Tag: ತೈಲ ಬಿಕ್ಕಟ್ಟು

  • ಪೆಟ್ರೋಲ್, ಡೀಸೆಲ್ ಅಭಾವ – ಮುಂದಿನ ವಾರದಿಂದಲೇ ಶಾಲೆಗಳು ಬಂದ್

    ಪೆಟ್ರೋಲ್, ಡೀಸೆಲ್ ಅಭಾವ – ಮುಂದಿನ ವಾರದಿಂದಲೇ ಶಾಲೆಗಳು ಬಂದ್

    ಕೊಲಂಬೊ: ಈಗಾಗಲೇ ಆರ್ಥಿಕ ದಿವಾಳಿಯಾಗಿರುವ ಶ್ರೀಲಂಕಾಕ್ಕೆ ಭಾರತ ಸಹಾಯಹಸ್ತ ನೀಡಿದ ಬಳಿಕವೂ ಪೆಟ್ರೋಲ್, ಡೀಸೆಲ್ ಅಭಾವ ಉಂಟಾಗಿದೆ. ಹಾಗಾಗಿ ಮುಂದಿನ ವಾರದಿಂದ ಶಾಲೆಗಳನ್ನು ಬಂದ್‌ ಮಾಡುವುದಾಗಿ ಲಂಕಾ ಶಿಕ್ಷಣ ಸಚಿವಾಲಯ ಘೋಷಿಸಿದೆ.

    ಶಾಲಾ- ಕಾಲೇಜುಗಳೊಂದಿಗೆ ಸಾರ್ವಜನಿಕ ವಲಯ ಕಚೇರಿಗಳನ್ನೂ ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಶ್ರೀಲಂಕಾ ಶಿಕ್ಷಣ ಸಚಿವಾಲಯವು ಕೊಲಂಬೊ ನಗರ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಅನುಮೋದಿತ ಖಾಸಗಿ ಶಾಲೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದು, ಮುಂದಿನ ವಾರದಿಂದ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಕೇಳಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಭಾರೀ ಪ್ರವಾಹಕ್ಕೆ 25 ಜನ ಬಲಿ- ಅಪಾಯದ ಸುಳಿಯಲ್ಲಿ 40 ಲಕ್ಷ ಮಂದಿ

    ಶ್ರೀಲಂಕಾ ತನ್ನ ಆಮದುಗಳಿಗೆ ಪಾವತಿಸಲು, ವಿದೇಶಿ ವಿನಿಮಯ ಪಡೆಯಲು ತೀವ್ರ ಒತ್ತಡದಲ್ಲಿದೆ. ಇದು ದೇಶದ ಆರ್ಥಿಕತೆಯ ಹಲವಾರು ಕ್ಷೇತ್ರಗಳಿಗೂ ಹಿನ್ನಡೆ ಉಂಟುಮಾಡುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.

    Live Tv

  • ತೈಲ ಬಿಕ್ಕಟ್ಟು – ಪೆಟ್ರೋಲ್ ಪಡೆಯಲು ಮುಗಿಬಿದ್ದ ಇಂಗ್ಲೆಂಡ್ ಜನತೆ

    ತೈಲ ಬಿಕ್ಕಟ್ಟು – ಪೆಟ್ರೋಲ್ ಪಡೆಯಲು ಮುಗಿಬಿದ್ದ ಇಂಗ್ಲೆಂಡ್ ಜನತೆ

    ಲಂಡನ್: ಬ್ರಿಟನ್‍ನಲ್ಲಿ ತೈಲ ಬಿಕ್ಕಟ್ಟು ಉಂಟಾಗಿರುವ ಪರಿಣಾಮ ಪೆಟ್ರೋಲ್‍ಗಾಗಿ ಜನರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

    ಅಗತ್ಯಕ್ಕೆ ತಕ್ಕ ತೈಲ ಸಂಗ್ರಹವಿದ್ದರೂ ಜನರು ಅತಂಕಕ್ಕೆ ಒಳಗಾಗಿ, ಪೆಟ್ರೋಲ್ ಬಂಕ್ ಎದರು ಕಿಲೋಮೀಟರ್ ವರೆಗೂ ನಿಂತು ತೈಲ ಖರೀದಿಗೆ ಮುಗಿಬಿದ್ದಿದ್ದಾರೆ. ಇದಕ್ಕೆ ಕಾರಣ ಪೆಟ್ರೋಲ್ ಡೀಸೆಲ್ ಕೊರೆತೆ ಅಲ್ಲವೇ ಅಲ್ಲ. ಬದಲಾಗಿ ತೈಲ ತುಂಬಿದ ಟ್ರಕ್‍ಗಳನ್ನು ಓಡಿಸಲು ಚಾಲಕರೇ ಸಿಗುತ್ತಿಲ್ಲ ಎಂದು ವರದಿಯಾದ ಹಿನ್ನೆಲೆ ಬ್ರಿಟನ್ ಜನರು ಅತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: 10 ತಿಂಗಳ ಶಿಕ್ಷೆ ತಪ್ಪಿಸಲು 9 ವರ್ಷದಿಂದ ತಲೆ ಮರೆಸಿಕೊಂಡ ಆರೋಪಿ ಅಂದರ್

