Tag: ತೇಜಸ್ವಿನಿ ಅನಂತ್ ಕುಮಾರ್

  • ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೇಜಸ್ವಿನಿ ಅನಂತ್‍ಕುಮಾರ್ ಹೇಳಿದ್ದೇನು..?

    ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೇಜಸ್ವಿನಿ ಅನಂತ್‍ಕುಮಾರ್ ಹೇಳಿದ್ದೇನು..?

    ಮೈಸೂರು: ಕೆಲ ದಿನಗಳಿಂದ ಕೇಂದ್ರ ಸಚಿವರಾಗಿದ್ದ ದಿ. ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ (Tejaswini Ananth Kumar) ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಇದಗ ಸ್ವತಃ ತೇಜಸ್ವಿನಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿದ್ದೇನೆ (BJP). ಅನಂತ್ ಕುಮಾರ್ ಕಟ್ಟಿ ಬೆಳೆಸಿದ ಪಕ್ಷ ಬಿಜೆಪಿ. ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷದ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

    ಪಕ್ಷದ ಜೊತೆ ಸದಾ ಇದ್ದವರು. I AM WEDDED TO THE PARTY. ಸೈದ್ಧಾಂತಿಕವಾಗಿ ನಾನು ಬಿಜೆಪಿ ಸಿದ್ಧಾಂತ ಜೊತೆ ಬದ್ಧವಾಗಿದ್ದೇನೆ. ಅನಂತ್ ಕುಮಾರ್ (Ananth Kumar) ಅವರ ಅನುಪಸ್ಥಿತಿಯಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಇದು. ಸೂಕ್ತವಾದ ವಿರೋಧ ಪಕ್ಷದ ನಾಯಕ ಆಯ್ಕೆಯಾಗುತ್ತಾರೆ, ಕಾದು ನೋಡಿ ಎಂದು ತಿಳಿಸಿದರು. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    ಇತ್ತೀಚಿನ ದಿನಗಳಲ್ಲಿ ಯಾರೋ ಏನೋ ಮಾತನಾಡುತ್ತಾರೆ. ಸೋಷಿಯಲ್ ಮೀಡಿಯಾಗಳ ಮೂಲಕ ನಾವು ಹೇಳಿದ ವಿಷಯ ಒಂದಾದ್ರೆ, ಅದು ಗುರಿ ತಲುಪುವ ವೇಳೆಗೆ ಬೇರೆ ವಿಷಯ ಬದಲಾಗಿರುತ್ತೆ. ನಾನು ಪಕ್ಷದ ಜೊತೆ ಇದ್ದೇನೆ, ಪಕ್ಷನು ಕೂಡ ನನ್ನ ಜೊತೆ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ಊಹಾಪೋಹಕ್ಕೆ ತೆರೆಎಳೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಔಷಧ ಕ್ಷೇತ್ರದ ಕೊಡುಗೆ ಅಪಾರ: ತೇಜಸ್ವಿನಿ ಅನಂತಕುಮಾರ್

    ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಔಷಧ ಕ್ಷೇತ್ರದ ಕೊಡುಗೆ ಅಪಾರ: ತೇಜಸ್ವಿನಿ ಅನಂತಕುಮಾರ್

    – ದೇಶ ಮೊದಲು ವೆಬಿನಾರ್ ಸರಣಿಯ 6 ಕಂತು
    – ಔಷಧ ವಲಯ ಎದುರಿಸುತ್ತಿರುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಚರ್ಚೆ

    ಬೆಂಗಳೂರು: ವಿಶ್ವದ ಲಸಿಕೆ ಉತ್ಪಾದನೆಯ ಶೇ.60 ರಷ್ಟು ಹಾಗೂ ಇನ್ನಿತರ ಔಷಧಗಳ ಉತ್ಪಾದನೆಯಲ್ಲಿ ಶೇ. 49 ರಷ್ಟು ಕೊಡುಗೆಯನ್ನು ಹೊಂದಿರುವ ಭಾರತದ ಔಷಧ ಕ್ಷೇತ್ರ ಕೊರೊನಾ ಪಿಡುಗಿನ ವಿರುದ್ಧದ ವಿಶ್ವದ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ.

    ಭಾರತೀಯ ಔಷಧ ವಲಯ ಎದುರಿಸುತ್ತಿರುವ ಸವಾಲುಗಳು ಹಾಗೂ ಅವಕಾಶಗಳ ಬಗ್ಗೆ ಅನಂತಕುಮಾರ್ ಪ್ರತಿಷ್ಠಾನದ `ದೇಶ ಮೊದಲು’ ವೆಬಿನಾರ್ ಸರಣಿಯ 6 ಕಂತಿನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಔಷಧ ಉತ್ಪಾದನೆ ಹಾಗೂ ಸಂಶೋಧನೆಯ ಕ್ಷೇತ್ರಕ್ಕೆ ಬಹಳ ಅವಕಾಶಗಳು ಇವೆ. ಭಾರತ ದೇಶ ವಿಶ್ವದ ಔಷಧಾಲಯ ಎಂದೇ ಹೆಸರುವಾಸಿ. ಕೊರೊನಾ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಕೊರೊನಾ ಮೂರನೇ ಅಲೆಯ ಬಗ್ಗೆ ಸಿಎಂ ಆತಂಕ

