Tag: ತೆಲುಗು ನಟ ಶ್ರೀಕಾಂತ್

  • ಕರ್ನಾಟಕ ಮೂಲದ ತೆಲುಗಿನ ನಟ ಶ್ರೀಕಾಂತ್ ದಾಂಪತ್ಯದಲ್ಲಿ ಬಿರುಕು

    ಕರ್ನಾಟಕ ಮೂಲದ ತೆಲುಗಿನ ನಟ ಶ್ರೀಕಾಂತ್ ದಾಂಪತ್ಯದಲ್ಲಿ ಬಿರುಕು

    ಚಿತ್ರರಂಗದಲ್ಲಿ ಡಿವೋರ್ಸ್ (Divorce) ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕಳೆದ ವರ್ಷ ಸಮಂತಾ, ನಾಗಚೈತನ್ಯ ನಂತರ ತೆಲುಗಿನ ಖ್ಯಾತ ನಟ ಶ್ರೀಕಾಂತ್ (Srikanth) ದಾಂಪತ್ಯದಲ್ಲಿ ಬಿರುಕಾಗಿದೆ. ಡಿವೋರ್ಸ್ಗೆ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

    ತೆಲುಗು(Tollywood) ಮತ್ತು ಕನ್ನಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟ ಶ್ರೀಕಾಂತ್ ವೈವಾಹಿಕ ಬದುಕಲ್ಲಿ ಬಿರುಗಾಳಿ ಎದ್ದಿದೆ. 25 ವರ್ಷಗಳಿಂದ ಜೊತೆಯಾಗಿದ್ದ ಈ ಜೋಡಿ, ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಡಲು ರೆಡಿಯಾಗಿದ್ದಾರಂತೆ. 1997ರಲ್ಲಿ ಶ್ರೀಕಾಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ಇಬ್ಬರೂ ಗಂಡು ಮಕ್ಕಳು ರೋಷನ್, ರೋಹನ್ ಮತ್ತು ಮಗಳು ವೇದಾ. ಇನ್ನೂ ಪತ್ನಿ ಊಹಾ ಕೂಡ ನಟಿಯಾಗಿದ್ದು, ಸಾಕಷ್ಟು ಸೌತ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

    ಟಾಲಿವುಡ್ ಗಲ್ಲಿಗಳಲ್ಲಿ ಶ್ರೀಕಾಂತ್ ಡಿವೋರ್ಸ್ ವಿಚಾರವೇ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರೀಕಾಂತ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ನಟ ಆರ್ಥಿಕ ಸಂಕಷ್ಟವೇ ಡಿವೋರ್ಸ್ಗೆ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ.

    ಇನ್ನೂ ಪುತ್ರ ರೋಷನ್ ಕೂಡ ಟಾಲಿವುಡ್‌ಗೆ ಈಗಾಗಲೇ ಎಂಟ್ರಿ ಕೊಟ್ಟಾಗಿದೆ. `ಪೆಲ್ಲಿ ಸಂದಡಿ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಕನ್ನಡ ಭರಾಟೆ ನಟಿ ಶ್ರೀಲೀಲಾ ನಟಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಜೇಮ್ಸ್ ಚಿತ್ರಕ್ಕೆ ಸ್ಟಾರ್ ನಟ ಎಂಟ್ರಿ

    ಜೇಮ್ಸ್ ಚಿತ್ರಕ್ಕೆ ಸ್ಟಾರ್ ನಟ ಎಂಟ್ರಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಒಂದರ ಹಿಂದೆ ಒಂದರೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಯುವರತ್ನ ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪುತ್ತಿದ್ದಂತೆ ಇದೀಗ ಜೇಮ್ಸ್ ಚಿತ್ರದ ಶೂಟಿಂಗ್ ಆರಂಭಿಸಲಾಗುತ್ತಿದೆ. ಅಲ್ಲದೆ ಸಿನಿಮಾ ಅಂಗಳದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

    ಯುವರತ್ನ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಲಾಕ್‍ಡೌನ್ ವೇಳೆ ಬಿಡುವು ಪಡೆದಿದ್ದರು. ಯುವರತ್ನ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದೆ ಎನ್ನಲಾಗಿದ್ದು, ಹೀಗಾಗಿಯೇ ಅಪ್ಪು ಜೇಮ್ಸ್ ಸಿನಿಮಾದ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಅಭಿಮಾನಿಗಳು ಯುವರತ್ನ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

    ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್‍ನಲ್ಲಿ ಯುವರತ್ನ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿತು. ಹೀಗಾಗಿ ಸಿನಿಮಾ ಬಿಡುಗಡೆ ತಡವಾಗಿದೆ. ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಇದೇ ವೇಳೆ ಜೇಮ್ಸ್ ಚಿತ್ರದ ಶೂಟಿಂಗ್ ಆರಂಭಿಸಲಾಗುತ್ತಿದೆ. ಚಿತ್ರೀಕರಣಕ್ಕೆ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇನ್ನೂ ವಿಶೇಷ ಎಂಬಂತೆ ಟಾಲಿವುಡ್ ಪ್ರಸಿದ್ಧ ನಟರೊಬ್ಬರು ಜೇಮ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

    ತೆಲುಗು ನಟ ಶ್ರೀಕಾಂತ್ ಅವರು ಜೇಮ್ಸ್ ಚಿತ್ರ ತಂಡ ಸೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಕುರಿತು ಚಿತ್ರ ತಂಡ ಖಚಿತಪಡಿಸಿಲ್ಲ. ಜೇಮ್ಸ್ ಸಿನಿಮಾದಲ್ಲಿ ಪುನೀತ್ ನಟಿಸುತ್ತಿದ್ದಾರೆ ಎಂಬುದದನ್ನು ಹೊರತುಪಡಿಸಿ ಉಳಿದಂತೆ ಯಾವ ಕಲಾವಿದರು ಭಾಗವಹಿಸಲಿದ್ದಾರೆ ಎಂಬ ಕುರಿತು ಈ ವರೆಗೆ ಮಾಹಿತಿ ಹೊರ ಬಿದ್ದಿಲ್ಲ. ಇದೀಗ ಟಾಲಿವುಡ್ ಸ್ಟಾರ್ ಶ್ರೀಕಾಂತ್ ಎಂಟ್ರಿ ಸಹ ಸರ್ಪ್ರೈಸ್ ಆಗಿದೆ. ಶ್ರೀಕಾಂತ್ ಅವರು ಈ ಹಿಂದೆ ದಿ ವಿಲನ್ ಸೇರಿದಂತೆ ಕನ್ನಡದ ಮೂರ್ನಾಲ್ಕು ಸಿನಿಮಾಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

    ಜೇಮ್ಸ್ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದ್ದು, ತೆಲುಗು ಫೈಟ್ ಮಾಸ್ಟರ್ ಗಳಾದ ರಾಮ್-ಲಕ್ಷ್ಮಣ್ ಅವರು ಸಹ ಚಿತ್ರ ತಂಡ ಸೇರಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಂದಹಾಗೆ ಈ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದು, ಕಿಶೋರ್ ಪತಿಕೊಂಡ ನಿರ್ಮಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಶ್ರೀಷಾ ಕುದುವಲ್ಲಿ ಛಾಯಾಗ್ರಹಣವಿದೆ.