    ಬ್ರಿಟನ್‍ನಲ್ಲಿ ಚಾಲಕರ ಕೊರತೆ ಎದರುರಾಗಿದ್ದು, ಟ್ರಕ್‍ಗಳನ್ನು ಓಡಿಸಲು ಚಾಲಕರು ಸಿಗುತ್ತಿಲ್ಲ. ಈ ಹಿನ್ನೆಲೆ ದೇಶದ ಶೇ.90 ರಷ್ಟು ಪೆಟ್ರೋಲ್ ಪಂಪ್‍ಗಳಲ್ಲಿ ಡೀಸೆಲ್, ಪೆಟ್ರೋಲ್ ಸಿಗುತ್ತಿಲ್ಲ. ಇದರಿಂದಾಗಿ ಜನರು ಪೆಟ್ರೋಲ್ ಸಿಗುವ ಕಡೆಯಲ್ಲಿ ಕಿಲೋಮೀಟರ್ ವರೆಗೂ ನಿಂತು ತೈಲ ಖರೀದಿಸುತ್ತಿದ್ದಾರೆ.

    ಬ್ರಿಟನ್, ಐರೋಪ್ಯ ಒಕ್ಕೂಟದಿಂದ ಹೊರ ಬಂದ ಬಳಿಕ 13 ಲಕ್ಷಕ್ಕೂ ಅಧಿಕ ವಿದೇಶಿ ಜನರು ದೇಶ ತೊರೆದಿದ್ದಾರೆ. ಇದರಿಂದ ಬ್ರಿಟನ್ ದೇಶದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಚಾಲಕರು ಕೆಲಸ ಬಿಟ್ಟಿದ್ದಾರೆ. ಅಲ್ಲದೆ ಕೊರೊನಾ ಕಾರಣದಿಂದ ಸಾಕಷ್ಟು ಮಂದಿ ತಮ್ಮ ತಮ್ಮ ದೇಶಕ್ಕೆ ಮರಳಿದ್ದಾರೆ. ಹೀಗಾಗಿ ಬ್ರಿಟನ್‍ನಲ್ಲಿ ಹೊಸ ರೀತಿಯ ತೈಲ ಬಿಕ್ಕಟ್ಟು ಉಂಟಾಗಿದೆ. ಇದನ್ನೂ ಓದಿ: ಅವಧಿಗೂ ಮುನ್ನವೇ ಪೂರ್ಣಗೊಳ್ಳಲಿದೆ ಏಷ್ಯಾದ ಉದ್ದ ಸುರಂಗ ರಸ್ತೆ

    ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತಿದಂತೆ ಎಚ್ಚೆತ್ತಾ ಸರ್ಕಾರ, ಸದ್ಯಕ್ಕೆ ಯೋಧರನ್ನು ಚಾಲಕರಾಗಿ ಬಳಸಿಕೊಳ್ಳಲು ಮುಂದಾಗಿದೆ. ಅಲ್ಲದೆ 5000 ಸಾವಿರ ಜನ ವಿದೇಶಿ ಚಾಲಕರಿಗೆ ತುರ್ತು ವೀಸಾ ನೀಡಿ ದೇಶಕ್ಕೆ ಕರೆಸಿಕೊಳ್ಳಲು ನಿರ್ಧಾರ ಮಾಡಿದೆ. ಕಾಂಪಿಟೇಷನ್ ಆಕ್ಟ್ 1998 ತೈಲೊದ್ಯಮಕ್ಕೆ ವಿನಾಯ್ತಿಯನ್ನು ಸಹ ನೀಡಲು ಚಿಂತಿಸಿ, ಘನ ವಾಹನ ಪರವಾನಗಿ ಇರುವವರನ್ನು ಕೆಲಸಕ್ಕೆ ಬರಲು ಮನವಿ ಮಾಡಿದೆ.