Tag: ತೆಲಂಗಾಣ ಸರ್ಕಾರ

  • ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ

    ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ

    -ಮೃತರ ಕುಟುಂಬಸ್ಥರಿಗೆ ತೆಲಂಗಾಣ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ

    ಹೈದರಬಾದ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದ ಮೇಲ್ಛಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಇನ್ನೂ 7 ಕಾರ್ಮಿಕರನ್ನು ಪತ್ತೆಹಚ್ಚಬೇಕಿದೆ.

    ಮೃತ ಕಾರ್ಮಿಕನನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಮೃತದೇಹ ಯಂತ್ರದೊಳಗೆ ಸಿಲುಕಿಕೊಂಡಾಗ ಪತ್ತೆಯಾಗಿದೆ. ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಹಾಗೂ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ಮೊಹಮ್ಮದ್‌ ಶಮಿ ತಾಯಿಯ ಕಾಲು ಮುಟ್ಟಿ ಆಶೀರ್ವಾದ ಪಡೆದ ಕೊಹ್ಲಿ

    ದೋಮಲಪೆಂಟಾ ಬಳಿಯ ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ 56 ಕಾರ್ಮಿಕರು ಒಳಗೆ ಸಿಲುಕಿದ್ದರು. ಈ ಪೈಕಿ 48 ಜನರನ್ನು ಆರಂಭದಲ್ಲಿಯೇ ರಕ್ಷಿಸಲಾಗಿದ್ದು, 8 ಕಾರ್ಮಿಕರು ಸಿಲುಕಿಕೊಂಡಿದ್ದರು. ಕಾರ್ಮಿಕರನ್ನು ಪತ್ತೆಹಚ್ಚಲು ಕಳೆದ 17 ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಭಾನುವಾರ ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ.

    ಫೆ.22 ರಂದು ಸುರಂಗ ಕುಸಿತದ ಬಳಿಕ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಉತ್ತರಾಖಂಡದ ರ‍್ಯಾಟ್ ಮೈನರ್, ಸ್ನಿಫರ್ ನಾಯಿ ಸೇರಿದಂತೆ 300ಕ್ಕೂ ಅಧಿಕ ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ 17 ದಿನಗಳಿಂದ ಹಗಲು, ರಾತ್ರಿ ಕಾರ್ಯಾಚರಣೆ ನಡೆಯುತ್ತಿದೆ.

    ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ. ಓರ್ವನ ಮೃತದೇಹ ಪತ್ತೆಯಾದ ಬಳಿಕ ಇನ್ನುಳಿದವರ ರಕ್ಷಣೆಗಾಗಿ ರೋಬೋಟ್ ಬಳಸಲು ರಾಜ್ಯ ಸರ್ಕಾರ ಯೋಜಿಸಿದ್ದು, 4 ಕೋಟಿ ರೂ. ಖರ್ಚು ಮಾಡಲಿದೆ.

    ಇನ್ನೂ ಘಟನಾ ಸ್ಥಳಕ್ಕೆ ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಮಾ.2 ರಂದು ಭೇಟಿ ನೀಡಿದ್ದರು. ಇದೀಗ ಮಾ.11 ರಂದು ಘಟನಾ ಸ್ಥಳಕ್ಕೆ ಇನ್ನೊಮ್ಮೆ ಭೇಟಿ ನೀಡುವ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಘಟನೆ ಏನು?
    ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದು 8 ಮಂದಿ ಕಾರ್ಮಿಕರು ಸಿಲುಕಿದ್ದು, ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿ.ಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿತ್ತು.ಇದನ್ನೂ ಓದಿ: ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಿದ್ರೆ ನೇಣು ಶಿಕ್ಷೆ ಕಾಯ್ದೆ ತರ್ತೀವಿ: ಮ.ಪ್ರದೇಶ ಸಿಎಂ

