Tag: ತೆಲುಗಿ ಸಿನಿಮಾ

  • ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಸ್ಟೋರಿ ಬಹಿರಂಗ!

    ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಸ್ಟೋರಿ ಬಹಿರಂಗ!

    ಕೆಜಿಎಫ್ 2 ಸಿನಿಮಾದ ಗೆಲುವಿನ ಖುಷಿಯಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ , ತಮ್ಮ ಚೊಚ್ಚಲು ನಿರ್ದೇಶನದ ತೆಲುಗಿನ ‘ಸಲಾರ್’ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವಾರದಿಂದಲೇ ಸಲಾರ್ ಸಿನಿಮಾದ ಶೂಟಿಂಗ್ ನಡೆಯಲಿದ್ದು, ಇದಕ್ಕೂ ಮುನ್ನ ಚಿತ್ರದ ಕಥೆಯನ್ನು ಸ್ವತಃ ಚಿತ್ರತಂಡವೇ ಸೋರಿಕೆ ಮಾಡಿದೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಸಲಾರ್ ಸಿನಿಮಾದ ಕತೆಯ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಯಾಕೆಂದರೆ, ಈ ಸಿನಿಮಾ ಕನ್ನಡದ ‘ಉಗ್ರಂ’ ಸಿನಿಮಾದ ರಿಮೇಕ್ ಎಂದು ಹೇಳಲಾಗಿತ್ತು. ತಮ್ಮ ನಿರ್ದೇಶನದ ಉಗ್ರಂ ಸಿನಿಮಾವನ್ನು ತಾವೇ ತೆಲುಗಿನಲ್ಲಿ ಸಲಾರ್ ಹೆಸರಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ ಎಂದೂ ಸುದ್ದಿ ಆಗಿತ್ತು. ಆನಂತರ ಈ ಕುರಿತು ಸ್ವತಃ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿದ್ದರು. ಸಲಾರ್ ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈಗ ಸಿನಿಮಾದ ಕಥೆಯ ಬಗ್ಗೆ ಸಣ್ಣದೊಂದು ಸುಳಿವು ಸಿಕ್ಕಿದೆ.

    ಇಂದು ಸಲಾರ್ ಸಿನಿಮಾದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಪೋಸ್ಟರ್ ನಲ್ಲಿ ಕೆಜಿಎಫ್ 2 ನೆನಪಿಸುವಂತಹ ಡೈಲಾಗ್ ವೊಂದನ್ನು ಬಳಸಿಕೊಳ್ಳಲಾಗಿದೆ. ಕೆಜಿಎಫ್ 2 ಸಿನಿಮಾ ಅಂದಾಕ್ಷಣ ತಕ್ಷಣವೇ ನೆನಪಿಗೆ ಬರುವ ಡೈಲಾಗ್ ‘ವೈಲೆನ್ಸ್.. ವೈಲೆನ್ಸ್.. ವೈಲೆನ್ಸ್..’ ಈ ಡೈಲಾಗ್ ಅನ್ನು ಸಲಾರ್ ಸಿನಿಮಾದಲ್ಲೂ ಬಳಸಿಕೊಂಡಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಇಂದು ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟರ್ ನಲ್ಲಿ ‘ದಿ ಮೋಸ್ಟ್ ವೈಲೆಂಟ್ ಮೆನ್, ಕಾಲ್ಡ್ ಒನ್ ಮ್ಯಾನ್, ದಿ ಮೋಸ್ಟ್ ವೈಲೆಂಟ್’ ಎಂದು ವಿಶೇಷ ಬರಹವನ್ನು ಹಾಕಿದ್ದಾರೆ. ಹಾಗಾಗಿ ಸಲಾರ್ ಕೂಡ ಮೋಸ್ಟ್ ವೈಲೆಂಟ್ ಆಗಿಯೇ ಇರಲಿದೆ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಈ ಮೂಲಕ ವೈಲೆಂಟ್ ಪದವು ಅಷ್ಟು ಬೇಗ ಪ್ರಶಾಂತ್ ನೀಲ್ ಅವರಿಂದ ದೂರ ಹೋಗದು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

  • ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಭ್ ಶೆಟ್ಟಿ: ತಾಪ್ಸಿ ಪನ್ನು ನಾಯಕಿ

    ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಷಭ್ ಶೆಟ್ಟಿ ಸದ್ಯ ಕಾಂತರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರೂ, ಈ ನಡುವೆ ಸದ್ದಿಲ್ಲದೇ ತೆಲುಗು ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ‘ಮಿಷನ್ ಇಂಪಾಸಿಬಲ್’ ಹೆಸರಿನಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಆನಂತರವೇ ಅವರು ತೆಲುಗಿಗೆ ಹಾರಿದ ಸುದ್ದಿ ಪಕ್ಕಾ ಆಗಿದೆ. ಇದನ್ನೂ ಓದಿ : ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ

    ರಿಲೀಸ್ ಆಗಿರುವ ಟ್ರೇಲರ್ ಗಮನಿಸಿದರೆ, ಅದೊಂದು ಪಕ್ಕಾ ಕಾಮಿಡಿ ಮಾದರಿಯ ಸಿನಿಮಾ ಎನಿಸುತ್ತಿದೆ. ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂ ಅರೆಸ್ಟ್ ಮಾಡಿದರೆ ಮೂರು ಲಕ್ಷ ರೂಪಾಯಿ ಸಿಗುತ್ತದೆ ಎನ್ನುವ ಕಾರಣಕ್ಕೆ ಮೂವರು ಮಕ್ಕಳು ಅವನ ಹಿಂದೆ ಬೀಳುವುದು. ಆ ಮೂವರು ಮಕ್ಕಳ ಕೀಟಲೆ ಹೀಗೆ ಟ್ರೇಲರ್ ಸಾಗುತ್ತದೆ. ಇದನ್ನೂ ಓದಿ : ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನೀಕಾಂತ್ ನಿರ್ದೇಶಕಿ

    ಅಂದಹಾಗೆ ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಕಲೀಲ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಲೀಲ ಯಾರು? ಇವನ ಹಿನ್ನೆಲೆ ಏನು? ಇವನಿಂದ ಏನೆಲ್ಲ ಸಾಧ್ಯ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮಹತ್ವದ ಪಾತ್ರವಂತೂ ಆಗಿರುತ್ತದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಸಿನಿಮಾದ ಹೆಸರು ಮಿಷನ್ ಇಂಪಾಸಿಬಲ್ ಅಂತ ಇಟ್ಟಿದ್ದರೂ, ಕನ್ನಡದ ಅನೇಕ ನಂಟುಗಳನ್ನು ಈ ಸಿನಿಮಾ ಹೊಂದಿದೆ. ರಿಷಭ್ ಪಾತ್ರದ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದೆ. ಕನ್ನಡದ ಭಾರೀ ಬಜೆಟ್ ಸಿನಿಮಾ ಕೆಜಿಎಫ್ ನ ಪ್ರಸ್ತಾಪ ಕೂಡ ಸಿನಿಮಾದಲ್ಲಿ ಆಗಿದೆ. ಈ ತೆಲುಗಿನಲ್ಲಿ ಸಿನಿಮಾದಲ್ಲಿ ತಾಪಸ್ಸಿ ಪನ್ನು ನಾಯಕಿ. ಉಳಿದಂತೆ ತೆಲುಗಿನ ನಟರೇ ತಾರಾಗಣದಲ್ಲಿ ಇದ್ದಾರೆ.