Tag: ತೆಲುಗು ನಟಿ

  • ರೇವ್ ಪಾರ್ಟಿ ಪ್ರಕರಣ- ನಟಿ ಹೇಮಾಗೆ ಸಿಸಿಬಿ ನೋಟಿಸ್

    ರೇವ್ ಪಾರ್ಟಿ ಪ್ರಕರಣ- ನಟಿ ಹೇಮಾಗೆ ಸಿಸಿಬಿ ನೋಟಿಸ್

    ನಾನು ಹೈದರಾಬಾದ್‍ನಲ್ಲಿ ಇದ್ದೇನೆ ಎಂದು ವೀಡಿಯೋ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಹೈಡ್ರಾಮ ಸೃಷ್ಟಿಸಿದ್ದ ತೆಲುಗು ನಟಿ ಹೇಮಾಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

    ನಗರದ ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್‍ಹೌಸ್‍ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 27ಕ್ಕೆ ವಿಚಾರಣೆಗೆ ಬರುವಂತೆ ಹೇಮಾ ಸೇರಿ ಐವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಫಾರ್ಮ್‍ಹೌಸ್‍ನಲ್ಲಿ ರೇವ್ ಪಾರ್ಟಿ ಪ್ರಕರಣ- ಐವರ ಬ್ಯಾಂಕ್ ಅಕೌಂಟ್ ಸೀಜ್

    ರೇವ್ ಪಾರ್ಟಿ ವಿಚಾರ ಬಯಲಾಗುತ್ತಿದ್ದಂತೆಯೇ ನಟಿ ಹೇಮಾ ಅವರು ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ವೀಡಿಯೋದಲ್ಲಿ ನಾನು ಹೈದರಾಬಾದ್‍ನಲ್ಲಿ ಇರುವುದಾಗಿ ಹೈಡ್ರಾಮಾ ಮಾಡಿದ್ದರು. ಇತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಹೇಮಾ ಅವರು ಡ್ರಗ್ಸ್ ಪಾರ್ಟಿಯಲ್ಲಿ ಇದ್ದರು ಎಂಬುದಾಗಿ ಸ್ಪಷ್ಟನೆ ನೀಡಿದ್ದರು.

    ಹೇಮಾ ಅವರ ರಕ್ತದ ಮಾದರಿ ತೆಗೆದುಕೊಂಡು ಅವರನ್ನು ಕಳುಹಿಸಲಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ಸ್ಟೇಷನ್ ಬೇಲ್ ಮೇಲೆ ಹೇಮಾರನ್ನು ಬಿಡುಗಡೆ ಮಾಡಲಾಗಿದೆ ಎಂದು ದಯಾನಂದ್ ಹೇಳಿದ್ದರು. ಅಲ್ಲದೇ ಪಾರ್ಟಿಯಲ್ಲಿ ಭಾಗವಹಿಸಿದ್ದ 103 ಮಂದಿಯ ಪೈಕಿ 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿತ್ತು.

    73 ಮಂದಿ ಪುರುಷರಲ್ಲಿ 59 ಮಂದಿ ಹಾಗೂ 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಎಂದು ಬಂದಿತ್ತು. ಈ ಮೂಲಕ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು.

  • ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ಬೆಂಗಳೂರು: ಇಲ್ಲಿನ ಸಿಂಗೇನ ಅಗ್ರಹಾರ ಬಳಿಯ ಜಿಆರ್ ಫಾರ್ಮ್‍ಹೌಸ್‍ನಲ್ಲಿ ನಡೀತಿದ್ದ ರೇವ್‍ಪಾರ್ಟಿ (Rave Party) ಇದೀಗ ತೆಲುಗು ನಟಿ ಹೇಮಾಗೆ ಸಂಕಷ್ಟ ತಂದೊಡ್ಡಿದೆ.

    ತೆಲುಗು ನಟಿ ಹೇಮಾ (Telugu Actress Hema) ಪಾರ್ಟಿಯಲ್ಲಿ ಇದ್ದದ್ದು ಈಗ ಜಗಜ್ಜಾಹೀರವಾಗಿದೆ. ಈ ಕುರಿತು ಖುದ್ದು ಪೊಲೀಸ್ ಆಯುಕ್ತ ದಯಾನಂದ್, ತೆಲುಗಿನ ಖ್ಯಾತ ನಟಿ ಪಾರ್ಟಿಯಲ್ಲಿ ಇದ್ದಿದ್ದನ್ನು ಬಹಿರಂಗಗೊಳಿಸಿದ್ದಾರೆ. ಇನ್ನೂ ಪಾರ್ಟಿಯಲ್ಲಿ ಇದ್ದರೂ ಕೂಡ, ನಾನು ಹೈದ್ರಾಬಾದ್‍ನಲ್ಲಿದ್ದೇನೆ ಅಂತ ನಾಟಕವಾಡಿದ್ದ ನಟಿ ಹೇಮಾಗೆ ಈಗ ಸಂಕಷ್ಟ ಎದುಗುವ ಸಾಧ್ಯತೆ ಇದೆ.