  • ಪ್ರತಿ ತಿಂಗಳು 6 ಸಾವಿರ ಪಿಂಚಣಿ ಕೊಡಿ – ಸರ್ಕಾರಕ್ಕೆ ಬೋಳುತಲೆ ಪುರುಷರ ಸಂಘ ಮನವಿ

    ಪ್ರತಿ ತಿಂಗಳು 6 ಸಾವಿರ ಪಿಂಚಣಿ ಕೊಡಿ – ಸರ್ಕಾರಕ್ಕೆ ಬೋಳುತಲೆ ಪುರುಷರ ಸಂಘ ಮನವಿ

    ಹೈದರಾಬಾದ್: ಇತ್ತೀಚೆಗಷ್ಟೇ ವಿಮೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮದ್ಯಪಾನಪ್ರಿಯರ ಸಂಘ ಸರ್ಕಾರಕ್ಕೆ ಮನವಿ ಮಾಡಿದ್ದು, ಕರ್ನಾಟಕದಾದ್ಯಂತ ಸುದ್ದಿಯಾಗಿತ್ತು. ಇದೀಗ ಬೋಳುತಲೆ ಪುರುಷರ ಸಂಘವೊಂದು (Bald Mens Group), ಪ್ರತಿ ತಿಂಗಳು 6 ಸಾವಿರ ಪಿಂಚಣಿ ನೀಡಬೇಕೆಂದು ಸರ್ಕಾರಕ್ಕೆ (Government) ಒತ್ತಾಯಿಸಿರೋದು ಸುದ್ದಿಯಾಗಿದೆ.

    ಹೌದು. ತಮಗೆ ತಿಂಗಳಿಗೆ 6 ಸಾವಿರ ಪಿಂಚಣಿ (Pension) ನೀಡುವಂತೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದ ಬೋಳುತಲೆಯ ಪುರುಷರ ಸಂಘ ಸರ್ಕಾರವನ್ನು ಒತ್ತಾಯಿಸಿದೆ. ಬೋಳು ತಲೆಯ ಪುರುಷರಿಗೆ ಸಂಕ್ರಾಂತಿ (Sankranti Festival) ಉಡುಗೊರೆಯಾಗಿ ಪಿಂಚಣಿ ಘೋಷಿಸಬೇಕು. ಸರ್ಕಾರ ವೃದ್ಧರು, ವಿಧವೆಯರು, ದೈಹಿಕ ವಿಕಲಚೇತನರು ಮತ್ತು ಇತರರಿಗೆ ಪಿಂಚಣಿ ನೀಡುತ್ತಿದೆ. ಅದರಂತೆ ನಮ್ಮ ಮನವಿಯನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂದು ಬೋಳುತಲೆ ಪುರುಷರ ಸಂಘ ತೆಲಂಗಾಣ ಸರ್ಕಾರಕ್ಕೆ (Telangana Government) ಆಗ್ರಹಿಸಿದೆ.

    ನಾವು ತಲೆಯಲ್ಲಿ ಕೂದಲು ಇಲ್ಲದೇ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದೇವೆ. ಕೆಲವರು ನಮ್ಮನ್ನ ನೋಡಿ ಅಪಹಾಸ್ಯ ಮಾಡ್ತಾರೆ. ಇದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಸರ್ಕಾರ ನಮ್ಮ ಬಗ್ಗೆ ವಿಶೇಷವಾಗಿ ಗಮನಹರಿಸಬೇಕು ಎಂದು ಕೋರಿದೆ. ಇದನ್ನೂ ಓದಿ: ಗಂಭೀರ್‌ಗೆ ಯಾಕೆ ಧೋನಿ, ಕೊಹ್ಲಿ ಮೇಲೆ ಅಷ್ಟೊಂದು ಸಿಟ್ಟು?