    ರೆಡ್ಡಿ ಲ್ಯಾಬೋರೇಟರಿ ಸಿಇಓ (ಏಪಿಐ ಮತ್ತು ಸರ್ವೀಸಸ್) ದೀಪಕ್ ಸಪ್ರ ಮಾತನಾಡಿ, ಎಪಿಐ ಹಾಗೂ ಔಷಧ ಪ್ಯಾಕೇಜಿಂಗ್ ನಲ್ಲಿ ಹಲವಾರು ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ. ಆದರೆ ಅದನ್ನು ಹೊರತಪಡಿಸಿ ದೇಶ ಔಷಧ ಹಾಗೂ ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಹೊಸ ಔಷಧವನ್ನು ಸಿದ್ದಪಡಿಸುವಂತಹ ಆರ್ಥಿಕ ಸಾಮರ್ಥ್ಯವನ್ನು ನಮ್ಮ ದೇಶದ ಬಹಳಷ್ಟು ಕಂಪನಿಗಳು ಹೊಂದಿಲ್ಲ. ಆದರೆ ಸಂಶೋಧನೆ ಆಗಿರುವ ಔಷಧಗಳ ಉತ್ಪಾದನೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದೇವೆ. ಜೆನೆರಿಕ್ ಔಷಧಗಳು, ಬ್ರಾಂಡೆಡ್ ಔಷಧಗಳಷ್ಟೇ ಪರಿಣಾಮಕಾರಿಯಾಗಿವೆ ಎಂದು ಹೇಳಿದರು.

     

    ಐಕ್ಯೂಜಿಇಎನ್-ಎಕ್ಸ್ ಫಾರ್ಮಾ ಪ್ರೈ ಲಿಮಿಟೆಡ್‍ನ ಅಧ್ಯಕ್ಷರು ಹಾಗೂ ಸಿಇಓ ಮಂದಾರ ಕೊಡಗುಲೆ ಮಾತನಾಡಿ, ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ದೊರೆಯುವ ಔಷಧ ಗುಣಮಟ್ಟ ಹಾಗೂ ಅದಕ್ಕಾಗಿ ಅನುಸರಿಸಲಾಗುವಂತಹ ಮಾನದಂಡಗಳು ನಮ್ಮ ದೇಶದಲ್ಲಿಯೂ ಅನುಸರಿಸಬೇಕು. ಹೊಸ ಔಷಧ ಸಂಶೋಧನೆ ಗೆ ಸುಮಾರು 10 ರಿಂದ 12 ವರ್ಷಗಳ ಸಮಯ ಬೇಕು, ಅದಕ್ಕೆ ಬೇಕಾದ ಹಣಕಾಸು ಬಹಳ. ಈ ನಿಟ್ಟಿನಲ್ಲಿ ಸರ್ಕಾರಗಳು ಹಾಗೂ ಇನ್ವೆಸ್ಟ್ ಮೆಂಟ್ ಸಂಸ್ಥೆಗಳು ಸಹಕಾರ ನೀಡಬೇಕು. ಔಷಧ ಉತ್ಪಾದನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದರಿಂದ ಔಷಧದ ಬೆಲೆ ಹೆಚ್ಚಾಗುತ್ತದೆ ಎನ್ನುವುದು ಸರಿಯಾದ ತರ್ಕವಲ್ಲ. ದೇಶದಲ್ಲಿ ಬಳಸಲಾಗುತ್ತಿರುವ ಬ್ರಾಂಡೆಡ್ ಔಷಧಗಳ ಬೆಲೆ ಅವುಗಳ ಬ್ರಾಂಡ್‍ಗಳ ಮೇಲೆ ವ್ಯಯ ಮಾಡುವ ಹಣದಿಂದ ಹೆಚ್ಚಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಪಿ.ವಿ ಕೃಷ್ಣ ಭಟ್, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ್ ಓಕ್, ಐಶ್ವರ್ಯ ಅನಂತಕುಮಾರ್, ಡಾ ಸಮೀರ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 400 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

  • ಮನೆಗೆ ಬಂದಾಗ ಆಂಧ್ರ ಊಟ ಇಷ್ಟಪಡ್ತಿದ್ದರು- ಅನಂತ್‍ಕುಮಾರ್ ನೆನಪಿಸಿಕೊಂಡ ವೆಂಕಯ್ಯ ನಾಯ್ಡು

    ಮನೆಗೆ ಬಂದಾಗ ಆಂಧ್ರ ಊಟ ಇಷ್ಟಪಡ್ತಿದ್ದರು- ಅನಂತ್‍ಕುಮಾರ್ ನೆನಪಿಸಿಕೊಂಡ ವೆಂಕಯ್ಯ ನಾಯ್ಡು

    – ಅದಮ್ಯ ಚೇತನ ವೀಕ್ಷಿಸಿದ ಉಪರಾಷ್ಟ್ರಪತಿ
    – ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಗಮನಹರಿಸಿ

    ಬೆಂಗಳೂರು: ಅಗತ್ಯವಿರುವ ಮಕ್ಕಳಿಗೆ ಆಹಾರ ನೀಡುತ್ತಿರುವ ಅದಮ್ಯ ಚೇತನಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ದೆಹಲಿಗೆ ಹೋದಾಗ ದಿವಂಗತ ಅನಂತ್ ಕುಮಾರ್ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅಲ್ಲಿ ಹಲವಾರು ಸವಿಯಾದ ಸಿಹಿ ತಿಂಡಿಗಳನ್ನು ಸವಿದಿದ್ದೇನೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.

