ ಗ್ರಾಮ ಸೋಂಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮ, ಇಲ್ಲಿ ಒಂದೊಂದು ಅಡಿಗೂ ಬಂಗಾರದ ಬೆಲೆ ಇದೆ. ಇದನ್ನ ಕಬಳಿಸುವ ನಿಟ್ಟಿನಲ್ಲಿ ಈ ಘಟನೆ ನಡೆದಿದೆ.

    ಐದಾರು ಕಾರುಗಳಲ್ಲಿ ಬಂದಿದ್ದ ಸುಮಾರು 15-20 ಜನರ ತಂಡ ಉದ್ದೇಶ ಪೂರ್ವಕವಾಗಿ ಬೆಳೆಯನ್ನ ನಾಶ ಮಾಡಿದ್ದಾರೆ. ಕಾರುಗಳಲ್ಲಿ ರಾಡು, ಬಡಿಗೆಗಳನ್ನ ತಂದು ತೊಗರಿಬೆಳೆಯನ್ನ ಸಂಪೂರ್ಣ ನಾಶಮಾಡಿದ್ದು, ಜಮೀನು ಕಬಳಿಸುವ ದುರುದ್ದೇಶದಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗಾಯಗೊಂಡ ಯುವಕ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ನ್ಯಾಯಯುತವಾಗಿ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡ ಯುವಕ ಆಗ್ರಹಿಸಿದ್ದಾರೆ.

  • ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ವಿಜಯಪುರ: ಜಿಲ್ಲೆಯ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಹಣ ವಸೂಲಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇಸಾಕ್ ಬಡಿಗೇರ್ ರೈತರಿಂದ ಪ್ರತಿ ಕ್ವಿಂಟಲ್ ಗೆ 100 ರಿಂದ 150 ರೂಪಾಯಿ ವಸೂಲಿ ಮಾಡುತ್ತಿದ್ದಾನೆ. ಕಾಖಂಡಕಿ ತೊಗರಿ ಖರೀದಿ ಕೇಂದ್ರ ದಲ್ಲಿನ ಸಿಬ್ಬಂದಿಯ ಈ ವರ್ತನೆಯಿಂದ ರೈತರು ಬೇಸತ್ತಿದ್ದಾರೆ.

    ಪ್ರತಿ ರೈತರಿಂದ ಉಚಿತವಾಗಿ ತೊಗರಿ ಖರೀದಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿದರೂ, ಈ ಕಂಪ್ಯೂಟರ್ ಆಪರೇಟರ್ ಮಾತ್ರ ರಾಜಾರೋಷವಾಗಿ ರೈತರಿಂದ ಸುಲಿಗೆ ಮಾಡುತ್ತಿದ್ದಾನೆ. ಒಬ್ಬ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿ ಮಾಡಬೇಕು ಎಂದು ಸರ್ಕಾರದ ಸೂಚನೆಯಿಂದ ಪ್ರತಿ ರೈತರಿಂದಲೂ 10 ಕ್ವಿಂಟಲ್ ಗೆ ಕಡಿಮೆ ಎಂದರೂ ಸಾವಿರ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.

    ಎರಡು ದಿನಗಳ ಹಿಂದಷ್ಟೇ ಇಂತಹ ಅಕ್ರಮ ದಂಧೆಯ ತೊಗರಿ ಖರೀದಿ ಕೇಂದ್ರದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆದರೂ ಎಚ್ಚೆತ್ತುಗಳ್ಳದ ಖದೀಮರು ಅದೇ ಕೆಲಸ ಮುಂದುವರಿಸಿದ್ದು, ರೈತರಿಂದ ಸುಲಿಗೆ ಮಾಡುತ್ತಿದ್ದಾರೆ.

  • ವಿದ್ಯುತ್ ತಂತಿ ತಗುಲಿ 2 ಲಕ್ಷ ರೂ. ತೋಗರಿ ಬೆಳೆ ಬೆಂಕಿಗಾಹುತಿ

    ವಿದ್ಯುತ್ ತಂತಿ ತಗುಲಿ 2 ಲಕ್ಷ ರೂ. ತೋಗರಿ ಬೆಳೆ ಬೆಂಕಿಗಾಹುತಿ

    ಬೀದರ್: ವಿದ್ಯುತ್ ತಂತಿ ತಗುಲಿ 2 ಲಕ್ಷ ರೂ. ಮೌಲ್ಯದ ತೋಗರಿ ಬೆಳೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಚಿಟ್ಟಗುಪ್ಪಾ ಹೊರವಲಯದಲ್ಲಿ ನಡೆದಿದೆ.