    ಇದೇ ತಿಂಗಳ ಜನವರಿ 5ರಂದೇ ಬೋಳುತಲೆ ಪುರುಷರ ಸಂಘ ಅನೌಪಚಾರಿಕ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದೆ. ಸಂಕ್ರಾಂತಿ ನಂತರ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದರಲ್ಲಿ ಕೂದಲು ಕಳೆದುಕೊಂಡಿರುವ 30ಕ್ಕೂ ಹೆಚ್ಚು ಪುರುಷರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ನಾಳೆ ಅಧಿಕೃತವಾಗಿ ಘೋಷಣೆ ಮಾಡ್ತಾರಾ ಸಿದ್ದರಾಮಯ್ಯ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 4ರ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ – ಶಾಲೆಯನ್ನೇ ಮುಚ್ಚಿಸಿದ ಸರ್ಕಾರ

    4ರ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ – ಶಾಲೆಯನ್ನೇ ಮುಚ್ಚಿಸಿದ ಸರ್ಕಾರ

    ಹೈದರಾಬಾದ್: 4 ವರ್ಷದ  ಬಾಲಕಿ ಮೇಲೆ ಎರಡು ತಿಂಗಳ ಕಾಲ ಶಾಲೆ ಪ್ರಾಂಶುಪಾಲರ (Principal) ಚಾಲಕ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಖಾಸಗಿ ಶಾಲೆಗೆ (Private School) ನೀಡಿರುವ ಸರ್ಕಾರಿ ಮಾನ್ಯತೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ತೆಲಂಗಾಣದ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ (Sabitha Indra Reddy) ಆದೇಶಿಸಿದ್ದಾರೆ.

    ಇದರೊಂದಿಗೆ ಶಿಕ್ಷಣ ಕಾರ್ಯದರ್ಶಿ, ಶಾಲಾ ಶಿಕ್ಷಣ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ (Women and Child Welfare Department) ಇಲಾಖೆ ಕಾರ್ಯದರ್ಶಿ, ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆಗೆ ವ್ಯವಹರಿಸುವ ಹಿರಿಯ ಅಧಿಕಾರಿಗಳನ್ನ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಇಂತಹ ಘಟನೆಗಳು ಮರುಕಳಿಸದಂತೆ ಯಾವೆಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಬಹುದು ಅನ್ನೋ ಬಗ್ಗೆ ಒಂದು ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

    ಆದರೆ ಈ ಶಾಲೆಯಲ್ಲಿ ಒಟ್ಟು 700 ವಿದ್ಯಾರ್ಥಿಗಳು (Students) ಓದುತ್ತಿದ್ದು, ಮಧ್ಯ ವಾರ್ಷಿಕ ಸಂದರ್ಭದಲ್ಲಿ ಸೀಟುಗಳನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್

    ನಾಲ್ಕು ವರ್ಷದ ಮಗುವಿನ ಮೇಲೆ ಕಳೆದ ಎರಡು ತಿಂಗಳಿನಿಂದ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎರಡು ದಿನಗಳ ಹಿಂದೆಯಷ್ಟೇ ಇಲ್ಲಿನ ಬಂಜಾರ ಹಿಲ್ಸ್ ಶಾಲೆಯ (Banjara Hills School) ಪ್ರಾಂಶುಪಾಲರ ಚಾಲಕನನ್ನು ಬಂಧಿಸಲಾಯಿತು. ಮೊದಲು ಆರೋಪ ಕೇಳಿಬಂದರೂ ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೋಷಕರು ಉಗ್ರ ಪ್ರತಿಭಟನೆ ನಡೆಸಿದ ನಂತರ ಆರೋಪಿಯನ್ನು ಬಂಧಿಸಲಾಯಿತು. ವಿಷಯ ಬಹಿರಂಗಗೊಂಡ ಬಳಿಕ ಶಾಲೆಯನ್ನು ಮುಚ್ಚಲಾಗಿದೆ. ಇದನ್ನೂ ಓದಿ: ಲೋಕಾಯುಕ್ತ ಐಜಿಪಿಯಾಗಿ ಸುಬ್ರಹ್ಮಣ್ಯೇಶ್ವರ ರಾವ್‌ ನೇಮಕ