    ನಗರದಲ್ಲಿ ಇಂದು ಅದಮ್ಯ ಚೇತನದ ಪರಿಸರ ಸ್ನೇಹಿ ಅಡುಗೆ ಮನೆಯನ್ನ ವೀಕ್ಷಿಸಿದ ಉಪರಾಷ್ಟ್ರಪತಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದರು. ಅಲ್ಲದೆ ಅದಮ್ಯ ಚೇತನದ ಬಗ್ಗೆ ಖುಷಿ ವ್ಯಕ್ತಪಡಿಸಿದರು.

    ಅದಮ್ಯ ಚೇತನಕ್ಕೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ. ನಾನು ದೆಹಲಿಗೆ ಹೋದಾಗ ಅನಂತಕುಮಾರ್ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ. ಅಲ್ಲಿ ನಾನು ಹಲವಾರು ಸವಿಯಾದ ಸಿಹಿ ತಿಂಡಿಗಳನ್ನು ಸವಿದಿದ್ದೇನೆ. ನಮ್ಮ ಮನೆಗೆ ಬಂದಾಗ ಆಂಧ್ರ ಊಟವನ್ನು ಬಹಳ ಇಷ್ಟಪಟ್ಟು ಅನಂತಕುಮಾರ್ ಸವಿಯುತ್ತಿದ್ದರು. ಇಲ್ಲಿ ಭೇಟಿ ನೀಡಿದಾಗ ನನಗೆ ಇಲ್ಲಿನ ಕೆಲಸಗಾರರ ಶ್ರದ್ಧೆ ಬಹಳ ಇಷ್ಟ ಆಯಿತು. ಶ್ರದ್ಧೆಯಿಂದ ತಯಾರಿಸುವ ಆಹಾರದ ಖುಷಿಯನ್ನು ಇಲ್ಲಿ ಕಂಡಿದ್ದೇನೆ. ಶೇ.38.7ರಷ್ಟು ಮಕ್ಕಳು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನಾವು ತಿನ್ನುತ್ತಿರುವ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಇದೆ ಎಂದರು.

    ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಇದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಸಮಾಜ ಇದರ ಬಗ್ಗೆ ಗಮನ ನೀಡಿ, ಮಕ್ಕಳ ಆಹಾರ ಪರಿಸ್ಥಿತಿಯ ಬಗ್ಗೆ ಗಮನ ನೀಡಬೇಕು. ಮಕ್ಕಳ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಸೇವೆ ಮಾಡಬೇಕು ಎಂದರೆ ಅದಮ್ಯ ಚೇತನದಂತಹ ಸಂಸ್ಥೆಗಳ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ರು.

    ಯಾವುದೇ ಲಾಭದ ಆಸೆ ಇಲ್ಲದೆ ನೀಡುತ್ತಿರುವ ಈ ಸೇವೆ ಶ್ಲಾಘನೀಯ. ಅದಮ್ಯ ಚೇತನ ಸಂಸ್ಥೆಯಿಂದ ಒಂದು ಗುರಿಗಾಗಿ ಕೆಲಸ ಮಾಡುತ್ತಿರುವುದು ಸಂತಸದಾಯಕವಾಗಿದೆ. ಮುಂದಿನ ಪೀಳಿಗೆಯ ಭವಿಷ್ಯ ಹಾಳಾದರೆ ನಮ್ಮ ಅರ್ಥಿಕತೆಗೂ ಹೊಡೆತ ಬೀಳುತ್ತದೆ. ಅಪೌಷ್ಠಿಕತೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಇಂತಹ ಸಂಧರ್ಭದಲ್ಲಿ ಆದಮ್ಯ ಚೇತನ ಸಂಸ್ಥೆ ನೀಡುತ್ತಿರುವ ಕೊಡುಗೆ ಅಪಾರವಾದದ್ದು. ಶೂನ್ಯ ತ್ಯಾಜ್ಯ ಅಡುಗೆ ಮನೆ/ಹಸಿರು ಅಡುಗೆ ಮನೆ ಮಾಡಿರುವುದು ಸಣ್ಣ ಸಾಧನೆ ಅಲ್ಲ. ಅದಮ್ಯ ಚೇತನ ಇನ್ನೂ ಹಲವು ಕೆಲಸಗಳನ್ನ ಮಾಡುವಂತಾಗಲಿ ಎಂದು ತಿಳಿಸಿದರು.

    ಅನಂತ್ ಕುಮಾರ್, ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಸ್ನೇಹಿತರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ ಎಂದು ಇಬ್ಬರು ಅಗಲಿದ ನಾಯಕರನ್ನು ವೆಂಕಯ್ಯ ನಾಯ್ಡು ಇದೇ ವೇಳೆ ನೆನಪು ಮಾಡಿಕೊಂಡರು.

