Tag: ತೈಲ

  • ಉಡುಪಿಯ ಪಾದೂರಿನಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ಭೂಗತ ತೈಲ ಸಂಗ್ರಹಣ ಘಟಕ!

    ಉಡುಪಿಯ ಪಾದೂರಿನಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ಭೂಗತ ತೈಲ ಸಂಗ್ರಹಣ ಘಟಕ!

    – ISPRL ಬಿಡ್‌ ಗೆದ್ದ ಮೇಘಾ ಎಂಜಿನಿಯರಿಂಗ್‌ ಕಂಪನಿ
    – 214 ಎಕರೆ ಜಾಗದಲ್ಲಿ ಘಟಕ ನಿರ್ಮಾಣ

    ನವದೆಹಲಿ: ಉಡುಪಿಯ ಪಾದೂರಿನಲ್ಲಿ (Paduru) ಮೇಘಾ ಎಂಜಿನಿಯರಿಂಗ್‌ ಕಂಪನಿ (Megha Engineering & Infrastructures Ltd) ಭೂಗತ ತೈಲ ಸಂಗ್ರಹಣ ಘಟಕವನ್ನು ನಿರ್ಮಿಸಲಿದೆ.

    ಮೇಘಾ ಎಂಜಿನಿಯರಿಂಗ್‌ ಇನ್ಫಾಸ್ಟ್ರಕ್ಚರ್‌ ಲಿಮಿಟೆಡ್ ಕಂಪನಿ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ಬಿಡ್‌ ಗೆದ್ದುಕೊಂಡಿದೆ. ISPRL ಬಿಡ್‌ ಅನ್ನು ಖಾಸಗಿ ಕಂಪನಿ ಮೊದಲ ಬಾರಿಗೆ ಗೆದ್ದುಕೊಂಡಿದ್ದು ಸುಮಾರು 5,700 ಕೋಟಿ ರೂ ವೆಚ್ಚದಲ್ಲಿ 2.5 ದಶಲಕ್ಷ ಮೆಟ್ರಿಕ್‌ ಟನ್ ಸಾಮರ್ಥ್ಯದ ಸಂಗ್ರಹಣ ಘಟಕ ನಿರ್ಮಾಣವಾಗಲಿದೆ.

    ಸಂಗ್ರಹಣಾ ಸೌಲಭ್ಯವನ್ನು ನಿರ್ಮಿಸಲು ಪಾದೂರಿನಲ್ಲಿ 214 ಎಕರೆ ಭೂಮಿಯನ್ನು ಐಎಸ್‌ಪಿಆರ್‌ಎಲ್ ಮೇಘಾ ಎಂಜಿನಿಯರಿಂಗ್‌ ಕಂಪನಿಗೆ ಉಚಿತವಾಗಿ ಹಸ್ತಾಂತರಿಸಲಿದೆ.

    ಪಾದೂರಿನಲ್ಲಿ ಈಗಾಗಲೇ ತೈಲ ಸಂಗ್ರಹಣ ಘಟಕವನ್ನು ISPRL ಸ್ಥಾಪನೆ ಮಾಡಿದೆ. ಎರಡನೇ ಹಂತದ ಘಟಕ ಸ್ಥಾಪನೆ ಮಾಡುವ ಸಂಬಂಧ ದೇಶೀಯ ಮತ್ತು ಜಾಗತಿಕ ಕಂಪನಿಗಳಿಂದ ISPRL ಬಿಡ್‌ ಆಹ್ವಾನಿಸಿತ್ತು. ಆದರೆ ಜಾಗತಿಕ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿರಲಿಲ್ಲ ಎಂದು ವರದಿಯಾಗಿದೆ.

    ಮೇಘಾ ಕಂಪನಿಯು ಸರ್ಕಾರ ಅಥವಾ ತೈಲ ಕಂಪನಿಗಳಿಗೆ ಶೇಖರಣಾ ಸ್ಥಳವನ್ನು ಗುತ್ತಿಗೆ ನೀಡುವ ಮೂಲಕ ಆದಾಯ ಸಂಗ್ರಹಿಸಬಹುದಾಗಿದೆ. ಆದರೆ ತುರ್ತು ಸಂದರ್ಭಗಳಲ್ಲಿ ಸಂಗ್ರಹಿಸಿದ ತೈಲದ ಮೇಲೆ ಸರ್ಕಾರವು ಮೊದಲ ಹಕ್ಕನ್ನು ಹೊಂದಿರಲಿದೆ. ಈ ಗುತ್ತಿಗೆಯ ಪ್ರಕಾರ ಮೇಘಾ ಎಂಜಿನಿಯರಿಂಗ್‌ ಕಂಪನಿ 5 ವರ್ಷದ ಒಳಗಡೆ ಘಟಕ ನಿರ್ಮಿಸಬೇಕು ಮತ್ತು 60 ವರ್ಷಗಳ ಕಾಲ ನಿರ್ವಹಣೆ ಮಾಡಬೇಕಾಗುತ್ತದೆ.

     

    ತೈಲ ಸಂಗ್ರಹಗಾರ ಯಾಕೆ ಬೇಕು?
    ವಿಶ್ವದಲ್ಲೇ ತುರ್ತು ಸಂದರ್ಭಕ್ಕೆಂದು ತೈಲ ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ಚೀನಾದ 1,200 ದಶಲಕ್ಷ ಬ್ಯಾರೆಲ್‌ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಿದರೆ ಅಮೆರಿಕ 714 ದಶಲಕ್ಷ ಬ್ಯಾರೆಲ್‌ ತೈಲವನ್ನು ಸಂಗ್ರಹ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಕೋವಿಡ್ 19 ವೇಳೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ಉಳಿಸಿದ ಮಂಗಳೂರು

    ಸದ್ಯ ಭಾರತ 5.33 ದಶಲಕ್ಷ ಬ್ಯಾರೆಲ್‌ ಟನ್‌ ತೈಲವನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ತೈಲವನ್ನು ತುರ್ತು ಸಂದರ್ಭದಲ್ಲಿ 9 ದಿನಗಳ ಕಾಲ ಮಾತ್ರ ಬಳಸಬಹುದು. ಮುಂದಿನ 10 ವರ್ಷಗಳಲ್ಲಿ ಭಾರತ 15 ದಶಲಕ್ಷ ಬ್ಯಾರೆಲ್‌ ಟನ್‌ ತೈಲವನ್ನು ಸಂಗ್ರಹಿಸಲು ಯೋಜಿಸಿದೆ. ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ(ಐಇಎ) ತನ್ನ ಸದಸ್ಯ ರಾಷ್ಟ್ರಗಳು 90 ದಿನಗಳ ಕಾಲ ತೈಲ ಸಂಗ್ರಹವನ್ನು ಹೊಂದಿರಬೇಕೆಂದು ಹೇಳಿದೆ.

