Tag: ತೈಲ ದರ ಏರಿಕೆ

  • ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆ: ಸಿಎಂ

    ಗ್ಯಾರಂಟಿಗಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆ: ಸಿಎಂ

    – ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ಹಣ ಹೊಂದಿಸಬೇಕು

    ಬಳ್ಳಾರಿ: ಗ್ಯಾರಂಟಿ ಯೋಜನೆಗಳಿಗಾಗಿ (Guarantee Scheme) 60 ಸಾವಿರ ಕೋಟಿ ಹಣ ಹೊಂದಿಸಬೇಕು. ರಾಜ್ಯದ ಅಭಿವೃದ್ಧಿಗಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆ  (Fuel Price Hike) ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ಬಳ್ಳಾರಿಯ (Ballari) ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾತನಾಡಿದ ಅವರು, ಕೇಂದ್ರದವರು ತೈಲ ದರ ಹೆಚ್ಚಿಸಿ ನೂರರ ಗಡಿ ದಾಟಿಸಿದರು. ಆಗ ಮಾಧ್ಯಮದವರು ಸೇರಿ ಯಾರೊಬ್ಬರೂ ಒಂದೇ ಒಂದು ಪ್ರಶ್ನೆ ಮಾಡಲಿಲ್ಲ. ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದಕ್ಕೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದೀರಿ. ರಾಜ್ಯದ ಅಭಿವೃದ್ಧಿಗಾಗಿ ಬೆಲೆ ಏರಿಕೆ ಮಾಡಲಾಗಿದೆ. ವಿರೋಧ ಪಕ್ಷ ಬೆಲೆ ಏರಿಕೆ ಬಗ್ಗೆ ಏನಾದರೂ ಹೇಳಲಿ. ಕೇಂದ್ರ ಸರ್ಕಾರ ಮಾಡಿದ ಬೆಲೆ ಏರಿಕೆ ಬಗ್ಗೆ ಏನೂ ಮಾತಾಡಲ್ಲ. ನರೇಂದ್ರ ಮೋದಿ ಬಂದಾಗ ಪೆಟ್ರೋಲ್ ಬೆಲೆ ಎಷ್ಟಿತ್ತು? ಅಂದು ಕೇಂದ್ರ ಸರ್ಕಾರವೇ ಬೆಲೆ ಏರಿಕೆ ಮಾಡಿದೆ. ಮನಮೋಹನ ಸಿಂಗ್ ಅವಧಿ ತಲಾ ಬ್ಯಾರಲ್ ಕಚ್ಚಾ ತೈಲಕ್ಕೆ 113 ಡಾಲರ್ ಇತ್ತು. ಬಿಜೆಪಿ ಅವಧಿಯಲ್ಲಿ 59 ಡಾಲರ್‌ ಆಯ್ತು, ಯಾರೂ ಪ್ರಶ್ನೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಬಿಳಿ ಬಣ್ಣದ ಟೀ ಶರ್ಟ್ ಧರಿಸೋ ಹಿಂದಿನ ಸೀಕ್ರೆಟ್ ರಿವೀಲ್

    ಇನ್ನೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ 60 ಸಾವಿರ ಕೋಟಿ ಕೊಡಬೇಕು. ಗ್ಯಾರಂಟಿಗಳನ್ನು ರದ್ದು ಮಾಡಲಿ ಅಂತಾ ಬಿಜೆಪಿ ಹೇಳಲಿ. ಬಿಜೆಪಿಯವರು ಆರೋಪ ಮಾಡಿದರೆ ವಸ್ತು ಸ್ಥಿತಿ ಮೇಲೆ ಮಾಡಬೇಕು. ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರವನ್ನ ಮಾಧ್ಯಮದವರು ಪ್ರಶ್ನೆ ಮಾಡಿಲ್ಲ. ನರೇಂದ್ರ ಮೋದಿ ಬಂದಾಗ ಲೀಟರ್ ಪೆಟ್ರೋಲ್ 72 ರೂ. ಇತ್ತು. ಈಗ 102 ರೂ. ಆಗಿದೆ. ಕಚ್ಚಾ ತೈಲ ಬೆಲೆ ಕಡಿಮೆ ಆಗಿದೆ. ಇನ್ನೊಂದೆಡೆ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ನರೇಂದ್ರ ಮೋದಿ ಅವಧಿಯಲ್ಲಿ ಏನಾಯ್ತು? ಬೆಲೆ ಏರಿಕೆ ಆಗಿದೆ. ನಾವು 3 ರೂ. ಅಭಿವೃದ್ಧಿಗಾಗಿ ಏರಿಕೆ ಮಾಡಿದ್ದೇವೆ. ಪಕ್ಕದ ರಾಜ್ಯಕ್ಕಿಂತಲೂ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಹುಲ್‌ ವಿರುದ್ಧ ವಿಡಿಯೋ – ಯೂಟ್ಯೂಬರ್‌ ಬಂಧನಕ್ಕೆ ನೋಯ್ಡಾಗೆ ತೆರಳಿ ಬರಿಗೈಯಲ್ಲಿ ಕರ್ನಾಟಕ ಪೊಲೀಸರು ವಾಪಸ್‌

