Tag: ತೈಮೂರ್ ಅಲಿ ಖಾನ್

  • ಮಗನ  ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಕರೀನಾ ವಿಶ್

    ಮಗನ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಕರೀನಾ ವಿಶ್

    ಮುಂಬೈ: ಬಾಲಿವುಡ್‍ನ ಸ್ಟಾರ್ ಕಪಲ್ ಆಗಿರುವ ಕರೀನಾ ಕಪೂರ್ ಖಾನ್ ಹಾಗೂ ಸೈಫ್ ಅಲಿ ಖಾನ್ ಪುತ್ರನಾಗಿರುವ ತೈಮೂರ್‌ಗೆ ಇಂದು 5ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಕರೀನಾ ಕಪೂರ್ ಮಗನ ಮುದ್ದಾದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ತೈಮೂರ್ ಮೊದಲು ಅಂಬೆಗಾಲಿಡುವ ವೀಡಿಯೋವನ್ನು ಕರೀನಾ ಕಪೂರ್ ಹಂಚಿಕೊಂಡಿದ್ದಾರೆ. ಇದು ನಿನ್ನ ಮೊದಲ ಹೆಜ್ಜೆಗಳು, ನಾನು ತುಂಬಾ ಹೆಮ್ಮೆಯಿಂದ ಅದನ್ನು ರೆಕಾರ್ಡ್ ಮಾಡಿದ್ದೇನೆ. ನನ್ನ ಮಗನ ಕುರಿತಾಗಿ ನನಗೆ ಒಂದು ವಿಷಯ ಖಚಿತವಾಗಿ ತಿಳಿದಿದೆ. ಇವನು ಯಾವಾಗಲೂ ದೊಡ್ಡ ಹೆಜ್ಜೆ ಇಡುತ್ತಾನೆ ಮತ್ತು ತಲೆ ಎತ್ತಿಕೊಂಡು ನಡೆಯುತ್ತಾನೆ. ಕಾರಣ ಇವನು ನನ್ನ ಹುಲಿ ಎಂದು ಕರೀನಾ ಕಪೂರ್ ಬರೆದುಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅನೇಕ ಸೆಲೆಬ್ರಿಟಿಗಳು ಕೂಡ ಟೈಗರ್ ತೈಮೂರ್ ಅಲಿ ಖಾನ್‍ಗೆ ವಿಶ್ ಮಾಡುತ್ತಿದ್ದಾರೆ. ಇನ್ನೂ ಅವರ ಅಭಿಮಾನಿಗಳು ಕೂಡ ಈ ವೀಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ತೈಮೂರ್ ಅಲಿ ಖಾನ್‍ಗೆ ಶುಭಾಶಯಗಳ ಮಹಪೂರವೇಹರಿದು ಬರುತ್ತಿದೆ.

    ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರತ್ಯೇಕವಾಸದಲ್ಲಿದ್ದ ಕರೀನಾ ಕಪೂರ್ ಖಾನ್, ಇದೀಗ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇದರ ಬೆನ್ನಿಗೇ ಅವರು ತನ್ನ ಮುದ್ದು ಮಕ್ಕಳಾದ ತೈಮೂರ್ ಮತ್ತು ಜೇಯನ್ನು ಮಿಸ್ ಮಾಡಿಕೊಂಡ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದರು. ಇದನ್ನೂ ಓದಿ:  ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ

    ಕೊರೊನಾ ನಾನು ನಿನ್ನನ್ನು ದ್ವೇಷಿಸುತ್ತೇನೆ. ನಾನು ನನ್ನ ಮಕ್ಕಳನ್ನು ಮಿಸ್ ಮಾಡಿಕೊಳ್ಳಬೇಕಾಯಿತು ಎಂದು ಹೃದಯ ಒಡೆದು ಹೋಗಿರುವ ಎಮೋಜಿಯೊಂದಿಗೆ ಸಿಟ್ಟು ವ್ಯಕ್ತಪಡಿಸಿದ್ದರು. ಇದೀಗ ಕೊರೊನಾ ದಿಂದ ಚೇತರಿಸಿಕೊಂಡು ಮಗನ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

  • ಮಗನ ಫೇವರೆಟ್ ಫುಡ್ ರಿವೀಲ್ ಮಾಡಿದ ಬೇಬೋ

    ಮಗನ ಫೇವರೆಟ್ ಫುಡ್ ರಿವೀಲ್ ಮಾಡಿದ ಬೇಬೋ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಇದೀಗ ತಮ್ಮ ಇಬ್ಬರು ಮಕ್ಕಳ ಪೋಷಣೆ-ಪಾಲನೆಯಲ್ಲಿ ಬ್ಯುಸಿಯಗಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸದಾ ಆ್ಯಕ್ಟಿವಾಗಿರುತ್ತಾರೆ.

