Tag: ತೇಜಸ್ವಿನಿಗೌಡ

  • ತಿಥಿಮತಿ ಮೇಲ್ಸೇತುವೆಗೆ ಅರ್ಜುನನ ಹೆಸರು, ಶಿವಮೊಗ್ಗ ಏರ್‌ಪೋರ್ಟ್‌ಗೆ ಕುವೆಂಪು ಹೆಸರಿಡಲು ಆಗ್ರಹ

    ತಿಥಿಮತಿ ಮೇಲ್ಸೇತುವೆಗೆ ಅರ್ಜುನನ ಹೆಸರು, ಶಿವಮೊಗ್ಗ ಏರ್‌ಪೋರ್ಟ್‌ಗೆ ಕುವೆಂಪು ಹೆಸರಿಡಲು ಆಗ್ರಹ

    – ದೇವರಾಜ್ ಅರಸ್ ಪ್ರತಿಮೆ ಸ್ಥಾಪನೆಗೆ ಬಿ.ಕೆ ಹರಿಪ್ರಸಾದ್‌ ಒತ್ತಾಯ

    ಬೆಳಗಾವಿ: ವಿಧಾನ ಪರಿಷತ್ (Vidhan Parishad) ಕಲಾಪದ ಶೂನ್ಯ ವೇಳೆಯಲ್ಲಿಂದು ಹಲವು ಮಹತ್ವದ ವಿಷಯಗಳು ಪ್ರಸ್ತಾಪವಾಯಿತು. ಆದ್ರೆ ಸರ್ಕಾರ ಯಾವುದಕ್ಕೂ ತಕ್ಷಣ ಸದನದಲ್ಲಿ ಉತ್ತರ ಕೊಡದೇ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವ ಭರವಸೆ ನೀಡಿತು.

    ಸಾವರ್ಕರ್ (VD Savarkar) ಫೋಟೋ ತೆಗೆಯಲು ನನಗೆ ಅವಕಾಶ ಕೊಡಿ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವನ್ನು ಶೂನ್ಯ ವೇಳೆಯಲ್ಲಿ ಬಿಜೆಪಿ (BJP) ಸದಸ್ಯ ರವಿಕುಮಾರ್ ಪ್ರಸ್ತಾಪಿಸಿದರು. ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು, ಪ್ರಿಯಾಂಕ್ ಖರ್ಗೆ (Priyank Kharge) ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದರು.

    ನಂತರ ಚಿಕ್ಕೋಡಿ ತಾಲೂಕನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಅಂತ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ವಿಷಯ ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಮುಂದಿನ ವರ್ಷದಿಂದ್ಲೇ ಶಾಲಾ ಮಕ್ಕಳಿಗೆ ಉಚಿತ ʻಸೈಕಲ್‌ ಭಾಗ್ಯʼ – ಮಧು ಬಂಗಾರಪ್ಪ ಭರವಸೆ

    ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರಿಗೆ `ಭಾರತ ರತ್ನ’ ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ತಲಕಾವೇರಿ ಉದ್ಭವ ದಿನದಂದು ರಜೆ ಘೋಷಿಸಬೇಕು. ದಸರಾದಲ್ಲಿ ಭಾಗವಹಿಸುವ ಆನೆಗಳು ಸೇರಿದಂತೆ ಇತರೇ ಆನೆಗಳ ಕುರಿತು ಒಂದು ವಸ್ತುಸಂಗ್ರಹಾಲಯ ಸ್ಥಾಪಿಸಬೇಕು. ತಿಥಿಮತಿ ಮೇಲ್ಸೇತುವೆಗೆ ಅರ್ಜುನ ಆನೆಯ ಹೆಸರು ಇಡಬೇಕು ಅಂತ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಒತ್ತಾಯಿಸಿದರು.

    ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Shivamoga Airport) ಕುವೆಂಪು ಹೆಸರು ಇಡಬೇಕು ಅಂತ ಶೂನ್ಯ ವೇಳೆಯಲ್ಲಿ ಮಂಜುನಾಥ್ ಭಂಡಾರಿ ವಿಷಯ ಪ್ರಸ್ತಾಪ ಮಾಡಿದ್ರು. ಕೂಡಲೇ ಸರ್ಕಾರ ಕ್ಯಾಬಿನೆಟ್ ನಿರ್ಧಾರ ಮಾಡಿ ಕುವೆಂಪು ಹೆಸರು ಅಂತಿಮ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರೋಹಿತ್ ಶರ್ಮಾ ಫಾರ್ಮ್‍ನಲ್ಲಿದ್ದರೆ 2024ರ ಟಿ20 ವಿಶ್ವಕಪ್‍ನಲ್ಲಿ ತಂಡವನ್ನು ಮುನ್ನೆಡಸಲಿ: ಗಂಭೀರ್

    ಇನ್ನೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad), ಮೈಸೂರು ಡಿಸಿ ಕಚೇರಿ ಹಾಗೂ ಬೆಳಗಾವಿ ಸುವರ್ಣಸೌಧದ ಮುಂದೆ ದೇವರಾಜ್ ಅರಸ್ ಪ್ರತಿಮೆ ನಿರ್ಮಾಣ ಮಾಡಬೇಕು ಅಂತ ಶೂನ್ಯ ವೇಳೆಯಲ್ಲಿ ಒತ್ತಾಯಿಸಿದರು. ಎಲ್ಲಾ ಸಮುದಾಯಗಳ ವರ್ಗಕ್ಕೆ ಅರಸರ ಕೊಡುಗೆ ಅಪಾರವಾಗಿದೆ. ಎರಡು ಬಾರಿ ಸಿಎಂ ಆಗಿ ರಾಜ್ಯದ ಸೇವೆ ಸಲ್ಲಿಸಿದ್ದಾರೆ. ದೇವರಾಜ ಅರಸು ಅವರ ಪ್ರತಿಮೆ ನಿರ್ಮಾಣ ಅವಶ್ಯಕವಾಗಿದೆ ಎಂದು ಸಿಎಂಗೆ ಒತ್ತಾಯ ಮಾಡಿದರು.

  • ಯುವಕರು ಖಾಲಿ ಕೂರುವ ಬದಲು ವಡಾ ಪಾವ್, ಮಿರ್ಚಿ ಮಾರಲಿ ಇದರಲ್ಲಿ ತಪ್ಪೇನಿಲ್ಲ ಮೋದಿಯೇ ಚಹಾ ಮಾರಿದ್ದಾರೆ: ತೇಜಸ್ವಿನಿಗೌಡ

    ಯುವಕರು ಖಾಲಿ ಕೂರುವ ಬದಲು ವಡಾ ಪಾವ್, ಮಿರ್ಚಿ ಮಾರಲಿ ಇದರಲ್ಲಿ ತಪ್ಪೇನಿಲ್ಲ ಮೋದಿಯೇ ಚಹಾ ಮಾರಿದ್ದಾರೆ: ತೇಜಸ್ವಿನಿಗೌಡ

    ಹುಬ್ಬಳ್ಳಿ: ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರೋದು ಸತ್ಯ. ಹೀಗಾಗಿ ವಡಾ ಪಾವ್, ಮಿರ್ಚಿ ಮಾರೋದು ತಪ್ಪೇನಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೇ ಚಹಾ ಮಾರಿದ್ದಾರೆ. ಯುವಕರು ಯಾವುದಾದರೂ ಕೆಲಸ ಮಾಡಲಿ ಕಾಯಕವೇ ಕೈಲಾಸವೆಂದು  ಎಂಎಲ್‍ಸಿ ತೇಜಸ್ವಿನಿಗೌಡ ಹೇಳಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇರುವುದು ಸತ್ಯ. ಹೀಗಂತ ಯುವಕರು ಖಾಲಿ ಕೂರುವ ಬದಲಿಗೆ ವಡಾ ಪಾವ್, ಮಿರ್ಚಿ ಮಾರುವುದರಲ್ಲಿ ತಪ್ಪೇನಿಲ್ಲ. ಮಾಡುವ ಕೆಲಸದಲ್ಲಿ ದೊಡ್ಡದು, ಚಿಕ್ಕದು ಎನ್ನುವ ತಾರತಮ್ಯದ ಬದಲು ಮಾಡುವ ಕೆಲಸದಲ್ಲಿ ಶ್ರದ್ಧೆಯಿಟ್ಟು ದುಡಿಯಬೇಕು. ನಮ್ಮ ಪ್ರಧಾನಿ ಮೋದಿಯವರೇ ಚಹ ಮಾರಿದ್ದಾರೆ ಇದರಲೇನು ತಪ್ಪಿದೆ ಎಂದಿದ್ದಾರೆ. ಇದನ್ನೂ ಓದಿ: ಪತ್ರಕರ್ತರು ಏನೇ ಬರೆದ್ರೂ ಅರೆಸ್ಟ್ ಮಾಡುವಂತಿಲ್ಲ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ವಕ್ತಾರ