     

    ಭಾರತದಲ್ಲಿ ಎಲ್ಲೆಲ್ಲಿ ಸಂಗ್ರಹ?
    ಐಎಸ್‍ಪಿಆರ್‌ಎಲ್ ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ. ಮೂರು ತೈಲ ಸಂಗ್ರಹಗಾರಗಳ ಪೈಕಿ ಪಾದೂರಿನಲ್ಲಿ ಅತಿ ಹೆಚ್ಚು ತೈಲವನ್ನು ಸಂಗ್ರಹ ಮಾಡಬಹುದಾಗಿದೆ. ಪಾದೂರಿನಲ್ಲಿ 2.5 ದಶಲಕ್ಷ ಟನ್(17 ದಶಲಕ್ಷ ಬ್ಯಾರೆಲ್), ಮಂಗಳೂರಿನಲ್ಲಿ 1.5 ದಶಲಕ್ಷ ಟನ್, ವಿಶಾಖಪಟ್ಟಣದಲ್ಲಿ 1.33 ದಶಲಕ್ಷ ಟನ್ ತೈಲವನ್ನು ಸಂಗ್ರಹಿಸಬಹುದಾಗಿದೆ.

    ಶೇ.83ರಷ್ಟು ತೈಲವನ್ನು ಭಾರತ ಆಮದು ಮಾಡುತ್ತಿದೆ. 65 ದಿನಗಳಿಗೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ರಿಫೈನರಿಗಳಿಗೆ ಇದೆ. 90 ದಿನಗಳ ಬಳಕೆಗೆ ಆಗುವಷ್ಟು ತೈಲ ಸಂಗ್ರಹಿಸುವ ನಿಟ್ಟಿನಲ್ಲಿ ಐಎಸ್‌ಪಿಆರ್‌ಎಲ್ ಒಡಿಶಾದ ಚಂಡಿಕೋಲ್, ರಾಜಸ್ಥಾನದ ಬಿಕಾನೆರ್, ಗುಜರಾತಿನ ರಾಜ್‍ಕೋಟ್ ಬಳಿ ಭೂಗತ ತೈಲಗಾರ ನಿರ್ಮಿಸಲು ಮುಂದಾಗುತ್ತಿದೆ.

    ಕೋವಿಡ್ 19ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಭಾರತ ಕಡಿಮೆ ದರದಲ್ಲಿ ತೈಲವನ್ನು ಖರೀದಿಸಿ ಈ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಭರ್ತಿ ಮಾಡಿತ್ತು. ಇದರಿಂದಾಗಿ ಒಟ್ಟು 5 ಸಾವಿರ ರೂ. ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿತ್ತು ಎಂದು ಪೆಟ್ರೋಲಿಯಂ ಸಚಿವಾಲಯ ಈ ಹಿಂದೆ ತಿಳಿಸಿತ್ತು.

  • Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    Israel-Iran tensions: ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ

    ನವದೆಹಲಿ: ಇರಾನ್ ಮೇಲೆ ಇಸ್ರೇಲ್ (Iran-Israel War) ನಡೆಸಿದ ದಾಳಿಯಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಭಾರತವು ಜೂನ್‌ನಲ್ಲಿ ರಷ್ಯಾದ (Russia) ತೈಲ ಖರೀದಿಯನ್ನು ಹೆಚ್ಚಿಸಿದೆ. ಸೌದಿ ಅರೇಬಿಯಾ ಮತ್ತು ಇರಾಕ್‌ನಂತಹ ಮಧ್ಯಪ್ರಾಚ್ಯ ಪೂರೈಕೆದಾರರಿಂದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

    ಜೂನ್ 13 ರಂದು ಮೊದಲು ಇರಾನಿನ ಪರಮಾಣು ತಾಣಗಳ ಮೇಲೆ ದಾಳಿ ಮಾಡಿದ ಇಸ್ರೇಲ್‌ಗೆ ನೇರ ಬೆಂಬಲ ನೀಡಿರುವ ಅಮೆರಿಕ (US), ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್‌ ಮೇಲಿನ ದಾಳಿ ಖಂಡನೆ

    ಜೂನ್‌ನಲ್ಲಿ, ಭಾರತೀಯ ಸಂಸ್ಕರಣಾಗಾರಗಳು ದಿನಕ್ಕೆ 2-2.2 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವ ನಿರೀಕ್ಷೆಯಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚಿನದ್ದಾಗಲಿದೆ. ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್‌ನಿಂದ ಖರೀದಿಸಿದ ಒಟ್ಟು ಪ್ರಮಾಣಕ್ಕಿಂತ ಹೆಚ್ಚಾಗಿದೆ ಎಂದು ಜಾಗತಿಕ ವ್ಯಾಪಾರ ವಿಶ್ಲೇಷಣಾ ಸಂಸ್ಥೆ ಕೆಪ್ಲರ್‌ ತಿಳಿಸಿದ್ದಾರೆ.

    ಮೇ ತಿಂಗಳಲ್ಲಿ ರಷ್ಯಾದಿಂದ ಭಾರತದ (India) ತೈಲ ಆಮದು ದಿನಕ್ಕೆ 1.96 ಮಿಲಿಯನ್ ಬ್ಯಾರೆಲ್‌ಗಳಷ್ಟಿತ್ತು (bpd). ಇದಲ್ಲದೆ, ಜೂನ್‌ನಲ್ಲಿ ಅಮೆರಿಕದಿಂದ ಆಮದು ದಿನಕ್ಕೆ 4.39 ಲಕ್ಷ ಬ್ಯಾರೆಲ್‌ಗೆ ಏರಿದೆ. ಇದು ಹಿಂದಿನ ತಿಂಗಳಲ್ಲಿ ಖರೀದಿಸಲಾದ 2.80 ಲಕ್ಷ ಬ್ಯಾರೆಲ್‌ಗಳಿಂದ ಭಾರಿ ಜಿಗಿತವಾಗಿದೆ. ಇದನ್ನೂ ಓದಿ: America Strikes In Iran | ಕಚ್ಚಾ ತೈಲ, ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಸಾಧ್ಯತೆ – ಆರ್ಥಿಕ ತಜ್ಞರ ಕಳವಳ

    ಜೂನ್‌ನಲ್ಲಿ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ಅಂದಾಜುಗಳು ದಿನಕ್ಕೆ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟಿದ್ದು, ಮೇ ತಿಂಗಳ ಖರೀದಿಗಿಂತ ಕಡಿಮೆಯಾಗಿದೆ ಎಂದು ಕೆಪ್ಲರ್ ತಿಳಿಸಿದೆ.

    ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮತ್ತು ಬಳಕೆಯ ರಾಷ್ಟ್ರವಾಗಿದೆ. ಇದು ಸುಮಾರು 5.1 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ. ಇದನ್ನು ಸಂಸ್ಕರಣಾಗಾರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನಂತಹ ಇಂಧನಗಳಾಗಿ ಪರಿವರ್ತಿಸಲಾಗುತ್ತದೆ. ಇದನ್ನೂ ಓದಿ: ಶಾಂತಿ ಸ್ಥಾಪಿಸಿ, ಇಲ್ಲದಿದ್ರೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತೆ – ಇರಾನ್‌ಗೆ ಟ್ರಂಪ್ ಖಡಕ್ ವಾರ್ನಿಂಗ್

    2022ರ ಫೆಬ್ರವರಿಯಲ್ಲಿ ಉಕ್ರೇನ್ ಆಕ್ರಮಣದ ನಂತರ ಭಾರತವು ಹೆಚ್ಚಿನ ಪ್ರಮಾಣದ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ದೇಶವು ಸಾಂಪ್ರದಾಯಿಕವಾಗಿ ಮಧ್ಯಪ್ರಾಚ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಕೆಲವು ಯುರೋಪಿಯನ್ ದೇಶಗಳು ಖರೀದಿಗಳನ್ನು ತಿರಸ್ಕರಿಸಿದ್ದರಿಂದ ಇತರ ಅಂತರರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ, ತೈಲವು ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಿದ್ದ ಕಾರಣ ರಷ್ಯಾದ ಆಮದು ಹೆಚ್ಚಾಗಿದೆ.

  • ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

    ಚೀನಾದಿಂದ ತೈಲಕ್ಕೆ ಭಾರೀ ಬೇಡಿಕೆ – ಆದ್ರೂ ರಷ್ಯಾಗೆ ಭಾರತದ ಕಡೆ ಒಲವೇಕೆ?

    ನವದೆಹಲಿ: ಚೀನಾದಿಂದ (China) ಭಾರೀ ಬೇಡಿಕೆಯಿದ್ದರೂ, ಭಾರತಕ್ಕೆ (India) ತೈಲವನ್ನು ಮಾರಾಟ ಮಾಡಲು ರಷ್ಯಾ (Russia) ಒಲವು ತೋರುತ್ತಿದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ತೈಲವನ್ನು (Crude Oil) ಭಾರತಕ್ಕೆ ಮಾರಾಟ ಮಾಡುತ್ತಿದೆ.

    ಭಾರತವು ವರ್ಷದ ಹಿಂದೆ ರಷ್ಯಾದ ತೈಲವನ್ನು ಖರೀದಿಸಿರಲಿಲ್ಲ. ಆದರೆ ಯುಎಸ್ ಮತ್ತು ಯುರೋಪಿಯನ್ ಒಕ್ಕೂಟವು ಮಾಸ್ಕೋ ಮೇಲೆ ನಿರ್ಬಂಧಗಳನ್ನು ವಿಧಿಸಿದ ನಂತರ ಭಾರತಕ್ಕೆ ನಿರ್ಣಾಯಕ ಮಾರುಕಟ್ಟೆಯಾಗಿದೆ. ಫೆಬ್ರವರಿಯಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ ಸುಮಾರು 18 ಲಕ್ಷ ಬ್ಯಾರಲ್‌ ತೈಲವನ್ನು ಆಮದು ಮಾಡಿಕೊಂಡಿದೆ. ಇದನ್ನೂ ಓದಿ: ಬದಲಾಯಿತು ಲುಕ್ – ತಲೆ ಕೂದಲು, ಗಡ್ಡ ಟ್ರೀಮ್ ಮಾಡಿದ ರಾಹುಲ್ ಗಾಂಧಿ

    ಅಂತೆಯೇ ಚೀನಾ ಕೂಡ ರಷ್ಯಾದಿಂದ ತೈಲ ಖರೀದಿಸುತ್ತಿದೆ. ಕೋವಿಡ್ ಶೂನ್ಯ ನೀತಿಗಳನ್ನು ಕೈಬಿಟ್ಟ ಚೀನಾ ಈಗ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸಬಹುದು. ಆದರೂ ರಷ್ಯಾಗೆ ಭಾರತೀಯ ಮಾರುಕಟ್ಟೆ ಮೇಲೆ ಹೆಚ್ಚಿನ ಒಲವು ಇದೆ.

    ಕಳೆದ ತಿಂಗಳು, ಚೀನಾಕ್ಕೆ ರಷ್ಯಾ ದಿನಕ್ಕೆ 23 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ರಫ್ತು ಮಾಡಿದೆ. ಸಾಂಕ್ರಾಮಿಕ ಸಮಯದಲ್ಲಿ ವಿಧಿಸಲಾಗಿದ್ದ ಪ್ರಯಾಣ ನಿರ್ಬಂಧಗಳು ತೆರವಾಗಿದೆ. ಹೀಗಾಗಿ ಏಷ್ಯಾದ ದೈತ್ಯ (ಚೀನಾ) ತೈಲ ಬೇಡಿಕೆಯು ಈ ವರ್ಷದಲ್ಲಿ ದಿನಕ್ಕೆ ಸುಮಾರು 9,00,000 ಬ್ಯಾರೆಲ್‌ಗಳಷ್ಟು ಹೆಚ್ಚಾಗಬಹುದು. ಇದನ್ನೂ ಓದಿ: ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

    ಭಾರತದ ಮಾರುಕಟ್ಟೆ ಮೇಲೆ ರಷ್ಯಾಗೆ ಒಲವೇಕೆ?
    ಭಾರತಕ್ಕೆ ತೈಲ ರಫ್ತು ರಷ್ಯಾಗೆ ಹೆಚ್ಚು ಲಾಭದಾಯಕವಾಗಿದೆ. ರಷ್ಯಾದ ಪಶ್ಚಿಮ ಬಂದರುಗಳಿಂದ ಭಾರತವನ್ನು ತಲುಪಲು ಟ್ಯಾಂಕರ್ ಸರಾಸರಿ 35 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಚೀನಾಕ್ಕೆ 40 ರಿಂದ 45 ದಿನಗಳು ಬೇಕಾಗುತ್ತದೆ ಹೀಗಾಗಿ ಚೀನಾದ ಬೇಡಿಕೆಯಲ್ಲಿ ಹೆಚ್ಚಳ ಕಂಡರೂ ಭಾರತಕ್ಕೆ ರಷ್ಯಾ ಎಷ್ಟು ಸಾಧ್ಯವೋ ಅಷ್ಟು ತೈಲ ಮಾರಾಟವನ್ನು ಮುಂದುವರಿಸಲಿದೆ.

    ಚೀನಾ ತಮ್ಮದೇ ಆದ ಶಿಪ್ಪಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಚೀನಾ ರಿಫೈನರಿಗಳು ರಷ್ಯಾದಿಂದ ತೈಲ ಆಮದು ಮಾಡಿಕೊಂಡು, ಸಂಸ್ಕರಿಸಿ ಮಾರಾಟ ಮಾಡುತ್ತದೆ. ಇದರಿಂದ ರಷ್ಯಾ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುವುದಿಲ್ಲ. ಆದರೆ ಭಾರತದಲ್ಲಿ ತೈಲ ಸಂಸ್ಕರಣಾ ಕಂಪನಿಗಳು ಖಾಸಗಿಯದ್ದಾಗಿವೆ. ರಷ್ಯಾ ಹೆಚ್ಚಿನ ಆದಾಯ ಗಳಿಸಲು ಭಾರತದ ಮಾರುಕಟ್ಟೆ ಸಹಕಾರಿಯಾಗಿದೆ.

  • ರಷ್ಯಾ, ಶ್ರೀಲಂಕಾ, ಮಾರಿಷಸ್‌ ಜೊತೆ ಕ್ಲಿಕ್‌ – ಮತ್ತಷ್ಟು ದೇಶಗಳೊಂದಿಗೆ ರುಪಿ ವ್ಯವಹಾರಕ್ಕೆ ಮುಂದಾದ ಭಾರತ

    ರಷ್ಯಾ, ಶ್ರೀಲಂಕಾ, ಮಾರಿಷಸ್‌ ಜೊತೆ ಕ್ಲಿಕ್‌ – ಮತ್ತಷ್ಟು ದೇಶಗಳೊಂದಿಗೆ ರುಪಿ ವ್ಯವಹಾರಕ್ಕೆ ಮುಂದಾದ ಭಾರತ

    ನವದೆಹಲಿ: ರಷ್ಯಾ, ಶ್ರೀಲಂಕಾ, ಮಾರಿಷಸ್‌ ಜೊತೆ ರುಪಿ ವ್ಯವಹಾರ(Trade in Rupee) ಯಶಸ್ವಿಯಾಗುತ್ತಿದ್ದಂತೆ ಕೇಂದ್ರ ಸರ್ಕಾರ(Union Government) ಹೆಚ್ಚಿನ ರಾಷ್ಟ್ರಗಳೊಂದಿಗೆ ಅಂತಹ ಅವಕಾಶಗಳನ್ನು ಅನ್ವೇಷಿಸುವಂತೆ ವ್ಯಾಪಾರ ಸಂಸ್ಥೆಗಳು ಮತ್ತು ಬ್ಯಾಂಕುಗಳನ್ನು ಕೇಳಿದೆ.