    ಸದ್ಯ ಭಾನುವಾರ ಕುಟುಂಬದೊಂದಿಗೆ ಒಟ್ಟಿಗೆ ಊಟ ಮಾಡಿರುವ ಕರೀನಾ ಕಪೂರ್ ಅದರ ಫೋಟೋವನ್ನು ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮ ಮಗ ತೈಮೂರ್ ಅಲಿ ಖಾನ್‍ಗೆ ಈ ಫುಡ್ ಎಂದರೆ ಬಹಳ ಇಷ್ಟ ಎಂದು ತಿಳಿಸಿದ್ದಾರೆ.

    ಕರೀನಾ ಕಪೂರ್ ಅವರು ಭಾನುವಾರ ಇಟಾಲಿಯನ್ ಪಾಸ್ತಾ ಸೇವಿಸಿದ್ದು, ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ತೈಮೂರ್ ಅಲಿ ಖಾನ್‍ಗೆ ಇದು ಬಹಳ ಇಷ್ಟ ಎಂದಿದ್ದಾರೆ. ಫೋಟೋದಲ್ಲಿ ಒಂದು ತಟ್ಟೆಯಲ್ಲಿ ಫ್ಯುಸಿಲಿ ಪಾಸ್ತಾ, ಹಸಿರು ಬೀನ್ಸ್, ಟೊಮ್ಯಾಟೊ ಮತ್ತು ಪೆಪ್ಪರ್ ಇರುವುದನ್ನು ಕಾಣಬಹುದಾಗಿದೆ. ಇದು ಹಸಿರಾಗಿದ್ದರೆ ಮಾತ್ರ ತೈಮೂರ್‍ ಗೆ ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

  • ಮದರ್ಸ್ ಡೇ ಪ್ರಯುಕ್ತ ಕಿರಿಯ ಮಗನ ಫೋಟೋ ರಿವೀಲ್ ಮಾಡಿದ ಕರೀನಾ ಕಪೂರ್

    ಮದರ್ಸ್ ಡೇ ಪ್ರಯುಕ್ತ ಕಿರಿಯ ಮಗನ ಫೋಟೋ ರಿವೀಲ್ ಮಾಡಿದ ಕರೀನಾ ಕಪೂರ್

    ಮುಂಬೈ: ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗುವನ್ನು ಫೆಬ್ರವರಿ 21ರಂದು ವೆಲ್‍ಕಮ್ ಮಾಡಿದ್ದರು. ಇಷ್ಟು ದಿನ ಅಭಿಮಾನಿಗಳು ಕೂಡ ಈ ಜೋಡಿಯ ಎರಡನೇ ಮಗುವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು. ಇದೀಗ ಮದರ್ಸ್ ಡೇ ದಿನದಂದು ಕರೀನಾ ಕಪೂರ್ ತಮ್ಮ ಎರಡನೇ ಮಗನ ಫೋಟೋವನ್ನು ರೀವಿಲ್ ಮಾಡಿದ್ದಾರೆ. ಫೋಟೋದಲ್ಲಿ ತೈಮೂರ್ ಅಲಿ ಖಾನ್ ತನ್ನ ಪುಟ್ಟ ಸಹೋದರನನ್ನು ಕೈನಲ್ಲಿ ಎತ್ತಿಕೊಂಡಿರುವುದನ್ನು ಕಾಣಬಹುದಾಗಿದೆ.

    ಕರೀನಾ ಕಪೂರ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ, ತೈಮೂರ್ ಹಾಗೂ ಕಿರಿಯ ಮಗನ ಮುದ್ದಾದ ಬ್ಲಾಕ್ ಆ್ಯಂಡ್ ವೈಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಇಂದು ಜಗತ್ತು ಭರವಸೆಯ ಮೇಲೆ ಚಲಿಸುತ್ತಿದೆ. ಇವರಿಬ್ಬರು ನನಗೆ ಭರವಸೆ ನೀಡಿದ್ದಾರೆ. ನಾಳೆಯ ಒಳ್ಳೆಯ ದಿನಗಳೊಂದಿಗೆ ಎಲ್ಲರಿಗೂ ಹ್ಯಾಪಿ ಮದರ್ಸ್ ಡೇ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ವಿಶ್ ಮಾಡಿದ್ದಾರೆ.