    ಪ್ರತ್ಯೇಕ ರಾಜ್ಯದ ಕೂಗು ವಿಚಾರವಾಗಿ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಬೆಂಬಲವಿಲ್ಲ. ನಾವು ರಾಜ್ಯವನ್ನು ಒಡೆಯುವವರಲ್ಲ ಒಂದು ಮಾಡುವವರೆಂದರು. ಇನ್ನೂ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ವಿಚಾರವಾಗಿ ಮಾತನಾಡಿ, ಬಿಜೆಪಿ ಸರ್ಕಾರ ಯಾವತ್ತೂ ಕೂಡ ಇದನ್ನು ಸಮರ್ಥಿಸಿಕೊಂಡಿಲ್ಲ. ಲೋಪದೋಷ ಕಂಡುಬಂದ ಬಗ್ಗೆ ಸರಿಪಡಿಸುವ ಕೆಲಸ ನಡೆದಿದೆ. ಪಠ್ಯ ಪುಸ್ತಕ ವಿವಾದಕ್ಕೆ ಸದ್ಯ ತೆರೆಬಿದ್ದಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಉದಯ್‌ಪುರ ಬರ್ಬರ ಹತ್ಯೆ ಎನ್‌ಐಎ ಹೆಗಲಿಗೆ – ಪಾತಕಿಗಳಿಗೆ ಐಸಿಸ್‌ ಲಿಂಕ್‌?

    Live Tv 

  • ಈ ಚುನಾವಣೆಯಲ್ಲೂ ಕಪ್ ನಮ್ಮದೇ: ಗೋ.ಮಧುಸೂದನ್

    ಈ ಚುನಾವಣೆಯಲ್ಲೂ ಕಪ್ ನಮ್ಮದೇ: ಗೋ.ಮಧುಸೂದನ್

    – ದೋಸ್ತಿ ಸರ್ಕಾರದಲ್ಲಿ ಮೂರು ಗುಂಪು
    – ಜೆಡಿಎಸ್ ನಂಬರ್ ಝೀರೋ ಆದ್ರೂ ಅಚ್ಚರಿ ಇಲ್ಲ: ತೇಜಸ್ವಿನಿಗೌಡ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತೇವೆಂದು ಈಗಲೇ ಹೇಳುವುದು ಬೇಡ. ಆದರೆ ಈ ಚುನಾವಣೆಯಲ್ಲಿಯೂ ಕಪ್ ನಮ್ಮದೇ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು. ಈಗ ಮೊದಲನೇ ಸ್ಥಾನದಲ್ಲಿದೆ. ಆದರೆ ಮೊದಲ ಸ್ಥಾನದಲ್ಲಿದ್ದ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಏನೇ ಆದರೂ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಜಯಗಳಿಸುತ್ತದೆ ಎಂದು ಹೇಳಿದರು.

    ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‍ನಲ್ಲೇ ಉಳಿಸಿಕೊಳ್ಳಲು ಆಗಲಿಲ್ಲ ಎನ್ನುವ ನೋವು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ಕಾಡುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಂದು ರೀತಿಯಲ್ಲಿ ವಿ3 ಆಗುತ್ತಿದೆ. ಎರಡು ಪಕ್ಷಗಳು ಸೇರಿ ಮೈತ್ರಿ ಮಾಡಿಕೊಂಡಿವೆ. ಆದರೆ ಈಗ ದೋಸ್ತಿ ಸರ್ಕಾರದಲ್ಲಿ ಮೂರು ಗುಂಪುಗಳಾಗಿವೆ ಎಂದು ವ್ಯಂಗ್ಯವಾಡಿದರು.

    ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಹಾಕಲು ಜೆಡಿಎಸ್‍ಗೆ ಸಾಧ್ಯವಾಗುತ್ತಿಲ್ಲ. ಇತ್ತ ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರದಲ್ಲಿ ಅಭ್ಯರ್ಥಿಯೇ ಇಲ್ಲ ಎಂದ ಅವರು, ಸಚಿವ ಆರ್.ವಿ.ದೇಶಪಾಂಡೆ ಅವರ ಪರಿಸ್ಥಿತಿ ನೋಡಿದರೆ ಪಾಪ ಅನಿಸುತ್ತದೆ. ಅವರೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಗೆ ಹೋಗಿದ್ದರು. ದೇಶಪಾಂಡೆ ಅವರದ್ದು ಎಂತಹ ದಯನೀಯ ಸ್ಥಿತಿ ಎಂದು ಲೇವಡಿ ಮಾಡಿದರು.

    ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದ ದುರಂತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ರಾಜ್ಯ ಸರ್ಕಾರದ ತಪ್ಪಿದೆ. ಕಟ್ಟಡ ಕುಸಿದು, ಭಾರೀ ಅನಾಹುತ ಸಂಭವಿಸಿದ್ದರೂ ಕಟ್ಟಡದ ಮಾಲೀಕರನ್ನು ವಶಕ್ಕೆ ಪಡೆದಿರಲಿಲ್ಲ. ಈಗ ಗಂಗಪ್ಪ ಕಂತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಟ್ಟಡದ ಜಾಗವು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವನ ಹೆಸರಲ್ಲಿದೆ. ಆದರೆ ಜಾಗದ ನಿಜವಾದ ಮಾಲೀಕ ವಿನಯ್ ಕುಲಕರ್ಣಿ. ಅದು ಬೇನಾಮಿ ಆಸ್ತಿಯಾಗಿದೆ. ಹೀಗಾಗಿ ಎಫ್‍ಐಆರ್ ನಲ್ಲಿ ಮಾಜಿ ಸಚಿವ ಹೆಸರು ಸೇರಿಸಬೇಕು ಎಂದು ಆಗ್ರಹಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದರು. ಈ ಸಂಬಂಧ ಅವರ ಮೇಲೆ ಇನ್ನೂ ಕ್ರಮಕೈಗೊಂಡಿಲ್ಲ. ಇದಕ್ಕೆ ಕಾಂಗ್ರೆಸ್ ನೇರ ಹೊಣೆಯಾಗಿದೆ. ಪ್ರಜಾಪ್ರಭುತ್ವದ ಮೇಲೆ ಕಾಂಗ್ರೆಸ್‍ಗೆ ನಂಬಿಕೆ ಇದ್ದರೆ ಗೋಪಾಲಕೃಷ್ಣ ಅವರನ್ನು ಬಂಧಿಸಲಿ ಎಂದು ಒತ್ತಾಯಿಸಿದರು.

    ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವ ವೇಳೆ ನೆರೆದಿದ್ದ ಜನಸ್ತೋಮ ಕಂಡು ಮೈತ್ರಿ ಸರ್ಕಾರದ ಮುಖಂಡರ ಜಂಘಾಬಲವೇ ಉಡುಗಿ ಹೋಗಿದೆ. ಇದರಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮನೆಗೆ ಬಂದಿದ್ದ ಮಂಡ್ಯ ಮತ್ತು ಹಾಸನದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೂಗಾಡಿದ್ದಾರೆ. ಇತ್ತ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳ ಹಾಗೂ ಚಿತ್ರೋದ್ಯಮದವರ ಮೇಲೆ ಕಿಡಿಕಾರುತ್ತಿದ್ದಾರೆ ಎಂದರು.

    ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಅವರು ಮಾತನಾಡಿ, ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಸ್ಥಳಕ್ಕೆ ಇದೂವರೆಗೆ ಸಿಎಂ ಕುಮಾರಸ್ವಾಮಿ ಭೇಟಿಕೊಟ್ಟಿಲ್ಲ. ಅವರಿಗೆ ತಮ್ಮ ಮಗ ಮಂಡ್ಯದಲ್ಲಿ ಸ್ಪರ್ಧೆ ಮಾಡುವುದೇ ಮುಖ್ಯವಾಗಿದೆ. ಹೀಗಾಗಿ ಸಿಎಂ ಧಾರವಾಡಕ್ಕೆ ಹೋಗದೇ ಮಂಡ್ಯದಲ್ಲೇ ಕೂತಿದ್ದಾರೆ. ಈ ಬಾರಿ ಜೆಡಿಎಸ್ ನಂಬರ್ ಝೀರೋ ಆದ್ರೂ ಅಚ್ಚರಿ ಇಲ್ಲ ಎಂದರು.