    ಸದ್ಯ ಶಾಲೆಯನ್ನು ಮುಚ್ಚುವ ಜೊತೆಗೆ ಮಕ್ಕಳ ಸುರಕ್ಷತೆಗೆ ಶಾಲಾ ಆಡಳಿತ ಮಂಡಳಿಗಳು ಕ್ರಮ ಕೈಗೊಳ್ಳಲು ಬಲವಾದ ಮಾರ್ಗಸೂಚಿಗಳನ್ನು ನೀಡಲು ಸಚಿವರು ಸೂಚಿಸಿದ್ದಾರೆ. ಜೊತೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಸಚಿವ ರಾಮಾರಾವ್ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 75ನೇ ಸ್ವಾತಂತ್ರ್ಯ ದಿನಾಚರಣೆ – 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜ ವಿತರಿಸಲಿರುವ ತೆಲಂಗಾಣ ಸರ್ಕಾರ

    75ನೇ ಸ್ವಾತಂತ್ರ್ಯ ದಿನಾಚರಣೆ – 1 ಕೋಟಿಗೂ ಹೆಚ್ಚು ರಾಷ್ಟ್ರಧ್ವಜ ವಿತರಿಸಲಿರುವ ತೆಲಂಗಾಣ ಸರ್ಕಾರ

    ಹೈದರಾಬಾದ್: ತೆಲಂಗಾಣ ಸರ್ಕಾರವು 75ನೇ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ವಿತರಿಸಲಿದೆ.

    ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತೆಲಂಗಾಣ ಸರ್ಕಾರವು “ಸ್ವತಂತ್ರ ಭಾರತ ವಜ್ರೋತ್ಸವ ದ್ವಿ ಸಪ್ತಾಹಮ್” ಅನ್ನು ಎರಡು ವಾರಗಳವರೆಗೆ ಆಚರಿಸಲಿದ್ದು, 1.20 ಕೋಟಿ ರಾಷ್ಟ್ರಧ್ವಜಗಳನ್ನು ಹಾರಿಸಲು ನಿರ್ಧರಿಸಿದೆ. ಹೀಗಾಗಿ 7 ದಿನಕ್ಕೂ ಮುನ್ನವೇ 1.20 ಕೋಟಿ ರಾಷ್ಟ್ರಧ್ವಜಗಳನ್ನು ವಿತರಿಸಲಿದೆ. ಇದನ್ನೂ ಓದಿ: ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!

    ಶನಿವಾರ ಈ ಕುರಿತಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು, ರಾಷ್ಟ್ರಭಕ್ತಿಯನ್ನು ತಿಳಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಮತ್ತು ಸ್ವಾತಂತ್ರ್ಯ ಹೋರಾಟದಿಂದ ಸಿಕ್ಕ ಫಲಗಳನ್ನು ಹೊಸ ಪೀಳಿಗೆಗೆ ತಿಳಿಸಬೇಕು. ರಾಜ್ಯದ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು. ಅದಕ್ಕಾಗಿ 1.20 ಕೋಟಿ ತ್ರಿವರ್ಣ ಧ್ವಜಗಳನ್ನು ನೀಡಲಾಗುವುದು. ಮನೆ ಮನೆಗೆ ಧ್ವಜಾರೋಹಣ, ಕ್ರೀಡಾಕೂಟಗಳು, ಪ್ರಬಂಧ ರಚನೆ, ಕವಿ ಸಮ್ಮೇಳನ (ಕವಿಗಳ ಕೂಟ) ಮತ್ತು ರಾಷ್ಟ್ರೀಯತೆಯನ್ನು ಸಾರಲು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಇಂದಿನ ಪೀಳಿಗೆಯವರಿಗೆ ಸ್ವಾತಂತ್ರ್ಯ ಹೋರಾಟ, ತ್ಯಾಗ, ಅಂದಿನ ರಾಷ್ಟ್ರ ನಾಯಕರು ಹಾಗೂ ಹೋರಾಟದಲ್ಲಿ ಹುತಾತ್ಮರಾದವರ ಬಗ್ಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬ ತೆಲಂಗಾಣ ಪ್ರಜೆಯು ವಜ್ರಮಹೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಬೇಕು. ಸ್ವಾತಂತ್ರ್ಯ ದಿನವನ್ನು ಹಳ್ಳಿಯಿಂದ ಪಟ್ಟಣಕ್ಕೆ ಮತ್ತು ಭಾರತದ ವೈಭವದ ಸಂದೇಶವನ್ನು ಏಕ ಭಾರತವಾಗಿ ಹರಡಿ ಎಂದಿದ್ದಾರೆ. ಇದನ್ನೂ ಓದಿ: 75 ದೇಶಗಳಲ್ಲಿ ಮಂಕಿಪಾಕ್ಸ್ – ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ WHO