    ವಿಶ್ವದ ತಾಯಂದಿರ ದಿನದಂದು ಕರೀನಾ ಕಪೂರ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮುದ್ದಾದ ಮಕ್ಕಳ ಬ್ಲಾಕ್ ಆ್ಯಂಡ್ ವೈಟ್ ಫೋಟವನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ ಮಹಿಳೆಯರಿಗೆ ಬಲವಾದ ಸಂದೇಶವನ್ನು ಸಾರಿದ್ದಾರೆ.

  • ಮತ್ತೊಮ್ಮೆ ಗಂಡು ಮಗುವಿಗೆ ಜನ್ಮ ನೀಡಿದ ಬೇಬೊ

    ಮತ್ತೊಮ್ಮೆ ಗಂಡು ಮಗುವಿಗೆ ಜನ್ಮ ನೀಡಿದ ಬೇಬೊ

    ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮತ್ತೊಮ್ಮೆ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.

    ಕರೀನಾ ಕಪೂರ್ ಖಾನ್ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಬೇಬೊ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ 4:45ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

    ತಮ್ಮ ಎರಡನೆಯ ಮಗುವಿನ ಜನನದ ಮುಂಚೆಯೇ ಸೈಫ್ ಮತ್ತು ಕರೀನಾ ದೊಡ್ಡ ಮನೆಗೆ ಸ್ಥಳಾಂತರಗೊಂಡಿದ್ದರು. ಅದು ಅವರ ಹಿಂದಿನ ಮನೆಯ ಎದುರು ಇದೆ. ದಂಪತಿಗೆ ಈಗಾಗಲೇ 4 ವರ್ಷದ ತೈಮೂರ್ ಅಲಿ ಖಾನ್ ಎಂಬ ಮಗನಿದ್ದಾನೆ.

    ಆಗಸ್ಟ್ 2020ರಲ್ಲಿ ಕರೀನಾ ಬಾರಿ ಗರ್ಭಿಣಿಯಾಗಿರುವುದರ ಬಗ್ಗೆ ದಂಪತಿ ಘೋಷಿಸಿದ್ದರು. ಇದೀಗ ಕರೀನಾ ಗಂಡು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳು ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕರೀನಾ ದಂಪತೀಯ 2 ನೇಯ ಮುದ್ದು ಕಂದಮ್ಮನಿಗೆ ಆಶೀರ್ವಾದವನ್ನು ಬಿ-ಟೌನ್ ಮಂದಿ ತಿಳಿಸುತ್ತಿದ್ದಾರೆ.

    ಡಿಸೆಂಬರ್ 2016ರಲ್ಲಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ತೈಮೂರ್ ಅಲಿ ಖಾನ್ ಜನಿಸಿದ್ದಾನೆ. ಈ ಜೋಡಿಯು ಮೊದಲ ಬಾರಿಗೆ ತಶಾನ್ ಸಿನಿಮಾ ಸೆಟ್‍ನಲ್ಲಿ ಭೇಟಿಯಾಗಿತ್ತು. ನಂತರ 2012ರಲ್ಲಿ ವಿವಾಹವಾಗಿದ್ದಾರೆ.

  • ಮಗನಿಗೆ ಮಡಿಕೆ ಮಾಡುವುದನ್ನು ಹೇಳಿಕೊಟ್ಟ ಕರೀನಾ

    ಮಗನಿಗೆ ಮಡಿಕೆ ಮಾಡುವುದನ್ನು ಹೇಳಿಕೊಟ್ಟ ಕರೀನಾ

    ಮುಂಬೈ: ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿರುವ ಕರೀನಾ ಕಪೂರ್ ಇಂದು ಸುದ್ದಿಯಾಗಿರುವುದು ಅವರ ಮಗನ ವಿಚಾರಕ್ಕೆ. ಅವರ ಮಗನಿಗೆ ಮಡಿಕೆ ಮಾಡುವುದನ್ನು ಕಲಿಸಿಕೊಡುವ ಮೂಲಕವಾಗಿ ಸುದ್ದಿಯಾಗುತ್ತಿದ್ದಾರೆ.

     ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕರೀನಾ ಕಪೂರ್ ದಂಪತಿಗೆ ತಮ್ಮ ಮಗ ತೈಮೂರ್ ಅಲಿ ಖಾನ್ ಎಂದರೆ ಬಲು ಪ್ರೀತಿ. ಸೈಫ್ ಅಲಿಖಾನ್ ತಮ್ಮ ಮಗ ಹಾಗೂ ತುಂಬು ಗರ್ಭಿಣಿ ಕರೀನಾಳನ್ನು ಕರೆದುಕೊಂಡು ಪ್ರವಾಸಕ್ಕೆ ಹೋಗಿದ್ದಾರೆ. ಹಿಮಾಚಲ ಪ್ರದೇಶವನ್ನು ಸುತ್ತಾಡುತ್ತಿರುವ ಇವರು ತಮ್ಮ ಮಗನಿಗೆ ಮಡಿಕೆ ಮಾಡುವುದನ್ನು ಕಲಿಸಿಕೊಡುತ್ತಿದ್ದಾರೆ.

    ಕರೀನಾ ಕೈ ಕೆಸರು ಮಾಡಿಕೊಂಡು ಮಗನಿಗೆ ಮಡಿಕೆ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅಮ್ಮ ಹೇಳಿದಂತೆ ತೈಮೂರ್ ಕೂಡಾ ಮಣ್ಣನ್ನು ಹಿಡಿದು ಮಡಿಕೆ ಮಾಡುತ್ತಿದ್ದಾನೆ. ಕರೀನಾ ತೈಮೂರ್ ಕೈಯಲ್ಲಿ ಮಣ್ಣನ್ನು ಹಿಡಿದುಕೊಂಡು ಮಡಿಕೆ ಚಕ್ರದಲ್ಲಿ ಇಟ್ಟು ತಿರುಗಿಸುತ್ತಾ ಮಡಿಕೆ ಮಾಡುವುದನ್ನು ಹೇಳಿ ಕೊಟ್ಟಿದ್ದಾರೆ. ಕೊನೆಗೆ ಪುಟ್ಟದಾದ ಒಂದು ಮಡಿಕೆಯನ್ನು ಮಾಡಿದ್ದಾರೆ.

    ಸೆಲೆಬ್ರಿಟಿಗಳ ಮಕ್ಕಳು ಅಭಿಮಾನಿಗಳಿಗೆ ಸ್ಟಾರ್‍ಗಳು ಇದ್ದಂತೆ. ಸೈಫ್ ಅಲಿ ಖಾನ್ ಮಗ ತೈಮೂರ್ ಮಡಿಕೆ ಮಾಡುವುದನ್ನು ಅಮ್ಮನಿಂದ ಕಲಿಯುತ್ತಿರುವುದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಕರೀನಾ ಕಪೂರ್ ತಮ್ಮ ಎರಡನೇ ಮಗುವಿನ ಬಗ್ಗೆ ವಿಷಯ ಹಂಚಿಕೊಂಡ ನಂತರ, ಬೇಬೊ ಪಾಪರಾಜಿಗಳ ಹಾಟ್ ಫೇವರಿಟ್ ಆಗಿದ್ದಾರೆ. ಕರೀನಾ ಮನೆಯಿಂದ ಹೊರ ಬಂದರೆ ಸಾಕು  ಫೋಟೋ ಗ್ರಾಫರಗಳು ಹಿಂದೆ ಬೀಳುತ್ತಾರೆ. ಇದರಿಂದಾಗಿ ಕರೀನಾಳ ನಿತ್ಯದ ಅಪ್ಡೇಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

    ಕರೀನಾ ಕಪೂರ್ ಗರ್ಭಿಣಿಯಾಗಿದ್ದರೂ ಕರೀನಾ ಶೂಟಿಂಗ್ ಹಾಗೂ ಪ್ರವಾಸ ಅಂತ ಸಖತ್ ಬ್ಯುಸಿಯಾಗಿ ಆಗಿದ್ದಾರೆ. ಸಾಕಷ್ಟು ಸಿನಿಮಾ ಮತ್ತು ಜಾಹಿರಾತುಗಳು ಹಾಗೂ ಸಾಲು ಸಾಲುಫೋಟೋಶೂಟ್‍ಗಳಲ್ಲಿಯೂ ಅಷ್ಟೇ ಬ್ಯುಸಿಯಾಗಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಇರುವ ಕರೀನಾ ಕಪೂರ್ ಹಿಮಾಚಲ ಪ್ರದೇಶ ಪ್ರವಾಸದ ವಿಡಿಯೋ ಹಾಗೂ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕರೀನಾ ಹಾಗೂ ತೈಮೂರ್ ಅವರ ವಿಡಿಯೋಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಪುತ್ರನಿಗೆ ‘ನಮೋ ಅಗೇನ್’ ಟಿ-ಶರ್ಟ್ ತೊಡಸಿದ್ರಾ ಕರೀನಾ?