    ಬಳಿಕ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ವೆಂಕಯ್ಯನಾಯ್ಡು ಅವರು ಅನಂತ್ ಕುಮಾರ್ ಅವರ ಒಡನಾಡಿಗಳು. ಬಹುಕಾಲದಿಂದ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದವರು. ಸಂಪುಟದ ಸಹೋದ್ಯೋಗಿಗಳಾಗಿ ಕೆಲಸ ಮಾಡಿದವರು. ಅದಮ್ಯ ಚೇತನದ ಕಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಶೂನ್ಯ ತ್ಯಾಜ್ಯ, ಹಸಿರು ಅಡುಗೆಮನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವ ಕಾರ್ಯ ಇದಾಗಿದೆ. ಇಂತಹ ಸತ್ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು. ವೆಂಕಯ್ಯನಾಯ್ಡು ಆಗಮನ ನಮಗೆ ಖುಷಿ ತಂದಿದೆ ಎಂದರು.

  • ಬಿಜೆಪಿ, ಆರ್‌ಎಸ್‌ಎಸ್‌ ಕನಸು ನನಸಾಗಿದೆ: ತೇಜಸ್ವಿನಿ ಅನಂತ್ ಕುಮಾರ್

    ಬಿಜೆಪಿ, ಆರ್‌ಎಸ್‌ಎಸ್‌ ಕನಸು ನನಸಾಗಿದೆ: ತೇಜಸ್ವಿನಿ ಅನಂತ್ ಕುಮಾರ್

    ಬೆಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕನಸು ನನಸಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.

    ಅಯೋಧ್ಯೆ ತೀರ್ಪು ವಿಚಾರವಾಗಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ಅಂದು ಎಲ್.ಕೆ. ಅಡ್ವಾಣೆ ನೇತೃತ್ವದಲ್ಲಿ ರಾಮ ರಥಯಾತ್ರೆ ಮಾಡಿದ್ದು ಇಂದು ಸಾರ್ಥಕವಾಯ್ತು ಎಂದು ಹೇಳಿದರು.

    ಅಡ್ವಾಣಿ ಜೊತೆ ಅನಂತ್ ಕುಮಾರ್ ಕೂಡ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರದ ಕನಸು ನನಸಾಗಿದೆ. ಆದ್ದರಿಂದ ಅಯೋಧ್ಯೆ ತೀರ್ಪು ಸ್ವಾಗತಾರ್ಹ ಎಂದು ಹೇಳಿದರು. ಉಪ ಚುನಾವಣೆಯ ವೇಳೆ ನಾನು ರಾಜಕೀಯದ ಬಗ್ಗೆ ಮಾತನಾಡಲಾರೆ. ಉಪ ಚುನಾವಣೆ ಸ್ಪರ್ಧೆ ಬಗ್ಗೆಯೂ ನಾನು ಏನು ಉತ್ತರಿಸಲಾರೆ ಎಂದು ತಿಳಿಸಿದರು.

  • ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸುತ್ತೆ – ತೇಜಸ್ವಿನಿ ಅನಂತ್‍ಕುಮಾರ್

    ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸುತ್ತೆ – ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು: ನಿಮ್ಮ ಒಂದು ಮತ ದೇಶದ ಭವಿಷ್ಯವನ್ನೇ ಬದಲಾವಣೆ ಮಾಡುತ್ತಿದೆ. ಹೀಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.

    ನಗರದ ಬಸವನಗುಡಿಯಲ್ಲಿರುವ ವಾಸವಿ ವಿದ್ಯಾನಿಕೇತನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಾನು ಹಾಗೂ ಕುಟುಂಬದ ಸದಸ್ಯರೆಲ್ಲರೂ ಅನಂತ್ ಕುಮಾರ್ ಜೊತೆಯೇ ಬಂದು ಮತದಾನ ಮಾಡುತ್ತಿದ್ದೆವು. ಆ ಒಂದು ಸಂದರ್ಭ ಇದೀಗ ನನಗೆ ನೆನಪಾಗುತ್ತಿದೆ ಎಂದು ತನ್ನ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.

    ದೇಶದ ಸುಭದ್ರತೆ ಹಾಗೂ ಅಭಿವೃದ್ಧಿಗೆ ಇಂದು ನಾವು ಮತ ಹಾಕಲೇ ಬೇಕು. ದೇಶಕ್ಕಾಗಿ ಕೆಲಸ ಮಾಡಿರುವಂತಹ ಹಿರಿಯರ ಕುಟುಂಬದ ಸದಸ್ಯರಾಗಿ ದೇಶದ ಹಿತಕ್ಕಾಗಿಯೇ ಇಂದು ನಾವು ಮತ ನೀಡಿದ್ದೇವೆ ಎಂದರು.

    ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ವಿಶೇಷವಾಗಿ ಯುವಕ, ಯುವತಿ ಹಾಗೂ ಹಿರಿಯರ ಜವಾಬ್ದಾರಿಯಾಗಿದೆ. ನಮಗೆ ಇದು 5 ವರ್ಷಕ್ಕೊಮ್ಮೆ ಸಿಗುವ ಅವಕಾಶವಾಗಿದೆ. ನಮ್ಮ ಒಂದು ಮತಕ್ಕೆ ದೇಶದ ಭವಿಷ್ಯವನ್ನೇ ಬದಲಾವಣೆ ಮಾಡುವ ಶಕ್ತಿಯಿದೆ. ಆ ದೃಷ್ಟಿಯಿಂದ ಮತದಾನ ಮಾಡೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಇದನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಬಳಸಿಕೊಳ್ಳಬೇಕು ಎಂದು ತಿಳಿಸಿದ್ರು.