    ಈರಣ್ಣ ಕಟ್ಟಿಗೆಯವರು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ತೋಗರಿ ಬೆಳೆ ಭಸ್ಮವಾಗಿದ್ದು, ಈ ಮೂಲಕ ಕೆಲವೇ ದಿನಗಳಲ್ಲಿ ರಾಶಿ ಮಾಡಲು ತಯಾರಿ ಮಾಡಿಕೊಂಡಿದ್ದ ರೈತನಿಗೆ ನಿರಾಸೆಯಾಗಿದೆ. ಜಮೀನಿನ ಮೇಲಿದ್ದ ವಿದ್ಯುತ್ ತಂತಿಗಳು ಇಂದು ಸಂಜೆ ಕೆಳಗೆ ಬಿದ್ದಿದ್ದು, ಬೆಳೆಗೆ ತಗುಲಿ ನಾಲ್ಕು ಎಕರೆಯಲ್ಲಿ ಬೆಳೆದು ನಿಂತ್ತಿದ್ದ ತೋಗರಿ ಬೆಂಕಿಗೆ ಆಹುತಿಯಾಗಿದೆ. ಇದರಿಂದ ರೈತ ತೀವ್ರ ಆತಂಕಕ್ಕೊಳಗಾಗಿದ್ದಾರೆ.

    ಜಮೀನಿಗೆ ಬೆಂಕಿ ಬಿದ್ದಿರುವ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಷ್ಟರಲ್ಲಾಗಲೇ ಬೆಂಕಿಯ ಕೆನ್ನಾಲೆಗೆ ತೋಗರಿ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ಈ ಕುರಿತು ಚಿಟ್ಟಗುಪ್ಪಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆರಂಭವಾಗದ ಖರೀದಿ ಕೇಂದ್ರ: ನಷ್ಟದ ಸುಳಿಯಲ್ಲಿ ಭತ್ತ, ತೊಗರಿ ಬೆಳೆಗಾರರು

    ಆರಂಭವಾಗದ ಖರೀದಿ ಕೇಂದ್ರ: ನಷ್ಟದ ಸುಳಿಯಲ್ಲಿ ಭತ್ತ, ತೊಗರಿ ಬೆಳೆಗಾರರು

    ರಾಯಚೂರು: ಕಳೆದ ಮೂರು ವರ್ಷಗಳಿಂದ ಬರಗಾಲವನ್ನೇ ಅನುಭವಿಸಿದ್ದ ರಾಯಚೂರಿನ ರೈತರು ಈ ಬಾರಿ ತಡವಾದರೂ ಉತ್ತಮ ಮಳೆಯನ್ನು ಕಂಡಿದ್ದಾರೆ. ಮಳೆಯಿಂದಾಗಿ ಉತ್ತಮ ಫಸಲನ್ನೂ ಪಡೆದಿದ್ದಾರೆ. ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ.

    ಖರೀದಿ ಕೇಂದ್ರಗಳನ್ನು ತೆರೆದು ಬೆಲೆ ಕುಸಿತ ಕಂಡಿರುವ ಬೆಳೆಗಳನ್ನು ಖರೀದಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಇದುವರೆಗೂ ಖರೀದಿ ಕೇಂದ್ರ ಸ್ಥಾಪಿಸಿಲ್ಲ. ಇದು ರೈತರನ್ನು ಇನ್ನಷ್ಟು ಕಂಗೆಡುವಂತೆ ಮಾಡಿದೆ. ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಮಾಡಿದ ರೈತರು ಬೆಲೆಯಿಲ್ಲದೆ ಸಿಕ್ಕ ಬೆಲೆಗೆ ಮಾರುವ ಸ್ಥಿತಿಯಲ್ಲಿದ್ದಾರೆ. ಕೆಲ ರೈತರು ಬೆಳೆಯನ್ನು ಮಾರುಕಟ್ಟೆಗೆ ತಂದಿದ್ದರೆ, ಇನ್ನೂ ಕೆಲವರ ಬೆಳೆ ಶೀಘ್ರದಲ್ಲೇ ಕೈಗೆ ಬರಲಿದೆ.

    ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಭತ್ತವನ್ನು ಬಿತ್ತನೆ ಮಾಡುವ ಗುರಿ ಇದ್ದು ಈಗಾಗಲೇ 1.08 ಲಕ್ಷ ಹೆಕ್ಟರ್ ಭತ್ತವನ್ನು ಬಿತ್ತನೆ ಮಾಡಿದ್ದಾರೆ. ಪ್ರತಿ ಹೆಕ್ಟರ್ ಗೆ ಸುಮಾರು 42.31 ಕ್ವಿಂಟಾಲ್ ಭತ್ತದ ಇಳುವರಿ ಬರುತ್ತಿದ್ದು, 76 ಲಕ್ಷ ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಇದೇ ರೀತಿ ಜಿಲ್ಲೆಯಲ್ಲಿ 47,581 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಬೇಕಾಗಿದ್ದು, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ 62,666 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಪ್ರತಿ ಹೆಕ್ಟರ್ ಗೆ 3.72 ಕ್ವಿಂಟಾಲ್ ತೊಗರಿ ಇಳುವರಿ ಬರಲಿದೆ. ಇದರಿಂದಾಗಿ 2.33 ಲಕ್ಷ ಕ್ವಿಂಟಾಲ್ ತೊಗರಿ ಬರಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಭತ್ತವನ್ನು ಕಟಾವು ಮಾಡಿ 2 ತಿಂಗಳು, ತೊಗರಿಯನ್ನು ಕಟಾವು ಮಾಡಿ ಒಂದುವರೆ ತಿಂಗಳಾಗಿದೆ. ಆದರೆ ಈಗ ಮಾರಾಟ ಮಾಡಿದರೆ ರೈತ ಸಂಪೂರ್ಣವಾಗಿ ಹಾನಿಗೊಳಗಾಗುವ ಸಾಧ್ಯತೆ ಇದೆ. ಕಾರಣ ಮಾರುಕಟ್ಟೆಯಲ್ಲಿ ಭತ್ತ ಹಾಗು ತೊಗರಿ ದರ ಅತ್ಯಂತ ಕಡಿಮೆ ಇದೆ. ಉತ್ತಮ ದರಕ್ಕಾಗಿ ರೈತ ಕಾಯಿಯುತ್ತಿದ್ದಾನೆ.

    ಸರ್ಕಾರ ಸಕಾಲಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ಆರಂಭಿಸದೆ ಇರುವುದರಿಂದ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗಿದೆ. ಕೆಲವು ರೈತರು ಮಾತ್ರ ಖರೀದಿ ಕೇಂದ್ರಕ್ಕಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ತೊಗರಿಯನ್ನು ಖರೀದಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ತೊಗರಿಗೆ ಕೇಂದ್ರ ಸರ್ಕಾರ 4,800 ರೂಪಾಯಿ ಅದಕ್ಕೆ ರಾಜ್ಯ ಸರ್ಕಾರ 300 ರೂಪಾಯಿ ಸಹಾಯಧನ ನೀಡಲು ನಿರ್ಧರಿಸಿ ರೈತರಿಂದ ನೊಂದಣಿ ಕಾರ್ಯ ಆರಂಭಿಸಬೇಕಾಗಿದೆ. ಸರ್ಕಾರವು ಕೃಷಿ ನೋಂದಣಿಗಾಗಿ ಸಾಫ್ಟವೇರ್ ಅಭಿವೃದ್ಧಿ ಮಾಡಿದ್ದು, ಇದುವರೆಗೂ ಸಾಫ್ಟವೇರ್ ರಾಯಚೂರಿಗೆ ಬಂದಿಲ್ಲ. ಇದರಿಂದ ನೋಂದಣಿಯಾಗಿಲ್ಲ. ಈ ತಿಂಗಳ ಅಂತ್ಯದವರೆಗೂ ನೋಂದಣಿ ಮಾಡಲು ಅವಕಾಶ ನೀಡಿದೆ. ಇನ್ನೂ ಭತ್ತವನ್ನು 1,835 ರೂಪಾಯಿಗೆ ಪ್ರತಿ ಕ್ವಿಂಟಾಲ್ ಖರೀದಿಸಲು ಭತ್ತದ ಖರೀದಿ ಕೇಂದ್ರ ಆರಂಭಿಸಿದೆ. ಆದರೆ ಮಾರುಕಟ್ಟೆಯಲ್ಲಿ ಇದೇ ದರವಿದೆ.