    ಪುತ್ರನಿಗೆ ‘ನಮೋ ಅಗೇನ್’ ಟಿ-ಶರ್ಟ್ ತೊಡಸಿದ್ರಾ ಕರೀನಾ?

    ಮುಂಬೈ: ಸೆಲಿಬ್ರೆಟಿಗಳ ಮೂಲಕ ಮತದಾರರನ್ನು ಸೆಳೆಯುವ ತಂತ್ರವನ್ನು ಅನೇಕ ಪಕ್ಷಗಳು ಮಾಡುತ್ತಿವೆ. ಇಂತಹ ಗಿಮಿಕ್‍ಗೆ ಸದ್ಯ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಸಿಕ್ಕಿಕೊಂಡಿದ್ದಾರೆ.

    ಹೌದು, ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ದಂಪತಿಯ ಪುತ್ರ ತೈಮೂರ್ ಅಲಿ ಖಾನ್ ‘ನಮೋ ಅಗೇನ್’ ಎಂದು ಬರೆದ ಟಿ-ಶರ್ಟ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

     

    ಕರೀನಾ ಕಪೂರ್ ಪುತ್ರ ತೈಮೂರ್ ಕೈ ಹಿಡಿದು ಹೋಗುತ್ತಿರುವ ಫೋಟೋ ಇದಾಗಿದೆ. ತೈಮೂರ್ ಟಿ-ಶರ್ಟ್ ಮೇಲೆ ಮೋದಿ ಮತ್ತೊಮ್ಮೆ ಎಂದು ಬರೆಯಲಾಗಿದೆ. ಆದರೆ ಅದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಫೋಟೋ ಎಡಿಟ್ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.

    ಕರೀನಾ ಕಪೂರ್ ಅವರು ಏಪ್ರಿಲ್ 29ರಂದು ಮತದಾನ ಮಾಡಲು ಪುತ್ರ ತೈಮೂರ್ ನನ್ನು ಕರೆತಂದಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಕೆಲ ಬಿಜೆಪಿ ಬೆಂಬಲಿಗರು ಈ ಫೋಟೋವನ್ನು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

    https://twitter.com/KareenaOnline/status/1122845658942181377

    ಈ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್, ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ರೀತಿಯ ತಂತ್ರದಿಂದ ಸೆಲಿಬ್ರೆಟಿಗಳ ಅಭಿಮಾನಿಗಳನ್ನು ಪಕ್ಷಕ್ಕೆ ಸೆಳೆಯುವ ತಂತ್ರ ನಡೆಯುತ್ತಿದೆ.

    ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕರೀನಾ ಕಪೂರ್ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ, ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಗುರಿ ಏನಿದ್ದರೂ ಸಿನಿಮಾ ರಂಗ ಮಾತ್ರ ಎಂದು ಹೇಳಿದ್ದರು.

  • ಶಾರೂಖ್ ಓದಿದ ಪತ್ರಕ್ಕೆ ಕರೀನಾ ಕೊಟ್ಟ ರಿಯಾಕ್ಷನ್ ಹೀಗಿತ್ತು-ಏನಿತ್ತು ಆ ಪತ್ರದಲ್ಲಿ?

    ಶಾರೂಖ್ ಓದಿದ ಪತ್ರಕ್ಕೆ ಕರೀನಾ ಕೊಟ್ಟ ರಿಯಾಕ್ಷನ್ ಹೀಗಿತ್ತು-ಏನಿತ್ತು ಆ ಪತ್ರದಲ್ಲಿ?