    ಸ್ಟೇಷನ್ ಬೇಲ್ ಮೇಲೆ ರಕ್ತದ ಮಾದತಿ ಕೊಟ್ಟು ಹೋಗಿರೋ ನಟಿಗೆ ಪೊಲೀಸರು ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದ್ದಾರೆ ಅನ್ನೋದು ಗೊತ್ತಾಗಿದೆ. ರೇವ್ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ತೆಲುಗು ನಟಿ ಹೇಮಾಗೆ ಪೊಲೀಸರು ಬ್ಲಡ್ ಸ್ಯಾಂಪಲ್ ಪಡೆದು ಕಳಿಸಿದ್ದಾರೆ. ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಬಂದರೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. ಡ್ರಗ್ಸ್ ಸೇವನೆ ಮಾಡಿರೋದು ಹೇರ್ ಪಾಲಿಕಲ್ ಟೆಸ್ಟ್ ನಲ್ಲಿ ಗೊತ್ತಾಗಾಲಿದೆ. ಹಾಗಾಗಿ ಪೊಲೀಸ್ ಹೇರ್ ಪಾಲಿಕ್ ಟೆಸ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದು ನಿಜ: ಪೊಲೀಸ್ ಕಮಿಷನರ್ ಸ್ಪಷ್ಟನೆ

  • ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

    ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

    ಬೆಂಗಳೂರು: ತೆಲುಗು ಸಿನೆಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳ ನೀಡಲಾಗ್ತಿದೆ ಅನ್ನೋ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲುಗು ನಟಿ ಶ್ರೀ ರೆಡ್ಡಿ ವಿರುದ್ಧ ಗರಂ ಆಗಿದ್ದ ಸ್ಯಾಂಡಲ್ ವುಡ್ ನಟಿ ಕವಿತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಇತ್ತೀಚೆಗಷ್ಟೇ ತೆಲುಗು ನಟಿ ಶ್ರೀ ರೆಡ್ಡಿ, ಟಾಲಿವುಡ್ ನಲ್ಲಿ ಬಹಳ ಕೀಳುಮಟ್ಟದಲ್ಲಿ ನಡೆಸಿಕೊಳ್ಳಲಾಗತ್ತೆ ಜೊತೆಗೆ ಲೈಂಗಿಕ ಕಿರುಕುಳ ಸರ್ವೇ ಸಾಮಾನ್ಯವಾಗಿದೆ ಅಂತ ಆರೋಪಿಸಿದ್ರು. ಅಲ್ಲದೇ ನಟಿ ಅರೆಬೆತ್ತಲೆಯಾಗಿ ಪ್ರತಿಭಟಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ರು. ಇದ್ರ ಬೆನ್ನಲ್ಲೇ, ಈ ಕುರಿತು ಸ್ಯಾಂಡಲ್‍ವುಡ್ ನಟಿ ಕವಿತಾ, ಅರೆಬೆತ್ತಲೆಯಾದ ವಿಡಿಯೋ ಮಾಡಿದ್ರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

    ಯಾವುದೇ ಇಂಡಸ್ಟ್ರಿ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಿ ಮಾತನಾಡಬೇಕು. ಇಲ್ಲವಾದಲ್ಲಿ ಆಯಾ ಸಿನೆಮಾ ಇಂಡಸ್ಟ್ರಿಗಳ ಲೆಜೆಂಡ್ ಗಳಿಗೆ ಅವಮಾನಮಾಡಿದಂತಾಗತ್ತೆ ಅಂತ ನಟಿ ಕವಿತಾ, ತೆಲುಗು ನಟಿ ಶ್ರೀರೆಡ್ಡಿಗೆ ವಿಡಿಯೋ ಮೂಲಕ ಟಾಂಗ್ ಕೊಟ್ಟಿದ್ರು. ಈ ಬೆನ್ನಲ್ಲೇ ನಟಿ ಕವಿತಾ ಅವರಿಗೆ ಜೀವ ಬೆದರಿಕೆ ಕರೆಗಳು ಬರ್ತಿವೆಯಂತೆ. 24 ಗಂಟೆಗಳೊಳಗಾಗಿ ನೀನು ಪೋಸ್ಟ್ ಮಾಡಿರುವ ವಿಡಿಯೋ ಡಿಲೀಟ್ ಮಾಡ್ಬೇಕು. ಅಲ್ಲದೇ ನೀನು ಅಪ್ ಲೋಡ್ ಮಾಡಿರುವ ವಿಡಿಯೋ ಬಗ್ಗೆ ಕ್ಷಮೆಯಾಚಿಸಿ ಮತ್ತೊಂದು ವಿಡಿಯೋ ಅಪ್ ಲೋಡ್ ಮಾಡ್ಬೇಕು. ಇಲ್ಲವಾದಲ್ಲಿ ನಿನ್ನ ಕಥೆ ಮುಗಿಸಲಾಗತ್ತೆ ಅಂತ ಅಪರಿಚಿತ ದುಷ್ಕರ್ಮಿಗಳು ಬೆದರಿಕೆ ಕರೆ ಮಾಡ್ತಿದ್ದಾರಂತೆ. ಇದನ್ನೂ ಓದಿ: ಶ್ರೀ ರೆಡ್ಡಿ ಬಳಿಕ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ ಟಾಲಿವುಡ್ ನಟಿ

    ಈ ಕುರಿತು ನಟಿ ಕವಿತಾ ಶುಕ್ರವಾರ ತಡರಾತ್ರಿ ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಲು ಬಂದಿದ್ರು. ಆದ್ರೆ ಅದು ಅವರ ವ್ಯಾಪ್ತಿಗೆ ಬಾರದ ಕಾರಣ ಉಪ್ಪಾರಪೇಟೆ ಪೊಲೀಸರು ದೂರು ಪಡೆಯದೇ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಲಹೆ ನೀಡಿ ಕಳುಹಿಸಿದ್ದಾರೆ. ಹೀಗಾಗಿ ಇಂದು ನಟಿ ಕವಿತಾ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಪೊಲೀಸರಿಗೆ ದೂರು ನೀಡಲಿದ್ದಾರೆ. ಇದನ್ನೂ ಓದಿ: ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್