    ಭತ್ತವನ್ನು ಪ್ರತಿ ಕ್ವಿಂಟಾಲಿಗೆ 2,500 ರೂಪಾಯಿಯಂತೆ ಖರೀದಿಸಲು ಒತ್ತಾಯಿಸಿದ್ದು, ಅದಕ್ಕೆ ರಾಜ್ಯ ಸರ್ಕಾರ 2,000 ರೂಪಾಯಿಯಂತೆ ಖರೀದಿಸುವ ಭರವಸೆ ನೀಡಿದೆ. ಆದರೆ ಇನ್ನೂ ಆದೇಶ ಬಂದಿಲ್ಲ. ಈ ಗೊಂದಲದ ಮಧ್ಯೆ ರೈತರು ಎಪಿಎಂಸಿ ಗಳಲ್ಲಿ ಅನಿವಾರ್ಯವಾಗಿ ಮಾರಾಟ ಮಾಡುತ್ತಿದ್ದಾರೆ. ಮುಂದೆ ಖರೀದಿ ಕೇಂದ್ರಗಳು ಆರಂಭವಾದರೂ ಅವುಗಳು ರೈತರಿಗಿಂತ ವ್ಯಾಪಾರಿಗಳಿಗೆ ಅನುಕೂಲ ಎನ್ನುವ ಪರಸ್ಥಿತಿಯಿದೆ.

    ರಾಯಚೂರು ಎಪಿಎಂಸಿಗೆ ನಿತ್ಯವೂ 10 ಸಾವಿರ ಕ್ವಿಂಟಾಲ್ ತೊಗರಿ ಮಾರಾಟಕ್ಕಾಗಿ ಬರುತ್ತಿದೆ. ಈಗ ಮಾರುಕಟ್ಟೆಯಲ್ಲಿ ತೊಗರಿಯ ದರ ಸರಾಸರಿ 5,220 ರೂಪಾಯಿ ಇದೆ. ಆದರೆ ಸರ್ಕಾರದ ಗೊಂದಲ ನೀತಿಯಿಂದಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳು ಆರಂಭವಾಗದೆ ರೈತ ಸಂಕಷ್ಟ ಅನುಭವಿಸುವಂತಾಗಿದೆ.

  • ರಸ್ತೆಯಲ್ಲಿ ತೊಗರಿ ಒಣಗಿಸುವುದನ್ನು ಕಂಡು ಬೆಂಕಿ ಹಚ್ಚಲು ಮುಂದಾದ ಪಿಎಸ್‍ಐ

    ರಸ್ತೆಯಲ್ಲಿ ತೊಗರಿ ಒಣಗಿಸುವುದನ್ನು ಕಂಡು ಬೆಂಕಿ ಹಚ್ಚಲು ಮುಂದಾದ ಪಿಎಸ್‍ಐ

    ಬಳ್ಳಾರಿ: ಕಟಾವು ಮಾಡಿದ ತೊಗರಿ, ಗೋಧಿ ಸೇರಿದಂತೆ ಹಲವು ಬೆಳೆಗಳನ್ನು ಹಳ್ಳಿಯಲ್ಲಿನ ರೈತರು ರಸ್ತೆಗೆ ಹಾಕುವುದು ಸಾಮಾನ್ಯ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುವುದೂ ಸತ್ಯ. ಈ ಕುರಿತು ಎಷ್ಟೇ ಹೇಳಿದರೂ ಕೇಳದ ರೈತರಿಂದ ಬೇಸತ್ತು ಪಿಎಸ್‍ಐಯೊಬ್ಬರು ರಸ್ತೆಯಲ್ಲಿ ಹಾಕಿದ್ದ ತೊಗರಿ ಬೆಳೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ.

    ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಡಗಲಿ ರಸ್ತೆಯಲ್ಲಿ ಘಟನೆ ನಡೆದಿದ್ದು, ರೈತರು ತೊಗರಿ ಬೆಳೆ ಕಟಾವು ಮಾಡಿ, ರಸ್ತೆಯಲ್ಲಿ ಹಾಕಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಈ ಕುರಿತು ರೈತರಿಗೆ ಹರಪನಹಳ್ಳಿ ಪಿಎಸ್‍ಐ ಶ್ರೀಧರ್ ಸಾಕಷ್ಟು ಬಾರಿ ಹೇಳಿದರೂ, ರಸ್ತೆಯಲ್ಲೇ ತೊಗರಿ ಹಾಕಿಕೊಂಡು ಒಣಗಿಸುತ್ತಿದ್ದರು.