  • ಬಿಎಲ್ ಸಂತೋಷ್ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ: ಬಿಎಸ್‍ವೈ

    ಬಿಎಲ್ ಸಂತೋಷ್ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ: ಬಿಎಸ್‍ವೈ

    ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ನೀಡಿದ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಬಿಎಲ್ ಸಂತೋಷ್ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಜೀನ್ಸ್, ಡಿಎನ್‍ಎ ನೋಡಿ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಮಾಡುವುದಿಲ್ಲ ಎಂದು ಉತ್ತರಿಸಿದ್ದರು. ಸಂತೋಷ್ ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮಗಳು ಕೇಳಿದ್ದಕ್ಕೆ, ನಾನು ಆ ಬಗ್ಗೆ ಯಾವುದೇ ರಿಯಾಕ್ಟ್ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

    ತೇಜಸ್ವಿನಿ ಅನಂತಕುಮಾರ್ ಅವರ ಒಂದೇ ಹೆಸರನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಅನಂತ್ ಕುಮಾರ್ ಅವರ ಸೇವೆಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಯಾರೇ ದೆಹಲಿಗೆ ಹೋದರೂ ಅವರ ಕೆಲಸವನ್ನು ಅವರು ಮಾಡಿ ಕೊಡುತ್ತಿದ್ದರು. ಅನಿವಾರ್ಯ ಕಾರಣಕ್ಕೆ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಲಾಗಿದೆ. ತೇಜಸ್ವಿ ಸೂರ್ಯ ಅವರನ್ನು ಸಹ ದೊಡ್ಡ ಅಂತರದಲ್ಲಿ ಗೆಲ್ಲಿಸಲಾಗುವುದು ಎಂದು ಹೇಳಿದರು.

    ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಚುನಾವಣೆಯಲ್ಲಿ ಎಲ್ಲರನ್ನು ಉಪಯೋಗಿಸಿಕೊಂಡು ಗೆಲುವು ಸಾಧಿಸಲಾಗುವುದು ಎಂದು ತಿಳಿಸಿದರು.

    ನಮ್ಮ ಪಕ್ಷ ರಾಜ್ಯದಲ್ಲಿ 22 ಸ್ಥಾನಗಳನ್ನು ಗೆದ್ದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ. ಈಗಲೇ ಕಾಂಗ್ರೆಸ್, ಜೆಡಿಎಸ್‍ನಲ್ಲಿ ಬಡಿದಾಟ ಆರಂಭವಾಗಿದೆ. ಬಿಜೆಪಿ ಸರ್ಕಾರ ರಚಿಸುವುದು ನಿಶ್ಚಿತ ಎಂದು ಬಿಎಸ್‍ವೈ ವಿಶ್ವಾಸ ವ್ಯಕ್ತಪಡಿಸಿದರು.

  • ಬಿಜೆಪಿ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್‍ಕುಮಾರ್ ಆಯ್ಕೆ

    ಬಿಜೆಪಿ ಉಪಾಧ್ಯಕ್ಷೆಯಾಗಿ ತೇಜಸ್ವಿನಿ ಅನಂತ್‍ಕುಮಾರ್ ಆಯ್ಕೆ

    ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನವನ್ನು ನೀಡುವ ಮೂಲಕ ಭಿನ್ನಮತ ಶಮನಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಗಿದೆ.

    ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ತೇಜಸ್ವಿನಿ ಅನಂತ್ ಕುಮಾರ್ ಅವರು ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲು ನನಗೆ ಬಹಳ ಸಂತೋಷವಾಗುತ್ತದೆ. ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಕೈ ತಪ್ಪಿದ ಟಿಕೆಟ್:
    ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರು ಮುಂದಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದು, ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಗೆ ದಕ್ಕಿತ್ತು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತೇಜಸ್ವಿನಿ ಅನಂತ್ ಕುಮಾರ್, ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಾವು ನಿಂತಿದ್ದೇವೆ. ದೇಶ ಮೊದಲು, ಪಕ್ಷ ನಂತರ ಹಾಗೂ ನಮ್ಮ ಸ್ವಂತ ಹಿತಾಶಕ್ತಿಗಳು ಕೊನೆಯಲ್ಲಿ ಎಂದು ನಾನು ಮೊದಲಿನಿಂದಲೂ ನಮ್ಮ ಕಾರ್ಯಕರ್ತರ ಬಳಿ ಹೇಳಿಕೊಂಡು ಬಂದಿದ್ದೇನೆ. ನಾವು ಮದುವೆಯಾದಗಿನಿಂದ ಪಕ್ಷ ಕಟ್ಟುವ ಕೆಲಸದಲ್ಲಿ ನಿರತಗಳಾಗಿದ್ದೇನೆ. ಒಂದೊಂದು ಸಲ ನಮಗೆ ಅಸಮಾಧಾನ ಆಗಿರುತ್ತದೆ. ಆದರೆ ಈಗ ನಮ್ಮ ಪ್ರಬುದ್ಧತೆಯನ್ನು ತೋರಿಸುವ ಸಮಯ ಬಂದಿದೆ. ನಾವು ಅಂದುಕೊಂಡಿದ್ದು ಆಗಿಲ್ಲ ಎಂದಾಗ ಸಹಜವಾಗಿ ಎಲ್ಲರಲ್ಲೂ ಯಾಕೆ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಆದರೆ ಅದಕ್ಕಿಂತ ಪಕ್ಷದ ಮುಖಂಡರ ತೀರ್ಮಾನವೇ ದೊಡ್ಡದಾಗಿದೆ. ಹೀಗಾಗಿ ಮೊದಲು ದೇಶ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ. ನಮ್ಮ ಕಾರ್ಯಕರ್ತರು ಕೂಡ ಈ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ಹೇಳಿದ್ದರು.

    ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಆಯ್ಕೆಯಾಗಬೇಕು. ಹೀಗಾಗಿ ಬೇರೆ ಬೇರೆ ಯೋಚನೆಗಳನ್ನು ಬಿಟ್ಟು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಯಾರ ವಿರುದ್ಧವೂ ಘೋಷಣೆ ಕೂಗುವುದು ಬೇಡ. ಅಳುವುದಾಗಲಿ, ಬೇಸರವಾಗಲಿ ಅದನ್ನು ಸಾರ್ವಜನಿಕವಾಗಿ ತೋರಿಸುವುದು ನಮ್ಮ ಪಕ್ಷದ ಪದ್ಧತಿಯಲ್ಲ. ನಮ್ಮ ಪಕ್ಷದ ನಾಯಕರು, ಮುಖಂಡರು ಇದೇ ಸಿದ್ಧಾಂತವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದಿದ್ದರು.

  • ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ- ಬಿಎಸ್‍ವೈ ಸ್ಪಷ್ಟನೆ

    ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ- ಬಿಎಸ್‍ವೈ ಸ್ಪಷ್ಟನೆ

    ಬೆಂಗಳೂರು: ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದೆ. ಆದರೆ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿಯವರಿಗೆ ಟಿಕೆಟ್ ಕೈ ತಪ್ಪಿದ ಕುರಿತು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ದೆಹಲಿಯವರು ಟಿಕೆಟ್ ಫೈನಲ್ ಮಾಡಿದ್ದು, ಅವರ ತೀರ್ಮಾನವೇ ಅಂತಿಮ ಅಂದ್ರು.

    ನಾಳೆ ಶಿವಮೊಗ್ಗದಲ್ಲಿ ಪುತ್ರ ಬಿ.ಎಸ್ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಶಿವಮೊಗ್ಗಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ತೇಜಸ್ವಿನಿ ಅವರು ಬರಲು ಒಪ್ಪಿಕೊಂಡಿದ್ದಾರೆ. ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಕೊಟ್ಟಿರುವುದನ್ನು ಈಗಾಗಲೇ ಎಲ್ಲರೂ ಸ್ವಾಗತಿಸಿದ್ದಾರೆ. ಹಾಗೆಯೇ ತೇಜಸ್ವಿನಿ ಅನಂತ್ ಕುಮಾರ್ ಕೂಡ ತಾನು ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಇಲ್ಲಿ ಯಾವುದೇ ಗೊಂದಲವಿಲ್ಲ. ಒಟ್ಟಿನಲ್ಲಿ ತೇಜಸ್ವಿ ಸೂರ್ಯ ಅವರ ಗೆಲುವು ಖಚಿತ ಎಂದು ಹೇಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಹೆಸರನ್ನು ಬಿಜೆಪಿ ನಾಯಕರು ಶಿಫಾರಸು ಮಾಡಿದ್ದಾರೆ. ಆದ್ರೆ ನಾಮಪತ್ರದ ಕೊನೆಯ ದಿನ ಅಂದರೆ ಸೋಮವಾರ ಮಧ್ಯರಾತ್ರಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು.

  • ತೇಜಸ್ವಿ ಸೂರ್ಯಗೆ ಮನೆಯಲ್ಲೇ ತೇಜಸ್ವಿನಿ ಅನಂತ್‍ಕುಮಾರ್ ಕ್ಲಾಸ್!

    ತೇಜಸ್ವಿ ಸೂರ್ಯಗೆ ಮನೆಯಲ್ಲೇ ತೇಜಸ್ವಿನಿ ಅನಂತ್‍ಕುಮಾರ್ ಕ್ಲಾಸ್!