    ಗದ್ವಾಲ್, ನಾರಾಯಣಪೇಟೆ, ಸಿರಿಸಿಲ್ಲಾ, ಪೋಚಂಪಲ್ಲಿ, ಭೋಂಗೀರ್ ಮತ್ತು ವಾರಂಗಲ್‍ನ ಕೈಮಗ್ಗ ಮತ್ತು ಪವರ್ ಲೂಮ್ ಕಾರ್ಮಿಕರಿಗೆ ಧ್ವಜಗಳನ್ನು ತಯಾರಿಸಲು ಆದೇಶಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ – ತೆಲಂಗಾಣ ಸರ್ಕಾರ ನಿರ್ಧಾರ

    ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ ಆಂಗ್ಲ ಮಾಧ್ಯಮ ಶಿಕ್ಷಣ – ತೆಲಂಗಾಣ ಸರ್ಕಾರ ನಿರ್ಧಾರ

    ಹೈದರಾಬಾದ್: 2022-23ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣ ಪರಿಚಯಿಸಲು ಹಾಗೂ ಖಾಸಗಿ ಶಾಲೆಗಳು, ಜೂನಿಯರ್ ಮತ್ತು ಪದವಿ ಕಾಲೇಜುಗಳ ಶುಲ್ಕ ನಿಯಂತ್ರಿಸಲು ತೆಲಂಗಾಣ ಸರ್ಕಾರ ಸಂಪುಟ ನಿರ್ಧರಿಸಿದೆ.

    ಸೋಮವಾರ ಕರೆದಿದ್ದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಶಿಕ್ಷಣ ಸಚಿವೆ ಸುಬಿತಾ ಇಂದ್ರ ರೆಡ್ಡಿ ನೇತೃತ್ವದಲ್ಲಿ ಸಚಿವರ ಉಪಸಮಿತಿಯನ್ನು ಸಂಪುಟ ರಚಿಸಿದ್ದು, ಈ ವಿಷಯಗಳ ಕುರಿತು ಅಧ್ಯಯನ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

    ಸಭೆಯಲ್ಲಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸಲು 7,289 ಕೋಟಿ ವೆಚ್ಚದ `ಮನ ವೂರು ಮನ ಬಡಿ’ (ನಮ್ಮ ಊರು-ನಮ್ಮ ಶಾಲೆ) ಯೋಜನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.

    ಬೋಧನಾ ಮಾಧ್ಯಮ ಇಂಗ್ಲಿಷ್‌ನಲ್ಲಿದ್ದರೆ ಗ್ರಾಮೀಣ ಪ್ರದೇಶದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಸಿದ್ಧರಿದ್ದಾರೆ ಎಂದು ಸಚಿವ ಸಂಪುಟ ಅಭಿಪ್ರಾಯಪಟ್ಟಿದೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಸಂಪುಟ ನಿರ್ಧರಿಸಿದೆ. ಇದನ್ನೂ ಓದಿ: ಯುಪಿಯಲ್ಲಿ ಬಿಜೆಪಿ ಗೆದ್ರೆ, ಯೋಗಿ ಮತ್ತೊಮ್ಮೆ ಸಿಎಂ ಆದ್ರೆ ಸೃಷ್ಟಿಯಾಗಲಿದೆ ಹೊಸ ನಾಲ್ಕು ದಾಖಲೆಗಳು!

    ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಬೋಧಿಸಲು ಶಿಕ್ಷಕರಿಗೆ ತರಬೇತಿ ನೀಡಲು, ಶಾಲೆಗಳ ಪರಿಸರವನ್ನು ಮಕ್ಕಳಿಗೆ ಆಕರ್ಷಕವಾಗಿಸಲು, ಆವರಣವನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಲು, ಮಧ್ಯಾಹ್ನದ ಊಟವನ್ನು ಸುಧಾರಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ.