Tag: ತೆಹ್ರಾನ್

  • ಹಿಜಬ್‌ ಧರಿಸಿಲ್ಲ ಅಂತಾ ಪೊಲೀಸರು ಬಂಧಿಸಿದ್ದಕ್ಕೆ ಕೋಮಾ ಸ್ಥಿತಿ ತಲುಪಿ ಯುವತಿ ಸಾವು

    ಹಿಜಬ್‌ ಧರಿಸಿಲ್ಲ ಅಂತಾ ಪೊಲೀಸರು ಬಂಧಿಸಿದ್ದಕ್ಕೆ ಕೋಮಾ ಸ್ಥಿತಿ ತಲುಪಿ ಯುವತಿ ಸಾವು

    ತೆಹ್ರಾನ್: ಹಿಜಬ್‌ (Hijab) ಧರಿಸಿಲ್ಲ ಎಂದು ಬಂಧನಕ್ಕೊಳಗಾಗಿದ್ದ ಇರಾನಿ ಯುವತಿಯೊಬ್ಬರು (Iran Young Women) ಸಾವನ್ನಪ್ಪಿರುವ ಘಟನೆ ತೆಹ್ರಾನ್‌ನಲ್ಲಿ ನಡೆದಿದೆ.

    ಮಹ್ಸಾ ಆಮಿನಿ (22) ಮೃತಪಟ್ಟ ಯುವತಿ. ಈಕೆ ತನ್ನ ಕುಟುಂಬದೊಂದಿಗೆ ಇರಾನ್‌ ರಾಜಧಾನಿಗೆ ಭೇಟಿ ನೀಡಿದ್ದರು. ಹಿಜಬ್‌ ಧರಿಸದೇ ಇದ್ದ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ನೈತಿಕ ಪೊಲೀಸ್‌ ಘಟಕದವರು ಯುವತಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ಟ್ರಕ್ – ಬಸ್ ನಡುವೆ ಭೀಕರ ಅಪಘಾತ – 6 ಸಾವು, 20 ಮಂದಿಗೆ ಗಾಯ

    HIJAB

    ಬಂಧನದಿಂದ ಶಾಕ್‌ಗೆ ಒಳಗಾದ ಯುವತಿ ಕೋಮಾ ಸ್ಥಿತಿ ತಲುಪಿದ್ದಾಳೆ. ದುರದೃಷ್ಟವಶಾತ್‌, ನಂತರ ಆಕೆ ಮೃತಪಟ್ಟಿದ್ದಾಳೆ. ಯುವತಿ ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ವಿಭಾಗಕ್ಕೆ ರವಾನಿಸಲಾಗಿದೆ.

    ಸಾರ್ವಜನಿಕವಾಗಿ ಕಡ್ಡಾಯವಾಗಿ ಮಹಿಳೆಯರು ಹಿಜಬ್‌ (ಶಿರವಸ್ತ್ರ) ಧರಿಸುವುದು ಇಸ್ಲಾಮಿಕ್‌ ಗಣರಾಜ್ಯದಲ್ಲಿ ಕಡ್ಡಾಯ. ಇಲ್ಲಿ ಕಟ್ಟುನಿಟ್ಟಿನ ವಸ್ತ್ರ ಸಂಹಿತೆ ಕೂಡ ಇದೆ. ಇದನ್ನೂ ಓದಿ: ಮಕ್ಕಳಲ್ಲಿ ವಿಪರೀತ ಜ್ವರ – ಸೆ.25 ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೇರಿ ಸರ್ಕಾರ

    ಆಕೆಯನ್ನು ಪೊಲೀಸ್ ಠಾಣೆಗೆ ಕರೆತರುವ ಮತ್ತು ಆಸ್ಪತ್ರೆಗೆ ಸಾಗಿಸುವ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆಕೆಯ ತಲೆಗೆ ಪೆಟ್ಟು ಬಿದ್ದಿತ್ತು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಯುವತಿ ಸಾವಿನ ಬಗ್ಗೆ ಕುಟುಂಬಸ್ಥರು ಹಾಗೂ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿಯನ್ನು ದಾಖಲಿಸಿದ್ದ ಆಸ್ಪತ್ರೆ ಹೊರಗಡೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಲ್ಲದೇ ಆಡಳಿತ ವಿರೋಧಿ ಘೋಷಣೆಗಳನ್ನು ಕೂಗಿದರು. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದ ಕಾಮಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ರು

    ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದ ಕಾಮಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ರು

    ತೆಹ್ರಾನ್: 7 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಇರಾನ್ ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ.

    ಪಾರ್ಸಾಬಾದ್ ನಗರದಲ್ಲಿ ಬುಧವಾರ ಪ್ರಕರಣ ಅಪರಾಧಿಯಾಗಿದ್ದ ಇಸ್ಮಾಯಿಲ್ ಜಾಫರ್ಜದಹ್ (42) ನನ್ನು ಗಲ್ಲಿಗೇರಿಸಲಾಗಿದ್ದು, ಈ ಸಂದರ್ಭದಲ್ಲಿ ಜನರು ಚಪ್ಪಾಳೆ ತಟ್ಟುವ ಮೂಲಕ ದೃಶ್ಯವನ್ನು ಸಂಭ್ರಮಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    7 ವರ್ಷದ ಅಂಟೆನಾ ಎಂಬಾಕೆ ಜೂನ್ 19 ರಂದು ವಾಕಿಂಗ್‍ಗೆ ತೆರಳಿದ್ದ ವೇಳೆ ಕಾಣೆಯಾಗಿದ್ದಳು. ಅಂಟೆನಾ ಮೃತದೇಹ ಇಸ್ಮಾಯಿಲ್ ಮನೆಯ ಗ್ಯಾರೇಜ್‍ನಲ್ಲಿ ದೊರೆತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು. ಶಂಕೆಯ ಆಧಾರದಲ್ಲಿ ಇಸ್ಮಾಯಿಲ್ ನನ್ನು ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ಆಗಸ್ಟ್ ನಲ್ಲಿ ನಡೆದು ಸೆಪ್ಟೆಂಬರ್ 11 ರಂದು ಸುಪ್ರೀಂ ಕೋರ್ಟ್ ಆತನಿಗೆ ಗಲ್ಲುಶಿಕ್ಷೆ ವಿಧಿಸಿತ್ತು.

    ಪ್ರಕರಣದ ವಿಚಾರಣೆ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಅಷ್ಟೇ ಅಲ್ಲದೇ 2 ವರ್ಷದ ಹಿಂದೆ ಮಹಿಳೆಯೊಬ್ಬರನ್ನು ಅತ್ಯಾಚಾರಗೈದು ಕೊಲೆ ಮಾಡಿರುವುದನ್ನೂ ಒಪ್ಪಿಕೊಂಡಿದ್ದ.

    ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಅತ್ಯಂತ ಭಯಾನಕವಾಗಿದ್ದು, ಈ ಪ್ರಕರಣದಲ್ಲಿ ತ್ವರಿತ ನ್ಯಾಯಾಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾಕ್ ಅಧ್ಯಕ್ಷ ಹಸ್ಸಾನ್ ರೌಹಾನಿ ತಿಳಿಸಿದ್ದಾರೆ.

    ಇರಾನ್ ಆಡಳಿತವು ನೇಣಿಗೆ ಏರಿಸಿದ ಬಗ್ಗೆ ಯಾವುದೇ ಅಧಿಕೃತ ಫೋಟೋವನ್ನು ಬಹಿರಂಗಪಡಿಸಿಲ್ಲ. ಆದರೆ ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಪ್ರಕರಣವನ್ನು 2016ರ ನಂತರ ಜಾರಿಗೆ ಮಾಡಲಾಗಿರುವ ಐದು ಮರಣದಂಡನೆಗಳ ಸಾಲಿಗೆ ಸೇರಿಸಿದೆ.