    ಬೆಂಗಳೂರು: ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಭಾಗದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ದಿವಂಗತ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮನೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಅಭ್ಯರ್ಥಿ ಘೋಷಣೆಯಾದ ಬಳಿಕ ಇಂದು ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅನಂತ್ ಕುಮಾರ್ ಮನೆಗೆ ಆಶೀರ್ವಾದ ಪಡೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ತೇಜಸ್ವಿ ಸೂರ್ಯಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ತೇಜಸ್ವಿನಿ ಹೇಳಿದ್ದು ಏನು?
    ಮಾತುಕತೆಯ ಬಳಿಕ ತೇಜಸ್ವಿ ಸೂರ್ಯ ಅವರು ಮನೆಯಲ್ಲೇ ಪ್ರತಿಕ್ರಿಯೆ ನೀಡಲು ಮುಂದಾಗಿದ್ದರು. ಇದರಿಂದ ಸ್ವಲ್ಪ ಗರಂ ಆದ ತೇಜಸ್ವಿನಿ, ಪ್ರಬುದ್ಧರಾಗಿ ವರ್ತಿಸಿ. ಇಲ್ಲಿ ಮಾತಾಡೋದು ಬೇಡ. ಕ್ಯಾಮರಾ ಮುಂದೆ ಬೇಡ, ಏನ್ ಹೇಳ್ಬೇಕು ಅದನ್ನ ನಿಮಗೆ ಹೇಳ್ತೇನೆ ಎಂದು ಹೇಳಿದರು.

    ಇದು ಒಬ್ಬರಿಗೊಬ್ಬರು ಚರ್ಚೆ ಮಾಡುವ ಸ್ಥಳ ಅಲ್ಲ. ಇದರಿಂದ ನೀವೇನೂ ಸಾಧನೆ ಮಾಡಲು ಆಗಲ್ಲ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಪ್ರಬುದ್ಧತೆಯನ್ನು ಎಲ್ಲರ ಮುಂದೆ ತೋರಿಸಿ. ನಾವು ಒಂದು ಸಿದ್ಧಾಂತದ ಪರವಾಗಿದ್ದೇವೆ. ಹಾಗೆಯೇ ನರೇಂದ್ರ ಮೋದಿ ಮತ್ತು ದೇಶದ ಪರವಾಗಿದ್ದೇವೆ. ಸಪೂರ್ಣವಾಗಿ ಪ್ರಚಾರಕ್ಕೆ ಬೆಂಬಲಿಸುವುದಾಗಿ ಹೇಳಿದ್ರು.

     ಇದೇ ವೇಳೆ ತೇಜಸ್ವಿ ಸೂರ್ಯ ಅವರು ಮನೆಯೊಳಗಡೆಯೇ ಭೋಲೋ ಭಾರತ್ ಮಾತಾಕಿ, ಅನಂತ್ ಕುಮಾರ್ ಜೀ ಕಿ ಜೈ ಅಂದ್ರು. ಈ ಸಂದರ್ಭದಲ್ಲಿ ಅನಂತ್ ಕುಮಾರ್ ಅಭಿಮಾನಿಗಳು ತೇಜಸ್ವಿ ಸೂರ್ಯ ಅವರಿಗೆ ದನಿಯಾಗಿ ಜೈಕಾರ ಕೂಗಿದ್ರು. ಆದರೆ ಅದರಲ್ಲೊಬ್ಬ ತೇಜಸ್ವಿ ಸೂರ್ಯ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ರು.

  • ಪ್ರಶ್ನೆ ಸರಿಯಿದೆ, ಆದ್ರೆ ವಿಳಾಸ ತಪ್ಪಿದೆ: ತೇಜಸ್ವಿನಿ ಅನಂತ್ ಕುಮಾರ್

    ಪ್ರಶ್ನೆ ಸರಿಯಿದೆ, ಆದ್ರೆ ವಿಳಾಸ ತಪ್ಪಿದೆ: ತೇಜಸ್ವಿನಿ ಅನಂತ್ ಕುಮಾರ್

    – ದೇಶ ಮೊದಲು, ನಂತರ ಪಕ್ಷ
    – ಪಕ್ಷದ ನಾಯಕರ ತೀರ್ಮಾನಕ್ಕೆ ಬದ್ಧ

    ಬೆಂಗಳೂರು: ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಲೋಕಸಭಾ ಚುನಾವಣೆಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದು, ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯಗೆ ಸಿಕ್ಕಿದೆ. ಈ ಬಗ್ಗೆ ತೇಜಸ್ವಿನಿ ಅನಂತ್ ಕುಮಾರ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ನಮ್ಮ ಪಕ್ಷದ ಸಿದ್ಧಾಂತದ ಮೇಲೆ ನಾವು ನಿಂತಿದ್ದೇವೆ. ದೇಶ ಮೊದಲು, ಪಕ್ಷ ನಂತರ ಹಾಗೂ ನಮ್ಮ ಸ್ವಂತ ಹಿತಾಶಕ್ತಿಗಳು ಕೊನೆಯಲ್ಲಿ ಎಂದು ನಾನು ಮೊದಲಿನಿಂದಲೂ ನಮ್ಮ ಕಾರ್ಯಕರ್ತರ ಬಳಿ ಹೇಳಿಕೊಂಡು ಬಂದಿದ್ದೇನೆ. ನಾವು ಮದುವೆಯಾದಗಿನಿಂದ ಪಕ್ಷ ಕಟ್ಟುವ ಕೆಲಸದಲ್ಲಿ ನಿರತಗಳಾಗಿದ್ದೇನೆ ಎಂದು ತಿಳಿಸಿದರು.