  • ಉಕ್ರೇನ್, ರಷ್ಯಾ ಯುದ್ಧಕ್ಕೂ, ಭಾರತದಲ್ಲಿ ಬೆಲೆ ಏರಿಕೆಗೂ ನಂಟೇನು?

    ಉಕ್ರೇನ್, ರಷ್ಯಾ ಯುದ್ಧಕ್ಕೂ, ಭಾರತದಲ್ಲಿ ಬೆಲೆ ಏರಿಕೆಗೂ ನಂಟೇನು?

    ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿ 14ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಯುದ್ಧದ ಎಫೆಕ್ಟ್ ಮಾತ್ರ ಇತರ ದೇಶಗಳ ಮೇಲೆ ತಟ್ಟಿದೆ. ಅದರಲ್ಲೂ ಭಾರತದಲ್ಲಿ ತೈಲ ದರ ಭಾರೀ ಏರಿಕೆ ಕಾಣುತ್ತಿದೆ.

    ಭಾರತದಲ್ಲಿ ತೈಲ ದರದಲ್ಲಿ ಏರಿಕೆ ಪ್ರಮುಖ ಕಾರಣವೇನು ಎಂಬುದನ್ನು ಗಮನಿಸಿದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ರಫ್ತು ಮಾಡುವ ಮೂರನೇ ಅತಿದೊಡ್ಡ ದೇಶ ರಷ್ಯಾ ಆಗಿದೆ. ಹಾಗಾಗಿ ಭಾರತದಲ್ಲಿ ತೈಲ ದರ ಏರಿಕೆಯತ್ತ ಮುಖಮಾಡಿದೆ. ಅಮೆರಿಕ ಮತ್ತು ಸೌದಿ ಹೊರತುಪಡಿಸಿದ್ರೆ ರಷ್ಯಾದಿಂದ ಕಚ್ಚಾ ತೈಲ ಹೆಚ್ಚು ರಫ್ತು ಆಗುತ್ತಿದೆ. ದಿನಕ್ಕೆ ಸುಮಾರು 5 ಮಿಲಿಯನ್ ಬ್ಯಾರೆಲ್‍ಗಳಷ್ಟು ಕಚ್ಚಾ ತೈಲವನ್ನು ರಷ್ಯಾ ರಫ್ತು ಮಾಡುತ್ತಿದೆ. ರಷ್ಯಾದ ಒಟ್ಟು ರಫ್ತಿನಲ್ಲಿ ಅರ್ಧದಷ್ಟು ಯುರೋಪ್ ದೇಶಗಳಿಗೆ ರಫ್ತಾದರೆ, 42% ಏಷ್ಯಾ ಮತ್ತು ಓಷಿಯಾನಿಯಾಕ್ಕೆ (ಪೆಸಿಫಿಕ್ ಸಾಗರದ ಬಳಿಯ ದೇಶಗಳೂ) ಭಾಗಕ್ಕೆ ರಫ್ತಾಗುತ್ತಿದೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 300 ಡಾಲರ್‌ಗೆ ಏರಬಹುದು: ರಷ್ಯಾ ಎಚ್ಚರಿಕೆ

