Tag: ತೈಲ ಕಂಪೆನಿ

  • ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ

    ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ

    ನವದೆಹಲಿ: ಸಬ್ಸಿಡಿ ರಹಿತ ಎಲ್‍ಬಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

    ಒಂದು ಸಿಲಿಂಡರ್‍ಗೆ 86 ರೂ. ಏರಿಕೆ ಮಾಡಲಾಗಿದೆ. ಬುಧವಾರದಿಂದ ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 751 ರೂ. ಆಗಿದೆ. ಜಾಗತಿಕ ಎಲ್‍ಪಿಜಿ ಉತ್ಪನ್ನದ ದರ ಏರಿಕೆ ಹಿನ್ನೆಲೆಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ದರ ಏರಿಕೆಯಾಗಿದೆ.

    ಫೆಬ್ರವರಿ 1ರಿಂದ ಅನ್ವಯವಾಗುವಂತೆ ಸಿಲಿಂಡರ್ ಬೆಲೆಯಲ್ಲಿ 66.5 ರೂ. ಏರಿಕೆಯಾಗಿದ್ದ ಬೆನ್ನಲ್ಲೇ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಏರಿಕೆ ಇದಾಗಿದೆ. ತೈಲ ಕಂಪೆನಿಗಳು ಸಬ್ಸಿಡಿ ಹೊಂದಿದ ಸಿಲಿಂಡರ್‍ಗಳ ಮೇಲೂ 13 ಪೈಸೆ ಏರಿಕೆ ಮಾಡಿದ್ದು, ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 443 ರೂ. ಆಗಿದೆ.