    ಇದರಿಂದ ಬೇಸತ್ತ ಪಿಎಸ್‍ಐ ಶ್ರೀಧರ್ ರಸ್ತೆಯಲ್ಲಿ ಹಾಕಿದ್ದ ತೊಗರಿಗೆ ಬೆಂಕಿ ಹಚ್ಚಲು ಹೋಗಿದ್ದಾರೆ. ಬೆಂಕಿ ಹಚ್ಚಲು ಹೋಗುತ್ತಿದ್ದಂತೆ ರೈತರು ಅಂಗಲಾಚಿ ಬೇಡಿಕೊಂಡಿದ್ದಾರೆ. ಪಿಎಸ್‍ಐ ಬೆಂಕಿ ಹಚ್ಚಲು ಯತ್ನಿಸಿದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಕೂಲಿ ಕಾರ್ಮಿಕರು ಸಿಗದ ಹಿನ್ನೆಲೆ ರೈತರು ತೊಗರಿ, ಗೋಧಿ, ಸಜ್ಜೆ, ನವಣೆಗಳನ್ನು ರಸ್ತೆಗೆ ಹಾಕಿ ಬಿಡಿಸುತ್ತಾರೆ. ಅಲ್ಲದೆ ಒಣಗಿಸಲು ಸಹ ಹಾಕುತ್ತಾರೆ. ಆದರೆ ರೈತರ ಈ ಪದ್ಧತಿಯಿಂದಾಗಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಪೊಲೀಸರು ರೈತರಿಗೆ ಮನವಿ ಮಾಡುತ್ತಾರೆ. ಆದರೆ ರೈತರು ಒಕ್ಕಲು ಮಾಡಲು ಆಳು ಸಿಗದ ಕಾರಣ ಈ ಪದ್ಧತಿ ಅನಿವಾರ್ಯ ಎಂಬಂತಾಗಿದೆ.

  • ಬಿತ್ತನೆಗೆ ತೊಗರಿ ಖರೀದಿಸಲು ಹಣ ಜಮೆ ಮಾಡಿ- ಸರ್ಕಾರಕ್ಕೆ ರೈತರ ಆಗ್ರಹ

    ಬಿತ್ತನೆಗೆ ತೊಗರಿ ಖರೀದಿಸಲು ಹಣ ಜಮೆ ಮಾಡಿ- ಸರ್ಕಾರಕ್ಕೆ ರೈತರ ಆಗ್ರಹ

    ಗದಗ: ತೊಗರಿ ಕಣಜ ಅಂತಾ ಖ್ಯಾತಿ ಪಡೆದಿರುವ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ರೈತರು ತೊಗರಿ ಬೆಳೆಯುತ್ತಾರೆ.

    ತೊಗರಿ ಬೆಳೆಗಾರರಿಗೆ ಸೂಕ್ತ ಬೆಲೆ ಕೊಡ್ತಿವಿ ಅಂತಾ ಸರ್ಕಾರ, ಸ್ವಸಹಾಯ ಸಂಘಗಳಿಂದ ಲಕ್ಷಾಂತರ ರೈತರ ತೊಗರಿ ಖರೀದಿಸಿತ್ತು. ಹೀಗೆ ಖರೀದಿಸಿದ ತೊಗರಿ ಹಣ ರೈತರ ಖಾತೆಗೆ ಹಾಕುವುದಾಗಿ ಹೇಳಿ 6 ತಿಂಗಳಾದ್ರು ಹಣ ಮಾತ್ರ ಜಮೆಯಾಗಿಲ್ಲ.

    80 ಸಾವಿರ ರೈತರ 500 ಕೋಟಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದೀಗ ಮತ್ತೆ ಮುಂಗಾರು ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜಕ್ಕೂ ಹಣವಿಲ್ಲ. ಹೀಗಾಗಿ ಇದೀಗ ಮತ್ತೆ ಅನಿವಾರ್ಯವಾಗಿ ಖಾಸಗಿಯವರ ಬಳಿ ಸಾಲ ಸೂಲ ಮಾಡಿ ಬಿತ್ತನೆ ಬೀಜ ಖರೀದಿಸುವ ಪರಿಸ್ಥಿತಿ ಎದುರಾಗಿದೆ.

    ಆದ್ದರಿಂದ ಸರ್ಕಾರ ಕೂಡಲೇ ತೊಗರಿ ಖರೀದಿ ಹಣ ಜಮೆ ಮಾಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.