    ಭಾರತದಲ್ಲಿ ಬೆಲೆ ಏರಿಕೆ ಯಾಕೆ?
    ಭಾರತ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ 61.6%, ಆಫ್ರಿಕಾದಿಂದ 14.2%, ಉತ್ತರ ಅಮೆರಿಕಾದಿಂದ 12%, ದಕ್ಷಿಣ ಅಮೆರಿಕಾದಿಂದ ಮತ್ತು ರಷ್ಯಾದಿಂದ 5.8%, ಪ್ರಪಂಚದ ಇತರ ದೇಶಗಳಿಂದ 2.5% ಕಚ್ಚಾ ತೈಲಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದೀಗ ರಷ್ಯಾ, ಉಕ್ರೇನ್ ಯುದ್ಧದಿಂದಾಗಿ ಭಾರತಕ್ಕೆ ಬರುತ್ತಿದೆ ಕಚ್ಚಾ ತೈಲಗಳ ಪ್ರಮಾಣ ಕುಸಿತ ಕಂಡಿದೆ ಇರುವುದರಿಂದಾಗಿ ಬೆಲೆ ಏರಿಕೆ ಆಗುತ್ತಿದೆ. ಇದನ್ನೂ ಓದಿ: ರಷ್ಯಾದಲ್ಲಿ ವ್ಯಾಪಾರ ನಿಲ್ಲಿಸಿದ ಮೆಕ್‍ಡೋನಾಲ್ಡ್, ಸ್ಟಾರ್‌ಬಕ್ಸ್‌, ಪೆಪ್ಸಿ ಕಂಪನಿಗಳು

    ರಷ್ಯಾದಿಂದ ಏನು ಏಫೆಕ್ಟ್?
    ಉಕ್ರೇನ್, ರಷ್ಯಾ ಯುದ್ಧದಿಂದ ರಷ್ಯಾ ಮೇಲೆ ಯುರೋಪ್ ದೇಶಗಳು ಆರ್ಥಿಕ ನಿರ್ಬಂಧ ಹೇರಿದೆ. ಇದರ ಭಾಗವಾಗಿ ಕಚ್ಚಾತೈಲದ ಆಮದನ್ನು ಈಗಾಗಲೇ ಯುರೋಪಿಯನ್ ದೇಶಗಳು ನಿಲ್ಲಿಸಿವೆ. ಮೂರನೇ ಅತಿದೊಡ್ಡ ಕಚ್ಚಾತೈಲ ರಫ್ತು ದೇಶದಿಂದ ರಪ್ತು ನಿಂತಿರುವ ಹಿನ್ನೆಲೆ ಇತರೆ ಕಚ್ಚಾತೈಲ ಉತ್ಪಾದಕ ದೇಶಗಳಲ್ಲಿ ಡಿಮ್ಯಾಂಡ್ ಹೆಚ್ಚಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ಹೆಚ್ಚಿದ್ದು, ಉತ್ಪಾದನೆ ಕಡಿಮೆ ಇದೆ ಹಾಗಾಗಿ ಪೂರೈಕೆ ಒತ್ತಡ ಹೆಚ್ಚಿದ ಹಿನ್ನೆಲೆ ಬೆಲೆ ಏರಿಕೆ ಕಂಡುಬರುತ್ತಿದೆ. ಇದರಿಂದ ಸಹಜವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಬೆಲೆ ಏರಿಕೆ ಕಾಣುತ್ತಿದೆ. ಸದ್ಯ ಪ್ರತಿ ದೇಶಗಳು ತಮ್ಮಲ್ಲಿರುವ ಸ್ಟಾಕ್ ಬಳಸಿಕೊಳ್ಳುತ್ತಿದ್ದು, ಸ್ಟಾಕ್ ಖಾಲಿಯಾಗುವ ಹೊತ್ತಿಗೆ ಯುದ್ಧ ನಿಂತರೇ ಬೆಲೆ ಈಗಿರುವ ಬೆಲೆಗೆ ಸ್ಥಿರವಾಗಬಹುದು ಎಂಬ ನಿರೀಕ್ಷೆ ಇದೆ. ಯುದ್ಧ ಮುಂದುವರಿದರೆ ಕಚ್ಚಾತೈಲದ ಬೆಲೆ 200 ಡಾಲರ್ ಗಡಿ ದಾಟುವುದು ಖಚಿತ. ಇದರಿಂದ ಭಾರತವೂ ಸೇರಿದಂತೆ ಹಲವು ದೇಶಗಳು ದುಪ್ಪಟ್ಟು ಬೆಲೆ ತೆತ್ತು ಕಚ್ಚಾತೈಲ ಖರೀದಿ ಮಾಡಬೇಕಾಗುವ ಅನಿವಾರ್ಯತೆಗೆ ಬರಬಹುದು. ಇದನ್ನೂ ಓದಿ: ನ್ಯಾಟೋ ಸದಸ್ಯತ್ವಕ್ಕೆ ಪಟ್ಟು ಹಿಡಿಯಲ್ಲ ಎಂದ ಉಕ್ರೇನ್‌: ರಷ್ಯಾದ 2 ಷರತ್ತಿಗೆ ಒಪ್ಪಿಗೆ