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಓದಿರುವ ಪತ್ರವೊಂದಕ್ಕೆ ಬೇಬೋ ಕರೀನಾ ಕಪೂರ್ ನೀಡಿರುವ ಎಕ್ಸ್ ಪ್ರೆಶನ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಕರೀನಾ ಕಪೂರ್ ಮತ್ತು ಶಾರೂಖ್ ಖಾನ್ ಮಧ್ಯೆ ಇಂತಹ ಫನ್ನಿ ಘಟನೆಯೊಂದು ನಡೆದಿದೆ. ಶಾರೂಖ್ ಕೈಯಲ್ಲಿ ಪತ್ರವೊಂದನ್ನು ಹಿಡಿದುಕೊಂಡು ಕರೀನಾ ಮುಂದೆ ಕುಳಿತಿದ್ದರು. ಈ ವೇಳೆ ಶಾರೂಖ್ ನಿಮಗಾಗಿ ಪತ್ರವೊಂದು ಬಂದಿದ್ದು, ಅದನ್ನು ನಾನು ಓದುತ್ತಿದ್ದೇನೆ ಅಂತಾ ಓದಲು ಆರಂಭಿಸಿದರು.

    ಚಿಕ್ಕ ಮಗುವಿನಂತೆ ತೊದಲುತ್ತಾ ಓದಿದಾಗ ಶಾರೂಖ್ ಹೇಳುವ ಯಾವ ಶಬ್ದಗಳು ಕರೀನಾರಿಗೆ ಸ್ಪಷ್ಟವಾಗಿ ಕೇಳಿಸಲಿಲ್ಲ. ಅರೇ ಇದೇನು ಓದುತ್ತಿದ್ದೀರಿ ಅಂತಾ ಕೇಳಿದಾಗ ನಿಮ್ಮ ಮಗ ತೈಮೂರ್ ಬರೆದಿರುವ ಪತ್ರ ಅಂತಾ ಹೇಳಿದರು.

    ಕರೀನಾ ನೀವು ಓದುತ್ತಿರೋದು ಅರ್ಥ ಆಗ್ತಿಲ್ಲ ಅಂತಾ ಅಂದಾಗ ಶಾರೂಖ್, ನನಗೂ ನಿಮ್ಮ ತರಹ ಫೋಟೋ ತೆಗೆದುಕೊಳ್ಳವುದು ಅಂದ್ರೆ ಬಲು ಇಷ್ಟ. ಆದ್ರೆ ಸೆಲ್ಫಿ ತೆಗೆದುಕೊಳ್ಳುವಾಗ ನಿಮ್ಮಂತೆ ಪೌಟ್ ಮಾಡಲು ಸರಿಯಾಗಿ ಬರಲ್ಲ. ನಿಮ್ಮ ಹಾಗೆ ಸುಂದರ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಎಲ್ಲಿಯಾದ್ರೂ ಹೊರಗೆ ಹೋದರು ನನ್ನ ಡ್ರೆಸಿಂಗ್ ಸ್ಟೈಲ್ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ನನಗೆ ಮಾರ್ಗದರ್ಶನ ನೀಡುತ್ತಿರುವ ನನ್ನ ತಾಯಿಗೆ ಧನ್ಯವಾದ ಎಂದು ತೈಮೂರ್ ಬರೆದಿದ್ದಾನೆ ಅಂತಾ ತಿಳಿಸಿದ್ರು.

    ಶಾರೂಕ್ ಪತ್ರ ಓದುತ್ತಿದ್ದಂತೆ ವೇರಿ ಫನ್ನಿ, ಈ ತೈಮೂರು ತುಂಬಾ ಫನ್ನಿಯಾಗಿದ್ದಾನೆ ಅಂತಾ ಅಂದ್ರು. ಏನ್ ಮಾಡೋದು ಆತ ನಿಮ್ಮ ಮುದ್ದಿನ ಮಗ, ನಾವೇನು ಹೇಳೋದಕ್ಕೆ ಆಗಲ್ಲ ಎಂದು ಶಾರೂಖ್ ಉತ್ತರಿಸಿದ್ರು.

    ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಯ ಮುದ್ದಿನ ಮಗ ತೈಮೂರ್ ಅಲಿ ಖಾನ್ ಯಾವ ಸೆಲಬ್ರಿಟಿಗೂ ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತೈಮೂರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ತಾಯಿಯಾದ ಬಳಿಕ ಕರೀನಾ `ವೀರೆ ದಿ ವೆಡ್ಡಿಂಗ್’ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ಪ್ರದರ್ಶನಗೊಳ್ಳುತ್ತಿದೆ.

    https://www.instagram.com/p/Bjz4p4qhJSi/?taken-by=srkking1