Tag: ತೊಂಡೆಕಾಯಿ

  • ನಾನಾ ಸಮಸ್ಯೆಗೆ ತೊಂಡೆಕಾಯಿ ಮದ್ದು

    ನಾನಾ ಸಮಸ್ಯೆಗೆ ತೊಂಡೆಕಾಯಿ ಮದ್ದು

    ತರಕಾರಿಗಳು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಆದರೆ ತರಕಾರಿಯಲ್ಲಿಯೂ ಕೆಲವಷ್ಟು ಮಾತ್ರ ಆಯ್ಕೆ ಮಾಡಿ ತಿನ್ನುತ್ತೇವೆ. ತೊಂಡೆಕಾಯಿ ಎಂದರೆ ಕೆಲವರಿಗೆ ಇಷ್ಟವಾಗುವುದೇ ಇಲ್ಲ. ಆದರೆ ಇದು ಹಲವು ಕಾಯಿಲೆಗಳಿಗೆ ಮದ್ದಾಗಿದೆ.

    ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ತೊಂಡೆಕಾಯಿಯನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ, ಇದರಲ್ಲಿರುವ ಅತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡರೆ ತೊಂಡೆಕಾಯಿಯನ್ನು ಖಂಡಿತ ಇಷ್ಟಪಟ್ಟು ತಿನ್ನುತ್ತಿರಿ.

    * ತೊಂಡೆಕಾಯಿ ಪಲ್ಯ, ಸಾಂಬರ್‍ನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, ದೇಹದಲ್ಲಿ ಏರುಪೇರಾಗಿರುವ ಸಕ್ಕರೆ ಅಂಶದ ಪ್ರಮಾಣವನ್ನು ಸಹಜ ಸ್ಥಿತಿಯ ಮರಳಿಸಲು ಸಹಕಾರಿಯಾಗಿದೆ.

    * ತೊಂಡೆಕಾಯಿಯಲ್ಲಿ ಇರುವಂತಹ ಕೆಲವು ಅಂಶವು ಬೊಜ್ಜು ವಿರೋಧಿಯಾಗಿದೆ. ಜೀರ್ಣ ಕ್ರೀಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಣೆ ಮಾಡುವುದು ಮತ್ತು ಬೊಜ್ಜು ತಡೆಯುವುದುಕ್ಕೆ ಸಹಾಯಕಾರಿಯಾಗಿದೆ.

    * ತೊಂಡೆಕಾಯಿಯಲ್ಲಿ ಕಬ್ಬಿಣಾಂಶವು ಉತ್ತಮ ಪ್ರಮಾಣದಲ್ಲಿದ್ದು, ಇದು ನಿಶ್ಯಕ್ತಿಯನ್ನು ಕಡಿಮೆ ಮಾಡುತ್ತದೆ.

    * ಆಯುರ್ವೇದದಲ್ಲಿ ತೊಂಡೆಕಾಯಿಯ ಬಳ್ಳಿ, ಎಲೆಗಳು, ಬೇರು, ಕಾಯಿ, ಹಣ್ಣು ಎಲ್ಲವೂ ಉಪಯೋಗಿಸಲಾಗುತ್ತದೆ. ಕಜ್ಜಿ, ತುರಿಕೆ, ಕುಷ್ಟ ರೋಗದಂತಹ ಹಲವಾರು ಸಮಸ್ಯೆಗಳಿಗೆ ಔಷಧಿಯಾಗಿ ಉಪಯೋಗಿಸಲಾಗುತ್ತದೆ.

    * ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ ಇರುವುದರಿಂದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೂತ್ರಪಿಂಡದಲ್ಲಿ ಆಗುವ ಕಲ್ಲುಗಳಿಗೆ ಮನೆಮದ್ದಿನಂತೆ ಕೆಲಸ ಮಾಡುತ್ತದೆ.