    ರುಪಿ ವ್ಯವಹಾರ ನಡೆಸಲು ಈಗಾಗಲೇ ಭಾರತ ಈ ಮೂರು ರಾಷ್ಟ್ರಗಳ ಜೊತೆ ಸ್ಪೆಷಲ್‌ ರೂಪಾಯಿ ವೋಸ್ಟ್ರೋ ಅಕೌಂಟ್ಸ್‌(SRVA) ತೆರೆದಿದೆ. ಇತ್ತೀಚೆಗೆ ಪೀಪಲ್ಸ್ ಬ್ಯಾಂಕ್ ಆಫ್ ಶ್ರೀಲಂಕಾ ಮತ್ತು ಮಾರಿಷಸ್ ಲಿಮಿಟೆಡ್ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾತೆ ತೆರೆದಿದೆ.

    ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ರಷ್ಯಾದ(Russia) ರೋಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದರೆ ಚೆನ್ನೈ ಮೂಲದ ಇಂಡಿಯನ್‌ ಬ್ಯಾಂಕ್‌ ಶ್ರೀಲಂಕಾದ ಮೂರು ಬ್ಯಾಂಕ್‌ನಲ್ಲಿ ಖಾತೆ ತೆರೆದಿದೆ.

    ಆರ್‌ಬಿಐ(RBI) ಅನುಮತಿಯ ಬಳಿಕ 18 ರುಪಿ ಖಾತೆಗಳು 11 ಬ್ಯಾಂಕ್‌ನಲ್ಲಿ ತೆರೆಯಲ್ಪಟ್ಟಿದೆ. ಇದರಲ್ಲಿ ಎರಡು ರಷ್ಯಾ, ಎರಡು ಶ್ರೀಲಂಕಾ ಬ್ಯಾಂಕ್‌ಗಳು ಸೇರಿವೆ. ಇದನ್ನೂ ಓದಿ: ಕಚ್ಚಾ ತೈಲಕ್ಕೆ ಜಿ7 ದೇಶಗಳಿಂದ ದರ ಮಿತಿ – ಭಾರತದ ನಿರ್ಧಾರವನ್ನು ಸ್ವಾಗತಿಸಿದ ರಷ್ಯಾ

    ಉಕ್ರೇನ್‌(Ukraine) ಮೇಲಿನ ಯುದ್ಧದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಹಣಕಾಸು ವ್ಯವಹಾರಕ್ಕೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಆರ್‌ಬಿಐ ಜುಲೈನಲ್ಲಿ ಎರಡು ದೇಶಗಳ ಮಧ್ಯೆ ದೇಶಿಯ ಕರೆನ್ಸಿಯಲ್ಲಿ ವ್ಯವಹಾರ ನಡೆಸುವ ಸಂಬಂಧ ವಿವರವಾದ ಮಾರ್ಗಸೂಚಿಯನ್ನು ಪ್ರಕಟಿಸಿತ್ತು.

    ಇತ್ತೀಚಿನ ಪರಿಶೀಲನಾ ಸಭೆಯಲ್ಲಿ ಹಣಕಾಸು ಸಚಿವಾಲಯವು ಮತ್ತಷ್ಟು ದೇಶಗಳ ಜೊತೆ SRVA ಮೂಲಕ ದ್ವಿಪಕ್ಷೀಯ ವಹಿವಾಟುಗಳನ್ನು ವಿಸ್ತರಿಸಲು ಬ್ಯಾಂಕ್‌ ಮತ್ತು ವ್ಯಾಪಾರ ಸಂಸ್ಥೆಗಳ ಜೊತೆ ಕೇಳಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Russia-Ukraine Crisis: ರಷ್ಯಾಗೆ ಮತ್ತೊಂದು ಶಾಕ್ – SWIFTನಿಂದ ಔಟ್‌

    ಆರ್‌ಬಿಐ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬಳಿಕ ರಷ್ಯಾದ ಸ್ಬೆರ್ಬ್ಯಾಂಕ್ ಮತ್ತು ವಿಟಿಬಿ ಬ್ಯಾಂಕ್ ಮೊದಲು ಅನುಮೋದನೆಯನ್ನು ಪಡೆದುಕೊಂಡಿತ್ತು. ಇನ್‌ವಾಯ್ಸ್, ಪಾವತಿ ಮತ್ತು ರಫ್ತು/ಆಮದುಗಳ ಇತ್ಯರ್ಥಕ್ಕೆ ರೂಪಾಯಿಯಲ್ಲಿ ಹೆಚ್ಚುವರಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

    ಈ SRVA ಅಡಿಯಲ್ಲಿ ಆಮದು ವಹಿವಾಟು ಕೈಗೊಳ್ಳುವ ದೇಶಿಯ ಆಮದುದಾರರು ಪಾವತಿಗಳನ್ನು ರೂಪಾಯಿಯಲ್ಲಿ ಮಾಡತಕ್ಕದ್ದು. ಹಣವನ್ನು ಅವರು ಪಾಲುದಾರ ದೇಶದ ಬ್ಯಾಂಕ್‌ ಭಾರತದಲ್ಲಿ ತೆರೆದಿರುವ ವಿಶೇಷ ಖಾತೆಯಲ್ಲಿ ಜಮಾ ಮಾಡಬೇಕಾಗುತ್ತದೆ.

    ಭಾರತದಲ್ಲಿ ತನ್ನ ಶಾಖೆಯನ್ನು ಹೊಂದಿಲ್ಲದ ರಷ್ಯಾದ ಮತ್ತೊಂದು ಬ್ಯಾಂಕ್ Gazprombank ಸಹ ಕೋಲ್ಕತ್ತಾ ಮೂಲದ UCO ಬ್ಯಾಂಕ್‌ನಲ್ಲಿ SRVA ಖಾತೆಯನ್ನು ತೆರೆದಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ 2,748 ಕೋಟಿ ನಷ್ಟ

    ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ 2,748 ಕೋಟಿ ನಷ್ಟ

    ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಎರಡನೇ ತ್ರೈಮಾಸಿಕದಲ್ಲಿ 2,748.66 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.

    ರಷ್ಯಾ- ಉಕ್ರೇನ್‌ ಯುದ್ಧದಿಂದ(Russia- Ukraine War) ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದರೂ ತೈಲ ಬೆಲೆಯನ್ನು ಪರಿಷ್ಕರಣೆ ಮಾಡದ ಕಾರಣ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌(IOC), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌(BPCL), ಹಿಂದೂಸ್ತಾನ್‌ ಪೆಟ್ರೋಲಿಯಂ(HPCL) ಜುಲೈ -ಸೆಪ್ಟೆಂಬರ್‌ ಅವಧಿಯಲ್ಲಿ ಭಾರೀ ನಷ್ಟವನ್ನು ಅನುಭವಿಸಿದೆ.

    ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ತೈಲ ಕಂಪನಿಗಳು ಒಟ್ಟು 21,201.2 ಕೋಟಿ ರೂ. ನಷ್ಟವನ್ನು ಅನುಭವಿಸಿವೆ. ತೈಲ ಕಂಪನಿಗಳು  ಇಷ್ಟೊಂದು ಪ್ರಮಾಣದ ನಷ್ಟ ಅನುಭವಿಸಿರುವುದು ಇದೇ ಮೊದಲು. ಇದನ್ನೂ ಓದಿ: ಬರೋಬ್ಬರಿ 11,000 ಉದ್ಯೋಗಿಗಳನ್ನು ವಜಾಗೊಳಿಸಿದ ಮೆಟಾ

    ಏರಿಕೆ ಆಗುತ್ತಿರುವ ಹಣದುಬ್ಬರ ನಿಯಂತ್ರಿಸಲು ಕೇಂದ್ರ ಸರ್ಕಾರ ಮೇ 21 ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 8 ರೂ. ಮತ್ತು 6 ರೂ. ಇಳಿಕೆ ಮಾಡಿತ್ತು. ಇದರಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 9.5 ರೂ., ಡೀಸೆಲ್‌ ದರ 7 ರೂ. ಇಳಿಕೆಯಾಗಿತ್ತು.

    ಎರಡು ವರ್ಷಗಳ ಕಾಲ ಎಲ್‌ಪಿಜಿ ಅಡುಗೆ ಅನಿಲವನ್ನು ಕಡಿಮೆ ಬೆಲೆಗೆ ನೀಡಿ ಆಗಿದ್ದ ನಷ್ಟವನ್ನು ಸರಿದೂಗಿಸಲು ತೈಲ ಕಂಪನಿಗಳಿಗೆ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ 22,000 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

    ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ

    ನವದೆಹಲಿ: ಒಂದು ಷರತ್ತನ್ನು ವಿಧಿಸಿದ ಭಾರತಕ್ಕೆ ಇನ್ನಷ್ಟು ರಿಯಾಯಿತಿ ದರದಲ್ಲಿ ತೈಲವನ್ನು(Crude Oil) ನೀಡಲು ನಾನು ಸಿದ್ಧ ಎಂದು ರಷ್ಯಾ(Russia) ಹೇಳಿದೆ.

    ರಷ್ಯಾ ಭಾರೀ ರಿಯಾಯಿತಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತಕ್ಕೆ(India) ನೀಡಲು ಮುಂದಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಭಾರತ ಜಿ7(G7) ರಾಷ್ಟ್ರದ ಪ್ರಸ್ತಾಪಗಳನ್ನು ಬೆಂಬಲಿಸಬಾರದು ಎಂದು ರಷ್ಯಾ ಷರತ್ತು ವಿಧಿಸಿದೆ.

    ಉಕ್ರೇನ್ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದ ಮೇಲೆ ಯುರೋಪ್ ಮತ್ತು ಅಮೆರಿಕ ಹಲವು ಆರ್ಥಿಕ ನಿರ್ಬಂಧ ವಿಧಿಸಿದೆ. ಆರ್ಥಿಕ ನಿರ್ಬಂಧ ವಿಧಿಸಿದರೂ ರಷ್ಯಾ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರದ ಪರಿಣಾಮ ಜಿ7 ರಾಷ್ಟ್ರಗಳು ಮತ್ತೊಂದು ಆರ್ಥಿಕ ಸಮರಕ್ಕೆ ಮುಂದಾಗಿವೆ. ರಷ್ಯಾದ ತೈಲ ಆಮದಿನ ಮೆಲೆ ಬೆಲೆ ಮಿತಿಯನ್ನು ಜಾರಿಗೊಳಿಸಲು ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಮುಂದಾಗಿದೆ.

    ಯುದ್ಧ ಸಾರಿದ ಬಳಿಕ ಭಾರತ ಮತ್ತು ಚೀನಾ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ರಷ್ಯಾದಿಂದ ಆಮದು ಮಾಡುತ್ತಿದೆ. ಈ ಕಾರಣಕ್ಕೆ ಜಿ7 ರಾಷ್ಟ್ರಗಳು ಒತ್ತಡಕ್ಕೆ ಭಾರತ ಮಣಿಯದೇ ಇದ್ದರೆ ಮತ್ತಷ್ಟು ಅಗ್ಗದ ದರದಲ್ಲಿ ತೈಲ ಪೂರೈಸುವುದಾಗಿ ರಷ್ಯಾ ಹೇಳಿದೆ. ಈ ಬಗ್ಗೆ ಭಾರತ ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಾತುಕತೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿಗೆ ಈ ಸಮಯ ಕಳೆದು ಹೋಗುತ್ತದೆ ಎಂದಿದ್ದ ಬಾಬರ್‌ಗೆ ಟಾಂಗ್ – ಈ ಸಮಯ ಕಳೆದು ಹೋಗಲ್ಲ ಎಂದ ಫ್ಯಾನ್ಸ್

    ಎಷ್ಟು ಅಗ್ಗದಲ್ಲಿ ಸಿಕ್ಕಿತ್ತು?
    ರಷ್ಯಾ ಭಾರತಕ್ಕೆ ಮೇ ತಿಂಗಳಿನಲ್ಲಿ ಸರಾಸರಿ ತೈಲ ಬೆಲೆ 110 ಡಾಲರ್(8,751 ರೂ.) ಇದ್ದಾಗ 16 ಡಾಲರ್‌ನಷ್ಟು(1,272 ರೂ.) ರಿಯಾಯಿತಿ ದರದಲ್ಲಿ ತೈಲವನ್ನು ಪೂರೈಸಿತ್ತು. ಬಳಿಕ ಜೂನ್ ತಿಂಗಳಿನಲ್ಲೂ ಸರಾಸರಿ ತೈಲ ಬೆಲೆ 116 ಡಾಲರ್(9,226 ರೂ.) ಇದ್ದಾಗ 14 ಡಾಲರ್(1,193 ರೂ.) ವರೆಗಿನ ರಿಯಾಯಿತಿಯನ್ನು ನೀಡಿತ್ತು. ಇದೀಗ ರಷ್ಯಾ ಭಾರತಕ್ಕೆ ಮತ್ತೆ ಶೇ.27 ರಷ್ಟು ರಿಯಾಯಿತಿ ದರದಲ್ಲಿ ತೈಲ ನೀಡಲು ಮುಂದಾಗಿದೆ.

    ಭಾರತದ ತೈಲ ಅಗತ್ಯದಲ್ಲಿ ರಷ್ಯಾ ಶೇ.18.2 ರಷ್ಟು ತೈಲವನ್ನು ಪೂರೈಕೆ ಮಾಡುತ್ತದೆ. ಈ ಮೂಲಕ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಶೇ.20.8 ರಷ್ಟು ತೈಲ ಪೂರೈಕೆ ಮಾಡಿದರೆ, ಇರಾಕ್ ಶೇ.20.6 ರಷ್ಟು ನೀಡುತ್ತದೆ. ಈ ಮೂಲಕ ಈ ಎರಡು ರಾಷ್ಟ್ರಗಳು ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳ ಪಟ್ಟಿಯಲ್ಲಿ ಮೊದಲ ಹಾಗೂ 2ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ರಾಜಕಾಲುವೆ ಅತಿಕ್ರಮ ತೆರವು ಕಾರ್ಯಾಚರಣೆ – ಭೇದಭಾವದ ಪ್ರಶ್ನೆಯೇ ಇಲ್ಲವೆಂದ ಸಿಎಂ

    Live Tv
    [brid partner=56869869 player=32851 video=960834 autoplay=true]

  • ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಲಂಡನ್: ಯುರೋಪಿಯನ್ ಒಕ್ಕೂಟ(ಇಯು) ಈ ವರ್ಷದ ಅಂತ್ಯದ ವೇಳೆಗೆ ರಷ್ಯಾದಿಂದ ಆಮದಾಗುವ ತೈಲವನ್ನು ಶೇ.90 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡಿದೆ. ಇಯು ನಿರ್ಧಾರದ ಬೆನ್ನಲ್ಲೇ ಮಂಗಳವಾರ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ.

    ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಈ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ, ರಷ್ಯಾದಿಂದ ಆಮದಾಗುವ ತೈಲದ ನಿರ್ಬಂಧದ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಇದು ಈ ವರ್ಷದ ಅಂತ್ಯದ ವೇಳೆ ರಷ್ಯಾದಿಂದ ಸುಮಾರು ಶೇ.90 ರಷ್ಟು ಆಮದನ್ನು ಕಡಿತಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ಬಂಧನ ರಾಜಕೀಯ ಪ್ರೇರಿತ, ನಮ್ಮದು ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್

    ಈ ನಿರ್ಧಾರದಿಂದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಹಂಗೇರಿ, ಸ್ಲೋವಾಕಿಯಾ ಹಾಗೂ ಜೆಕ್ ರಿಪಬ್ಲಿಕ್‌ಗಳಲ್ಲಿ ರಷ್ಯಾದ ಆಮದನ್ನು ಕಡಿತಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಇದಕ್ಕಾಗಿ ಸದ್ಯ ಪೈಪ್‌ಲೈನ್ ಮುಖಾಂತರ ರಷ್ಯಾದಿಂದ ಬರುವ ತೈಲಕ್ಕೆ ತಾತ್ಕಾಲಿಕ ವಿನಾಯಿತಿ ಇರಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: 130 ಕೋಟಿ ಜನರಿಗೆ ನಾನು ಸೇವಕನಷ್ಟೇ: ನರೇಂದ್ರ ಮೋದಿ

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ಗೆ 117.93 ಡಾಲರ್(9,162 ರೂ.) ಇದ್ದ ಕಚ್ಚಾ ತೈಲದ ಬೆಲೆ ಈಗ 122 ಡಾಲರ್‌ಗೆ(9,478 ರೂ.) ಏರಿಕೆಯಾಗಿದೆ.

    ಜಾಗತಿಕವಾಗಿ ತೈಲಬೆಲೆ ಹೆಚ್ಚಾಗಿದ್ದರೂ ಭಾರತದಲ್ಲಿ ಕಳೆದ 9 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್‌ನ ಬೆಲೆ ತಟಸ್ಥವಾಗಿದೆ. ಮೇ 22 ರಂದು ಕೆಂದ್ರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್‌ಗೆ 8 ರೂ. ಹಾಗೂ ಲೀಟರ್ ಡೀಸೆಲ್‌ಗೆ 6 ರೂ. ಕಡಿತಗೊಳಿಸಿದೆ.

  • ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ

    ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ

    ನವದೆಹಲಿ: ಕಡಿಮೆ ದರದಲ್ಲಿ ತೈಲ ನೀಡುತ್ತಿರುವ ರಷ್ಯಾ ಜೊತೆ ಭಾರತ ಈಗ ಚೌಕಾಶಿ ಮಾಡುತ್ತಿದೆ ಎಂದು ವರದಿಯಾಗಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಾದ 70 ಡಾಲರ್‌ಗೆ(5,300 ರೂ.)ಕಚ್ಚಾ ತೈಲ ನೀಡುವುದಾಗಿ ರಷ್ಯಾ ಈಗಾಗಲೇ ಪ್ರಕಟಿಸಿದೆ. ಆದರೆ ಭಾರತ ಅದಕ್ಕಿಂತಲೂ ಕಡಿಮೆ ದರದಲ್ಲಿ ತೈಲವನ್ನು ಪೊರೈಸುವಂತೆ ಚೌಕಾಶಿ ಮಾಡುತ್ತಿದೆ.

    ಉಕ್ರೇನ್‌ ಮೇಲೆ ಯುದ್ಧ ಸಾರಿದ ಬಳಿಕ ರಷ್ಯಾದಿಂದ ತೈಲ ಖರೀದಿಸದಂತೆ ಅಮೆರಿಕ, ಯುರೋಪಿಯನ್‌ ಒಕ್ಕೂಟ ಭಾರತಕ್ಕೆ ಮನವಿ ಮಾಡುತ್ತಿದೆ. ಇದನ್ನೂ ಓದಿ: ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ

    ಒಪೆಕ್‌ ರಾಷ್ಟ್ರಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖರೀದಿಗೆ ವಿರೋಧವಿದ್ದರೂ ನಾವು ನಿಮ್ಮ ಜೊತೆ ತೈಲ ಖರೀದಿಸುತ್ತಿದ್ದೇವೆ. ಹೀಗಾಗಿ ದರವನ್ನು ಮತ್ತಷ್ಟು ಇಳಿಸಿ ಎಂದು ರಷ್ಯಾದ ತೈಲ ಕಂಪನಿಗಳ ಜೊತೆ ಭಾರತ ಚೌಕಾಶಿ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಭಾರತ ಈಗ ರಷ್ಯಾದಿಂದ 70 ಡಾಲರ್‌ಗೆ ಒಂದು ಬ್ಯಾರೆಲ್‌ ತೈಲವನ್ನು ಖರೀದಿಸುತ್ತಿದೆ. ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ತೈಲಕ್ಕೆ 105 ಡಾಲರ್‌ ಇದೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?

    ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ಬಳಿಕ ಭಾರತದ ಕಂಪನಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ 40 ದಶಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಖರೀದಿ ಮಾಡಿದೆ.

    ಕಳೆದ ವಾರ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಶನ್(ಒನ್‌ಜಿಸಿ) ವಿಮೆ ಮತ್ತು ಇತರ ಸಮಸ್ಯೆಗಳಿಂದ 7 ಲಕ್ಷ ಬ್ಯಾರೆಲ್‌ ತೈಲವನ್ನು ರಷ್ಯಾದ ಪೂರ್ವ ಬಂದರಿನಿಂದ ಭಾರತಕ್ಕೆ ಸಾಗಿಸಲು ಬಹಳ ಶ್ರಮಪಟ್ಟಿತ್ತು ಎಂದು ವರದಿಯಾಗಿದೆ.

  • ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ವಾಷಿಂಗ್ಟನ್‌: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲವನ್ನು ಖರೀದಿಸುತ್ತಿರುವ ಕುರಿತು ಪ್ರಶ್ನಿಸಿದ ವಿದೇಶಿ ಪತ್ರಕರ್ತೆಗೆ  ಭಾರತ ವಿದೇಶಾಂಗ ಸಚಿವ ಜೈಶಂಕರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

    ಯೂರೋಪ್ ರಷ್ಯಾದಿಂದ ಅರ್ಧ ದಿನಕ್ಕೆ ಖರೀದಿಸುವಷ್ಟು ಪ್ರಮಾಣದ ತೈಲವನ್ನು ಭಾರತ ಒಂದು ತಿಂಗಳ ಅವಧಿಗೆ ಖರೀದಿಸುತ್ತದೆ ಎಂದು ಉತ್ತರಿಸುವ ಮೂಲಕ ಪತ್ರಕರ್ತನಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಾ ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿ ಮೋದಿ ಏನ್ಮಾಡ್ತಿದ್ದಾರೆ: ನಾಸೀರ್ ಹುಸೇನ್ ಪ್ರಶ್ನೆ

    ಭಾರತ ಮತ್ತು ಅಮೆರಿಕ ನಡುವೆ ನಡೆದ 2+2 ಸಭೆಯಲ್ಲಿ ಮಾತನಾಡಿದ ಅವರು, ನೀವು ತೈಲ ಖರೀದಿಯನ್ನು ಉಲ್ಲೇಖಿಸುವುದನ್ನು ನಾನು ಗಮನಿಸಿದ್ದೇನೆ. ರಷ್ಯಾದಿಂದ ಇಂಧನ ಖರೀದಿಗೆ ಸಂಬಂಧಿಸಿದಂತೆ ನಿಮ್ಮ ಗಮನವನ್ನು ಯುರೋಪ್ ಕಡೆಗೆ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ಬಹುಶಃ ನಾವು ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸುತ್ತೇವೆ. ಆದರೆ ಅಂಕಿಅಂಶಗಳನ್ನು ನೋಡುವಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಯು ಯುರೋಪ್‌ನ ಅರ್ಧ ದಿನಕ್ಕಿಂತಲೂ ಕಡಿಮೆಯಿರಬಹುದು. ಆದ್ದರಿಂದ ನೀವು ಅದರ ಬಗ್ಗೆ ಯೋಚಿಸಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

    ರಷ್ಯಾವನ್ನು ಭಾರತ ಯಾಕೆ ಖಂಡಿಸುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ನಾವು ಯುಎನ್‌ನಲ್ಲಿ, ನಮ್ಮ ಸಂಸತ್ತಿನಲ್ಲಿ ಮತ್ತು ಇತರ ವೇದಿಕೆಗಳಲ್ಲಿ ನಮ್ಮ ನಿಲುವನ್ನು ತಿಳಿಸಿದ್ದೇವೆ. ನಾವು ಸಂಘರ್ಷಕ್ಕೆ ವಿರುದ್ಧವಾಗಿದ್ದೇವೆ. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಿನ್ನಾಭಿಪ್ರಾಯವನ್ನು (ರಷ್ಯಾ-ಉಕ್ರೇನ್) ಬಗೆಹರಿಸಿಕೊಳ್ಳಬೇಕು ಎಂದು ಈಗಾಗಲೇ ತಿಳಿಸಿದ್ದೇವೆ. ಆ ನಿಟ್ಟಿನಲ್ಲಿ ನಡೆಯುವುದಾದರೆ ಸೂಕ್ತ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು

    russia 1

    ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಮಾತನಾಡಿ, ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್ ಖರೀದಿಸಲು ಕಾಟ್ಸಾ ಕಾನೂನಿನಡಿಯಲ್ಲಿ ಅಮೆರಿಕವು ತನ್ನ ಪ್ರಮುಖ ಪಾಲುದಾರರಲ್ಲಿ ಒಂದಾದ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಬೇಕೇ ಅಥವಾ ನಿರ್ಬಂಧವನ್ನು ಮನ್ನಾ ಮಾಡಬೇಕೇ ಎಂಬ ಬಗ್ಗೆ ಅಮೆರಿಕ ಯಾವುದೇ ನಿರ್ಣಯ ಮಾಡಿಲ್ಲ ಎಂದು ಹೇಳಿದ್ದಾರೆ.

    ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ಬ್ಲಿಂಕೆನ್ ಮಾತನಾಡಿ, ಮಾನವ ಹಕ್ಕುಗಳನ್ನು ರಕ್ಷಿಸುವಂತಹ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಾವು ಬದ್ಧರಾಗಿದ್ದೇವೆ. ನಾವು ಈ ಮೌಲ್ಯಗಳೊಂದಿಗೆ ನಮ್ಮ ಪಾಲುದಾರ ಭಾರತದೊಂದಿಗೆ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇವೆ. ಸರ್ಕಾರ, ಪೋಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಹೆಚ್ಚಳ ಸೇರಿದಂತೆ ಭಾರತದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆಯಾದ ಕೈದಿಗಳ ಶಿಕ್ಷಣ ಖರ್ಚನ್ನು ಭರಿಸುತ್ತಿದೆ ಇಂದೋರ್ ಜೈಲು

  • ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.

    ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.

    ಕೊಲಂಬೊ: ರಾವಣನ ನಾಡು ಎಂಬ ಖ್ಯಾತಿಯ ಶ್ರೀಲಂಕಾ ಮಹಾ ಆರ್ಥಿಕ ಪತನದತ್ತ ಸಾಗಿದೆ. ದೇಶದಲ್ಲಿ ಜನ ಆಹಾರ ಉತ್ಪನ್ನಗಳ ಖರೀದಿಗೆ ಹಾಹಾಕಾರ ಶುರುವಾಗಿದ್ದು, ಸಕ್ಕರೆ, ಬೇಳೆ ಸೇರಿದಂತೆ ಪ್ರಮುಖ ಆಹಾರ ಉತ್ಪನ್ನಗಳಿಗೆ ಚಿನ್ನದ ಬೆಲೆ ಆಗಿದೆ.

    ಶ್ರೀಲಂಕಾದಲ್ಲಿ ಜಿಡಿಪಿ ಸೊನ್ನೆ ಸುತ್ತುತ್ತಿದೆ. ಜನ ಪೆಟ್ರೋಲ್, ಸೀಮೆಎಣ್ಣೆಗೆ ಕ್ಯೂ ನಿಂತು ಸಾವನ್ನಪ್ಪುತ್ತಿದ್ದಾರೆ. ಮುದ್ರಣ ಕಾಗದಲ್ಲಿ ಕೊರತೆ ಉಂಟಾದ ಪರಿಣಾಮ ಶಾಲಾ ಮಕ್ಕಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ. ಪೆಟ್ರೋಲ್, ಡೀಸೆಲ್‍ಗಾಗಿ ದಿನಗಟ್ಟಲೇ ಕ್ಯೂ ನಿಂತು ಇಬ್ಬರು ನಾಗರಿಕರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ

    ರಷ್ಯಾ, ಉಕ್ರೇನ್ ನಡುವೆ ಯುದ್ಧ ಆರಂಭವಾದಗಿನಿಂದ ಶ್ರೀಲಂಕಾದಲ್ಲಿ ತೈಲ ಹಾಹಾಕಾರ ಆರಂಭವಾಗಿದೆ. ನಿನ್ನೆ ಎಪ್ಪತ್ತು ವರ್ಷ ಮೇಲ್ಪಟ್ಟ ಇಬ್ಬರು ವೃದ್ಧರು ಸೀಮೆಎಣ್ಣೆಗಾಗಿ ಕ್ಯೂ ನಿಂತಿದ್ದ ಸ್ಥಳದಲ್ಲೇ ನಿಶ್ಯಕ್ತಿಯಿಂದ ಸಾವನ್ನಪ್ಪಿದ್ದಾರೆ. ಯುದ್ಧ ಬೆನ್ನಲ್ಲೇ ಶ್ರೀಲಂಕಾದಲ್ಲಿ ಕಚ್ಚಾತೈಲ ಸಂಗ್ರಹಗಾರಗಳು ಬರಿದಾಗಿದೆ. ಇತ್ತ ಎಲ್‍ಪಿಜಿ ಬೆಲೆ ಸಿಲಿಂಡರ್ ಬೆಲೆ 1,350 ರೂಪಾಯಿಗೆ ಏರಿಕೆ ಕಂಡಿದೆ. ಬೆಲೆ ಏರಿಕೆಯಿಂದಾಗಿ ಜನ ಹೈರಾಣಾಗಿದ್ದು, ಆರ್ಥಿಕ ದಿವಾಳಿಯತ್ತ ಶ್ರೀಲಂಕಾ ಸಾಗಿದೆ. ಇದನ್ನೂ ಓದಿ: ಚುನಾವಣೆವರಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ

    ಶ್ರೀಲಂಕಾದಲ್ಲಿ ದಿನ ಬಳಕೆಯ ವಸ್ತುಗಳೊಂದಿಗೆ ಟೀ ಬೆಲೆ ಕೂಡ ಗಗನಕ್ಕೇರಿದೆ. ಒಂದು ಕಪ್ ಟೀ ಬೆಲೆ 100 ರೂ.ಗೆ ಏರಿಕೆ ಕಂಡಿದೆ. 400 ಗ್ರಾಂನ ಹಾಲಿಗೆ ಪುಡಿಗೆ 250 ರೂಪಾಯಿ ಬೆಲೆ ನಿಗದಿಪಡಿಸಲಾಗಿದ್ದು, ಹಣದುಬ್ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಏರುತ್ತಿದೆ. ಒಂದೇ ತಿಂಗಳಲ್ಲಿ 10% ಹಣದುಬ್ಬರ ಏರಿಕೆ ಕಂಡಿದೆ. ಫೆಬ್ರವರಿಯಲ್ಲಿ 15.1% ರಷ್ಟಿದ್ದ ಹಣದುಬ್ಬರ ಮಾರ್ಚ್‍ನಲ್ಲಿ 25.7%ಗೆ ಏರಿಕೆ ಕಂಡಿದ್ದು, ಡಾಲರ್ ಮುಂದೆ ಶ್ರೀಲಂಕಾದ ಕರೆನ್ಸಿ ಬೆಲೆ ಮಂಕಾಗಿದ್ದು, ಪ್ರತಿ ಡಾಲರ್ ಬೆಲೆ 275 ರೂಪಾಯಿಗೆ ಏರಿಕೆ ಕಂಡಿದೆ.

    ಆರ್ಥಿಕ ದಿವಾಳಿಗೆ ಕಾರಣಗಳೇನು:
    ಶ್ರೀಲಂಕಾದ ಆರ್ಥಿಕ ದಿವಾಳಿಗೆ ಪ್ರಮುಖ ಕಾರಣವಾಗಿರುವುದು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿರುವುದು ಮತ್ತು ಏಕಾಏಕಿ ರಸಗೊಬ್ಬರ ನಿಷೇಧ ಮಾಡಿರುವುದರಿಂದಾಗಿ ಶ್ರೀಲಂಕಾದ ಕೃಷಿ ವಲಯ ಕುಸಿತ ಕಂಡಿದೆ. ಅಕ್ಕಿ, ಬೆಳೆ, ಕಬ್ಬು ಸೇರಿ ಧಾನ್ಯಗಳ ಪೂರೈಕೆಯಲ್ಲಿ ಭಾರಿ ಕೊರತೆ ಕಂಡುಬಂದಿದ್ದು, ಪೂರೈಕೆ ಕೊರತೆಯಿಂದ ಆಹಾರ ಪದಾರ್ಥಗಳ ಬೆಲೆ ಗಣನೀಯ ಏರಿಕೆ ಕಂಡಿದೆ. ಇದನ್ನೂ ಓದಿ: ಬ್ರೋಕರ್ ಮೋಹನ್ ಮನೆಯಲ್ಲಿತ್ತು 5 ಕೆಜಿ ಚಿನ್ನ – ಎಸಿಬಿ ಅಧಿಕಾರಿಗಳೇ ಶಾಕ್

    ಶ್ರೀಲಂಕಾಗೆ ಈ ಮೊದಲು ಕೊರೊನಾ ಬಾರಿ ಹೊಡೆತ ನೀಡಿದೆ. ಕೊರೊನಾದಿಂದ ಶ್ರೀಲಂಕಾದ ಪ್ರವಾಸೋದ್ಯಮ ಬಂದ್ ಆದ ಪರಿಣಾಮದಿಂದಾಗಿ ಸರ್ಕಾರಕ್ಕೆ ಬರುತ್ತಿದ್ದ ಆದಾಯ ಕಡಿತಗೊಂಡಿದೆ. ಶೇ.10 ಜಿಡಿಪಿ ಹೊಂದಿರುವ ಪ್ರವಾಸೋದ್ಯಮದ ಬಂದ್ ನಿಂದ ನಿರುದ್ಯೋಗ ಸೇರಿದಂತೆ ಜನರಲ್ಲಿ ಆರ್ಥಿಕ ಕೊರತೆ ಹೆಚ್ಚಳಗೊಂಡಿದೆ. ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳು ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್‍ಗಳಿಂದ ಶ್ರೀಲಂಕಾ ಸಾಲ ಪಡೆದುಕೊಂಡಿದೆ. ಇದರಿಂದಾಗಿ ಶ್ರೀಲಂಕಾ ಸರ್ಕಾರ ಆದಾಯವಿಲ್ಲದೇ ಕಂತುಗಳನ್ನು ಕಟ್ಟಲು ಪರದಾಡುತ್ತಿದೆ. ಇನ್ನೊಂದೆಡೆ ವಿದೇಶಿ ವಿನಿಮಯ ಮತ್ತು ಕರೆನ್ಸಿ ಮೌಲ್ಯ ಕುಸಿತ ಕಂಡ ಪರಿಣಾಮ ಸಣ್ಣ ಪುಟ್ಟ ವಸ್ತುಗಳಿಗೂ ದುಬಾರಿ ಬೆಲೆ ತೆತ್ತು ಆಮದು ಮಾಡುವಂತಹ ಪರಿಸ್ಥಿತಿ ಶ್ರೀಲಂಕಾಗೆ ಎದುರಾಗಿದೆ.

    ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ಇತ್ತೀಚಿಗಷ್ಟೆ ಭಾರತ ಸರ್ಕಾರ ಕೋಟ್ಯಂತರ ರೂಪಾಯಿ ನೆರವನ್ನು ಶ್ರೀಲಂಕಾಗೆ ನೀಡುವುದಾಗಿ ಘೋಷಿಸಿತ್ತು. 1948ರಲ್ಲಿ ಸ್ವಾತಂತ್ರ್ಯ ಗಿಟ್ಟಿಸಿಕೊಂಡ ನಂತರ ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದ್ದು, ಅಗತ್ಯ ವಸ್ತುಗಳಿಗೂ ಭಾರೀ ಕೊರತೆ ಉಂಟಾಗಿದೆ.