    ಒಂದೊಂದು ಸಲ ನಮಗೆ ಅಸಮಾಧಾನ ಆಗಿರುತ್ತದೆ. ಆದರೆ ಈಗ ನಮ್ಮ ಪ್ರಭುದ್ಧತೆಯನ್ನು ತೋರಿಸುವ ಸಮಯ ಬಂದಿದೆ. ನಾವು ಅಂದುಕೊಂಡಿದ್ದು ಆಗಿಲ್ಲ ಎಂದಾಗ ಸಹಜವಾಗಿ ಎಲ್ಲರಲ್ಲೂ ಯಾಕೆ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ. ಆದರೆ ಅದಕ್ಕಿಂತ ಪಕ್ಷದ ಮುಖಂಡರ ತೀರ್ಮಾನವೇ ದೊಡ್ಡದಾಗಿದೆ. ಹೀಗಾಗಿ ಮೊದಲು ದೇಶ ಸಿದ್ಧಾಂತಕ್ಕೆ ಬದ್ಧರಾಗಿರುತ್ತೇವೆ. ನಮ್ಮ ಕಾರ್ಯಕರ್ತರು ಕೂಡ ಈ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ ಎಂದು ತೇಜಸ್ವಿನಿ ಅವರು ಹೇಳಿದರು.

    ಮತ್ತೊಮ್ಮೆ ಪ್ರಧಾನಿ ಮೋದಿ ಅವರು ಆಯ್ಕೆಯಾಗಬೇಕು. ಹೀಗಾಗಿ ಬೇರೆ ಬೇರೆ ಯೋಚನೆಗಳನ್ನು ಬಿಟ್ಟು ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಯಾರ ವಿರುದ್ಧವೂ ಘೋಷಣೆ ಕೂಗುವುದು ಬೇಡ. ಅಳುವುದಾಗಲಿ, ಬೇಸರವಾಗಲಿ ಅದನ್ನು ಸಾರ್ವಜನಿಕವಾಗಿ ತೋರಿಸುವುದು ನಮ್ಮ ಪಕ್ಷದ ಪದ್ಧತಿಯಲ್ಲ. ನಮ್ಮ ಪಕ್ಷದ ನಾಯಕರು, ಮುಖಂಡರು ಇದೇ ಸಿದ್ಧಾಂತವನ್ನು ಅನುಸರಿಸಿಕೊಂಡು ಬಂದಿದ್ದಾರೆ ಎಂದರು.

    ಮಾನ್ಯ ಅನಂತ್ ಕುಮಾರ್ ಅವರು ತಮ್ಮ 16ನೇ ವಯಸ್ಸಿನಿಂದ ದೇಶ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಹೀಗಾಗಿ ಅವರು ಯಾವ ರೀತಿ ಕೆಲಸ ಮಾಡಿದ್ದಾರೋ, ಅದೇ ರೀತಿ ನಾವು ಪ್ರಭುಬದ್ಧವಾಗಿ ಕೆಲಸ ಮಾಡಿದರೆ ಅದು ನಿಜವಾಗಿ ನಾವು ಅನಂತ್ ಕುಮಾರ್ ಅವರಿಗೆ ಅರ್ಪಿಸುವ ಶ್ರದ್ಧಾಂಜಲಿಯಾಗುತ್ತದೆ. ಅದು ಬಿಟ್ಟು ಸಣ್ಣ-ಸಣ್ಣ ವಿಚಾರಗಳಿಗೆ ಈ ರೀತಿ ಘೋಷಣೆ ಕೂಗಬಾರದು ಎಂದು ಹೇಳಿದರು.

    ಕಡೆಯ ಕ್ಷಣದಲ್ಲಿ ಟಿಕೆಟ್ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಮ್ಮ ಪ್ರಶ್ನೆ ಸರಿಯಿದೆ. ಆದರೆ ವಿಳಾಸ ತಪ್ಪಿದೆ ಎಂದು ಅನಂತ್ ಕುಮಾರ್ ಯಾವಾಗಲೂ ಹೇಳುತ್ತಿದ್ದರು. ಅದೇ ರೀತಿ ನಾನು ಪಕ್ಷದ ಚೌಕಟ್ಟಿನಿಲ್ಲಿದ್ದೇನೆ, ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲು ಸಾಧ್ಯವಿಲ್ಲ. ನಾನು ಈಗಾಗಲೇ ಪಕ್ಷದ ಜೊತೆ ಇರುತ್ತೇವೆ ಎಂದು ಹೇಳಿದ್ದೇನೆ. ಹೀಗಾಗಿ ನಾನು ಪಕ್ಷೇತರವಾಗಿ ನಿಲ್ಲಲ್ಲ. ಕುಟುಂಬದ ರಾಜಕಾರಣದಲ್ಲಿ ನಂಬಿಕೆ ಇಲ್ಲ ಎಂದು ಅನಂತ್ ಕುಮಾರ್ ಹೇಳಿದ್ದರು. ಈಗ ಅವರ ಜವಬ್ದಾರಿಯನ್ನು ಉಳಿಸಿಕೊಂಡು ಹೋಗುತ್ತಿದ್ದೇನೆ. ಮೋದಿ ಮತ್ತೊಮ್ಮೆ ಎಂದು ಮೊದಲೇ ಹೇಳಿದ್ದೇವೆ ಅವರಿಗಾಗಿ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.